ಮನುಷ್ಯನ ಹುಟ್ಟು ಎಂಬುದು ಅತ್ಯಂತ ರೋಚಕವಾಗಿದ್ದು ಹುಟ್ಟಿನೊಂದಿಗೆ ನಕ್ಷತ್ರ, ಗ್ರಹ ಮತ್ತು ಹುಟ್ಟಿದ ದಿನ, ದಿನಾಂಕ ಹೆಚ್ಚು ಮಹತ್ವಪೂರ್ಣವಾಗಿರುತ್ತದೆ. ನಿಮ್ಮ ಜೀವನದಲ್ಲಿ ಗ್ರಹ ಗತಿಗಳು ಮತ್ತು ನಕ್ಷತ್ರದ ಸ್ಥಾನಗಳು ಹೆಚ್ಚು ಮಹತ್ವದ್ದಾಗಿದ್ದು ನಿಮ್ಮ ಹುಟ್ಟಿದ ದಿನ ಕೂಡ ನಿಮ್ಮ ಸ್ವಭಾವ, ವ್ಯಕ್ತಿತ್ವ ಮತ್ತು ಗುಣಗಳ ಬಗ್ಗೆ ತಿಳಿಸುತ್ತದೆ.

ಒಂದೊಂದು ದಿನದಲ್ಲಿ ಹುಟ್ಟಿದವರೂ ಕೂಡ ಒಂದೊಂದು ಗುಣಗಳನ್ನು ಪಡೆದುಕೊಂಡಿದ್ದು ಅವರ ಸ್ವಭಾವ ಈ ದಿನದಲ್ಲಿ ಹುಟ್ಟಿದ ಪ್ರಮುಖ ವಿಶೇಷತೆಗಳನ್ನು ಒಳಗೊಂಡಿರುತ್ತದೆ. ಅವರ ಕೋಪ, ದುಡುಕು ಸ್ವಭಾವ, ಸ್ನೇಹಪರತೆ, ಪ್ರೀತಿ, ಸ್ನೇಹ ಮೊದಲಾದ ಗುಣಗಳನ್ನು ನಾವು ಈ ದಿನದಲ್ಲಿ ಹುಟ್ಟಿದ ಅವರ ವಿಶೇಷತೆಗಳನ್ನು ಅರಿತುಕೊಂಡು ತಿಳಿದುಕೊಳ್ಳಬಹುದಾಗಿದೆ.

ಮಂಗಳ ಈ ದಿನದ ಅಧಿಪತಿ. ಇದು ಹೋರಾಡುವ ಗುಣವನ್ನು ತಿಳಿಸುತ್ತದೆ. ಎಲ್ಲಾ ಕಷ್ಟಗಳನ್ನು ಸಂಕಷ್ಟಗಳನ್ನು ಹೋರಾಡಿ ಜಯಿಸುವ ಗುಣ ಈ ದಿನ ಹುಟ್ಟಿದವರದ್ದಾಗಿರುತ್ತದೆ. ಮಂಗಳವಾರ ವಾರದ ಮೂರನೇ ದಿನ. ಮಂಗಳ ಕೂಡ ಭೂಮಿಗೆ ಸಾಕಷ್ಟು ಸಮೀಪದಲ್ಲಿರುವ ಗ್ರಹ, ಆದ್ದರಿಂದ ಇದು ಜನರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ ಎಂದು ಹೇಳಬಹುದು.

ವೇದ ಹಾಗೂ ಜ್ಯೋತಿಷ್ಯವು ಜಾತಕದಲ್ಲಿ ಈ ಮಂಗಳನ ಸ್ಥಾನ ಮತ್ತು ಚಲನೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಮಂಗಳವು ಆಕ್ರಮಣಕಾರಿ ಗ್ರಹ ಎಂದು ಹೇಳಲಾಗುತ್ತದೆ. ಆದ್ದರಿಂದ ಮಂಗಳವಾರ ಜನಿಸಿದವರನ್ನು ಹೋರಾಟಗಾರರು ಎನ್ನಲಾಗುತ್ತದೆ. ಅವರು ದೃಢ ನಿರ್ಧಾರ ಮಾಡುವುದರಲ್ಲಿ ಹಾಗೂ ಯೋಜನೆಗಳನ್ನು ಮುನ್ನಡೆಸುವುದರ ಜೊತೆ ಯಶಸ್ವಿಯಾಗುವ ಬಯಕೆಯನ್ನು ಹೊಂದಿರುತ್ತಾರೆ.ಈ ದಿನ ಜನಿಸಿದವರು ಧೈರ್ಯಶಾಲಿ, ಉತ್ಸಾಹಿಗಳು.ಆದರೂ ಕೂಡ ಕೆಲವೊಮ್ಮೆ ನಕಾರಾತ್ಮಕ ಅಂಶಗಳನ್ನು ಸಹ ಹೊಂದಿರುತ್ತಾರೆ.

ಮಂಗಳವಾರ ಜನಿಸಿದ ಜನರು ಹೆಚ್ಚಿನ ಶಕ್ತಿಯ ವ್ಯಕ್ತಿಗಳು ಎನ್ನಲಾಗುತ್ತದೆ. ಸಾಹಸಮಯ ಮನೋಭಾವವನ್ನು ಹೊಂದಿರುತ್ತಾರೆ, ಅವರು ಹೊಸ ಮಾರ್ಗಗಳನ್ನು ಅನ್ವೇಷಿಸಲು ಮತ್ತು ಸವಾಲುಗಳನ್ನು ಎದುರಿಸಲು ಯಾವಾಗಲೂ ಸಿದ್ಧರಿರುತ್ತಾರೆ. ಸಾಧನೆ ಮಾಡುವುದು ಇವರ ಗುರಿಯಾಗಿರುತ್ತದೆ. ಆದರೂ, ಅವರ ಅತಿಯಾದ ಉತ್ಸಾಹದಲ್ಲಿ, ಅವರು ಏಕಕಾಲದಲ್ಲಿ ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವುದು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಒಂದು ಸಮಯದಲ್ಲಿ ಒಂದು ಅಥವಾ ಎರಡು ಉದ್ಯೋಗಗಳ ಮೇಲೆ ಮಾತ್ರ ಗಮನಹರಿಸಿದರೆ ಅದು ಅವರಿಗೆ ಒಳ್ಳೆಯ ಫಲಿತಾಂಶ ನೀಡುತ್ತದೆ.

ಮಂಗಳವಾರ ಹುಟ್ಟಿದವರ ವೃತ್ತಿ ಜೀವನ ಸವಾಲುಗಳಿಂದ ಕೂಡಿರುತ್ತದೆ. ಈ ದಿನ ಹುಟ್ಟಿದವರು ಹೆಚ್ಚು ಧೈರ್ಯವಂತರು ಮತ್ತು ನಿಜವಾದ ಹೋರಾಟಗಾರರು ಆಗಿದ್ದಾರೆ. ಬ್ಯಾಂಕಿಂಗ್ ಮತ್ತು ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದ ಅಕೌಂಟೆನ್ಸಿ ಮುಂತಾದ ಕೆಲಸಗಳಲ್ಲಿ ಅವರಿಗೆ ಸ್ಥಾನ ದೊರೆಯುತ್ತದೆ ಮತ್ತು ಇಂತಹ ವೃತ್ತಿ ಅವರಿಗೆ ಹೇಳಿಮಾಡಿಸಿದ್ದಾಗಿದೆ. ಈ ದಿನ ಹುಟ್ಟಿದವರು ವೃತ್ತಿ ಜೀವನದಲ್ಲಿ ಚಾಲೆಂಜಿಂಗ್ ಆಗಿರುವ ಕಾರ್ಯಗಳನ್ನು ಮಾಡುವಲ್ಲಿ ನಿಪುಣರಾಗಿರುತ್ತಾರೆ. ಬಾಸ್‌ಗೆ ಸವಾಲು ಎಸೆದು ಹೊಸ ಉದ್ಯಮ, ಹೊಸ ಸ್ಟಾರ್ಟಪ್‌ಗಳನ್ನು ಸ್ಥಾಪಿಸುವಲ್ಲಿ ಇಂಥವರೇ ಹೆಚ್ಚು. ಹಾಗೇ ಕೆಲಸದ ಜಾಗದಲ್ಲಿ ಹೊಸ ಸವಾಲುಗಳನ್ನು ಸ್ವೀಕರಿಸುವುದರಲ್ಲಿ ನಿಪುಣರು ಇವರು.

ಮಂಗಳವಾರ ಜನಿಸಿದವರಿಗೆ 9 ಅದೃಷ್ಟ ಸಂಖ್ಯೆ. ಅವರು 9 ರಂದು ಶುಭ ಸಮಾರಂಭಗಳು ಮತ್ತು ಹೊಸ ಉದ್ಯಮಗಳನ್ನು ಆರಂಭಿಸಿದರೆ ಒಳ್ಳೆಯದು ಮತ್ತು ಅದು ಅವರಿಗೆ ಉತ್ತಮ ಲಾಭ ತರಬಹುದು. ಮಂಗಳವಾರ ದಾನಧರ್ಮಗಳನ್ನು ಮಾಡುವುದು ಬಹಳ ಉತ್ತಮ ಎಂದು ಹೇಳಲಾಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!