ನಾಗ ದೇವರನ್ನು ಆರಾಧನೆ ಮಾಡಿ ಪೂಜೆ ಮಾಡಿ ಆಚರಣೆ ಮಾಡುವ ಹಬ್ಬ ನಾಗರಪಂಚಮಿ. ನಾಗರ ಪಂಚಮಿ ಹಬ್ಬ ಆರಂಭವಾಗುವುದು 09/08/2024 ರ ಶ್ರಾವಣ ಮಾಸದ ಶುಕ್ಲ ಪಕ್ಷದ ಶುಕ್ರವಾರದ ಮಧ್ಯರಾತ್ರಿ 12:00 ಕ್ಕೆ. ಅದು, 10/08/2024 ರ ಶನಿವಾರ ಬೆಳಗಿನ ಜಾವ 3:15 ನಿಮಿಷಕ್ಕೆ ಮುಕ್ತಾಯ ಆಗುತ್ತದೆ.

ನಾಗರ ಕಲ್ಲಿಗೆ ಹಸುವಿನ ಹಸಿಯ ಹಾಲನ್ನು ಹಾಕಿ ಅಭಿಷೇಕ ಮಾಡಬೇಕು ತುಪ್ಪ ಜಿಡ್ಡಿನ ಅಂಶವನ್ನು ಹೊಂದಿರುವ ಕಾರಣ ಅದನ್ನು, ಯಾವುದೇ ಕಾರಣಕ್ಕೂ ನಾಗರ ಶಿಲೆಯ ಮೇಲೆ ಅಥವಾ ಹುತ್ತಕ್ಕೆ ಹಾಕಬಾರದು. ಮೇಷ ರಾಶಿ ಎಂದರೆ ಕುಜ ಗ್ರಹದ ಮನೆ, ಮಕರ ರಾಶಿ ಎಂದರೆ ಶನಿ ಗ್ರಹದ ಮನೆ, ಕನ್ಯಾ ರಾಶಿ ಮತ್ತು ಮಿಥುನ ಬುಧ ಗ್ರಹದ ಮನೆ. ನಾಗ ದೋಷ ಇದ್ದರೆ ಮದುವೆಯ ವಿಳಂಬ ಆಗುತ್ತದೆ, ಸಂತಾನ ಸಮಸ್ಯೆ ಎದುರಾಗುತ್ತದೆ ಇನ್ನಷ್ಟು ಸಮಸ್ಯೆಗಳು ಇರುತ್ತದೆ. ನಾಗರ ಪಂಚಮಿಯ ದಿನ ಯಾವ ರೀತಿಯ ಪರಿಹಾರಗಳನ್ನು ಮಾಡಿಕೊಳ್ಳಬೇಕು.

ಮೊಟ್ಟೆ ಮತ್ತು ನಿಂಬೆಹಣ್ಣು ತೆಗೆದುಕೊಳ್ಳಬೇಕು. ಸಸ್ಯಹಾರಿ ಅಥವಾ ಮಾಂಸಾಹಾರಿ ಯಾರೇ ಆದರೂ ಅವರ ದೋಷ ಪರಿಹಾರಕ್ಕೆ ಮೊಟ್ಟೆ ಅಗತ್ಯ ಮತ್ತು ಅದು ನಾಗದೇವರಿಗೆ ಹೆಚ್ಚು ಪ್ರಿಯ. ಗಂಡ ಹೆಂಡತಿ ಮಕ್ಕಳು ಆ ಒಂದು ಪರಿವಾರಕ್ಕೆ ಒಂದು ಮೊಟ್ಟೆ ಹಾಗೂ ಒಂದು ನಿಂಬೆಹಣ್ಣನ್ನು ನಿವಳಿಸಬೇಕು. ಇನ್ನೊಂದು ಪರಿವಾರ ತಂದೆ ತಾಯಿ ಅಥವಾ ಸಹೋದರ ಸಹೋದರಿ ಅವರಿಗೆ ಬೇರೆ ಮೊಟ್ಟೆ ಹಾಗೂ ನಿಂಬೆಹಣ್ಣನ್ನು ಬಳಕೆ ಮಾಡಬೇಕು.

ಮೊಟ್ಟೆ ಮತ್ತು ನಿಂಬೆ ಹಣ್ಣನ್ನು ಒಂದು ಕುಟುಂಬದ ಎಲ್ಲರ ದೇಹಕ್ಕೆ ಸ್ಪರ್ಶ ಮಾಡಿ ನಿವಳಿಸಬೇಕು ಅದು ಮಜ್ಜನಕ್ಕೆ ಮುನ್ನ ನಂತರ ಅದನ್ನು ಮನೆಯ ಹೊರಗೆ ಇಡಬೇಕು. ಸೂರ್ಯ ಮುಳುಗಿದ ನಂತರ ಮನೆಯಿಂದ ದೂರದಲ್ಲಿ ಇರುವ ಹುತಕ್ಕೆ 11 ಪ್ರದಕ್ಷಿಣೆ ಹಾಕಿ ಅದೇ, ಹುತ್ತದಲ್ಲಿ ನಿಂಬೆ ಹಣ್ಣು ಮತ್ತು ಮೊಟ್ಟೆಯನ್ನು ಹಾಕಿ ಬರಬೇಕು.

ಮೊಟ್ಟೆ ಮತ್ತು ನಿಂಬೆ ಹಣ್ಣನ್ನು ಹಾಕಿದ ನಂತರ ಹಿಂದೆ ತಿರುಗಿ ನೋಡದೆ ಮನೆಗೆ ಬಂದು ಕಾಲು ತೊಳೆದು ಆಂಜನೇಯ ಸ್ವಾಮಿಗೆ ನಮಸ್ಕಾರ ಮಾಡಬೇಕು. ಆಂಜನೇಯ ಸ್ವಾಮಿಗೆ ಬಾಲದಲ್ಲಿ ಸರ್ಪ ರಕ್ಷೆ ಇರುತ್ತದೆ ಅದಕ್ಕೆ ಹನುಮಂತನನ್ನು ನಾಗ ಹನುಮ ಎಂದು ಕರೆಯುವರು. ಇದನ್ನು, ಮಾಡುವುದರಿಂದ ದೋಷಗಳು ಪರಿಹಾರ ಆಗುತ್ತದೆ.

ಕಾಳ ಸರ್ಪ ದೋಷ ಇದ್ದರೆ ರಾಹು ಮತ್ತು ಕೇತು ಗ್ರಹಕ್ಕೆ ಕಾಳಹಸ್ತಿ ಪುಣ್ಯ ಕ್ಷೇತ್ರಕ್ಕೆ ಹೋಗಿ ಶಾಂತಿ ಮಾಡಿಸಬೇಕು. ಸರ್ಪ ಸಂಸ್ಕಾರವನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾಡಿಸಬೇಕು. ಸರ್ಪ ದೋಷಗಳು ಮತ್ತು ನಾಗ ದೋಷಗಳು ಎರಡು ಬೇರೆ ಬೇರೆ ಆದ್ದರಿಂದ ಅವುಗಳನ್ನು ಆ ಪುಣ್ಯ ಕ್ಷೇತ್ರಗಳಿಗೆ ಹೋಗಿ ಪರಿಹಾರ ಪೂಜೆ ಮಾಡಿಸಿಕೊಂಡು ಬರಬೇಕು.

ಅದರಲ್ಲೂ ಆಶ್ಲೇಷ ಬಲಿ ಅದು, ವಂಶದಲ್ಲಿ ಬಂದಿರುತ್ತದೆ. ಅದಕ್ಕೆ, ಬೇರೆ ಪೂಜೆ ಮಾಡಿಸಬೇಕು. ನಾಗರ ಪಂಚಮಿಯ ದಿನದಂದು ಈಶ್ವರನ ಮೇಲೆ ಹಾವು ಇರುವ ದೇವಸ್ಥಾನ, ಸುಬ್ರಮಣ್ಯನ ಜೊತೆಯಲ್ಲಿ ಹಾವು ಇರುವ ದೇವಸ್ಥಾನ, ಹುತ್ತ ಇರುವ ಕ್ಷೇತ್ರಗಳು ಘಾಟಿ ಸುಬ್ರಹ್ಮಣ್ಯ, ಕುಕ್ಕೆ ಸುಬ್ರಮಣ್ಯ, ಹಂಪಿಯಲ್ಲಿ ಇರುವ ನಾಗ ಕ್ಷೇತ್ರ, ನಾಗ ಚೌಡೇಶ್ವರಿ, ನಾಗ ಲಿಂಗೇಶ್ವರ ಈ ರೀತಿಯ ಕ್ಷೇತ್ರಗಳಿಗೆ ಭೇಟಿ ನೀಡಿ ನಾಗರ ಪಂಚಮಿಯನ್ನು ಆಚರಣೆ ಮಾಡಬಹುದು.

ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿ ಇರುವುದು ಸಹ ಹುತ್ತದಲ್ಲಿ ಆದ್ದರಿಂದ, ಅದನ್ನು ಗುರು ನಾಗ ಕ್ಷೇತ್ರ ಎಂದು ಕರೆಯಲಾಗುತ್ತದೆ. ಹದ್ದಿನ ಕಲ್ಲಿನ ಆಂಜನೇಯ ಸ್ವಾಮಿ ಕ್ಷೇತ್ರ, ಪುತ್ತೂರಿನಿಂದ ಮಂಗಳೂರಿಗೆ ಹೋಗುವ ಹಾದಿಯಲ್ಲಿ ಇರುವ ದೊಡ್ಡ ನಾಗ ಕ್ಷೇತ್ರ ಎಲ್ಲದಕ್ಕೂ ಅದರದ್ದೇ ಆದ ವಿಶೇಷತೆ ಹಾಗೂ ವೈಶಿಷ್ಟ್ಯತೆ ಇದೆ.

ಕೊಚ್ಚಿನ್ ಯಿಂದ 85 km ದೂರದಲ್ಲಿ ಹರಿಪಾಡ್ ಎನ್ನುವ ಕ್ಷೇತ್ರ ಇದೆ ಅದನ್ನು ಮನ್ನರ್ ಶಾಲೆ ಎಂದು ಕರೆಯುವರು 93 ಎಕರೆಯಲ್ಲಿ ಇದೆ. 25,000 ಹಾವುಗಳು ಆಲ್ಲಿ ಇವೆ. ಇದನ್ನು, ಭೂಲೋಕದ ನಾಗ ಕ್ಷೇತ್ರ ಎಂದು ಹೇಳಲಾಗುತ್ತದೆ. ಯಾವುದೇ ರೀತಿಯ ದೋಷಗಳು ಇದ್ದರೂ ಅದಕ್ಕೆ ಪರಿಹಾರ ಹುತ್ತದ ಸುತ್ತ 11 ಪ್ರದಕ್ಷಿಣೆ ಹಾಕಿ ಉಪವಾಸ ಆಚರಣೆ ಮಾಡಬೇಕು ನೈವೇದ್ಯ ಮಾತ್ರ ಸ್ವೀಕಾರ ಮಾಡಬೇಕು. ಸರ್ಪ ಸಂಸ್ಕಾರ ಮಾಡಿಸುವುದರಿಂದ ಕೂಡ ಸರ್ಪ ದೋಷಗಳು ನಿವಾರಣೆ ಆಗುತ್ತದೆ.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಾಹು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ. ಈ ಕೂಡಲೇ ನಮ್ಮ ನಂಬರಿಗೆ ಕರೆಮಾಡಿ 9606655513

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!