ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. ಹುಟ್ಟಿದ ದಿನಾಂಕ ಹಾಗೂ ಸಮಯ ಕೂಡ ರಾಶಿಯ ಮೇಲೆ ಪ್ರಭಾವ ಬೀರುತ್ತದೆ.

ಆರ್ಥಿಕ ಪರಿಸ್ಥಿತಿಯಲ್ಲಿ ಯಾವ ಗೊಂದಲವೂ ಮಾಡಿಕೊಳ್ಳದೆ ಖರ್ಚು ವೆಚ್ಚವನ್ನು ಚೆನ್ನಾಗಿ ನಿಭಾಯಿಸುವ ಮಕರ ರಾಶಿಯ ಜನರ ಬಗ್ಗೆ ತಿಳಿದುಕೊಳ್ಳೋಣ. ಮಕರ ರಾಶಿಯ ಜನರನ್ನು ಬಾಳ ಸಂಗಾತಿಯಾಗಿ ಪಡೆಯುವುದು ಅದೃಷ್ಟವೇ ಸರಿ ಎಂದು ಹೇಳಬಹುದು. ಮಕರ ರಾಶಿಯ ಜನರು ಭೂಮಿಯ ಅಂಶ ಉಳ್ಳವರು. ಈ ರಾಶಿಯ ಜನರು ಹೆಚ್ಚು ಮಹತ್ವಾಕಾಂಕ್ಷೆಗಳನ್ನು ಹೊಂದಿರುತ್ತಾರೆ. ಜೀವನದ ಪ್ರತಿ ಬಂದು ಕ್ಷೇತ್ರದಲ್ಲೂ ಯಶಸ್ವಿಯಾಗಲು ಬಯಸುವರು.

ಮಕರ ರಾಶಿ ಕಠಿಣ ಪರಿಶ್ರಮದ ಸಂಕೇತ. ಈ ರಾಶಿಯ ಜನರು ಅವರಿಗೆ ಬೇಕಾಗಿದನ್ನು ಸಾಧಿಸಲು ಏನನ್ನು ಬೇಕಾದರೂ ಮಾಡುವರು. ಸಾಧನೆ ಹಾದಿಯಿಂದ ಹಿಂದೆ ಸರಿಯಲು ಈ ರಾಶಿಯ ಜನರು ಎಂದಿಗೂ ಇಚ್ಛೆ ಪಡುವುದಿಲ್ಲ. ಕುಳಿತು ಕನಸು ಕಾಣುವ ಬದಲು ಅದನ್ನು ಕಾರ್ಯರೂಪಕ್ಕೆ ತರುವುದರ ಕಡೆ ಮಕರ ರಾಶಿಯವರು ಹೆಚ್ಚು ಗಮನ ಕೊಡುವರು. ಮಕರ ರಾಶಿಯ ಜನರು ಹೆಚ್ಚು ನಿಷ್ಠಾವಂತರು. ಈ ರಾಶಿಯವರನ್ನು ತಿಳಿದುಕೊಂಡ ನಂತರ ಅವರನ್ನು ಬೇರೆಯವರು ಕುರುಡಾಗಿ ನಂಬಲು ಆರಂಭ ಮಾಡುವರು. ಈ ರಾಶಿಯ ಜನರು ಕೆಲವು ಮಾತುಗಳನ್ನು ಗಂಭೀರವಾಗಿ ಪರಿಗಣಿಸುವರು ಒಮ್ಮೆ ಭಾಷೆ ನೀಡಿದರೆ ಅದನ್ನು ಉಳಿಸಿಕೊಳ್ಳಲು ಹೋರಾಟವನ್ನಾದರೂ ಮಾಡುವರು.

ಈ ರಾಶಿಯವರ ನಿಷ್ಠೆಯನ್ನು ಬೇರೆಯವರು ದುರುಪಯೋಗ ಪಡಿಸಿಕೊಂಡರೆ ಅವರು ನಿಷ್ಠೆಯನ್ನು ಮುರಿದು ಎದುರಾಳಿಯ ವಿರುದ್ಧವಾಗಿ ಹೋಗುವರು. ಮಕರ ರಾಶಿಯ ಜನರ ಗಮನ ಹಾಗೂ ಹೃದಯವನ್ನು ಗೆಲ್ಲುವುದು ಸುಲಭದ ಕೆಲಸ ಅಲ್ಲ. ತೋರಿಸುವ ಸೂಕ್ಷ್ಮತೆಗಳು ಪದಗಳಿಗಿಂತ ಕ್ರಿಯೆಯ ರೂಪದಲ್ಲಿ ಬರುತ್ತದೆ. ಮಕರ ರಾಶಿಯವರು ಪ್ರೀತಿ ಪಾತ್ರರಿಗೆ ಸಹಾನುಭೂತಿ ಮತ್ತು ಭಾವನೆಗಳನ್ನು ಹೊಂದಿರುವುದಿಲ್ಲ.

ಮಕರ ರಾಶಿಯವರ ಸಂಗಾತಿಯು ಇವರ ಮೇಲೆ ಅವಲಂಬನೆಯಾಗಿ ಇರಬಹುದು. ನಿರಂತರವಾದ ಪ್ರವೃತ್ತಿಯೊಂದಿಗೆ ಮಕರ ರಾಶಿಯ ಜನರ ಜೊತೆ ಶಾಶ್ವತ ಬಂಧವನ್ನು ಹೊಂದಬಹುದು. ಮಕರ ರಾಶಿಯ ಜನರು ಬುದ್ಧಿವಂತ, ಸ್ಥಿರ ಮತ್ತು ವಿಶ್ವಾಸಕ್ಕೆ ಅರ್ಹತೆ ಉಳ್ಳವರು. ಗೆಳೆಯರ ಸಾಧನೆಗೆ ಕಂಬಗಳಾಗಿ ನಿಲ್ಲುವರು ಈ ರಾಶಿಯ ಜನರು. ಪೂರಾ ಜೀವಿತ ಅವಧಿಯಲ್ಲಿ ಅವರು ಹೆಚ್ಚಾಗಿ ಸ್ನೇಹಿತರನ್ನು ಸಂಗ್ರಹಿಸುವುದಿಲ್ಲ.

ಎಂದಿಗೂ ಶಾಂತಿ ಸಹನೆವುಳ್ಳ ಜನರ ಜೊತೆ ಇರಲು ಬಯಸುವರು. ಕುಟುಂಬ ಸಂಪ್ರದಾಯದ ಕುರಿತು ಪೂರ ತಿಳಿದಿರುವ ಜನರಲ್ಲಿ ಮಕರ ರಾಶಿಯವರು ಕೂಡ ಒಬ್ಬರು. ಈ ರಾಶಿಯ ಜನರಿಗೆ ಅವರ ತಂದೆ ಆದರ್ಶ ವ್ಯಕ್ತಿಯಾಗಿ ಇರುವರು. ಮಕರ ರಾಶಿಯವರ ಶ್ರದ್ಧೆ, ಭಕ್ತಿ ಮತ್ತು ಪ್ರಾಮಾಣಿಕತೆ ಮೇಲಿನ ಉನ್ನತ ಸ್ಥಾನಕ್ಕೆ ಅವರನ್ನು ಕರೆದುಕೊಂಡು ಹೋಗುತ್ತದೆ. ಏಕಾಗ್ರತೆ ಮತ್ತು ಸಂಪನ್ಮೂಲ ಗುಣವುಳ್ಳ ವ್ಯಕ್ತಿಗಳಾಗಿರುವ ಈ ರಾಶಿಯ ಜನರು ಹೆಚ್ಚು ಸಹಾನುಭೂತಿಯನ್ನು ಹೊಂದಿರುತ್ತಾರೆ.

ಮಕರ ರಾಶಿಯವರ ಎಲ್ಲಾ ದಾಖಲೆಗಳು ಪರಿಪೂರ್ಣವಾದ ಕ್ರಮದಲ್ಲಿ ಇರುತ್ತದೆ ಹಾಗೂ ಸ್ವಚ್ಛವಾಗಿ ಕೂಡ ಇರುತ್ತದೆ. ಮಕರ ರಾಶಿಯ ಜನರು ಅವರ ಜೀವನದಲ್ಲಿ ಹಣವನ್ನು ಹೆಚ್ಚು ಮೌಲ್ಯಯುತವಾಗಿ ಇರಿಸಿಕೊಂಡಿರುವರು. ಸಾಲಗಳು ಮಕರ ರಾಶಿಯವರ ನಿಜವಾದ ಸಾಮರ್ಥ್ಯವನ್ನು ನುಂಗುವುದಿಲ್ಲ. ನಿಜವಾದ ಯಶಸ್ಸು ದೀರ್ಘಕಾಲ ಶ್ರಮ ಪಟ್ಟರೆ ಮಾತ್ರ ಲಭಿಸುತ್ತದೆ ಎನ್ನುವುದನ್ನು ಮಕರ ರಾಶಿಯವರು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ.

ಮಕರ ರಾಶಿಯವರ ಜೊತೆ ಚೆನ್ನಾಗಿ ಹೊಂದಿಕೊಳ್ಳುವ ರಾಶಿಗಳು :-
ವೃಷಭ ರಾಶಿ ಮತ್ತು ಮಕರ ರಾಶಿ ಭೂಮಿ ತತ್ವ ಹೊಂದಿರುವ ಈ ಎರಡು ರಾಶಿಗಳು ಆರ್ಥಿಕ ಪರಿಸ್ಥಿತಿ ಮತ್ತು ಹೊಂದಾಣಿಕೆಯಲ್ಲಿ ಗೆಲುವು ಸಾಧಿಸುತ್ತವೆ.ಮೀನ ರಾಶಿ ಮತ್ತು ಮಕರ ರಾಶಿ ಈ ಎರಡು ರಾಶಿಗಳ ವ್ಯತ್ಯಾಸದ ಮನಸ್ಥಿತಿಗಳು ಪ್ರಣಯದ ಜೀವನಕ್ಕೆ ಸಹಾಯ ಮಾಡುತ್ತದೆ. ಕನ್ಯಾ ರಾಶಿ ಮತ್ತು ಮಕರ ರಾಶಿ ಈ ಎರಡು ರಾಶಿಗಳು ಹೆಚ್ಚು ಬುದ್ಧಿವಂತ ಮತ್ತು ಕಠಿಣ ಪರಿಶ್ರಮ ಹೊಂದಿರುವ ರಾಶಿಗಳು.

ಮಕರ ರಾಶಿಯವರ ಜೊತೆ ಹೊಂದಾಣಿಕೆ ಆಗದೆ ಇರುವ ರಾಶಿ ಚಕ್ರಗಳು :-
ಮೇಷ ರಾಶಿ ಮತ್ತು ಮಕರ ರಾಶಿ ಸಂಪೂರ್ಣವಾಗಿ ಘರ್ಷಣೆಗೆ ಒಳಗಾಗುವರು. ಸವಾಲುಗಳನ್ನು ಸ್ವೀಕಾರ ಮಾಡುವ ಮೇಷ ರಾಶಿಯ ಗುಣವು ಸಂವೇದನಾಶೀಲ ಮಕರ ರಾಶಿಯ ಜನರಿಗೆ ಇಷ್ಟ ಆಗುವುದಿಲ್ಲ. ಧನು ರಾಶಿ ಮತ್ತು ಮಕರ ರಾಶಿ ಹೊಂದಿಕೆ ಆಗುವುದಿಲ್ಲ. ಸಿಂಹ ರಾಶಿ ಮತ್ತು ಮಕರ ರಾಶಿಯ ಹೊಂದಾಣಿಕೆ ಹೆಚ್ಚು ಕಷ್ಟಕರವಾಗಿ ಇರುತ್ತದೆ.

ಮಕರ ರಾಶಿ ಎಲ್ಲಾ ರಾಶಿಗಳಿಗಿಂತ ಹೆಚ್ಚು ನಿಗೂಢವಾದ ರಾಶಿ. ಮಕರ ರಾಶಿಯ ಚಿಹ್ನೆ ಮೇಕೆ, ಸಮುದ್ರ ಮೇಕೆ. ಭೌತಿಕ ಅರ್ಥದಲ್ಲಿ ಮಹತ್ವಾಕಾಂಕ್ಷಿ ಮತ್ತು ಆಧ್ಯಾತ್ಮಿಕ ಅರ್ಥದಲ್ಲಿ ಹಣದಲ್ಲಿ ಸಂಬಂಧ ಹೊಂದಿದೆ. ಮಕರ ರಾಶಿಯ ಜನರ ಕೆಲಸ ಎಂದರೆ ಎತ್ತರಕ್ಕೆ ಏರುವುದು. ಈ ಮಕರ ರಾಶಿಯ ಜೊತೆ ಚೆನ್ನಾಗಿ ಮತ್ತು ಅತ್ಯುತ್ತಮವಾಗಿ ಹೊಂದಿಕೆ ಆಗುವ ರಾಶಿಗಳು ವೃಷಭ ರಾಶಿ ಮತ್ತು ಕರ್ಕಾಟಕ ರಾಶಿ.

ಶುಭ ಸಂಖ್ಯೆಗಳು :- 4, 8, 13, 22.
ಶುಭ ದಿನ :- ಶನಿವಾರ.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಾಹು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ. ಈ ಕೂಡಲೇ ನಮ್ಮ ನಂಬರಿಗೆ ಕರೆಮಾಡಿ 9606655513

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!