ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ಮಕರ ರಾಶಿಯವರ ಜುಲೈ ತಿಂಗಳಿನ ಮಾಸ ಭವಿಷ್ಯವನ್ನು ತಿಳಿಯೋಣ

ರವಿ ಗ್ರಹ 6 ನೇ ಮತ್ತು 7 ನೇ ಮನೆಯಲ್ಲಿ, ಕುಜ ಗ್ರಹ 4 ನೇ ಮತ್ತು 5 ನೇ ಮನೆಯಲ್ಲಿ, ಬುಧ ಗ್ರಹ 7 ನೇ ಮತ್ತು 8 ನೇ ಮನೆಯಲ್ಲಿ, ಗುರು ಗ್ರಹ 5 ನೇ ಮನೆಯಲ್ಲಿ, ಶುಕ್ರ ಗ್ರಹ 7 ನೇ ಮನೆಯಲ್ಲಿ, ಶನಿ ಗ್ರಹ 2 ನೇ ಮನೆಯಲ್ಲಿ, ರಾಹು ಗ್ರಹ 3 ನೇ ಮನೆಯಲ್ಲಿ ಹಾಗು ಕೇತು ಗ್ರಹ 9 ನೇ ಮನೆಯಲ್ಲಿ.ರವಿ ಗ್ರಹ 6 ನೇ ಮನೆಯಲ್ಲಿ ಸಂಚಾರ ಮಾಡುವಾಗ ಮಕರ ರಾಶಿಯ ಜನರಿಗೆ ಒಳ್ಳೆಯ ಫಲಗಳನ್ನು ಕೊಡುತ್ತದೆ, ರೋಗ ಇದ್ದರೇ ಅದು ನಿವಾರಣೆ ಆಗುತ್ತದೆ, ಶತ್ರು ನಾಶ, ದುಃಖ ನಾಶ ಮಾಡುವನು.

7 ನೇ ಮನೆಯಲ್ಲಿ ಇರುವಾಗ ಪ್ರಯಾಣದಿಂದ ಆಯಾಸ, ಅನಾರೋಗ್ಯ ಕೊಡಬಹುದು ಅದರಿಂದ, ಆಹಾರ ಪದ್ಧತಿಯ ಕಡೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ದೇಹದ ತಾಪಮಾನ ಏರಿಕೆ ಆಗಿ ಜ್ವರ ಬರುವ ಸಾಧ್ಯತೆ ಇದೆ. ಮಕರ ರಾಶಿಯವರ ವಿವಾಹ ವಿಳಂಬ ಆಗುತ್ತಿದ್ದರೆ ಅದಕ್ಕೆ ಕುಜ ಶಾಂತಿಯನ್ನು ಮಾಡಿಸಬೇಕು, ಶೀಘ್ರ ವಿವಾಹ ಆಗಲು ಸ್ವಯಂವರ ಪಾರ್ವತಿ ಮಂತ್ರ ಅಥವ ಕಾತ್ಯಾಯಿನಿ ಪೂಜೆ ಮಾಡಬೇಕು.

7 ನೇ ಮನೆಯಲ್ಲಿ ಇರುವ ಬುಧ ಗ್ರಹ ಮಕರ ರಾಶಿಯ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಆಗುತ್ತದೆ. 8 ನೇ ಮನೆಯಲ್ಲಿ ಬುಧ ಗ್ರಹ ಸಂಚಾರ ಮಾಡುವಾಗ ವಿದ್ಯಾಭ್ಯಾಸದಲ್ಲಿ ಒಳ್ಳೆಯ ಪ್ರಗತಿ ಸಾಧಿಸಲು ಸಹಾಯ ಮಾಡುತ್ತದೆ. ಈ ತಿಂಗಳಿನಲ್ಲಿ ಶುಭಕಾರ್ಯ ಮಾಡುವ ಯೋಗ ಸಿಗುತ್ತದೆ. ಸೇವಕರಿಂದ ಲಾಭ ಸಿಗುತ್ತದೆ, ಸಂತಾನದ ವರವನ್ನು ಬೇಡಿದ ಜನರಿಗೆ ಆ ಭಾಗ್ಯ ಈ ಸಮಯದಲ್ಲಿ ಸಿಗುತ್ತದೆ. ಮಕರ ರಾಶಿಯ ಜನರು ನೂತನ ವಾಹನ ಖರೀದಿ ಮಾಡುವ ಸಾಧ್ಯತೆ ಇರುತ್ತದೆ.

ಶುಕ್ರ ಗ್ರಹ 6 ನೇ ಮನೆಯಲ್ಲಿ ಸಂಚಾರ ಮಾಡುವ ಸಮಯದಲ್ಲಿ ಮಕರ ರಾಶಿಯ ಜನರಿಗೆ ನ್ಯಾಯಾಲಯ ಸಂಬಂಧ ವ್ಯಾಜ್ಯಗಳು ಪರಿಹಾರ ಆಗುತ್ತದೆ ಜೊತೆಗೆ ತಿಂಗಳ ಕೊನೆಯಲ್ಲಿ ಸಂಧಾನ ಕಾರ್ಯ ಕೂಡ ನಡೆಯುತ್ತದೆ. 7 ನೇ ಮನೆಯಲ್ಲಿ ಶುಕ್ರ ಗ್ರಹ ಸಂಚಾರ ಮಾಡುವಾಗ ಸ್ತ್ರೀಯರಿಂದ ಮಾನ ಹಾನಿ ಮತ್ತು ಕಷ್ಟ ನಷ್ಟಗಳು ಎದುರಾಗಬಹುದು.
ನಷ್ಟಗಳ ಪರಿಹಾರ ಮಾಡಿಕೊಳ್ಳಲು ದೇವಿಯ ಆರಾಧನೆ ಮಾಡಬೇಕು. ಶನಿ ಗ್ರಹ ಮಕರ ರಾಶಿಯ 2 ನೇ ಮನೆಯಲ್ಲಿ ಸಂಚಾರ ಮಾಡುವ ಕಾರಣ ಪಾಪದ ಫಲದ ದೆಸೆಯಿಂದ ಸುಖ, ಶಾಂತಿ ನೆಮ್ಮದಿ ಎಲ್ಲಾ ನಷ್ಟ ಆಗುವ ಸಾಧ್ಯತೆಗಳು ಇರುತ್ತದೆ.

ರಾಹು ಗ್ರಹ ಒಳ್ಳೆಯ ಮಂಗಳಕರ ಫಲಗಳನ್ನು ಕೊಡುತ್ತದೆ ಮಕರ ರಾಶಿಯ ಜನರಿಗೆ. ಹೂಡಿಕೆ ಮಾಡಲು ಬಯಸುವ ಜನರು ಜುಲೈ ತಿಂಗಳಿನಲ್ಲಿ ಹೂಡಿಕೆ ಮಾಡಬಹುದು. ಕೇತು ಗ್ರಹದ  ಅನುಗ್ರಹದಿಂದ ಮಕರ ರಾಶಿಯ ಜನರು ತೀರ್ಥಯಾತ್ರೆ ಮಾಡುವ ಯೋಗವಿದೆ. ಅದರ, ಜೊತೆಗೆ ದೇವರ ಆರಾಧನೆ ಮಾಡುವರು. ತಂದೆ ತಾಯಿಯ ಆರೋಗ್ಯದ ಕಡೆ ಗಮನ ಕೊಡಬೇಕು ಎಂದು ಕೇತು ಗ್ರಹ ಸೂಚನೆ ಮಾಡುತ್ತದೆ.
ಜುಲೈ ತಿಂಗಳಿನಲ್ಲಿ ಮಕರ ರಾಶಿಯ ಜನರಿಗೆ :-ಒಳ್ಳೆಯ ದಿನಗಳು :- 03,13, 23, 26.
ಶುಭ ತರುವ ಬಣ್ಣ :- ನೀಲಿ ಬಣ್ಣ, ಬಿಳಿ ಮಿಶ್ರಿತ ನೀಲಿ ಮತ್ತು ಕಪ್ಪು ಬಣ್ಣ.

ಪರಿಹಾರಗಳು :-ಶನಿ ದೇವರ ಆರಾಧನೆ ಮಾಡಬೇಕು ಜೊತೆಗೆ ಶನಿ ಮಹಾತ್ಮನಿಗೆ ತುಪ್ಪದ ದೀಪ ಬೆಳಗಬೇಕು, ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದು ಮತ್ತು ಕೇಳುವುದು ಒಳ್ಳೆಯದು. ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್: ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು 9606655519 ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 9606655519

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!