ರೈತರಿಗೆ ಕೃಷಿ ಬೆಳೆಯಲು ಎಷ್ಟು ಶ್ರಮ ಮುಖ್ಯವೋ, ಹಾಗೆಯೇ ಅದಕ್ಕೆ ಬೇಕಿರುವುದು ಹಲವು ಉಪಕರಣಗಳು. ಆದರೆ ಈ ಮಿನಿ ಟ್ರ್ಯಾಕ್ಟರ್ ಒಂದರಿಂದ ಎಲ್ಲಾ ರೀತಿಯ ಹೊಲದ ಕೆಲಸಗಳನ್ನು ಮಾಡಬಹುದು ಆ ರೀತಿ ಹೊಸ ವಿನ್ಯಾಸ ಮಾಡಲಾಗಿದೆ. ಸಣ್ಣ ಮತ್ತು ಮದ್ಯಮ ವರ್ಗದ ರೈತರಿಗೆ. ಈ ರೀತಿಯ, ಟ್ರ್ಯಾಕ್ಟರ್ ಒಂದು ಉತ್ತಮ ಆಯ್ಕೆ. ಏನಿದು ಮಿನಿ ಟ್ರ್ಯಾಕ್ಟರ್ ನೋಡೋಣ, ಇದರ ಬೆಲೆ, ಮಾಡುವ ಕೆಲಸಗಳು ಎಲ್ಲಾ ತಿಳಿಯೋಣ.
ಮಿನಿ ಟ್ರ್ಯಾಕ್ಟರ್’ಗೆ ಪೂರಕವಾದ ಇನ್ನೊಂದು ಹೆಸರು ಮಿನಿ ಟೂಲ್ ಬಾರ್ ಅದಕ್ಕೆ ಕಾರಣ ಇದು ಹತ್ತು ಎಚ್. ಬಿ. ಗ್ರೂಸ್ ಎಂಜಿನ್ ಹೊಂದಿದೆ. ಒಂದು ರೀತಿ ಬುಲ್ಲೆಟ್ ಓಡಿಸುವ ಫೀಲ್ ಕೊಡುತ್ತೆ ಹಾಗೆ ಅದರ ಬೆಲೆ ಕೂಡ ಒಂದು ಬುಲ್ಲೆಟ್ ಬೈಕ್’ನಷ್ಟೆ ಇರುತ್ತದೆ. ಹಂಡಲ್ ಜೊತೆಗೆ ಸ್ಟೇರಿಂಗ್ ಹಾಗೂ ಒಂದು ಟ್ರ್ಯಾಕ್ಟರ್’ಗೆ ಇರಬೇಕಾದ ಎಲ್ಲಾ ಸೌಲಭ್ಯಗಳು ಇರುತ್ತವೆ.
ಮಿನಿ ಟ್ರ್ಯಾಕ್ಟರ್ ವಿಶೇಷತೆ ಏನೆಂದರೆ :- ಟ್ರ್ಯಾಕ್ಟರ್ ಮುಂದೆ ಗ್ರೂಸ್ ಕಂಪನಿ ಇಂಜಿನ್, ಆನ್ ಆಫ್ ಸ್ವಿಚ್ ಇರುತ್ತದೆ, ಆರು ಗೇರ್ ಮುಂದೆ ಮತ್ತು ಎರಡು ರಿವರ್ಸ್ ಗೇರ್, ಸ್ಪೀಡ್ ಅಡ್ಜಸ್ಟ್ಮೆಂಟ್ 540 + 850 ಎರಡು ಸ್ಪೀಡ್ ಅಡ್ಜಸ್ಟ್ ಮಾಡುವ ಸೌಲಭ್ಯ ಇದೆ.
ರೋಟರಿ ಹೈ ಸ್ಪೀಡ್ ಮತ್ತು ಲೋ ಸ್ಪೀಡ್ ಎರಡು ಚೇಂಜ್ಸ್ ಮಾಡುವ ಅವಕಾಶ ಇದೆ. ಟ್ರಾಲಿ ಹಾಕಬಹುದು, ನೇಗಿಲು ಹಾಕಿ ಕೆಲಸ ಮಾಡಬಹುದು, ಸ್ಲಾಶರ್ ಹಾಕಬಹುದು, ಈ ಮಿನಿ ಟ್ರ್ಯಾಕ್ಟರ್ ಅನ್ನು ರಸ್ತೆ ಮೇಲೆ ಕೂಡ ಸಂಚಾರ ಮಾಡಬಹುದು. ಯಾವುದೇ ಗೊಬ್ಬರ ತರುವುದು, ಬೇರೆ ರೀತಿಯ ವಸ್ತುಗಳನ್ನು ತರುವುದಕ್ಕೂ ಸಹಾಯ ಆಗುತ್ತದೆ. 5ದು ಲೀಟರ್ ಕೆಪ್ಯಾಸಿಟಿ ಹೊಂದಿರುತ್ತದೆ ಮತ್ತು ಅದು ಕೂಡ ಡೀಸೆಲ್ ಎಂಜಿನ್. ಪೆಟ್ರೋಲ್ ಎಂಜಿನ್ ಬಳಕೆ ಮಾಡಿದರೆ ಮೈಲೇಜ್ ನೀಡುವುದಿಲ್ಲ.
ಒಂದು ಲೀಟರ್ ಡೀಸೆಲ್ ಬಳಕೆ ಮಾಡಿದರೆ ಅದನ್ನು ಒಂದು ಗಂಟೆ ಬಳಸಬಹುದು. ಡೀಸೆಲ್ ಎಂಜಿನ್ ಒಳ್ಳೆ ಮೈಲೇಜ್ ಕೂಡ ನೀಡುತ್ತದೆ. ಎಲ್ಲಾ ರೀತಿಯ ಸೌಕರ್ಯ ಇದೆ. ಎಡ ಮತ್ತು ಬಲ ಎರಡರಲ್ಲಿ ಕೂಡ ಬ್ರೇಕ್ ಸಿಸ್ಟಮ್ ಚೆನ್ನಾಗಿ ಇರುತ್ತದೆ. ಸಿಂಗಲ್ ಬ್ರೇಕ್ ಮತ್ತು ಡಬಲ್ ಬ್ರೇಕ್ ಎರಡು ಇರುತ್ತದೆ, ಜೊತೆಗೆ ಹ್ಯಾಂಡ್ ಬ್ರೇಕ್ ಸಿಸ್ಟಮ್ ಕೂಡ ಲಭ್ಯವಿದೆ. ಎಕ್ಸ್ಲೆಟರ್ ಕಾಲಿನಲ್ಲಿ ಮತ್ತು ಕೈಯಲ್ಲಿ ಎರಡು ಕಡೆ ಕಂಟ್ರೋಲ್ ಮಾಡಬಹುದು. ರಸ್ತೆ ಮೇಲೆ ಹೋಗುವಾಗ ಒಂದು ಎಕ್ಸ್ಲೆಟರ್, ಉಳುಮೆ ಮಾಡುವಾಗ ಮತ್ತೊಂದು ಎಕ್ಸ್ಲೆಟರ್.
ಟಿಪ್ಪಿಂಗ್ ಮಾಡೋಕೆ, ಹೈಟ್ ಮತ್ತು ಡೌನ್ ಮಾಡುವ ಸೌಕರ್ಯ, ಡಿ.ಸಿ. ಕನ್ವರ್ಷನ್ ಇರುತ್ತದೆ. ಟ್ರಾಲಿ ಜೋಡಣೆ ಮಾಡುವುದಕ್ಕೆ ಹುಕ್ ನೀಡಲಾಗಿದೆ. ಟ್ರಾಲಿ, ನೇಗಿಲು, ರೋಟರಿ, ಸ್ಲಶರ್ ಮತ್ತು ಕಲ್ಟಿವೇಟರ್ ಬೇಕಾದ ಎಲ್ಲ ಅಟ್ಯಾಚ್ಮೆಂಟ್ ಕೂಡ ಸಿಗುತ್ತದೆ.
ಇನ್ನು ಯಾವುದೇ ರೀತಿಯ ಔಷದಿ ಸಿಂಪಡಣೆ ಮಾಡಬೇಕು ಎಂದರೆ ಪುಲ್ಲಿ ನೀಡಲಾಗುವುದು ವೆಲ್ಡಿಂಗ್ ಮಾಡಿಸಿಕೊಂಡು ಒಂದು ರೋಡ್ ಫಿಕ್ಸ್ ಮಾಡಿಸಿ ಪಂಪ್ ಕೂಡ ಸೆಟ್ ಮಾಡಿಕೊಳ್ಳಬಹುದು. ನೀರು ಹಾಕಬಹುದು, ಹೊಂಡದಿಂದ ನೀರು ತೆಗೆಯಬಹುದು.ಅಪ್ಪೆ ಗಾಡಿ ಗ್ರೂಸ್ ಇಂಜಿನ್ ಟ್ರ್ಯಾಕ್ಟರ್ ಆಗಿರುವುದರಿಂದ ಗುಣ ಮಟ್ಟದಲ್ಲಿ ಯಾವುದೇ ಕಾರಣಕ್ಕೂ ಕಾಂಪ್ರಮೈಸ್ ಇರುವುದಿಲ್ಲ. 20 – 30 10,000 ದಲ್ಲಿ ಇಂಜಿನ್ ಸರ್ವೀಸ್ ಮುಗಿಯುತ್ತದೆ. ಸರ್ವೀಸ್ ಮತ್ತು ಮೆಂಟೇನೆನ್ಸ್ ಫ್ರೀ ಇರುತ್ತದೆ. ಮಿನಿ ಟ್ರ್ಯಾಕ್ಟರ್ ಸೌಲಭ್ಯ ಮತ್ತು ಸೌಕರ್ಯ ರೈತರಿಗೆ ಒಳ್ಳೆ ಅವಕಾಶ ಕಲ್ಪಿಸಿ ಕೊಡಲಾಗುತ್ತದೆ.