ದ್ವಾದಶ ರಾಶಿಗಳಲ್ಲಿ ವೃಷಭ ರಾಶಿಯು ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಭೂಮಿಯ ಚಿಹ್ನೆಯನ್ನು ಹೊಂದಿರುವ ಈ ರಾಶಿಯವರು ಸಾಮಾನ್ಯವಾಗಿ ಪ್ರಾಮಾಣಿಕರು, ಮತ್ತು ಮೊಂಡು ಸ್ವಭಾವದವರು, ಸಹನಾಶೀಲರು, ವೈಯಕ್ತಿಕ ಸಂಬಂಧದಲ್ಲಿ ಪ್ರಾಮಾಣಿಕತೆಯನ್ನು ಬಯಸುವ ಸಭ್ಯ ವ್ಯಕ್ತಿಗಳಾಗಿರುತ್ತಾರೆ. ವಿಶ್ವಾಸಾರ್ಹ ವ್ಯಕ್ತಿಗಳಾದ ಇವರ ವ್ಯಕ್ತಿತ್ವ ಹಾಗೂ ಕುಂಡಲಿಯ ಭವಿಷ್ಯವು ವಿಭಿನ್ನತೆಯನ್ನು ಪಡೆದುಕೊಂಡಿದೆ. ನೀವು ವೃಷಭ ರಾಶಿಯವರು ಅಥವಾ ನಿಮ್ಮವರು ವೃಷಭ ರಾಶಿಯವರಾಗಿದ್ದರೆ ಅವರ ಗುಣಲಕ್ಷಣಗಳೇನು ಮತ್ತು ವ್ಯಕ್ತಿತ್ವದ ವಿಶೇಷತೆಯೇನು ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳೋಣ.
ಕೃತ್ತಿಕಾ ನಕ್ಷತ್ರದ 2, 3 ಹಾಗೂ 4ನೇ ಪಾದ, ರೋಹಿಣಿ ನಕ್ಷತ್ರದ 1, 2, 3 ಹಾಗೂ 4ನೇ ಪಾದ ಮತ್ತು ಮೃಗಶಿರಾ 1, 2ನೇ ಪಾದ ಸೇರಿ ವೃಷಭ ರಾಶಿ ಆಗುತ್ತದೆ. ವೃಷಭ ರಾಶಿಯ ಅಧಿಪತಿ ಶುಕ್ರ ಗ್ರಹ. ಈ ರಾಶಿಯವರಿಗೆ ಶುಕ್ರ ಅಧಿಪತಿ ಆಗಿರುವುದು ಪ್ಲಸ್ ಪಾಯಿಂಟ್. ಪಿತ್ರಾರ್ಜಿತ ಆಸ್ತಿ ವಿಚಾರವಾಗಿಯೇ ಹಲವರಿಗೆ ಜಗಳ ಆಗುತ್ತದೆ. ಹಾಗೆ ಜಗಳ ಆಗಿಯೂ ಆಸ್ತಿ ದೊರೆಯುವ ಖಾತ್ರಿ ಇರುವುದಿಲ್ಲ. ಆದರೆ ವೃಷಭ ರಾಶಿಯವರಿಗೆ ಪಿತ್ರಾರ್ಜಿತ ಆಸ್ತಿ ಸಂಪೂರ್ಣವಾಗಿ ದೊರೆಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.
ಎಲ್ಲರ ಮೇಲೂ ವಿಶ್ವಾಸ ಇಡುವ ವೃಷಭ ರಾಶಿಯವರು ನಂಬಿಕಸ್ಥರಾಗಿರುತ್ತಾರೆ. ಸಮಾಜಕ್ಕೆ ಏನಾದರು ಕೊಡುಗೆ ನೀಡಬೇಕೆಂಬ ಹಂಬಲ ಇವರದ್ದಾಗಿರುತ್ತದೆ. ವೃಷಭ ರಾಶಿಯವರು ಆಕರ್ಷಕ ಮುಖಚರ್ಯೆ ಹೊಂದಿರುತ್ತಾರೆ. ವೃಷಭ ರಾಶಿಯವರು ಸಂಗೀತ ಪ್ರಿಯರು ಕಲೆಗೆ ಬೆಲೆ ಕೊಡುವವರಾಗಿರುತ್ತಾರೆ. ಅಲ್ಲದೇ, ವೃಷಭ ರಾಶಿಯವರು ಅಲಂಕಾರ ಪ್ರಿಯರೂ ಆಗಿರುತ್ತಾರೆ.
ಯಾವುದಾದರೂ ನಿರ್ಧಾರ ಕೈಗೊಳ್ಳುವಾಗ ಗಡಿಬಿಡಿ ಮಾಡುವುದಿಲ್ಲ, ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ರಾಶಿಯವರು ಕುಟುಂಬದ ಬಗ್ಗೆ ಅತೀ ಕಾಳಜಿ ಹೊಂದಿದವರಾಗಿರುತ್ತಾರೆ. ಈ ರಾಶಿಯವರು ಕೊಂಚ ಮೊಂಡು ಸ್ವಭಾವದವರಾಗಿದ್ದು, ವಾದ ಮಾಡುವುದು ಇವರ ಹುಟ್ಟು ಗುಣ. ಯಾರಾದರೂ ಸಹಾಯ ಬೇಡಿದರೆ ತಕ್ಷಣ ಮಾಡುವಷ್ಟು ದಯೆಯ ಸ್ವಭಾವ ಇವರಿಗಿರುತ್ತದೆ.
ಜೀವನದಲ್ಲಿ ಖರ್ಚು ವೆಚ್ಚಗಳಿಗಿಂತ ದುಡ್ಡು ಕೂಡಿಟ್ಟು ಅಭಿವೃದ್ಧಿ ಹೊಂದಬೇಕೆಂಬ ಗುಣ ಇವರಲ್ಲಿರುತ್ತದೆ. ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಇಚ್ಛೆ ಈ ರಾಶಿಯವರದ್ದಾಗಿರುತ್ತದೆ.
ವೃಷಭ ರಾಶಿಯವರು ಸಾಮಾನ್ಯವಾಗಿ ಹಣ ಮತ್ತು ಆಸ್ತಿಯನ್ನು ಇಷ್ಟಪಡುವರು. ಅದರ ಗಳಿಕೆಗಾಗಿ ಸಾಕಷ್ಟು ಶ್ರಮವನ್ನು ವಿನಿಯೋಗಿಸುವರು. ವಿಶ್ವಾಸಾರ್ಹ ವರ್ತನೆ, ಕಠಿಣ ಪರಿಶ್ರಮ, ತಾಳ್ಮೆ ಮತ್ತು ಗುರಿಯಿಂದಾಗಿ ಮಾಡುವ ಉದ್ಯೋಗದಲ್ಲಿ ಸೂಕ್ತ ಆಸಕ್ತಿ ಹಾಗೂ ತಲ್ಲೀನತೆಯನ್ನು ತೋರುವರು. ನಿರ್ದಿಷ್ಟ ಯೋಜನೆಯ ಮೇಲೆ ಗಮನವನ್ನು ಕೇಂದ್ರೀಕರಿಸುವರು. ಸುತ್ತಲಿನ ಪರಿಸರದ ಮೇಲೆ ಸೂಕ್ತ ಹೊಂದಾಣಿಕೆ ಹಾಗೂ ಸ್ನೇಹಪರ ವರ್ತನೆಯ ಮೂಲಕ ಎಲ್ಲವನ್ನೂ ಸುಲಭವಾಗಿ ನಿರ್ವಹಿಸುವರು. ಯಾವುದೇ ಕೆಲಸದಲ್ಲಾದರೂ ಸೂಕ್ತ ನಿರ್ವಹಣೆಯನ್ನು ಕೈಗೊಳ್ಳುವ ಇವರಿಗೆ ಉದ್ಯೋಗಗಳು, ಕೃಷಿ, ಬ್ಯಾಂಕ್ ಕೆಲಸ, ಕಲೆ, ಪಾಕಶಾಲೆಗೆ ಸಂಬಂಧಿಸಿದಂತಹ ವೃತ್ತಿಗಳಲ್ಲಿ ಹೆಚ್ಚಿನ ಯಶಸ್ಸನ್ನು ಕಾಣುವರು.
ಬಿಳಿ ಹಾಗೂ ನೀಲಿ ಬಣ್ಣ ಅತ್ಯಂತ ಪ್ರಿಯವಾಗಿರುತ್ತದೆ. ಅವುಗಳನ್ನು ಅನುಕೂಲಕರ ಬಣ್ಣಗಳು ಅಂತ ಕೂಡ ಪರಿಗಣಿಸಬಹುದು. ಶುಕ್ರವಾರ ಅದ್ಭುತವಾದ ಫಲ ಕೊಡುವಂಥ ವಾರವಾಗಿರುತ್ತದೆ. ಮಹಾಲಕ್ಷ್ಮೀ ಆರಾಧನೆ ಮಾಡಿದರೆ ಎಲ್ಲದರಲ್ಲೂ ಯಶಸ್ಸನ್ನು ಪಡೆಯಬಹುದು. 6 ಹಾಗೂ 8 ವೃಷಭ ರಾಶಿಯವರ ಪಾಲಿನ ಶುಭ ಸಂಖ್ಯೆಗಳು. 6, 15 ಹಾಗೂ 24 ಶುಭ ದಿನಾಂಕಗಳಾಗಿವೆ.
ಆತ್ಮ ವಿಶ್ವಾಸ ಹೆಚ್ಚಾಗಿ ಇರುತ್ತದೆ ಎಂತಹ ಕಠಿಣ ಪರಿಸ್ಥಿತಿ ಬಂದರು ಅದನ್ನು ನಿಭಾಯಿಸುತ್ತಾರೆ. ಸಮಯಕ್ಕೆ ತಕ್ಕ ಬುದ್ದಿವಂತಿಕೆ ಇಂದ ಪಾರಾಗುತ್ತಾರೆ ಕೀರ್ತಿ ಪ್ರತಿಷ್ಟೇ ಬಯಸುವವರು ಅಧಿಕ ಖರ್ಚು ಮಾಡುವವರು ಆಗಿರುತ್ತಾರೆ. ಆತುರದ ನಿರ್ಧಾರ ತೆಗೆದುಕೊಳ್ಳುವರಲ್ಲ ಕೆಣಕಿದರೆ ಸೇಡು ತೀರಿಸಿ ಕೊಳ್ಳದೆ ಬಿಡುವವರಲ್ಲ. ಇವರಿಗೆ ರೋಗ ಕಾಡದೆ ಬಿಡುವುದಿಲ್ಲ.
ವೃಷಭ ರಾಶಿಯನ್ನು ಶುಕ್ರನು ಆಳುವನು. ಈ ಗ್ರಹವು ಸೌಂದರ್ಯ ಹಾಗೂ ಪ್ರೀತಿಯನ್ನು ಪ್ರತಿನಿಧಿಸುವುದು ಎಂದು ಹೇಳಲಾಗುವುದು. ವೃಷಭ ರಾಶಿಯವರು ಪ್ರೀತಿ, ಐಷಾರಾಮಿ ಮತ್ತು ಸೌಂದರ್ಯದ ವಿಷಯದಲ್ಲಿ ಬಹಳ ಸೂಕ್ಷ್ಮಪ್ರವೃತ್ತಿಯನ್ನು ಹೊಂದಿರುತ್ತಾರೆ. ಆಹಾರದಿಂದ ಹಿಡಿದು ಫ್ಯಾಷನ್ ಸಂಗತಿಯವರೆಗೂ ಹೊಸತನವನ್ನು ಬಯಸುವರು. ಶುಕ್ರನ ಆಡಳಿತದಿಂದಾಗಿ ಜೀವನವನ್ನು ಒಂದು ಸುಂದರ ಪಯಣದಂತೆ ಸಾಗಬೇಕು ಎನ್ನುವ ಮನೋಭಾವವನ್ನು ಹೊಂದಿರುತ್ತಾರೆ. ಸೌಂದರ್ಯ ಇಲ್ಲದ ಬದುಕು ಆಶಾದಾಯಕವಲ್ಲ ಎನ್ನುವ ಭಾವನೆಯನ್ನು ಹೊಂದಿರುತ್ತಾರೆ. ಜೀವನದಲ್ಲಿ ಹೆಚ್ಚಿನ ಆಸಕ್ತಿಯೊಂದಿಗೆ ಜೀವನ ನಡೆಸಲು ಬಯಸುವರು.
ವೃಷಭ ರಾಶಿಯ ಜನರು ಸಾಮಾನ್ಯವಾಗಿ ವಿಶ್ವಾಸಾರ್ಹ ವ್ಯಕ್ತಿಗಳಾಗಿರುತ್ತಾರೆ. ಇತರ ವ್ಯಕ್ತಿಗಳನ್ನು ದಯೆ ಮತ್ತು ಉದಾರ ಭಾವನೆಗಳಿಂದ ಪರಿಗಣಿಸುತ್ತಾರೆ. ಅಂತೆಯೇ ಇತರರ ಏಳಿಗೆಯನ್ನು ಹಾಗೂ ಒಳಿತನ್ನು ಬಯಸುವ ವ್ಯಕ್ತಿಗಳು ಹೌದು. ಭೌತಿಕ ಅಂಶಗಳೊಂದಿಗೆ ಉತ್ತಮವಾಗಿರಲು ಬಯಸುವ ಇವರು ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಲು ಮುಂದಾಗುವರು. ಎಂತಹ ಕಠಿಣ ಸಂದರ್ಭಗಳು ಎದುರಾದರೂ ಅದನ್ನು ಎದುರಿಸುವ ಧೈರ್ಯ ಹಾಗೂ ಮನಃಸ್ಥಿತಿಯನ್ನು ಹೊಂದಿರುತ್ತಾರೆ. ಜೀವನದಲ್ಲಿ ಇತರರ ಸಂತೋಷಕ್ಕಾಗಿಯೂ ಸಾಕಷ್ಟು ಶ್ರಮವನ್ನು ವಹಿಸುವರು. ಸಂವೇದನಾ ಶೀಲರಾಗಿದ್ದರೂ ಮಾಡುವ ಕೆಲಸ ಕಾರ್ಯಗಳಲ್ಲಿ ಸೂಕ್ತ ಸಾಮರ್ಥ್ಯ ಹಾಗೂ ಸ್ಥಿರತೆಯನ್ನು ಹೊಂದಿರುತ್ತಾರೆ. ಶುಕ್ರನು ಈ ರಾಶಿಯವರನ್ನು ಆಳುವುದರಿಂದ ಇವರು ಸದಾ ಕಾಲ ಉದಾರ ಮತ್ತು ಕಾಳಜಿಯುಳ್ಳ ಪ್ರವೃತ್ತಿಯನ್ನು ತೋರುವರು.