ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. ಮಕರ ರಾಶಿಯ ಜನರಿಗೆ ಇರುವಂತಹ 5 ಶಾಪಗಳು ಯಾವವು. ಮಕರ ರಾಶಿ ಚಕ್ರದಲ್ಲಿ 10 ನೇ ರಾಶಿಯಾಗಿದೆ. ಈ ರಾಶಿಯವರಿಗೆ ತೊಂದರೆ ತಾಪತ್ರಯಗಳು ಹೆಚ್ಚಾಗಿ ಕಾಡುತ್ತದೆ. ದೇವರು ಕೊಟ್ಟಿರುವ 5 ಶಾಪಗಳನ್ನು ವರವಾಗಿ ಬದಲಾಯಿಸಿಕೊಳ್ಳುವ ಎಲ್ಲಾ ಸಾಧ್ಯತೆ ಮಕರ ರಾಶಿಯವರ ಕೈಯಲ್ಲೇ ಇರುತ್ತದೆ.
ಅನ್ಯಾಯದ ದುಡ್ಡನ್ನು ದುಡಿಯುವ ಆಗಿಲ್ಲ :-
ನ್ಯಾಯವಾದ ರೀತಿಯಲ್ಲಿ ಮತ್ತು ಒಳ್ಳೆಯ ರೀತಿಯಲ್ಲಿ ಹಣವನ್ನು ಸಂಪಾದನೆ ಮಾಡಬೇಕು. ಯಾರಿಗೂ ಯಾವುದೇ ರೀತಿಯಲ್ಲಿ ಮೋಸ ಮಾಡದೆ ವಂಚನೆ ಮಾಡದೆ ನಿಯತ್ತಿನಿಂದ ದುಡಿಯುವ ದುಡ್ಡು ಮಾತ್ರ ಉಳಿಯುತ್ತದೆ. ಅನ್ಯಾಯದ ಹಣಕ್ಕೆ ಆಯಸ್ಸು ಕಮ್ಮಿ ಅದೇ, ರೀತಿ ಒಳ್ಳೆ ರೀತಿಯಲ್ಲಿ ದುಡಿದ ಹಣವನ್ನು ಒಳ್ಳೆ ಕೆಲಸಗಳಿಗೆ ಉಪಯೋಗ ಮಾಡಿಕೊಳ್ಳಬಹುದು.
ಮಕರ ರಾಶಿಯ ಜನರು ಹೆಚ್ಚು ಬುದ್ಧಿವಂತರು ಹಾಗೂ ಅವರು ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಎನ್ನುವುದು ಇದ್ದೇ ಇರುತ್ತದೆ. ಮಕರ ರಾಶಿಯ ಜನರು ಹೆಚ್ಚಾಗಿ ಸುಳ್ಳನ್ನು ನುಡಿಯುವುದಿಲ್ಲ.
ತಂದೆಯಿಂದ ಬರುವ ಅನುಕೂಲಗಳು ಈ ರಾಶಿಯವರಿಗೆ ಕಡಿಮೆ ಇರುತ್ತದೆ :-
ತಾಯಿ ಪ್ರಪಂಚಕ್ಕೆ ನಮ್ಮನ್ನು ಪರಿಚಯ ಮಾಡಿಸಿದರೆ ತಂದೆ ಪ್ರಪಂಚದಲ್ಲಿ ಬರುವ ಕಷ್ಟಗಳನ್ನು ಯಾವ ರೀತಿ ಎದುರಿಸಿ ನಿಲ್ಲಬೇಕು ಎನ್ನುವುದನ್ನು ತಿಳಿಸಿ ಕೊಡುವರು. ತಂದೆಯ ಕಡೆಯಿಂದ ಯಾವುದೇ ರೀತಿಯ ಸುಖ ಸಂತೋಷಗಳು ಮಕರ ರಾಶಿಯ ಜನರಿಗೆ ಸಿಗುವುದಿಲ್ಲ. ಅನಾರೋಗ್ಯದಿಂದ ಬಳಲುತ್ತಿರುವ ತಂದೆಯಾಗಿರಬಹುದು ಅಥವಾ ಮಕ್ಕಳ ಸುಖಕ್ಕಾಗಿ ಅವರಿಂದ ದೂರ ಉಳಿದು ದುಡಿಮೆ ಮಾಡುತ್ತಿರಬಹುದು ತಂದೆ ಈ ರೀತಿಯಾಗಿ ಮಕರ ರಾಶಿಯ ಜನರಿಗೆ ತಂದೆಯ ಪ್ರೀತಿ ಮತ್ತು ಸಹಕಾರ ಸಿಕ್ಕಿರುವುದಿಲ್ಲ. ಮಕರ ರಾಶಿಯ ಜನರು ಅವರ ಸ್ವ ಸಾಮರ್ಥ್ಯದಿಂದ ಎಲ್ಲವನ್ನು ಗಳಿಕೆ ಮಾಡಿಕೊಳ್ಳುವರು.
ಮಕರ ರಾಶಿಯ ಜನರು ನಿರಂತರವಾಗಿ ಶ್ರಮಪಟ್ಟು ಕೆಲಸ ಮಾಡುವವರು ಯಾವುದೇ ಕಾರಣಕ್ಕು ಸಮಯವನ್ನು ವ್ಯರ್ಥ ಮಾಡುವುದಿಲ್ಲ :-
ಬೇರೆಯವರ ಹಂಗಿನಲ್ಲಿ ಬದುಕುವ ಇಚ್ಛೆ ಇಲ್ಲದ ಮಕರ ರಾಶಿಯ ಜನರು ಅವರ ಹಣವನ್ನು ಅವರೇ ದುಡಿದು ತಿನ್ನುವರು. ಸ್ವಾಭಿಮಾನದ ಬದುಕನ್ನು ನಡೆಸುವ ಇವರು ಯಾರ ಮುಂದೆಯೂ ಕೈಚಾಚಿ ನಿಲ್ಲುವುದಿಲ್ಲ. ಸ್ವಂತ ದುಡಿಮೆಯಿಂದ ಜೀವನ ನಡೆಸುವ ಇವರು ಯಾವುದೇ, ಕಾರಣಕ್ಕೂ ಬೇರೆಯವರ ವಸ್ತುಗಳ ಮೇಲೆ ಆಗಲಿ, ಆಸೆ ಪಡುವುದಿಲ್ಲ ಅವರ ವಸ್ತುಗಳನ್ನು ಜೋಪಾನವಾಗಿ ಕಾಪಾಡಿಕೊಂಡು ಹೋಗುವ ಎಲ್ಲ ಸಾಮರ್ಥ್ಯ ಇವರಿಗೆ ಇರುತ್ತದೆ. ಸ್ವತಂತ್ರ ಜೀವನವನ್ನು ಇವರು ನಡೆಸುವರು.
ಈ ರಾಶಿಯ ಜನರು ಎಲ್ಲರಿಗೂ ಸಹಾಯ ಹಸ್ತವನ್ನು ನೀಡುವರು ಆದರೆ, ಯಾರು ಇವರಿಗೆ ಸಹಾಯ ಬೇಕಾದ ಸಮಯದಲ್ಲಿ ಅದನ್ನು ಮಾಡಲು ಮುಂದೆ ಬರುವುದಿಲ್ಲ :-
ಕಷ್ಟದ ಕಾಲದಲ್ಲಿ ಸಹಾಯವನ್ನು ಪಡೆದ ಜನರು ಮಕರ ರಾಶಿಯವರ ಕಷ್ಟದ ಸಮಯಕ್ಕೆ ಸಹಾಯ ಮಾಡಲು ಮುಂದೆ ಬರುವುದಿಲ್ಲ. ಒನ್ ಮ್ಯಾನ್ ಆರ್ಮಿ ರೀತಿ ಹೋರಾಟ ಮಾಡಿ ಎಲ್ಲವನ್ನು ಗೆಲ್ಲುವ ಸಾಮರ್ಥ್ಯ ಮಕರ ರಾಶಿಯ ಜನರಲ್ಲಿ ಇರುತ್ತದೆ. ಕಷ್ಟಗಳಿಗೆ ಬೆನ್ನು ತೋರಿಸದೆ ಅವುಗಳನ್ನು ಧೈರ್ಯವಾಗಿ ಎದುರಿಸುವ ಎಲ್ಲಾ ಛಲ ಮಕರ ರಾಶಿಯ ಜನರಲ್ಲಿ ಇರುತ್ತದೆ. ಇದರಿಂದ, ಈ ರಾಶಿಯ ಜನರಲ್ಲಿ ಹೆಚ್ಚಾಗಿ ನಾಯಕತ್ವದ ಗುಣ ಇರುತ್ತದೆ. ಯಾವುದೇ ರೀತಿಯ ಕಷ್ಟಗಳು ಎದುರಾದರೂ ಅದಕ್ಕೆ, ಪರಿಹಾರ ಆ ಮಕರ ರಾಶಿಯವರೇ ಕಂಡು ಕೊಳ್ಳುವರು.
ಜೀವನದಲ್ಲಿ ಸುಖ ಎನ್ನುವುದು ಮಕರ ರಾಶಿಯವರಿಗೆ ಇರುವುದಿಲ್ಲ :-
ಈ ರಾಶಿಯ ಜನರು ಯಾವುದನ್ನೇ ಇಷ್ಟಪಟ್ಟರು ಅದು, ಅವರಿಗೆ ದಕ್ಕುವುದಿಲ್ಲ. ಯಾರನ್ನು ಇಷ್ಟಪಟ್ಟರು ಅವರು ಅವರಿಂದ ದೂರವಾಗಿ ಉಳಿಯುವರು. ಕಷ್ಟದಲ್ಲಿರುವ ಜನರಿಗೆ ಸಹಾಯವನ್ನು ಮಾಡಿ ಅವರ ಕಷ್ಟದಲ್ಲಿ ತಮ್ಮ ಸುಖವನ್ನು ಮಕರ ರಾಶಿಯವರು ಕಂಡುಕೊಳ್ಳುವರು. ಇದು, ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.