ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅವುಗಳ ಪೈಕಿ ಮುಖ್ಯವಾದ ಯೋಜನೆ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಆಗಿದೆ. ಈ ಯೋಜನೆ ಅಡಿಯಲ್ಲಿ ಗರ್ಭಿಣಿ ಮಹಿಳೆಯರಿಗೆ ಮತ್ತು ಬಾಣಂತಿಯರಿಗೆ 6000 ರೂಪಾಯಿ ಸಹಾಯಧನ ಸಿಗಲಿದೆ. ಈ ಯೋಜನೆಯ ಬಗ್ಗೆ ಪೂರ್ತಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ..
ದೇಶದ 19 ವರ್ಷ ಮೇಲ್ಪಟ್ಟ ಗರ್ಭಿಣಿ ಅಥವಾ ಬಾಣಂತಿ ಮಹಿಳೆಯರು ಮೊದಲ ಮಗುವಿನ ತಾಯ್ತನಕ್ಕೆ ಈ ಯೋಜನೆಯ ಸೌಲಭ್ಯ ಪಡೆಯಬಹುದು. ಈ ಯೋಜನೆಗೆ ರಿಜಿಸ್ಟರ್ ಮಾಡಿಸಿಕೊಂಡ ಮಹಿಳೆಯರ ಬ್ಯಾಂಕ್ ಅಕೌಂಟ್ ಗೆ ನೇರವಾಗಿ ಡೆಪಾಸಿಟ್ ಆಗುತ್ತದೆ. ಈ ಯೋಜನೆಯಲ್ಲಿ ಮೊದಲ ಸಲ ಗರ್ಭಿಣಿ ಆಗಿರುವವರಿಗೆ 5000 ಸಹಾಯಧನ ಸಿಗಲಿದ್ದು, 2ನೇ ಸಲ ಗರ್ಭಿಣಿ ಆಗಿರುವವರಿಗೆ 6000 ಸಹಾಯಧನ ಸಿಗುತ್ತದೆ. ಇವರ ಮಗು ಆರೋಗ್ಯಕರವಾಗಿ ಜನಿಸಲಿ ಎಂದು ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ.
ಹಣವನ್ನು ಹೇಗೆ ನೀಡಲಾಗುತ್ತದೆ ಎಂದರೆ.. ಮೊದಲ ಸಾರಿ ಗರ್ಭಿಣಿ ಆಗಿರುವವರಿಗೆ ಗರ್ಭಿಣಿ ಹಂತದಲ್ಲಿ 3000 ರೂಪಾಯಿ ನೀಡಲಾಗುತ್ತದೆ, ಮಗು ಹುಟ್ಟಿದ ನಂತರ 2000 ರೂಪಾಯಿ ನೀಡಲಾಗುತ್ತದೆ. ಎರಡನೇ ಮಗುವಿಗೆ ಗರ್ಭಿಣಿ ಆಗಿದ್ದರೆ ಮಗು ಹುಟ್ಟಿದ 3 ತಿಂಗಳ ನಂತರ 6000 ರೂಪಾಯಿ ಹಣವನ್ನು ಡಿಬಿಟಿ ಮೂಲಕ ತಾಯಿಯ ಬ್ಯಾಂಕ್ ಅಕೌಂಟ್ ಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ಅರ್ಹತೆಗಳಿದ್ದು, ಜೊತೆಗೆ ಕೆಲವು ದಾಖಲೆಗಳು ಬೇಕಿದ್ದು, ಅವುಗಳು ಏನೇನು ಎಂದು ನೋಡೋಣ.. 19 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗರ್ಭಿಣಿ ಮಹಿಳೆಯರು ಅರ್ಹತೆ ಪಡೆಯುವುದಿಲ್ಲ. 2017ರ ಜನವರಿ 1ರ ನಂತರ ಗರ್ಭಿಣಿ ಆಗಿರುವ ಮಹಿಳೆಯರು ಈ ಯೋಜನೆಗೆ ಅರ್ಹತೆ ಪಡೆಯುತ್ತಾರೆ. ರೇಷನ್ ಕಾರ್ಡ್ ಮಗುವಿನ ಬರ್ತ್ ಸರ್ಟಿಫಿಕೇಟ್, ತಂದೆ ತಾಯಿಯ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಡೀಟೇಲ್ಸ್ ತಂದೆ ತಾಯಿಯ ಐಡಿ
ಈ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ಎಂದು ನೋಡುವುದಾದರೆ..
ಮೊದಲಿಗೆ https://wcd.nic.in/ ಈ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
ಇಮೇಲ್ ಐಡಿ, ಪಾಸ್ ವರ್ಡ್, ಕ್ಯಾಪ್ಚ ಕೋಡ್ ಇದೆಲ್ಲವನ್ನು ಹಾಕಿ ಲಾಗಿನ್ ಮಾಡಿ
ಈಗ ಆನ್ಲೈನ್ ಅಪ್ಲಿಕೇಶನ್ ನಲ್ಲಿ ಕೇಳಿರುವ ಎಲ್ಲಾ ಮಾಹಿತಿಗಳನ್ನು ತಪ್ಪಿಲ್ಲದೆ ಭರ್ತಿ ಮಾಡಿ. ನಂತರ ಅರ್ಜಿ ಸಲ್ಲಿಸುವ ಆಪ್ಶನ್ ಸೆಲೆಕ್ಟ್ ಮಾಡಿ.
ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು, ಮೊದಲ ನಮೂನೆ, ಎರಡನೇ ನಮೂನೆ, ಮೂರನೇ ನಮೂನೆ ಈ ಮೂರು ನಮೂನೆಗಳನ್ನು ಭರ್ತಿ ಮಾಡಬೇಕು. ಗರ್ಭಿಣಿ ಮಹಿಳೆಯರು ನಿಮ್ಮ ಹತ್ತಿರದ ಅಂಗನವಾಡಿ ಅಥವಾ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮೊದಲ ನಮೂನೆ ಪಡೆದು, ಅಲ್ಲಿರುವ ಎಲ್ಲಾ ಮಾಹಿತಿಗೆ ಸರಿಯಾಗಿ ಉತ್ತರಿಸಬೇಕು. ನಂತರ ಸಮಯಕ್ಕೆ ಸರಿಯಾಗಿ ಎರಡನೇ ಮತ್ತು ಮೂರನೇ ನಮೂನೆಯನ್ನು ಪಡೆದು ಅರ್ಜಿ ಸಲ್ಲಿಸಬೇಕು. ಮೂರು ಫಾರ್ಮ್ ಭರ್ತಿ ಮಾಡಿದ ಮೇಲೆ ಅಂಗನವಾಡಿ ಅಥವಾ ಆರೋಗ್ಯ ಕೇಂದ್ರದವರು ನಿಮಗೆ ಒಂದು ಸ್ಲಿಪ್ ನೀಡುತ್ತಾರೆ. ಬಳಿಕ ವೆಬ್ಸೈಟ್ ಮೂಲಕ ಅಪ್ಲಿಕೇಶನ್ ಪ್ರಕ್ರಿಯೆ ಮುಗಿಯುತ್ತದೆ. ಈ ರೀತಿಯಾಗಿ ನೀವು ಮಾತೃ ವಂದನಾ ಯೋಜನೆಗೆ ಅರ್ಜಿ ಸಲ್ಲಿಸಿ, ಅದರ ಫಲವನ್ನು ಪಡೆಯಬಹುದು.