2024 ಆಗಸ್ಟ್ ತಿಂಗಳಿನಲ್ಲಿ ಮಾಸ ಭವಿಷ್ಯ ನೋಡುವುದಾದರೆ ಆಯಾ ರಾಶಿಗೆ ಅನುಗುಣವಾಗಿ ಆಗಸ್ಟ್ ತಿಂಗಳಿನಲ್ಲಿ ಉದ್ಯೋಗ, ವ್ಯವಹಾರ, ಅನುಕೂಲ ಅನಾನುಕೂಲಗಳಿರುತ್ತದೆ. ದ್ವಾದಶ ರಾಶಿಗಳಲ್ಲಿ ಮೀನ ರಾಶಿಯ ಆಗಸ್ಟ್ ತಿಂಗಳ ರಾಶಿ ಭವಿಷ್ಯ ಹಾಗೂ ಮುಂಬರುವ ಶ್ರಾವಣ ಮಾಸದ ಮಹತ್ವದ ಬಗ್ಗೆ ಈ ಲೇಖನದಲ್ಲಿ ನೋಡೋಣ

ಮುಂಬರುವ ಆಗಸ್ಟ್ 5ನೆ ತಾರೀಖಿನಿಂದ ಶುಭ ಶ್ರಾವಣ ಮಾಸ ಪ್ರಾರಂಭವಾಗುತ್ತದೆ. ಶ್ರಾವಣ ಮಾಸ ಪರಮೇಶ್ವರನ ಪ್ರಿಯವಾದ ಮಾಸವಾಗಿದೆ ಗೌರಿ ಸಮೇತ ಈಶ್ವರನು ಭೂಮಿಗೆ ಬಂದು ಈ ಸಮಯದಲ್ಲಿ ನೆಲೆಸುತ್ತಾನೆ. ಈ ಮಾಸದಲ್ಲಿ ವಿವಾಹಿತ ಸ್ತ್ರೀಯರು ತಮ್ಮ ತಾಳಿ ವೃದ್ಧಿಗಾಗಿ ಹಾಗೂ ಮನೆಯ ಅಭಿವೃದ್ಧಿಗಾಗಿ ಮಂಗಳಗೌರಿ ವ್ರತವನ್ನು ಮಾಡುತ್ತಾರೆ. ಈ ತಿಂಗಳಿನ ಆರನೆ ತಾರೀಖಿನ ಮಂಗಳವಾರದಂದು ಮಂಗಳ ಗೌರಿ ವ್ರತ ಮಾಡಬಹುದಾಗಿದೆ ಹಾಗೂ ಅದೆ ತಿಂಗಳಿನ 13 ನೇ ತಾರೀಖು 20ನೆ ತಾರೀಖು 27ನೆ ತಾರೀಖಿನಂದು ಮಂಗಳಗೌರಿ ವ್ರತವನ್ನು ಮಾಡಬಹುದಾಗಿದೆ. ಶ್ರಾವಣ ಮಾಸದ ಪ್ರತಿ ಶುಕ್ರವಾರದಂದು ಮಹಾಲಕ್ಷ್ಮೀ ಮನೆಯನ್ನು ಅಭಿವೃದ್ಧಿ ಮಾಡಲೆಂದು ಲಕ್ಷ್ಮೀ ಪೂಜೆಯನ್ನು ಮಾಡಲಾಗುತ್ತದೆ.

ಆಗಸ್ಟ್ 16ನೆ ತಾರೀಖಿನಂದು ವರಮಹಾಲಕ್ಷ್ಮೀ ವ್ರತ ಮಾಡಬಹುದಾಗಿದೆ ವರಮಹಾಲಕ್ಷ್ಮೀ ವ್ರತ ಮಾಡುವಾಗ ಲಕ್ಷ್ಮೀ ಪೂಜೆಯನ್ನು ಇಷ್ಟ ಬಂದ ಸಮಯದಲ್ಲಿ ಮಾಡಬಾರದು ಸಂಧ್ಯಾ ಕಾಲದಲ್ಲಿ ಮಾಡಬೇಕು. ಹುಣ್ಣಿಮೆಗಿಂತ ಮೊದಲು ಬರುವ ಶುಕ್ರವಾರದ ದಿನದಂದು ಮಹಾಲಕ್ಷ್ಮೀ ವ್ರತ ಮಾಡಬೇಕು, ಶುಕ್ರ ಗ್ರಹದ ಕಿರಣಗಳು ನೇರವಾಗಿ ಭೂಮಿಗೆ ತಲುಪುತ್ತದೆ ಹೀಗಾಗಿ ಈ ದಿನ ಪೂಜೆ ಮಾಡುವುದರಿಂದ ಒಳ್ಳೆಯ ಫಲ ದೊರೆಯುತ್ತದೆ. ಶ್ರಾವಣ ಮಾಸದ ಶನಿವಾರದಂದು ವಿಷ್ಣು ದೇವರ ಆರಾಧನೆ ಮಾಡುವ ಜೊತೆಗೆ ಈಶ್ವರನ ದೇವಾಲಯಕ್ಕೆ ಹೋಗಿ ದರ್ಶನ ಮಾಡಬೇಕು. ಗಂಡ ಹೆಂಡತಿಯ ನಡುವೆ ಸಮಸ್ಯೆ ಇದ್ದರೆ ಮಂಗಳಗೌರಿ ವ್ರತವನ್ನು ಹಣಕಾಸಿನ ಸಮಸ್ಯೆಯಿದ್ದರೆ ವರಮಹಾಲಕ್ಷ್ಮೀ ವ್ರತ ಮಾಡುವುದರಿಂದ ಒಳ್ಳೆಯದಾಗುತ್ತದೆ. ನಾಗದೋಷವಿದ್ದರೆ ಶ್ರಾವಣ ಮಾಸದಲ್ಲಿ ನಾಗರ ಪಂಚಮಿ ಹಬ್ಬವಿದೆ ನಾಗರ ಆರಾಧನೆ ಮಾಡಬೇಕು.

ಆಗಸ್ಟ್ 17 ರಂದು ಸಿಂಹ ರಾಶಿಗೆ ರವಿ ಪ್ರವೇಶ ಮಾಡುತ್ತಾನೆ, 22 ನೆ ತಾರೀಖು ಬುಧನು ಕರ್ಕಾಟಕ ರಾಶಿಗೆ, 24 ನೆ ತಾರೀಖು ಶುಕ್ರನು ಕನ್ಯಾ ರಾಶಿಗೆ ಪ್ರವೇಶ ಮಾಡುತ್ತಾನೆ 26ನೆ ತಾರೀಖು ಮಿಥುನ ರಾಶಿಗೆ ಕುಜ ಪ್ರವೇಶ ಮಾಡುತ್ತಾನೆ. ಮೀನ ರಾಶಿಯವರಿಗೆ ಆಗಸ್ಟ್ ತಿಂಗಳಿನಲ್ಲಿ ಅಷ್ಟೇನೂ ಒಳ್ಳೆಯ ಫಲವಿಲ್ಲ, ಮೀನ ರಾಶಿಯವರು ವಜ್ರಾಯುಧವಿದ್ದಂತೆ ಇಂದ್ರನ ಕೈಯಲ್ಲಿರುವ ವಜ್ರಾಯುಧ ಎಲ್ಲಾ ಸಂಕಷ್ಟಗಳಿಗೆ ಎದೆಯೊಡ್ಡಿ ನಿಲ್ಲುತ್ತದೆ ರಕ್ಷಣೆ ಮಾಡುತ್ತದೆ ಅದರಂತೆ ಮೀನ ರಾಶಿಯವರು ಬೇರೆಯವರಿಗೆ ಒಳ್ಳೆಯದಾಗಬೇಕು ಎಂದು ಯೋಚಿಸುತ್ತಾರೆ ತಮ್ಮ ಬಗ್ಗೆ ಯೋಚಿಸುವುದಿಲ್ಲ. ಆಗಸ್ಟ್ ತಿಂಗಳಿನಲ್ಲಿ ಮೀನ ರಾಶಿಯವರು ಬೇರೆಯವರ ಬಗ್ಗೆ ಸದಾ ಯೋಚನೆ ಮಾಡಬಾರದು. ಬೇರೆಯವರಿಗೆ ಒಳ್ಳೆಯದನ್ನು ಮಾಡಿದರೆ ಮೀನ ರಾಶಿಯವರ ಬಗ್ಗೆ ಯೋಚನೆ ಮಾಡುವವರು ಯಾರು ಇರುವುದಿಲ್ಲ. ಮೀನ ರಾಶಿಯವರ ಮನಸ್ಸು ಮೃದು ಮಾತು ಜೋರಾಗಿರುತ್ತದೆ, ಯಾರಾದರೂ ಒಂದು ಮಾತು ಹೇಳಿದರೆ ತಡೆದುಕೊಳ್ಳಲು ಆಗುವುದಿಲ್ಲ ಕಣ್ಣೀರು ಹಾಕುತ್ತಾರೆ ಯಾರ ಮುಂದೆಯೂ ತೋರಿಸಿ ಕೊಳ್ಳುವುದಿಲ್ಲ, ಅವರಿಗಾದ ಅನ್ಯಾಯ, ಅವಮಾನವನ್ನು ಯಾರ ಬಳಿಯೂ ಹೇಳುವುದಿಲ್ಲ. ಇನ್ನಾದರೂ ಮೀನ ರಾಶಿಯವರು ತಮ್ಮ ಬಗ್ಗೆ ಯೋಚನೆ ಮಾಡಬೇಕು.

ಮೀನ ರಾಶಿಯವರಿಗೆ ಈ ತಿಂಗಳಿನಲ್ಲಿ ಆಸ್ಪತ್ರೆಗೆ ಹಣ ಖರ್ಚು ಮಾಡುವ ಸಾಧ್ಯತೆ ಇದೆ. ದಾಂಪತ್ಯದಲ್ಲಿ ಬಿರುಕು ಕಂಡುಬರುತ್ತದೆ ಎಚ್ಚರವಹಿಸಬೇಕು. ಮೀನ ರಾಶಿಯವರು ಈ ತಿಂಗಳಿನಲ್ಲಿ ಸಾಲ ಕೊಡಲು ಹೋಗಬಾರದು ತೆಗೆದುಕೊಳ್ಳಲು ಬಾರದು. ಈ ರಾಶಿಯ ವಿದ್ಯಾರ್ಥಿಗಳಿಗೆ ಅಷ್ಟೇನೂ ಒಳ್ಳೆಯ ಫಲವಿಲ್ಲ ಶ್ರಮಪಟ್ಟರೆ ಒಂದಿಷ್ಟು ಒಳ್ಳೆಯದಾಗುತ್ತದೆ. ಮೀನ ರಾಶಿಯವರ ಸುತ್ತ ಹಿತಶತ್ರುಗಳು ಇದ್ದಾರೆ. ಮೀನ ರಾಶಿಯವರು ಯಾರನ್ನು ಅತಿಯಾಗಿ ನಂಬಬಾರದು. ಮೀನ ರಾಶಿಯ ಹೆಣ್ಣುಮಕ್ಕಳು ಬಹಳ ಪರೋಪಕಾರಿಗಳು, ತ್ಯಾಗಮಯಿಗಳು ಆಗಿರುತ್ತಾರೆ. ಮೀನ ರಾಶಿಯವರಿಗೆ ಈ ತಿಂಗಳಿನ ಶುಭ ದಿನಾಂಕಗಳು 1,9,10,23,31 ಆಗಿದೆ. ಮೀನ ರಾಶಿಯವರು ಪ್ರಯಾಣದಲ್ಲಿ ಜಾಗೃತರಾಗಿರಿ.

ಮೀನ ರಾಶಿಯವರು ಎಲ್ಲೆಂದರಲ್ಲಿ ಹೆಚ್ಚು ಮಾತನಾಡಬಾರದು ಈ ತಿಂಗಳಿನಲ್ಲಿ ಅಪವಾದ, ಅಪನಿಂದನೆ ಆಗುವ ಸಾಧ್ಯತೆ ಇದೆ. ಸರ್ಕಾರಿ ಕೆಲಸದಲ್ಲಿ ಒತ್ತಡಗಳು ಪ್ರಾರಂಭವಾಗುತ್ತದೆ ನಿಧಾನವಾಗಿ ನಿಭಾಯಿಸಬೇಕು. ಮೀನ ರಾಶಿಯವರು ಮಾಡಬೇಕಾದ ಸಾಮಾಜಿಕ ಪರಿಹಾರವೆಂದರೆ ಗಿಡಗಳನ್ನು ನೆಟ್ಟು ಬೆಳೆಸಬೇಕು, ಮನೆಯ ಅಂಗಳದಲ್ಲಿ ಅಥವಾ ಟೆರೇಸ್ ನಲ್ಲಿ ಪಕ್ಷಿಗಳಿಗೆ ನೀರನ್ನು ಇಡಬೇಕು. ತ್ರಿಪುರ ಸುಂದರಿ ಅಷ್ಟಕವನ್ನು ಪಠಿಸಬೇಕು ಒಂದು ವೇಳೆ ಹೇಳಲು ಆಗದಿದ್ದರೆ ಕೇಳಬೇಕು. ಈ ಮಾಹಿತಿಯನ್ನು ತಪ್ಪದೆ ಮೀನ ರಾಶಿಯವರಿಗೆ ತಿಳಿಸಿ.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಾಹು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ. ಈ ಕೂಡಲೇ ನಮ್ಮ ನಂಬರಿಗೆ ಕರೆಮಾಡಿ 9606655513

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!