2024 ಸಪ್ಟೆಂಬರ್ ತಿಂಗಳಿನಲ್ಲಿ ಮಾಸ ಭವಿಷ್ಯ ನೋಡುವುದಾದರೆ ಆಯಾ ರಾಶಿಗೆ ಅನುಗುಣವಾಗಿ ಸಪ್ಟೆಂಬರ್ ತಿಂಗಳಿನಲ್ಲಿ ಉದ್ಯೋಗ, ವ್ಯವಹಾರ, ಅನುಕೂಲ ಅನಾನುಕೂಲಗಳಿರುತ್ತದೆ. ದ್ವಾದಶ ರಾಶಿಗಳಲ್ಲಿ ಪ್ರಮುಖ ರಾಶಿ ಮಕರ ರಾಶಿಯ ಸಪ್ಟೆಂಬರ್ ತಿಂಗಳ ರಾಶಿ ಭವಿಷ್ಯವನ್ನು ಈ ಲೇಖನದಲ್ಲಿ ನೋಡೋಣ.

ಮಕರ ರಾಶಿಯವರ ಗ್ರಹಗತಿ ನೋಡುವುದಾದರೆ ರವಿಯು ಕ್ರಮವಾಗಿ ಎಂಟು ಮತ್ತು ಒಂಭತ್ತನೇ ಮನೆ ಕುಜ ಗ್ರಹನು ಆರನೆ ಮನೆ ಬುಧ ಗ್ರಹನು ಏಳು ಮತ್ತು ಎಂಟನೆ ಮನೆ ಗುರು ಪಂಚಮ ಸ್ಥಾನ ಐದನೆ ಮನೆ ಶುಕ್ರ ಗ್ರಹ ಒಂಭತ್ತು ಹಾಗೂ ಹತ್ತನೆ ಮನೆ ಶನಿ ಗ್ರಹ ಎರಡನೆ ಮನೆಯಲ್ಲಿ ರಾಹು ಮೂರನೆ ಮನೆ ಕೇತು ಗ್ರಹ ಒಂಭತ್ತನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾರೆ. ರವಿ ಒಂಬತ್ತನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾಗ ವಾಯು ಅಗ್ನಿ ಜಲದಿಂದ ಅಪಾಯವನ್ನು ಸೂಚಿಸುತ್ತಿದ್ದಾನೆ ಹಾಗೂ ನೀರು ಆಹಾರದ ವ್ಯತ್ಯಾಸದಿಂದ ಅನಾರೋಗ್ಯ ಉಂಟಾಗಿ ಖರ್ಚು ವೆಚ್ಚಗಳನ್ನು ಮಾಡಿಸುತ್ತಾನೆ ಮಕರ ರಾಶಿಯವರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿದೆ. ಕುಜ ಗ್ರಹವು ಆರನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾಗ ಭೂ ಸಂಬಂಧಿಸಿದಂತೆ ವಿವಾದಗಳಲ್ಲಿ ಅಪಜಯ ಕಾನೂನಾತ್ಮಕ ಕೆಲಸಗಳಲ್ಲಿ ಪ್ರಗತಿ ಇರುವುದಿಲ್ಲ ಸುವರ್ಣ ಹಾಗೂ ತಾಮ್ರದ ವ್ಯಾಪಾರಿಗಳಿಗೆ ಲಾಭವಾಗುತ್ತದೆ.

ಬುಧ ಗ್ರಹವು ಏಳನೆ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾಗ ಯಾವುದೋ ಒಂದು ಚಿಂತೆಯಿಂದ ಮುಖದ ವರ್ಚಸ್ಸು ಕಡಿಮೆಯಾಗುತ್ತದೆ ಮಿತ್ರರೊಂದಿಗೆ ಕಲಹವಾಗುತ್ತದೆ ಪ್ರೇಯಸಿ ಅಥವಾ ಪ್ರಿಯತಮನೊಂದಿಗೆ ಜಗಳವಾಗುತ್ತದೆ, ಸಂಸಾರಿಕ ಜೀವನದಲ್ಲಿ ಪತಿ-ಪತ್ನಿಯರ ನಡುವೆ ಜಗಳ ಕಂಡುಬರುತ್ತದೆ ಜಗಳ ನಡೆಯುತ್ತಿದ್ದಾಗ ಮೌನ ವಹಿಸುವುದು ಒಳ್ಳೆಯದು. ಬುಧ ಗ್ರಹ ಎಂಟನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾಗ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಪ್ರಯಾಣ ಮಾಡಬೇಕಾಗುತ್ತದೆ ವಿದ್ಯಾಭ್ಯಾಸ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಧನ ವ್ಯಯ ಮಾಡಬೇಕಾಗುತ್ತದೆ ಮಕರ ರಾಶಿಯವರಿಗೆ ಪುತ್ರರಿಂದ ಸಂತೋಷ ಸಿಗುತ್ತದೆ.

ಗುರು ಪಂಚಮ ಸ್ಥಾನದಲ್ಲಿದ್ದು ಶುಭ ಕಾರ್ಯಗಳ ಪ್ರಾರಂಭವಾಗುತ್ತದೆ ಜಾಗ ಪ್ರಾಪ್ತಿಯಾಗುತ್ತದೆ ಮನೆ ಕಟ್ಟಲು ಅನುಕೂಲವಾಗುವಂತೆ ಸೈಟ್ ಖರೀದಿ ಯೋಗವಿದೆ. ಮಕರ ರಾಶಿಯ ಕೃಷಿಕರಿಗೆ ಲಾಭವಾಗುತ್ತದೆ, ಪಶು ಸಂಪತ್ತು ವೃದ್ಧಿಯಾಗುತ್ತದೆ ಶುಕ್ರ ಗ್ರಹ ಒಂಭತ್ತನೇ ಮನೆಯಲ್ಲಿ ಸಂಚರಿಸುತ್ತಿದ್ದಾಗ ಧಾರ್ಮಿಕ ಕಾರ್ಯಗಳ ಬಗ್ಗೆ ಆಸಕ್ತಿಯನ್ನು ತೀರ್ಥಕ್ಷೇತ್ರಗಳಲ್ಲಿ ದೇವತಾ ಆರಾಧನೆ ಮಾಡುವ ಆಸಕ್ತಿಯನ್ನು ಬೆಳೆಸುತ್ತಾನೆ, ಪ್ರೇಯಸಿಗೆ ಪ್ರೇಮ ನಿವೇದನೆಯನ್ನು ಮಾಡಲು ಉತ್ತಮ ಸಮಯ ಇದಾಗಿದೆ.

ಶುಕ್ರ ಹತ್ತನೆ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾಗ ಕಲಾ ಕ್ಷೇತ್ರ ಸೀರಿಯಲ್ ಚಿತ್ರರಂಗದಲ್ಲಿ ಇರುವವರಿಗೆ ಸ್ವಲ್ಪಮಟ್ಟಿಗೆ ಕಷ್ಟ ನಷ್ಟ ಇರುತ್ತದೆ ಆಭರಣ ಅಲಂಕಾರಿಕ ವಸ್ತುಗಳನ್ನು ನಷ್ಟವಾಗುತ್ತದೆ ಆಭರಣ ಹಾಗೂ ಅಲಂಕಾರಕ ವಸ್ತುಗಳ ವ್ಯಾಪಾರಿಗಳಿಗೂ ನಷ್ಟವಾಗುತ್ತದೆ. ಶುಕ್ರ ಗ್ರಹ ಹನ್ನೊಂದನೆ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾಗ ಪುತ್ರರಿಂದ ಲಾಭವು ಆಭರಣ ಹಾಗೂ ಅಲಂಕಾರಿಕ ವಸ್ತುಗಳ ವ್ಯಾಪಾರದಲ್ಲಿ ಅಭಿವೃದ್ಧಿಯನ್ನು ಸೂಚಿಸುತ್ತಾನೆ. ರಾಹು ಮೂರನೆ ಮನೆಯಲ್ಲಿ ಸಂಚಾರ ಮಾಡುತ್ತಾ ಕಾರ್ಯಸಿದ್ಧಿ ಜಯ ಪ್ರಾಪ್ತಿ ಸಾಹಸ ಕೆಲಸದಲ್ಲಿ ಪ್ರಗತಿ ಜಯ ಪ್ರಾಪ್ತಿ ಕೀರ್ತಿ ಪ್ರಾಪ್ತಿಯಾಗುತ್ತದೆ ಸಂತಾನ ಪ್ರಾಪ್ತಿಯಲ್ಲಿ ವಿರಳತೆಯನ್ನು ತೋರಿಸುತ್ತಾನೆ. ಕೇತು ಒಂಭತ್ತನೇ ಮನೆಯಲ್ಲಿ ಸಂಚಾರ ಮಾಡುತ್ತಾ ತೀರ್ಥಕ್ಷೇತ್ರಗಳ ದರ್ಶನವನ್ನು ಗುರು ಹಿರಿಯರ ಸೇವಾ ಅವಕಾಶವನ್ನು ಕೊಡುತ್ತಾನೆ. ಮಕರ ರಾಶಿಯವರಿಗೆ ಸಪ್ಟೆಂಬರ್ ತಿಂಗಳಿನಲ್ಲಿ ಉತ್ತಮ ದಿನಾಂಕಗಳೆಂದರೆ 5,10,18 ಹಾಗೂ 29 ಈ ದಿನಾಂಕಗಳಲ್ಲಿ ಶುಭ ಕಾರ್ಯಗಳನ್ನು ಪ್ರಾರಂಭಿಸಿ ಫಲ ಪಡೆಯಿರಿ. ಮಕರ ರಾಶಿಯವರಿಗೆ ಉತ್ತಮ ಬಣ್ಣಗಳೆಂದರೆ ಕಪ್ಪು ಬಿಳಿ ಹಾಗೂ ಕಂದು ಬಣ್ಣಗಳಾಗಿವೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಾಹು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ. ಈ ಕೂಡಲೇ ನಮ್ಮ ನಂಬರಿಗೆ ಕರೆಮಾಡಿ 9606655513

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!