ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ಮಕರ ರಾಶಿಯವರ ಅಕ್ಟೋಬರ್ ತಿಂಗಳ ಮಾಸ ಭವಿಷ್ಯವನ್ನು ತಿಳಿಯೋಣ ಬನ್ನಿ.

ಶುಭ ತರುವ ದಿನಗಳು ಮಕರ ರಾಶಿಯ ಜನರಿಗೆ 4, 5, 8, 9, 26, 27, 28, 31.
ಅಶುಭ ದಿನಗಳು ಅಕ್ಟೋಬರ್ ತಿಂಗಳಲ್ಲಿ ಮಕರ ರಾಶಿಯ ಜನರಿಗೆ 2, 3, 11, 12, 19, 20, 21, 29.
ಮಕರ ರಾಶಿಯ ಜನರಿಗೆ ಅಕ್ಟೋಬರ್ ತಿಂಗಳಿನಲ್ಲಿ ಒಳ್ಳೆಯ ಫಲ ಲಭಿಸುತ್ತದೆ. ಕಲ್ಯಾಣಕರ ಕಾರ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಧಾರ್ಮಿಕ ಕೆಲಸಗಳಲ್ಲಿ ಭಾಗಿಯಾಗುವುದು, ಸಮಾಜಿಕ ಕೆಲಸಗಳಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಮತ್ತು ಅದರಿಂದ, ಖುಷಿ ಕೂಡ ಸಿಗುತ್ತದೆ.

ಇನ್ನು, ಮದುವೆ ಬಗ್ಗೆ ಮಕರ ರಾಶಿಯ ಜನರು ಯೋಚನೆ ಮಾಡುತ್ತಿದ್ದರೆ ಅದರ, ಕುರಿತಾದ ಕೆಲವು ಶುಭ ಸುದ್ದಿ ಕೇಳುವ ಸಾಧ್ಯತೆ ಇದೆ. ಸ್ವಲ್ಪ ಮಟ್ಟಿಗಿನ ಅನಾರೋಗ್ಯ ಭಾದಿಸುವ ಸಾಧ್ಯತೆ ಸಹ ಇದೆ. ಸಂಗದಿಂದ ಸನ್ಯಾಸಿ ಕೆಟ್ಟ ಎನ್ನುವ ಹಾಗೆ ಸಜ್ಜನರ ಸಂಗ ಮಾಡುವುದು ಉತ್ತಮ ಇಲ್ಲದೆ ಹೋದರೆ ಅಪಾಯದಲ್ಲಿ ಸಿಲುಕುವ ಸಾಧ್ಯತೆ ಸಹ ಇರುತ್ತದೆ. ಅನವಶ್ಯಕ ಖರ್ಚು ವೆಚ್ಚ ಮತ್ತು ಅನವಶ್ಯಕ ವ್ಯವಹಾರ ಮಾಡುವುದು ಒಳ್ಳೆಯದಲ್ಲ. ಹೆಚ್ಚಿನ ಮಹತ್ವವನ್ನು ಮನೆಗೆ ಹಾಗೂ ಕೆಲಸದ ಕಡೆ ಕೊಡುವುದು ಒಳ್ಳೆಯದು. ಮಕರ ರಾಶಿಯ ಜನರು ಸ್ನೇಹ ಮಾಡುವಾಗ ಜನರ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಬೇಕು.

ಮಕರ ರಾಶಿಯವರು ಅವರ ವಿರುದ್ಧ ಲಿಂಗದ ಜನರ ಜೊತೆ ಎಚ್ಚರಿಕೆ ವಹಿಸಬೇಕು, ಇಲ್ಲದೆ ಹೋದರೆ ಸಂಸಾರದ ಮೇಲೆ ಅದು ಬೇರೆ ರೀತಿಯ ಪರಿಣಾಮ ಬಿರುವ ಸಾಧ್ಯತೆ ಇದೆ. ಕೋರ್ಟ್ ಕಚೇರಿಯ ವಿಚಾರವಾಗಿ ಮಕರ ರಾಶಿಯ ಜನರಿಗೆ ಜಯ ಸಿಗುತ್ತದೆ. ವಾದ ವಿವಾದ ಇತ್ಯರ್ಥಕ್ಕೆ ಬಂದು ಅದರಿಂದ, ಈ ತಿಂಗಳಿನಲ್ಲಿ ಮುಕ್ತಿ ಸಿಗುತ್ತದೆ. ಲೋನ್ ತೆಗೆದುಕೊಂಡು ನೂತನ ವ್ಯಾಪಾರ ವ್ಯವಹಾರ ಮಾಡುತ್ತಿದ್ದರೆ ಇಲ್ಲ ಯಾವುದೇ ರೀತಿಯ ಹಣ ಕಾಸಿನ ವ್ಯವಹಾರ ನಡೆಸುತ್ತಿದ್ದರೆ ಅದನ್ನು, ಮುಂದುವರೆಸಬಹುದು.

ಈ ತಿಂಗಳಿನಲ್ಲಿ ಮಕರ ರಾಶಿಯ ಜನರಿಗೆ ಅವರ ಶತ್ರುಗಳ ನಿಗ್ರಹ ಆಗುತ್ತದೆ. ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ಮಕರ ರಾಶಿಯ ಜನರು ಅವಲಂಬಿತವಾಗಿ ಇರುವ ಜನರಿಂದ ಅವರಿಗೆ ಸಹಕಾರ ಸಿಗುತ್ತದೆ ಮತ್ತು ಒಳ್ಳೆಯ ಮಂಗಳಕರ ಫಲ ಸಿಗುತ್ತದೆ. ಮಕರ ರಾಶಿಯ ಜನರು ಅವರ ಆರೋಗ್ಯದ ಕುರಿತು ಎಚ್ಚರಿಕೆ ವಹಿಸಬೇಕು. ಊಟದ ವಿಚಾರವಾಗಿ, ಶುಚಿತ್ವದ ವಿಚಾರವಾಗಿ ಹೆಚ್ಚಿನ ಗಮನ ಕೊಡಬೇಕು. ಯೋಗ, ವ್ಯಾಯಾಮ, ವಾಕಿಂಗ್ ಇವುಗಳನ್ನು ದಿನನಿತ್ಯ ಪಾಲನೆ ಮಾಡಿಕೊಂಡರೆ ಆರೋಗ್ಯ ಉತ್ತಮವಾಗಿ ಇರುತ್ತದೆ.

ಮಕರ ರಾಶಿಯ ಜನರ ಮನಸಿನಲ್ಲಿ ಒಂದು ರೀತಿಯ ಭಯ ಇರುತ್ತದೆ ಆದರೆ ಯಾವುದೇ ರೀತಿಯ ಚಿಂತೆ ಬೇಡ ಸುಮ್ಮನೆ ಕೆಲಸಗಳನ್ನು ಮುಂದುವರೆಸಿಕೊಂಡು ಹೋದರೆ ಒಳ್ಳೆಯದು. ಹಿರಿಯರ ಸಲುವಾಗಿ ಸ್ವಲ್ಪ ಹಣವನ್ನು ಎತ್ತಿ ಇಡಬೇಕು. ರಿಯಲ್ ಎಸ್ಟೇಟ್ ಮಾಡುವ ಜನರಿಗೆ ತುಂಬ ಒಳ್ಳೆಯ ಫಲ ಸಿಗುತ್ತದೆ. ವಿಧ್ಯಾರ್ಥಿಗಳಿಗೆ ಒಳ್ಳೆಯ ಸ್ಥಿರತೆ ಎನ್ನುವುದು ಸಿಗುತ್ತದೆ ಮತ್ತು ಅಂದುಕೊಂಡಿರುವ ಗುರಿಯನ್ನು ಮುಟ್ಟುವರು. ಉದ್ಯೋಗದಲ್ಲಿ ಒತ್ತಡ ಹೆಚ್ಚಾಗಿ ಇದ್ದರು ಗೆಲುವು ಎನ್ನುವುದು ಮಕರ ರಾಶಿಯ ಜನರಿಗೆ ಬೇಗ ಸಿಗುತ್ತದೆ.

ಸರ್ಕಾರಿ ಮತ್ತು ಅರೆ ಸರ್ಕಾರಿ ಕೆಲಸಗಳನ್ನು ಮಾಡುವ ಜನರಿಗೆ ಅವರು ಬಯಸುವ ಸ್ಥಳಕ್ಕೆ ವರ್ಗಾವಣೆ ಆಗುವ ಸಾಧ್ಯತೆ ಸಹ ಅಕ್ಟೋಬರ್ ತಿಂಗಳಿನಲ್ಲಿ ಇದೆ. ಕುಟುಂಬದ ಜನರ ಜೊತೆ ಯಾವುದಾದರೂ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಅದರಿಂದ, ಮನಸ್ಸಿಗೆ ಆನಂದ ಮತ್ತು ನೆಮ್ಮದಿ ಸಿಗುತ್ತದೆ. ರಾಜಕಾರಣಿಗಳಿಗೆ ಒಳ್ಳೆಯ ಫಲಗಳು ಲಭಿಸುತ್ತದೆ. ಆದರೆ, ಒಂದು ಸ್ಥಾನಕ್ಕೆ ಹೆಚ್ಚಿನ ರಾಜಕಾರಣಿಗಳ ಜೊತೆ ಸ್ಪರ್ಧೆ ಎನ್ನುವುದು ಇರುತ್ತದೆ. ಕಲಾವಿದರಿಗೆ ಒಳ್ಳೆಯ ಅವಕಾಶಗಳು ಒದಗಿ ಬರುತ್ತವೆ ಅವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳುವುದರಿಂದ ಇನ್ನಷ್ಟು ಶುಭ ಫಲವನ್ನು ಅನುಭವಿಸಬಹುದು.

ಪರಿಹಾರ :-ಶ್ರೀ ಮಹಾವಿಷ್ಣುವಿನ ಪೂಜೆ ಮಾಡಬೇಕು, ಶ್ರೀ ಪಾರ್ವತಿ ದೇವಿಯ ಆರಾಧನೆ ಮಾಡಬೇಕು ಮತ್ತು ದೇವರ ಹೆಸರಿನಲ್ಲಿ ಅರ್ಚನೆಯನ್ನು ಮಾಡಿಸಬೇಕು. ಇದರಿಂದ, ಇನ್ನು ಹೆಚ್ಚಿನ ಒಳ್ಳೆಯ ಫಲ ಸಿಗುತ್ತದೆ.ಇದು, ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ. ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ನಿಮ್ಮ ಜೀವನದ ದಾಂಪತ್ಯ, ಸಂತಾನ ದೋಷ, ಸ್ತ್ರೀ ಪುರುಷ ವಶೀಕರಣ, ಗಂಡನ ಪರಸ್ತ್ರೀ ಸಹವಾಸ ಬಿಡಿಸಲು, ಅತ್ತೆ ಸೊಸೆ ಕಲಹ, ನಿಮ್ಮ ಜೀವನದ ಯಾವುದೇ ಸಮಸ್ಯೆ ಇರಲಿ ಕರೆ ಮಾಡಿ ಶಾಶ್ವತ ಪರಿಹಾರ ಕಂಡುಕೊಳ್ಳಿ ಶ್ರೀ ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್ ಟಿ ನಗರ ಪೊಲೀಸ್ ಸ್ಟೇಷನ್ ಹತ್ತಿರ ಆದಿಶ್ವರ್ ಶೋರೂಮ್ ಕೆಳಗಡೆ RT ನಗರ ಬೆಂಗಳೂರು ಗುರೂಜಿ ಎಂ ಪಿ ಶರ್ಮ, 9845559493

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!