12 ರಾಶಿಗಳಲ್ಲಿ ಪ್ರತಿಯೊಂದು ರಾಶಿಯು ತನ್ನದೆ ಆದ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಒಂದೊಂದು ರಾಶಿಯಲ್ಲಿ ಜನಿಸಿದವರು ಆಯಾ ರಾಶಿಗೆ ಅನುಗುಣವಾಗಿ ತಮ್ಮದೆ ಆದ ಸ್ವಭಾವ, ಭವಿಷ್ಯವನ್ನು ಹೊಂದಿರುತ್ತಾರೆ. ಮಿಥುನ ರಾಶಿಯ ಜೂನ್ ತಿಂಗಳಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ಮಿಥುನ ರಾಶಿಯವರಿಗೆ ಜೂನ್ ತಿಂಗಳಿನಲ್ಲಿ ಶುಕ್ರ ಗ್ರಹ ಹನ್ನೊಂದನೆ ಮನೆಯಲ್ಲಿರುವುದರಿಂದ ಹಣಕಾಸಿನ ತೊಂದರೆ ಆಗುವುದಿಲ್ಲ, ಬರಬೇಕಾದ ಹಣ ಬರುತ್ತದೆ. ಮಿಥುನ ರಾಶಿಯವರಿಗೆ ಜೂನ್ ತಿಂಗಳಿನಲ್ಲಿ 80 ಪರ್ಸೆಂಟ್ ಒಳ್ಳೆಯದಾಗಲಿದೆ. ಶಿಕ್ಷಣ ವಿಷಯದಲ್ಲಿ ಮಿಥುನ ರಾಶಿಯವರಿಗೆ ಉನ್ನತ ಶಿಕ್ಷಣಕ್ಕಾಗಿ ಹೊರದೇಶಗಳಿಗೆ ಹೋಗುವವರಿಗೆ ಯಾವುದೆ ಸಮಸ್ಯೆ ಇಲ್ಲ.
ಶಾಲೆ, ಹೈಸ್ಕೂಲ್ ಗೆ ಹೋಗುತ್ತಿರುವ ವಿದ್ಯಾರ್ಥಿನಿಯರಿಗೆ ಸ್ವಲ್ಪ ಮಟ್ಟಿಗೆ ಸಮಸ್ಯೆಯಾಗುತ್ತದೆ. ಅಕಾಡೆಮಿಕ್ ಶಿಕ್ಷಣ ಮುಗಿಸಿ ಉದ್ಯೋಗಕ್ಕಾಗಿ ನೋಡುತ್ತಿರುವವರಿಗೆ ಒಳ್ಳೆಯದಾಗಲಿದೆ ಆದರೆ ಟೆಕ್ನಿಕಲ್ ಎಜುಕೇಶನ್ ಮುಗಿಸಿ ಉದ್ಯೋಗಕ್ಕಾಗಿ ನೋಡುತ್ತಿರುವವರಿಗೆ ಸಮಸ್ಯೆ ಆಗಬಹುದು. ಸರ್ಕಾರಿ ಹುದ್ದೆಗೆ ಹೋಗುವವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ಪರ್ಧಿಸಬಹುದು.
ಬಿಸಿನೆಸ್ ಮಾಡುತ್ತಿರುವವರಿಗೆ ಜೂನ್ ತಿಂಗಳು ಪ್ರಶಸ್ತವಾದ ಸಮಯವಾಗಿದೆ. ಸಣ್ಣ ಬಿಸಿನೆಸ್ ಇಂದ ದೊಡ್ಡ ಬಿಸಿನೆಸ್ ಮಾಡುತ್ತಿರುವವರಿಗೂ ಈ ಸಮಯ ಉತ್ತಮವಾಗಿದೆ. ರೈತರಿಗೆ, ತರಕಾರಿ ಬೆಳೆಯುವವರಿಗೆ ಈ ಸಮಯದಲ್ಲಿ ಲಾಭವಾಗಲಿದೆ. ಮಿಥುನ ರಾಶಿಯವರು ಮನೆ ಕಟ್ಟುವುದಾದರೆ ಒಳ್ಳೆಯದಾಗುತ್ತದೆ ಅಥವಾ ಹಳೆಯ ಮನೆಯನ್ನು ಅಲ್ಟ್ರೇಷನ್ ಮಾಡುವುದಿದ್ದರೆ ಅವರಿಗೂ ಒಳ್ಳೆಯದಾಗುತ್ತದೆ.
ಮಿಥುನ ರಾಶಿಯವರು ಈ ಹಿಂದೆ ಬಂಗಾರವನ್ನು ಅಡವಿಟ್ಟಿದ್ದರೆ ಜೂನ್ ತಿಂಗಳಿನಲ್ಲಿ ಬಂಗಾರವನ್ನು ಬಿಡಿಸಿಕೊಂಡು ಬರುವ ಸಾಧ್ಯತೆಗಳಿವೆ. ಮೊದಲ ಸಲ ವ್ಯಾಪಾರ ಪ್ರಾರಂಭಿಸುವವರಿಗೆ ಜೂನ್ ತಿಂಗಳು ಉತ್ತಮ ಸಮಯವಾಗಿದೆ. ವಿವಾಹಕ್ಕಾಗಿ ನೋಡುತ್ತಿರುವ ಮಿಥುನ ರಾಶಿಯವರಿಗೆ ಒಳ್ಳೆ ಕಡೆಯಿಂದ ಗಂಡು ಅಥವಾ ಒಳ್ಳೆ ಕಡೆಯಿಂದ ಹೆಣ್ಣು ಸಿಗಲಿದೆ. ಮಕ್ಕಳನ್ನು ಬಯಸುತ್ತಿರುವ ತಂದೆ-ತಾಯಿಯರಿಗೆ ಜೂನ್ ತಿಂಗಳಿನಲ್ಲಿ ಸಂತಾನಪ್ರಾಪ್ತಿ ಆಗುವ ಸಾಧ್ಯತೆಗಳಿವೆ.
ಮಿಥುನ ರಾಶಿಯವರ ಆರೋಗ್ಯದ ವಿಷಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಬರುತ್ತವೆ. ಗಂಡ-ಹೆಂಡತಿಯ ನಡುವೆ ಮನಸ್ತಾಪಗಳು ಬರಬಹುದು ಆದರೆ ತಾಳ್ಮೆಯಿಂದ ನಡೆದುಕೊಂಡಲ್ಲಿ ಜಗಳಗಳನ್ನು ನಿವಾರಿಸಿಕೊಳ್ಳಬಹುದು. ಅಪ್ಪ, ಅಮ್ಮ, ಅಕ್ಕ, ತಂಗಿಯ ನಡುವೆ ಸಣ್ಣ ಪುಟ್ಟ ಮನಸ್ತಾಪಗಳು ಬರುತ್ತವೆ. ಮಿಥುನ ರಾಶಿಯವರಿಗೆ ಜೂನ್ ತಿಂಗಳಿನಲ್ಲಿ ಒತ್ತಡದಿಂದಾಗಿ ನರಗಳ ಸಮಸ್ಯೆ ಇದ್ದಲ್ಲಿ ಅದು ಉಲ್ಬಣಗೊಳ್ಳುವ ಸಾಧ್ಯತೆಗಳಿವೆ, ಇದು ವಯಸ್ಸಾದವರಲ್ಲಿ ಹಾಗೂ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
ಮಿಥುನ ರಾಶಿಯವರು ಆರೋಗ್ಯದ ಬಗ್ಗೆ ಲಕ್ಷ ವಹಿಸಬೇಕು. ಮಿಥುನ ರಾಶಿಯವರು ಮಿಥುನ ರಾಶಿಯ ಅಧಿದೇವತೆ ಬುಧ ಗ್ರಹವಾಗಿದ್ದು ಬುಧನ ದೇವರು ವಿಷ್ಣು ಅದರಲ್ಲೂ ರಂಗನಾಥ ಸ್ವಾಮಿ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಮಾಡಿಕೊಳ್ಳಬೇಕು ಇದರಿಂದ ಮಿಥುನ ರಾಶಿಯವರಿಗೆ ಒಳ್ಳೆಯದಾಗುತ್ತದೆ. ವಿದ್ಯಾರ್ಥಿನಿಯರು ಇರುವ ಆಶ್ರಮ, ಸ್ಕೂಲ್ ಗಳಿಗೆ ವಸ್ತುಗಳನ್ನು ಅಥವಾ ಹಣವನ್ನು ದಾನ ಮಾಡುವುದರಿಂದ ಮಿಥುನ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಮಿಥುನ ರಾಶಿಯವರು ರಂಗನಾಥ ಸ್ವಾಮಿ ದೇವಾಲಯಕ್ಕೆ ತಪ್ಪದೆ ಭೇಟಿ ಕೊಡಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ.