2024 ಸಪ್ಟೆಂಬರ್ ತಿಂಗಳಿನಲ್ಲಿ ಮಾಸ ಭವಿಷ್ಯ ನೋಡುವುದಾದರೆ ಆಯಾ ರಾಶಿಗೆ ಅನುಗುಣವಾಗಿ ಸಪ್ಟೆಂಬರ್ ತಿಂಗಳಿನಲ್ಲಿ ಉದ್ಯೋಗ, ವ್ಯವಹಾರ, ಅನುಕೂಲ ಅನಾನುಕೂಲಗಳಿರುತ್ತದೆ. ದ್ವಾದಶ ರಾಶಿಗಳಲ್ಲಿ ಪ್ರಮುಖ ರಾಶಿ ಮಿಥುನ ರಾಶಿಯ ಸಪ್ಟೆಂಬರ್ ತಿಂಗಳ ರಾಶಿ ಭವಿಷ್ಯವನ್ನು ಈ ಲೇಖನದಲ್ಲಿ ನೋಡೋಣ

ಮಿಥುನ ರಾಶಿಯ ಸಪ್ಟೆಂಬರ್ ತಿಂಗಳ ಗ್ರಹಗತಿ ನೋಡುವುದಾದರೆ ರವಿಯು ಕ್ರಮವಾಗಿ ಮೂರು ಮತ್ತು ನಾಲ್ಕನೆ ಮನೆ ಕುಜ ಗ್ರಹನು ಜನ್ಮಸ್ಥಾನದಲ್ಲಿ ಮಿಥುನ ರಾಶಿಯಲ್ಲಿ ಬುಧ ಗ್ರಹನು ಎರಡು ಮತ್ತು ಮೂರನೆ ಮನೆ ಗುರು ಹನ್ನೆರಡನೆ ಮನೆ ಶುಕ್ರ ಗ್ರಹ ನಾಲ್ಕು ಹಾಗೂ ಐದನೆ ಮನೆ ಶನಿ ಗ್ರಹ ಒಂಭತ್ತನೇ ಮನೆಯಲ್ಲಿ ರಾಹು ಹತ್ತನೆ ಮನೆ ಕೇತು ಗ್ರಹ ನಾಲ್ಕನೆ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾರೆ. ರವಿ ಮೂರನೆ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾಗ ಉತ್ತಮ ಸ್ಥಾನ ಪ್ರಾಪ್ತಿಯನ್ನು ಕೊಡುತ್ತಾನೆ ಉದ್ಯೋಗ ವ್ಯವಹಾರ ಕ್ಷೇತ್ರದಲ್ಲಿ ಅಭಿವೃದ್ಧಿ , ಸರ್ಕಾರಿ ಕ್ಷೇತ್ರದಲ್ಲಿ ಉತ್ತಮ ಸ್ಥಾನ ಇದರಿಂದ ಧನ ಲಾಭ ಸುಖ ಹಾಗೂ ಸಂತೋಷ ಇರುತ್ತದೆ ರವಿಯು ನಾಲ್ಕನೆ ಮನೆಯಲ್ಲಿ ಸಂಚಾರ ಮಾಡುತ್ತಾ ವ್ಯವಹಾರದ ಒತ್ತಡದಿಂದ ಅನಾರೋಗ್ಯ ಸಮಸ್ಯೆ ಇದರಿಂದ ಮಾಡುವ ಕಾರ್ಯದಲ್ಲಿ ವಿಘ್ನ ಎದುರಾಗುತ್ತದೆ ಹೀಗಾಗಿ ಮಿಥುನ ರಾಶಿಯವರು ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಕುಜ ಗ್ರಹನು ಜನ್ಮಸ್ಥಾನ ಮಿಥುನ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾಗ ಆಕಸ್ಮಿಕ ಅಪಘಾತವಾಗುವುದು ರಕ್ತಸ್ರಾವವಾಗುವುದು ಸ್ತ್ರೀಯರಿಗೆ ಹಾರ್ಮೋನ್ ವ್ಯತ್ಯಾಸ ಕಂಡುಬರುತ್ತದೆ.

ಮಿಥುನ ರಾಶಿಯವರು ಬೆಂಕಿ, ಜಲದ ಹತ್ತಿರ ಹೋದಾಗ ಜಾಗೃತ ವಹಿಸುವುದು ಅಗತ್ಯವಾಗಿದೆ. ಬುಧ ಗ್ರಹ ಎರಡನೆ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾಗ ಮಿಥುನ ರಾಶಿಯ ವಿದ್ಯಾರ್ಥಿಗಳಿಗೆ ವಿದ್ಯೆಯ ಹಿನ್ನಡೆ ಅನಾರೋಗ್ಯದಿಂದ ಶಾಲೆಗೆ ಹೋಗಲು ಆಗದೆ ಇರುವುದು ಮಿತ್ರರೊಂದಿಗೆ ಜಗಳ ವಿದ್ಯೆಗೆ ಮಿತ್ರರ ಸಹಕಾರ ಇಲ್ಲದೆ ಇರುವುದು ಬುಧ ಗ್ರಹ ಮೂರನೆ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾಗ ಮನಸ್ಸು ಚಂಚಲವಾಗಿರುವುದು ಶತ್ರು ಬಾಧೆಯನ್ನು ಸೂಚಿಸುತ್ತಾನೆ ಹಾಗೂ ಮಿಥುನ ರಾಶಿಯವರಿಗೆ ಪುತ್ರರಿಂದ ನಷ್ಟವನ್ನು ಕೊಡುತ್ತಾನೆ. ಗುರು ಗ್ರಹ ಹನ್ನೆರಡನೆ ಮನೆ ವ್ಯಯ ಸ್ಥಾನದಲ್ಲಿ ಸಂಚಾರ ಮಾಡುತ್ತಿದ್ದಾಗ ಗುರು ಬಲ ಮಿಥುನ ರಾಶಿಯವರಿಗೆ ಕಡಿಮೆ ಇದ್ದು ಕೈಗೊಂಡ ಕಾರ್ಯ ವಿಘ್ನ, ಸಂಸಾರಿಕ ಜೀವನದಲ್ಲಿ ಜಗಳ ದೇವತಾ ಅನುಗ್ರಹ ಪ್ರಾಪ್ತಿಗಾಗಿ ಧರ್ಮ ಕಾರ್ಯ ಮಾಡಬೇಕು ಗುರುಗಳ ಗುರುಹಿರಿಯರ ಆಶೀರ್ವಾದ ಪಡೆಯಬೇಕು.

ಶುಕ್ರ ಗ್ರಹ ನಾಲ್ಕನೆ ಮನೆಯಲ್ಲಿ ಸಂಚಾರ ಮಾಡುತ್ತಾ ಮಿತ್ರರಿಂದ ಸಂತೋಷವನ್ನು, ಸುಖ ಆಭರಣ ಲಾಭವನ್ನು ಕಲಾಕ್ಷೇತ್ರದಲ್ಲಿ ಇರುವವರಿಗೆ ನೈಪುಣ್ಯತೆಯನ್ನು ಕೊಡುತ್ತಾನೆ, ಸೀರಿಯಲ್, ಸಿನಿಮಾ ಕ್ಷೇತ್ರದಲ್ಲಿ ಇರುವವರಿಗೆ ಇದು ಉತ್ತಮ ಸಮಯವಾಗಿದೆ. ಶುಕ್ರ ಐದನೆ ಮನೆಯಲ್ಲಿ ಸಂಚಾರ ಮಾಡುತ್ತಾ ಧನ ಪ್ರಾಪ್ತಿ, ಸಂತಾನ ಪ್ರಾಪ್ತಿಯಾಗುತ್ತದೆ.

ಶನೀಶ್ವರ ಒಂಭತ್ತನೇ ಮನೆಯಲ್ಲಿ ಸಂಚಾರ ಮಾಡುತ್ತಾ ಮನೆಯಲ್ಲಿ ಶುಭ ಕಾರ್ಯಗಳನ್ನು ಮಂಗಳ ಕಾರ್ಯಗಳನ್ನು ಸೂಚಿಸುತ್ತಾನೆ ಆದರೆ ಸ್ಪಕ್ಷೇತ್ರದಲ್ಲಿರುವ ಲಾಭ ಸ್ಥಾನದಲ್ಲಿರುವ ಶನಿಯ ಪ್ರಭಾವದಿಂದ ರೋಗದ ಭಯವಿದೆ ಹೃದಯ ಸಂಬಂಧಿ ಸಮಸ್ಯೆ ಬಂದರೆ ವೈದ್ಯರನ್ನು ಕಾಣುವುದು ಉತ್ತಮ. ರಾಹು ಹತ್ತನೆ ಮನೆಯಲ್ಲಿ ಸಂಚಾರ ಮಾಡುತ್ತಾ ಷೇರು ಮಾರ್ಕೆಟ್ ನಲ್ಲಿ ಸ್ವಲ್ಪ ಮಟ್ಟಿಗೆ ಲಾಭವಾಗುತ್ತದೆ ಧನಾಗಮನವಾಗುತ್ತದೆ. ನೂತನ ಉದ್ಯೋಗ ಪ್ರಾರಂಭ ಮಾಡುವುದನ್ನು ಕೂಡ ರಾಹು ಗ್ರಹ ತೋರಿಸುತ್ತಾನೆ ಹೀಗಾಗಿ ಸಪ್ಟೆಂಬರ್ ತಿಂಗಳಿನಲ್ಲಿ ಪ್ರಾರಂಭಿಸುವುದು ಉತ್ತಮ.

ಕೇತು ಗ್ರಹ ನಾಲ್ಕನೆ ಮನೆಯಲ್ಲಿ ಸಂಚಾರ ಮಾಡುತ್ತಾ ವಾಹನ ಅಪಘಾತ ಭಯ ತೋರಿಸುತ್ತಾನೆ ಹೀಗಾಗಿ ವಾಹನದ ಬಗೆ ಎಚ್ಚರ ವಹಿಸಬೇಕು. ಮಿಥುನ ರಾಶಿಯವರಿಗೆ ಸಪ್ಟೆಂಬರ್ ತಿಂಗಳಲ್ಲಿ ಉತ್ತಮ ದಿನಂಕಗಳೆಂದರೆ 9,11,19 ಹಾಗೂ 26 ಆಗಿದೆ ಈ ದಿನಾಂಕಗಳಲ್ಲಿ ಶುಭ ಕಾರ್ಯಗಳನ್ನು ಪ್ರಾರಂಭಿಸಿ ಫಲ ಪಡೆಯಿರಿ. ಮಿಥುನ ರಾಶಿಯವರಿಗೆ ಉತ್ತಮ ಬಣ್ಣಗಳೆಂದರೆ ಪಚ್ಚೆ, ಬಿಳಿ ಹಾಗೂ ಹಳದಿ ಹಾಗೂ ಹಳದಿ ಮಿಶ್ರಿತ ಪಚ್ಚೆ ಬಣ್ಣಗಳಾಗಿವೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಎಲ್ಲರಿಗೂ ಭಗವಂತ ಒಳ್ಳೆಯದನ್ನು ಮಾಡಲಿ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!