ಹನ್ನೆರಡು ರಾಶಿಚಕ್ರಗಳಲ್ಲಿ ಮೊದಲ ರಾಶಿಚಕ್ರವೇ ಮೇಷ ರಾಶಿ. ಮಂಗಳ ಗ್ರಹದ ಅಧಿಪತ್ಯವಿರುವ ಈ ರಾಶಿಯವರು ಕೋಪಿಷ್ಠರು ಹಾಗೂ ಮೊಂಡು ಸ್ವಭಾವದವರು. ತಾವು ಹೇಳಿದ್ದೇ ನಡೆಯಬೇಕು ಎನ್ನುವ ಹಠ ಇವರಲ್ಲಿರುತ್ತದೆ. ಇದನ್ನು ಹೊರತುಪಡಿಸಿ, ಇವರಲ್ಲಿರುವ ಕೆಲವೊಂದು ಗುಣಗಳು ಇತರರು ಇವರನ್ನು ಪ್ರೀತಿಸುವಂತೆ, ಇಷ್ಟಪಡುವಂತೆ ಮಾಡುತ್ತದೆ. ಆ ಗುಣಗಳು ಯಾವುವು? ಮೇಷ ರಾಶಿಯವರ ಸ್ವಭಾವ ಮತ್ತು ಗುಣಲಕ್ಷಣಗಳು ಹೇಗೆ ಇರುತ್ತವೆ? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ನಮ್ಮಲ್ಲಿ ಮೇಷ ರಾಶಿಯ ಅಡಿಯಲ್ಲಿ ಜನಿಸಿದವರು ಕೆಲವೊಮ್ಮೆ ಧೈರ್ಯಶಾಲಿ ಎಂದು ಕರೆಯಲ್ಪಡುತ್ತಾರೆ ಮತ್ತು ಕೆಲವೊಮ್ಮೆ ಅವರೇ ಜಗಳ ಆರಂಭಿಸುವವರು ಎಂಬ ಕೆಟ್ಟ ಹೆಸರು ಪಡೆದಿರುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ಸತ್ಯವೆಂದರೆ ಮೇಷ ರಾಶಿಯವರು ನೇರವಾಗಿ ಎದುರಿಗೆ ಮಾತನಾಡುವುದನ್ನ ಬಯಸುತ್ತಾರೆ ಹೊರತು ಜನರ ಹಿಂದಿನಿಂದ ಮಾತನಾಡುವುದಿಲ್ಲ. ಪ್ರತಿ ರಾಶಿಯವರಿಗೂ ಒಂದೊಂದು ವಿಶೇಷ ಗುಣ ಇದ್ದೇ ಇರುತ್ತದೆ.

ಒಂದು ರಾಶಿಯಲ್ಲಿ ಜನಿಸಿದ ಜನರಿಗೆ ಕೋಪ ಸ್ವಲ್ಪ ಹೆಚ್ಚಿದ್ದರೆ, ಇನ್ನೊಂದು ರಾಶಿಯಲ್ಲಿ ಜನಿಸಿದ ಜನರ ಸ್ವಭಾವ ಬಹಳ ಶಾಂತವಾಗಿರುತ್ತಾರೆ. ಒಬ್ಬರಿಂದ ಇನ್ನೊಬ್ಬರಿಗೆ ಪ್ರತಿಯೊಬ್ಬರು ಬಹಳ ವಿಭಿನ್ನರಾಗಿರುತ್ತಾರೆ. ನಾವು ಮೊದಲ ರಾಶಿಯ ವಿಚಾರಕ್ಕೆ ಬಂದರೆ ಮೇಷರಾಶಿ. ಈ ರಾಶಿಯವರ ಗುಣ ಸ್ವಭಾವ ಹೇಗಿದೆ ಎಂಬುದು ಇಲ್ಲಿದೆ.  

ಮೇಷ ರಾಶಿಯಲ್ಲಿ ಜನಿಸಿದಂತಹವರನ್ನು ಗಮನಿಸಿ ನೋಡಿ ಅವರಿಗೆ ನಾಯಕತ್ವ ಮಾಡುವುದು ಬಹಳ ಇಷ್ಟ. ಹೆಚ್ಚು ಪ್ರಭಾವಶಾಲಿಗಳಾಗಿರಲು ಬಯಸುತ್ತಾರೆ. ಇವರಲ್ಲಿ ಬಲವಾದ ನಾಯಕತ್ವ ಗುಣಲಕ್ಷಣಗಳಿರುತ್ತದೆ ಮತ್ತು ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದು ಮತ್ತು ತಂಡದ ಉಸ್ತುವಾರಿ ವಹಿಸಿಕೊಂಡು  ಗೆಲುವು ಸಾಧಿಸುವುದು ಹೇಗೆ? ಎಂಬುದರ ಅರಿವು ಅವರಿಗೆ ಚನ್ನಾಗಿ ತಿಳಿದಿರುತ್ತದೆ. ಇವರು ಹೆಚ್ಚು ಅಧಿಕಾರಯುತ ಸ್ಥಾನದಲ್ಲಿ ಇರಲು ಬಯಸುತ್ತಾರೆ.

ಹೆಚ್ಚಿನ ಜನರ ಮನ್ನಣೆ ಸಿಗಬೇಕು ಎಂದು ಬಯಸುವುದಲ್ಲದೇ, ಜನರೂ ಕೂಡ ಇವರನ್ನು ತಮ್ಮ ನಾಯಕ ಎಂದೇ ಗೌರವ ನೀಡುತ್ತಾರೆ. ಕೋಪದ ಸ್ವಭಾವವನ್ನು ಹೊಂದಿದ್ದರೂ ಸಹ ಅವರಿಗೆ ಬೇರೆಯವರೂ ಕಷ್ಟ ಎಂದಾಗ ಸಹಾಯ ಮಾಡುವ ಮನಸ್ಸಿರುತ್ತದೆ.  ಇವರು ಕೆಟ್ಟವರಿಗೆ ಕೆಟ್ಟವರು, ಒಳ್ಳೆಯವರಿಗೆ ಒಳ್ಳೆಯವರು ಎನ್ನುವ ಗುಣವನ್ನು  ಹೊಂದಿರುತ್ತಾರೆ. ಇವರು ಸ್ವಭಾವದಲ್ಲಿ ಮಗುವಿನಂತವರು. ಯಾವ ವಿಷಯದಲ್ಲೂ ಸ್ವಾರ್ಥವನ್ನು ಇಟ್ಟುಕೊಳ್ಳುವುದಿಲ್ಲ.

ಇನ್ನೊಬ್ಬರಿಗೆ ಸಹಾಯ ಮಾಡುವಾಗ ಯಾವುದೇ ರೀತಿಯ ಪ್ರತಿಫಲವನ್ನು ಅಪೇಕ್ಷಿಸಿದೆ ಸಾಹಾಯ ಮಾಡುತ್ತಾರೆ. ಮೇಷ ರಾಶಿಯವರು ಹೆಚ್ಚು ಮಕ್ಕಳಂತೆ ಸ್ವಭಾವವನ್ನು ಹೊಂದಿರುತ್ತಾರೆ. ತುಂಬಾ ಮುಗ್ಧರಾಗಿರುತ್ಥಾರೆ. ಕೆಲವೊಮ್ಮೆ ಅವರಿಗೆ ಯಾವುದು ತಪ್ಪು, ಯಾವುದು ಸರಿ ಎಂಬುದು ಅರ್ಥವಾಗವುದಿಲ್ಲ. ಎಲ್ಲರನ್ನು ಒಳ್ಳೆಯವರು ಎಂದು ಭಾವಿಸುತ್ತಾರೆ. ಬಹು ಬೇಗ ಜನರನ್ನು ನಂಬುವ ಗುಣ ಅವರದ್ದು. ಕೆಲವೊಮ್ಮೆ ನಂಬಿ ಮೋಸ ಹೋಗಿದ್ದರೂ ಸಹ ಮತ್ತೆ ,ಮತ್ತೆ ನಂಬುವ ಗುಣ ಇವರದ್ದು.

ಮೇಷ ರಾಶಿಯಲ್ಲಿ ಜನಿಸಿದ ಜನರು ಹೆಚ್ಚು ಧೈರ್ಯಶಾಲಿಗಳು ಆಗಿರುತ್ತಾರೆ. ಅವರು ನಂಬಲಾಗದಷ್ಟು ಬಲಶಾಲಿಗಳು ಗಿರುತ್ತಾರೆ ಯಾವುದಕ್ಕೂ ಹೆದರುವುದಿಲ್ಲ. ಯಾವುದೇ ಕಷ್ಟದ ಸಮಯದಲ್ಲೂ ಕೆಲಸ ಮಾಡಲು ಸಿದ್ಧರಿರುತ್ತಾರೆ. ಸವಾಲನ್ನು ಎದುರಿಸುವ ಗುಣ ಇವರಲ್ಲಿ ಇರುತ್ತದೆ. ಅಲ್ಲದೇ ಪರಿಸ್ಥಿತಿ ಎಷ್ಟೇ ಬಿಗಡಾಯಿಸಿರಲಿ ಓಡಿ ಹೋಗುವ ಪ್ರಯತ್ನ ಮಾಡುವುದಿಲ್ಲ. ಅದನ್ನು ಎದುರಿಸಿ ಗೆಲುವು ಸಾಧಿಸುತ್ತಾರೆ.  ಮೇಷ ರಾಶಿಯ ಜನರು ಕೆಲಸ ಮಾಡಲು  ಬಹಳ ಇಷ್ಟಪಡುತ್ತಾರೆ ಹಾಗೂ ತಮ್ಮ ಗುರಿ ಸಾಧಿಸಲು ಏನು ಬೇಕಾದರೂ ಮಾಡುತ್ತಾರೆ. ಈ ರಾಶಿಯವರು ತಮ್ಮ ಸ್ನೇಹಿತರನ್ನು ಮತ್ತು ಸಂಗಾತಿಯನ್ನು ಬಹಳ ಇಷ್ಟಪಡುತ್ತಾರೆ.  ಅವರಿಗಾಗಿ ಏನು ಮಾಡಲು ಸಿದ್ದರಿರುತ್ತಾರೆ. 

ಇವರಿಗೆ ಕೆಲಸ ಮಾಡುವುದು ಇಷ್ಟವಾದರೂ ಒಮ್ಮೊಮ್ಮೆ ಸೋಮಾರಿಗಳಾಗುತ್ತಾರೆ.  ಅವರ ಸೋಮಾರಿತ ಬಹಳ ಕಟ್ಟದ್ದು. ಅದರಲ್ಲಿ ಹೊರ ಬರಲು ಬಹಳಷ್ಟು ಸಮಯ ಬೇಕಾಗುತ್ತದೆ. ಮೊದಲೇ ಹೇಳಿದಂತೆ ಈ ರಾಶಿಯವರು ಸಹಾಯ ಮಾಡಲು ಹಿಂದೂ ಮುಂದೂ ನೋಡುವುದಿಲ್ಲ. ಅವರು ಯಾವಾಗಲೂ ಸಹಾಯಕ್ಕಾಗಿ ಮುಂದಾಗುತ್ತಾರೆ, ಎಷ್ಟೋ ಬಾರಿ ಅವರು ತಮ್ಮದೇ ಆದ ತೊಂದರೆಗಳಲ್ಲಿ ಮುಳುಗಿದ್ದರೂ ಕೂಡ  ಸಹಾಯಕ್ಕೆ ಸದಾ ಸಿದ್ಧರಿರುತ್ತಾರೆ.

ಇವರ ಕೆಟ್ಟ ಗುಣ ಎಂದರೆ ಕೆಲಸ ಮಾಡಲು ಇಷ್ಟ, ಅದಕ್ಕೆ ಬೇಕಾದ ಸಿದ್ಧತೆಯನ್ನು ಸಹ ಮಾಡಿಕೊಳ್ಳುತ್ತಾರೆ, ಆದರೆ ಸ್ವಲ್ಪ ಸಮಯದ ನಂತರ ಅದರ ಮೇಲಿನ ಆಸಕ್ತಿ ಕಳೆದುಕೊಳ್ಳುತ್ತಾರೆ.  ಆ ಕೆಲಸವನ್ನು ಪೂರ್ಣ ಮಾಡಲು ಬಹಳ ಕಷ್ಟಪಡುತ್ತಾರೆ.  ಈ ವ್ಯಕ್ತಿಗಳು ಅವರ ಗುಣಕ್ಕೆ ತದ್ವಿರುದ್ಧವಾಗಿ ಒಮ್ಮೊಮ್ಮೆ  ವರ್ತಿಸುತ್ತಾರೆ. ತಮ್ಮದೇ ಲೋಕದಲ್ಲಿ  ಬದುಕಲು ಇಷ್ಟಪಡುತ್ತಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!