ಜಗತ್ತಿನ ಪ್ರತಿಯೊಂದು ದೇವಾಲಯ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿರುತ್ತದೆ ಅಲ್ಲಿ ಅದರದೇ ಆದ ರೀತಿ ನೀತಿಗಳ ಆಚರಣೆ ಮಾಡಲಾಗುತ್ತದೆ ಅಂತಹ ದೇವಾಲಯಗಳಲ್ಲಿ ಇಂದು ನಾವು ನಿಮಗೆ ತಿಳಿಸುವ ಒಂದು ದೇವಾಲಯದಲ್ಲಿ ಕೇವಲ ಹಿಂದೂ ಧರ್ಮದ ಅನುಯಾಯಿಗಳಿಗೆ ಮಾತ್ರ ದೇವಾಲಯಕ್ಕೆ ಪ್ರವೇಶ ಇದು ಜಗತ್ಪ್ರಸಿದ್ಧ ಶಿವನ ದೇವಾಲಯ ಶಿವನನ್ನು ಇಲ್ಲಿ ಪಶು ಎಂದರೆ ಪ್ರಾಣಿಯ ರೂಪದಲ್ಲಿ ಪೂಜಿಸಲಾಗುತ್ತದೆ ಜೀವನದ ಕೊನೆಯ ಕ್ಷಣದಲ್ಲಿ ಅಂದರೆ ಸಾಯುವ ಸಮಯದಲ್ಲಿ ಜನರು ಈ ದೇವಾಲಯಕ್ಕೆ ಹೆಚ್ಚಿನದಾಗಿ ಭೇಟಿಯನ್ನು ಕೊಡುತ್ತಾರೆ ಹಾಗಾದರೆ ಈ ದೇವಸ್ಥಾನ ಯಾವುದು ದೇವಸ್ಥಾನ ಇರುವ ಸ್ಥಳ ಯಾವುದು ಇಲ್ಲಿ ಸಾಯುವುದಕ್ಕೆ ಜನ ಏಕೆ ಮುಂದಾಗುತ್ತಾರೆ ಅಂತಹ ರಹಸ್ಯ ಈ ದೇವಸ್ಥಾನದಲ್ಲಿ ಏನಿದೆ ಈ ಎಲ್ಲ ಸಮಗ್ರ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ.

ಜೀವಿಗಳ ಪ್ರಾಣ ರಕ್ಷಕ ಎಂದು ಕರೆಸಿಕೊಳ್ಳುವವರು ಪರಮಾತ್ಮ ಶಿವ. ಶಿವನ ಆಶೀರ್ವಾದವನ್ನು ಪಡೆದವರು ಜೀವನದಲ್ಲಿ ಸಾಕಷ್ಟು ಸುಖ ಶಾಂತಿ ಸಂತೋಷಗಳನ್ನು ಪಡೆದುಕೊಳ್ಳುತ್ತಾರೆ ಸರಳ ಭಕ್ತಿ ಹಾಗೂ ಪೂಜೆಯನ್ನು ಆಶಿಸುವ ಶಿವನಿಗೆ ಅನೇಕ ದೇವಾಲಯಗಳಿವೆ ಪ್ರತಿಯೊಂದು ದೇವಾಲಯ ತನ್ನದೇ ಆದ ಪುರಾಣ ಇತಿಹಾಸ ಹಾಗೂ ಕಲೆಯನ್ನು ಒಳಗೊಂಡಿದೆ ಅಂತಹ ಒಂದು ವಿಶಿಷ್ಟ ಹಿನ್ನೆಲೆ ಹಾಗೂ ಮಹಿಮೆಯನ್ನು ಹೊಂದಿರುವ ದೇವಾಲಯವೇ ಪಶುಪತಿನಾಥ ದೇವಾಲಯ.

ಭಾರತ ದೇಶದ ಉತ್ತರ ಭಾಗದಲ್ಲಿರುವ ಚಿಕ್ಕ ಹಿಂದೂ ದೇಶ ನೇಪಾಳ. ನೇಪಾಳದ ಕಠ್ಮಂಡುವಿನ ಪೂರ್ವಭಾಗದ ಭಾಗಮತಿ ನದಿಯ ದಡದ ಮೇಲಿದೆ ಪಶುಪತಿನಾಥ ದೇವಾಲಯ. ವಿಶ್ವದ ಅತ್ಯಂತ ಮಹತ್ವ ಹಾಗೂ ಪ್ರಸಿದ್ಧ ದೇವಾಲಯವಾದ ಈ ದೇವಾಲಯ ಯುನೆಸ್ಕೋ ವಿಶ್ವಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಕೊಂಡಿದೆ ಎರಡುನೂರಾಎಪ್ಪತ್ತೈದು ಪವಿತ್ರ ದೇವಸ್ಥಾನಗಳಲ್ಲಿ ಒಂದಾದ ಈ ದೇವಾಲಯವು ವಿಶ್ವವಿಖ್ಯಾತಿಯನ್ನು ಪಡೆದುಕೊಂಡಿದೆ. ಪ್ರಾಚೀನ ಕಾಲದಲ್ಲಿ ಈ ದೇವಾಲಯದ ಒಳಗೆ ಪ್ರವೇಶಿಸಲು ಹಿಂದೂಗಳಿಗೆ ಮಾತ್ರ ಅವಕಾಶವಿದೆ ಉಳಿದವರು ದೇವಸ್ಥಾನದ ಇನ್ನೊಂದು ಭಾಗದಲ್ಲಿ ನಿಂತು ನೋಡಬಹುದು ಅಷ್ಟೇ

ಪಶುಪತಿನಾಥನ ದೇವಾಲಯವು ಅತ್ಯಂತ ಹಳೆಯ ದೇವಾಲಯ. ಈ ದೇವಾಲಯ ಎಷ್ಟರಲ್ಲಿ ಸ್ಥಾಪನೆಯಾಯಿತು ಎಂಬುದರ ಬಗ್ಗೆ ಎಲ್ಲಿಯೂ ನಿಖರವಾದ ದಾಖಲೆ ಇಲ್ಲ ಕೆಲವು ಅಂದಾಜು ಹಾಗೂ ಕುರುಹುಗಳ ಆಧಾರದ ಮೇಲೆ ನಾಲ್ಕುನೂರು ವರ್ಷದಷ್ಟು ಹಳೆಯದೆಂದು ನಂಬಲಾಗಿದೆ ಈ ದೇವಾಲಯದಲ್ಲಿ ಸಮೃದ್ಧವಾದ ಅಲಂಕಾರಗಳಿಂದ ಕೂಡಿದ ಪಗೊಡ ಇರುವ ಶಿವಲಿಂಗ ಇದೆ ಎನ್ನಲಾಗುತ್ತದೆ ಇಂತಹ ಒಂದು ಶಿವಲಿಂಗ ವಿಶ್ವದಲ್ಲಿ ಒಂದೇ ಇರುವುದು. ಶಕ್ತಿಪೀಠ ಮಾತೃ ದೇವಿಯ ದೇವಾಲಯವು ಪಶುಪತಿನಾಥನ ದೇವಾಲಯದ ಪ್ರಾಂಗಣದಲ್ಲಿ ಇದೆ ಇಡೀ ವಿಶ್ವದಲ್ಲಿ ಇರುವ ಐವತ್ತೊಂದು ಪ್ರಮುಖ ಶಕ್ತಿಪೀಠಗಳಲ್ಲಿ ಈ ದೇವಾಲಯವು ಒಂದು ಪ್ರಮುಖ ಶಕ್ತಿಪೀಠವಾಗಿದೆ. ದೇವಾಲಯದ ಸಮೀಪದಲ್ಲಿಯೇ ಭಾಗಮತಿನದಿ ಇದೆ ಭಾಗಮತಿ ದೇವಿಯ ಸಮೀಪದಲ್ಲಿ ಇತರ ದೇವಾಲಯ ಇರುವುದನ್ನು ನೀವು ಕಾಣಬಹುದು.

ಈ ದೇವಾಲಯದ ಕಟ್ಟಡಗಳನ್ನು ಗೆದ್ದಲುಗಳು ತಿಂದಿದ್ದುಆನಂತರ17ನೇ ಶತಮಾನದಲ್ಲಿ ರಾಜ ಭೂಪೇಂದ್ರರು ಹೊಸ ದೇವಾಲಯವನ್ನು ನಿರ್ಮಿಸಿದ್ದಾರೆ ಆನಂತರ ದೇವಾಲಯದ ಸಮೀಪದಲ್ಲಿಯೇ ಎರಡು ಅಂತಸ್ತಿನ ಅನೇಕ ದೇವಾಲಯಗಳನ್ನು ನಿರ್ಮಿಸಲಾಯಿತು ಹನ್ನೊಂದನೇ ಶತಮಾನದ ಹಸ್ತಪ್ರತಿಯಲ್ಲಿ ಉಲ್ಲೇಖಿಸಲಾದ ಪೂರ್ಣೇಶ್ವರಿ ದೇವಾಲಯ ಈ ದೇವಾಲಯಕ್ಕೆ ಸೇರಿದ್ದೆಂದು ನಂಬಲಾಗಿದೆ ಈ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಪುರೋಹಿತರು ಕರ್ನಾಟಕದವರು. ಪ್ರಧಾನ ಅರ್ಚಕರು ನೇಪಾಳದ ರಾಜರಿಗೆ ಉಸ್ತುವಾರಿ ಕುರಿತು ಮತ್ತು ದೇವಾಲಯದ ಸಂಗತಿಗಳ ಕುರಿತು ವರದಿಗಳನ್ನು ನೀಡುತ್ತಾರೆ ಈ ಪವಿತ್ರ ದೇವಾಲಯಕ್ಕೆ ಸಂಬಂಧಿಸಿದಂತೆ ಪುರಾಣಗಳಲ್ಲಿ ಹಲವಾರು ಕಥೆಗಳಿವೆ.

ಒಮ್ಮೆ ಶಿವ ಮತ್ತು ಪಾರ್ವತಿಯ ಕಠ್ಮಂಡುವಿನ ಕಣಿವೆಯಲ್ಲಿ ಪ್ರಯಾಣಿಸುತ್ತಿರುವಾಗ ಭಾಗಮತಿಯಲ್ಲಿ ವಿಶ್ರಾಂತಿಯನ್ನು ಪಡೆಯಲು ನಿರ್ಧರಿಸುತ್ತಾರೆ ಅಲ್ಲಿರುವ ಸುಂದರ ಪ್ರದೇಶ ಹಾಗೂ ಪ್ರಕೃತಿ ಸೌಂದರ್ಯವನ್ನು ಮೆಚ್ಚಿದ ಶಿವಪಾರ್ವತಿಯರು ತಮ್ಮನ್ನು ತಾವು ಜಿಂಕೆಯನ್ನಾಗಿ ಬದಲಾಯಿಸಿಕೊಂಡು ಕಾಡಿನಲ್ಲಿ ಸುತ್ತಲೂ ಪ್ರಾರಂಭಿಸುತ್ತಾರೆ ಶಿವನು ಜಿಂಕೆಯಾಗಿ ಕಾಲಿಟ್ಟ ಎಲ್ಲ ಸ್ಥಳಗಳನ್ನು ಇಲ್ಲಿ ಪವಿತ್ರಸ್ಥಳ ಗಳೆಂದು ಕರೆಯಲಾಗುತ್ತದೆ. ಕೆಲವು ಸಮಯದ ನಂತರ ಜನರು ಶಿವನನ್ನು ಹುಡುಕಲು ಪ್ರಾರಂಭಿಸುತ್ತಾರೆ ಆಗ ಶಿವನು ಜಿಂಕೆಯ ರೂಪದಲ್ಲಿ ಇರುವುದು ಜನರಿಗೆ ಗೊತ್ತಾಗುತ್ತದೆ ಇದೇ ಕಾರಣದಿಂದ ಅವರು ಶಿವನನ್ನು ಪಶುಗಳ ದೇವರು ಎಂದು ಕರೆಯುತ್ತಾರೆ ಆ ಸ್ಥಳದಲ್ಲಿ ಕಾಣಿಸಿಕೊಂಡ ಶಿವಲಿಂಗ ಮತ್ತು ಶಿವನಿಗೆ ಪಶುಪತಿ ಎಂದು ಕರೆಯಲು ಪ್ರಾರಂಭಿಸುತ್ತಾರೆ ಅಂದಿನಿಂದ ಶಿವನಿಗೆ ಮೀಸಲಾದ ದೇವಾಲಯವನ್ನು ಇಲ್ಲಿ ನಿರ್ಮಿಸಲಾಯಿತು ಎಂದು ಪುರಾಣಗಳಲ್ಲಿ ಹೇಳಲಾಗಿದೆ.

ನೂರಾರು ಜನರು ತಮ್ಮ ಜೀವನದ ಕೊನೆಯ ದಿನಗಳನ್ನು ಇಲ್ಲಿ ಇರುವ ಮೋಕ್ಷದ ಆಶ್ರಮದಲ್ಲಿ ಕಳೆಯುತ್ತಾರೆ ನದಿಯ ದಡದಲ್ಲಿ ಅಂತ್ಯಕ್ರಿಯೆಯನ್ನು ಮಾಡುವ ಮೂಲಕ ತಮ್ಮ ಕೊನೆಯ ಪ್ರಮಾಣವನ್ನು ಪವಿತ್ರ ನದಿ ಭಾಗಮತಿ ನದಿಯೊಂದಿಗೆ ತಮ್ಮ ಅಸ್ತಿಗಳನ್ನು ಹಾಕಲು ಅವರು ಇಚ್ಛೆಪಡುತ್ತಾರೆ. ತದನಂತರ ಈ ನದಿಯು ಪವಿತ್ರ ಗಂಗಾ ನದಿಯನ್ನು ಸಂಧಿಸುತ್ತದೆ ನೇಪಾಳ ಮತ್ತು ಭಾರತದ ಪ್ರತಿಯೊಂದು ಮೂಲೆಯಿಂದ ಹಿಂದೂಗಳು ತಮ್ಮ ಪೂರ್ವಜರ ಅಂತ್ಯಕ್ರಿಯೆಯನ್ನು ನಡೆಸಲು ಇಲ್ಲಿಗೆ ಆಗಮಿಸುತ್ತಾರೆ ಇದೇ ಕಾರಣ ಜಗತ್ತಿನಾದ್ಯಂತ ಈ ದೇವಾಲಯವನ್ನು ಸ್ಮಶಾನ ದೇವಾಲಯ ಎಂದೇ ಕರೆಯುತ್ತಾರೆ ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಲ್ಲಿ ಮರಣವನ್ನು ಹೊಂದಲು ಇಚ್ಚಿಸುತ್ತಾರೆ.

ಪಶುಪತಿನಾಥ ದೇವಾಲಯದ ಆವರಣದಲ್ಲಿ ಸಾಯುವವರು ಮನುಷ್ಯನಾಗಿ ಮರುಜನ್ಮ ಪಡೆಯುತ್ತಾರೆ ಎಂದು ನಂಬಲಾಗಿದೆ. ಇದಕ್ಕಾಗಿ ಹೆಚ್ಚಿನ ಜನರು ತಮ್ಮ ಕೊನೆಯ ದಿನಗಳನ್ನು ಇಲ್ಲಿ ಕಳೆಯಲು ಇಚ್ಚಿಸುತ್ತಾರೆ ಇದೇ ಕಾರಣಕ್ಕಾಗಿ ಇಲ್ಲಿ ಹಲವಾರು ಮೋಕ್ಷದಾಮಗಳು ವಿಶ್ರಾಂತಿ ಧಾಮಗಳನ್ನು ನೀವು ಕಾಣಬಹುದು. ಇಲ್ಲಿಗೆ ಭೇಟಿಕೊಡುವ ವಯಸ್ಸಾದ ಜನರ ಸಾವಿನ ನಿಖರವಾದ ದಿನವನ್ನು ದೇವಾಲಯದ ಜ್ಯೋತಿಷ್ಯರು ಗ್ರಹಿಸುತ್ತಾರೆ ಇನ್ನೊಂದು ಈ ದೇವಾಲಯದ ವಿಪರ್ಯಾಸ ಎಂದರೆ ಇದೇ ನದಿಯ ತಟದಲ್ಲಿ ಶವಗಳನ್ನು ಸುಟ್ಟು ಬೂದಿಯನ್ನು ನದಿಯಲ್ಲಿ ಹರಡುತ್ತಾರೆ.

ಈ ದೇವಾಲಯಕ್ಕೆ ಸಂಬಂಧಿಸಿದಂತೆ ಇನ್ನೊಂದು ಕತೆಯಿದೆ ಕಾಮಧೇನು ಎನ್ನುವ ಹಸು ಚಂದ್ರವನ ಪರ್ವತದಲ್ಲಿ ಆಶ್ರಯ ಪಡೆದಿತ್ತು ಆ ಹಸುವು ಪ್ರತಿದಿನ ಮಣ್ಣಿನಿಂದ ಮುಚ್ಚಿಕೊಂಡಿದ್ದ ಶಿವಲಿಂಗದ ಮೇಲೆ ಹಾಲನ್ನು ಸುರಿಸಿ ಹೋಗುತಿತ್ತು ಹಲವಾರು ವರ್ಷಗಳಿಂದಲೂ ಈ ಹಸುವು ಅಲ್ಲಿ ಬಂದು ಹಾಲನ್ನು ಸುರಿಸಿ ಹೋಗುತ್ತಿರುವುದನ್ನು ಜನರು ಗಮನಿಸುತ್ತಾರೆ ಆ ಜಾಗದಲ್ಲಿ ಏನಿರಬಹುದು ಎಂಬುದನ್ನು ತಿಳಿದುಕೊಳ್ಳಲು ಆ ಜಾಗವನ್ನು ಅಗೆಯಲು ಪ್ರಾರಂಭಿಸುತ್ತಾರೆ ಆಗ ಸಿಕ್ಕಿದ್ದು ಈ ಸುಂದರವಾದ ಹೊಳೆಯುವ ಶಿವನ ಲಿಂಗ. ನಂತರದ ದಿನಗಳಲ್ಲಿ ಪವಿತ್ರವಾದ ಶಿವಲಿಂಗವನ್ನು ನೋಡಲು ಹಾಗೂ ಜನ್ಮಜನ್ಮಾಂತರ ಗಳಿಂದ ಹೊಂದಿದ ಪಾಪವನ್ನು ತೊಳೆದುಕೊಳ್ಳಲು ಅನೇಕ ಭಕ್ತರು ಇಲ್ಲಿಗೆ ಆಗಮಿಸಲು ಪ್ರಾರಂಭಿಸುತ್ತಾರೆ ಹೀಗೆ ಶುರುವಾಯಿತು ಪಶುಪತಿನಾಥನ ದೇವಾಲಯ ಎಂದು ಪುರಾಣದಲ್ಲಿ ಹೇಳಲಾಗುತ್ತದೆ.

ಇದೇ ಕಾರಣ ಈ ಪವಿತ್ರ ದೇವಸ್ಥಾನಕ್ಕೆ ಸಾವಿರಾರು ಜನರು ಭೇಟಿಕೊಟ್ಟು ಶಿವನ ಆರಾಧನೆಯನ್ನು ಭಜನೆಯನ್ನು ಮಾಡುತ್ತಾರೆ. ಜೀವನದಲ್ಲಿ ಮಾಡಿದ ಪಾಪ ಕರ್ಮಗಳು ಹೀಗೆ ಮಾಡಿದರೆ ತೊಳೆಯುತ್ತದೆ ಎಂಬುದು ಭಕ್ತರ ಪ್ರತೀತಿ ಇದೆ. ಪಶುಪತಿನಾಥನ ಮುಖ್ಯ ದೇವಾಲಯ ಚಾವಣಿ ಮತ್ತು ಚಿನ್ನದ ಶೈಲ ದಿಂದ ಕಟ್ಟಲಾಗಿದೆ ಈ ದೇವಸ್ಥಾನ ನಾಲ್ಕು ಮುಖ್ಯ ಬಾಗಿಲುಗಳನ್ನು ಹೊಂದಿದೆ ಎಲ್ಲ ಬಾಗಿಲುಗಳನ್ನು ಬೆಳ್ಳಿಯ ಪದರದಿಂದ ಮುಚ್ಚಲಾಗಿದೆ ಎರಡು ಅಂತಸ್ತಿನ ಮೇಲ್ಚಾವಣಿಯನ್ನು ತಾಮ್ರದಿಂದ ನಿರ್ಮಿಸಲಾಗಿತ್ತು ಅದಕ್ಕೆ ಚಿನ್ನದ ಲೇಪನವನ್ನು ಕೂಡ ಹಾಕಲಾಗಿದೆ ಈ ದೇವಸ್ಥಾನದ ಇನ್ನೊಂದು ವಿಶೇಷ ಹಾಗೂ ಅತ್ಯಂತ ಆಶ್ಚರ್ಯಕರ ಅಲಂಕಾರ ಎಂದರೆ ನಂದಿಯ ಬೃಹತ್ ಚಿನ್ನದ ಪ್ರತಿಮೆ ಇಂತಹ ಚಿನ್ನದ ಪ್ರತಿಮೆ ಇರುವ ನಂದಿಯನ್ನು ವಿಶ್ವದಲ್ಲಿ ನೀವು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ.

ಈ ದೇವಸ್ಥಾನದ ಹತ್ತಿರವಿರುವ ಭಾಗಮತಿ ಪಶ್ಚಿಮ ದಂಡೆಯು ಪಂಚ ದೇವಾಲಯಗಳ ಸಂಕೀರ್ಣ ವನ್ನು ಹೊಂದಿದೆ ಈ ದೇವಾಲಯವು ಅತ್ಯಂತ ಪವಿತ್ರವಾಗಿದ್ದು ಈಗ ನಿರ್ಗತಿಕ ಭಕ್ತರಿಗೆ ಆಶ್ರಯವನ್ನು ನೀಡುತ್ತದೆ ಪಶುಪತಿನಾಥ ದೇವಾಲಯಕ್ಕೆ ಕಠ್ಮಂಡುವಿನಿಂದ ನೇರವಾಗಿ ಬಸ್ಸುಗಳ ಸಂಪರ್ಕವಿದೆ. ಕಠ್ಮಂಡುವಿನ ಮುಖ್ಯ ಬಸ್ ನಿಲ್ದಾಣದಿಂದ ನಲವತ್ತೈದು ನಿಮಿಷದಲ್ಲಿ ನೀವು ಈ ದೇವಾಲಯವನ್ನು ತಲುಪಬಹುದು ಕಟ್ಮಂಡು ನೇಪಾಳ ದೇಶದ ರಾಜಧಾನಿ.

ನೀವು ಕಠ್ಮಂಡುವಿಗೆ ಭೇಟಿ ನೀಡಬೇಕು ಎಂದರೆ ಭಾರತದ ಪ್ರಮುಖ ನಗರಗಳಾದ ಅಂದರೆ ಬೆಂಗಳೂರು ಚೆನ್ನೈ ಮುಂಬೈ ಡೆಲ್ಲಿ ಹಾಗೂ ಕೋಲ್ಕತ್ತಾದಿಂದ ನೇರ ಸಂಪರ್ಕದ ವಿಮಾನಗಳು ಕೂಡ ಇದೆ. ಸ್ನೇಹಿತರೇ ಜೀವನದಲ್ಲಿ ನೀವು ಕೂಡ ಒಮ್ಮೆಯಾದರೂ ಪಶುಪತಿನಾಥನ ದೇವಾಲಯಕ್ಕೆ ಭೇಟಿ ನೀಡಿ ಹಾಗೂ ಶುದ್ಧ ಹಿಂದೂ ದೇಶವಾದ ನೇಪಾಳಕ್ಕೆ ಭೇಟಿ ನೀಡಿ ಹಾಗೂ ಹಿಮಾಲಯ ಇರುವುದು ಇದೇ ನೇಪಾಳದಲ್ಲಿ. ಆ ಕೈಲಾಸನಾಥನ ಹಾಗೂ ಪಶುಪತಿನಾಥನ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಎಂದು ಪ್ರಾರ್ಥನೆ ಮಾಡೋಣ

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!