ನಾವಿಂದು ನಿಮಗೆ ಒಂದು ಆಶ್ಚರ್ಯಕರ ವಿಷಯದ ಬಗ್ಗೆ ತಿಳಿಸಿಕೊಡುತ್ತೇವೆ ಅದೇನೆಂದರೆ ಮುಂಬೈನ ಅಂಧೇರಿಯಾದಲ್ಲಿರುವ ದೀಪಾ ಬಾರಿನ ಮೇಲೆ ಪೊಲೀಸರು ನಡೆಸಿರುವ ದಾಳಿಯ ವೇಳೆ ಸ್ಫೋ ಟಕ ಸಂಗತಿಯೊಂದು ಬೆಳಕಿಗೆ ಬಂದಿದೆ. ರಹಸ್ಯ ಕೋಣೆಯೊಳಗೆ ಕೂಡಿಟ್ಟ ಹದಿನೇಳು ಯುವತಿಯರನ್ನು ಪೊಲೀಸರು ಕಂಡುಹಿಡಿದಿದ್ದಾರೆ.
ಗ್ರಾಹಕರ ಮುಂದೆ ನೃತ್ಯ ಮಾಡಲು ಮಹಿಳೆಯರನ್ನು ಬಳಸಿಕೊಳ್ಳಲಾಗುತ್ತದೆ ಎಂಬ ಸುಳಿವಿನ ಮೇರೆಗೆ ದೀಪಾ ಬಾರಿನ ಮೇಲೆ ಸ್ಥಳೀಯ ಪೊಲೀಸರು ದಾಳಿ ನಡೆಸಿದ ಸಮಯದಲ್ಲಿ ಈ ಸಂಗತಿ ಬಯಲಿಗೆ ಬಂದಿದೆ. ಬಾರ್ ಡಾನ್ಸ್ ನಡೆಸುತ್ತಿದ್ದ ವ್ಯಕ್ತಿ ಮಹಿಳೆಯರನ್ನ ರಹಸ್ಯ ಕೋಣೆಯಲ್ಲಿ ಕೂಡಿಟ್ಟಿದ್ದ. ಪೊಲೀಸರು ದಾಳಿ ನಡೆಸುತ್ತಾರೆ ಎಂದು ಗೊತ್ತಾದ ಬೆನ್ನಲ್ಲೇ ಆತ ರಹಸ್ಯ ಕೋಣೆಯ ಮುಂದೆ ಸುಧಾರಿತ ಎಲೆಕ್ಟ್ರಾನಿಕ್ ವ್ಯವಸ್ಥೆಯನ್ನು ಅಳವಡಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿ ನಡೆಸಿದ ಪೊಲೀಸರು ವಾಶ್ರೂಮ್ ಅಡುಗೆಕೋಣೆ ಮತ್ತು ದಾಸ್ತಾನು ಕೋಣೆಯನ್ನು ಜಾಲಾಡಿದರೂ ಕೂಡ ಮಹಿಳೆಯರ ಸುಳಿವು ಪತ್ತೆಯಾಗಲಿಲ್ಲ. ಸಾಲದ್ದಕ್ಕೆ ಬಾರ್ ಮ್ಯಾನೇಜರ್ ವೇಟರ್ ಕ್ಯಾಶಿಯರ್ ಕೂಡ ಆರೋಪವನ್ನು ನಿರಾಕರಿಸಿದ್ದರು ಆದರೆ ಮೇಕಪ್ ರೂಮಿನಲ್ಲಿ ಒಂದು ದೊಡ್ಡ ಕನ್ನಡಿ ನೇತು ಹಾಕಿರುವುದು ಪೊಲೀಸರ ಗಮನವನ್ನು ಸೆಳೆಯಿತು.
ಅದನ್ನು ತೆರವು ಮಾಡಲು ಪೊಲೀಸರು ಯತ್ನಿಸಿದರು ಅದು ಸಾಧ್ಯವಾಗದಿದ್ದಾಗ ಅದನ್ನು ಒಡೆದು ಹಾಕುವುದಕ್ಕೆ ನಿರ್ಧರಿಸಿದರು. ಬಳಿಕ ಸುತ್ತಿಗೆಯಿಂದ ಕನ್ನಡಿಯನ್ನು ಒಡೆದಾಗ ಪೊಲೀಸರಿಗೆ ಅಚ್ಚರಿಯೊಂದು ಕಾದಿತ್ತು ಅಲ್ಲಿ ರಹಸ್ಯ ಕೋಣೆಯೊಂದು ಇರುವುದನ್ನು ನೋಡಿದ ಪೊಲೀಸರು ಒಳಗೆ ನೋಡಿದಾಗ ಅಲ್ಲಿ ಮಹಿಳೆಯರು ಪತ್ತೆಯಾಗಿದ್ದಾರೆ.ಆ ರಹಸ್ಯ ಕೋಣೆಯಲ್ಲಿ ಹದಿನೇಳು ಯುವತಿಯರನ್ನು ಅಡಗಿಸಿಡಲಾಗಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ಸುದ್ದಿ ಮಾಡುತ್ತಿದೆ.