ಮೈಲಾರಲಿಂಗೇಶ್ವರ ಎಂದರೆ ತುಂಬ ಪ್ರಸಿದ್ಧ ದೇವರು ಆಯಾ ದೇವರನ್ನು ಆರಾಧನೆ ಮಾಡುವ ಬಳಗ ದೊಡ್ಡದು. ಮೈಲಾರ ಕ್ಷೇತ್ರ ಕೋಟಿ ಕೋಟಿ ಭಕ್ತರು ಭಕ್ತಿಯಿಂದ ಆರಾಧನೆ ಮಾಡುವ ಸುಕ್ಷೇತ್ರ.

ಭಕ್ತರೂ ಎಲ್ಲಾ ಸುಕ್ಷೇತ್ರ ಮೈಲಾರಕ್ಕೆ ಹೋಗಿ, ಮೈಲಾರಲಿಂಗೇಶ್ವರ ಸ್ವಾಮಿಯ ಬಳಿ ಅವರ ತೊಂದರೆ ಮತ್ತು ನೋವುಗಳನ್ನು ಹೇಳಿಕೊಂಡರೆ ಸಮಸ್ಯೆ ಪರಿಹಾರ ಆಗುತ್ತದೆ ಎಂಬ ಪ್ರತೀತಿ ಸಹ ಇದೆ. ಅದರಲ್ಲಿ, ಸಹ ಪ್ರತಿ ವರ್ಷ ಮೈಲಾರಲಿಂಗೇಶ್ವರ ಸ್ವಾಮಿಯ ಕ್ಷೇತ್ರದಲ್ಲಿ ನುಡಿಯುವ ‘ ಕಾರ್ಣಿಕ ‘ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದೇಶದ ವಿವಿಧ ರಾಜ್ಯಗಳಲ್ಲೂ ಗಮನ ಸೆಳೆಯುತ್ತದೆ. ಹೀಗೆ ಈ ವರ್ಷದ ಕಾರ್ಣಿಕ ಕೂಡ ನಿಜವಾಗಿದೆ.

ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕ ಕಟ್ಟುನಿಟ್ಟಿನ ಸಂಪ್ರದಾಯದ ಮೂಲಕ ನಡೆಯುತ್ತದೆ. ಅದರಲ್ಲೂ, ಕಾರ್ಣಿಕದ ಗೊರವಪ್ಪ ರಾಮಪ್ಪ ಅವರು 11 ದಿನಗಳ ಕಾಲ ಉಪವಾಸ ಮಾಡುತ್ತಾರೆ. ಹೀಗೆ ನಿರಂತರ ಉಪವಾಸದ ನಂತರ, ಕಾರ್ಣಿಕ ನುಡಿಯುವ ದಿನ ವಿಶೇಷ ಪೂಜೆ ಸಲ್ಲಿಕೆ ಮಾಡಿ ತದನಂತರ ಕಾರ್ಣಿಕ ಹೇಳುವ ಜಾಗಕ್ಕೆ ಬರುತ್ತಾರೆ.

ಕೋಟ್ಯಂತರ ಜನ ‘ ಕಾರ್ಣಿಕ ‘ ನುಡಿಯುವ ಮಹತ್ವದ ಸಮಯಕ್ಕೆ ಸಾಕ್ಷಿ ಆಗಿರುತ್ತಾರೆ. 15 ಅಡಿ ಬಿಲ್ಲನ್ನು ಏರಿ ” ಸದ್ದಲೇ ” ಎಂದು ಕೂಗಿದಾಗ ಎಷ್ಟೇ ಭಕ್ತರು ಆಲ್ಲಿ ಸೇರಿದ್ದರೂ ಸಹ ಆ ಜಾಗ ಸೂಜಿ ಬಿದ್ದರೂ ಸಪ್ಪಳ ಕೇಳುವಷ್ಟು ನಿಶ್ಶಬ್ಧ ಆಗುತ್ತದೆ. ಆಗಲೇ, ನೋಡಿ ಭವಿಷ್ಯದ ಬಗ್ಗೆ ಮೈಲಾರಲಿಂಗೇಶ್ವರ ಸ್ವಾಮಿ ಮಾಹಿತಿ ನೀಡುವುದು. 2024ರ ಮೈಲಾರ ಸ್ವಾಮಿ ನುಡಿದ ‘ ಕಾರ್ಣಿಕ ‘ ನಿಜವಾಯ್ತು ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರದಲ್ಲಿ ಪ್ರತಿವರ್ಷ ಕಟ್ಟುನಿಟ್ಟಿನ ಸಂಪ್ರದಾಯದ ಜೊತೆಗೆ ನಡೆಯುತ್ತದೆ.

ಹೀಗೆ, 2024 ರ ಮೈಲಾರ ‘ ಕಾರ್ಣಿಕ ‘ ಕೆಲವು ತಿಂಗಳ ಹಿಂದೆ ನಡೆದಿತ್ತು. ಹಾಗೇ ಕಾರ್ಣಿಕದ ಸಮಯದಲ್ಲಿ ‘ ಸಂಪಾಯಿತಲೆ ಪರಾಕ್ ‘ ಅಂತ ಭವಿಷ್ಯ ನುಡಿದಿದ್ದರು ಕಾರ್ಣಿಕದ ಗೊರವಪ್ಪ ರಾಮಪ್ಪ ಅವರು. ಇದೀಗ 2024 ರ ಮೈಲಾರಲಿಂಗೇಶ್ವರ ಸ್ವಾಮಿ ‘ ಕಾರ್ಣಿಕ ‘ ನುಡಿದಿದ್ದ ಭವಿಷ್ಯವು ಸತ್ಯವಾಗಿದೆ.

ಕಟ್ಟೆಗಳು ಭರ್ತಿ’ ಸಂಪಾಯಿತಲೆ ಪರಾಕ್ ‘ ಎಂದರೆ ಈ ಬಾರಿ ಕರ್ನಾಟಕ ರಾಜ್ಯದಲ್ಲಿ ಅತ್ಯುತ್ತಮವಾಗಿ ಮಳೆಯ ಆಗಮನ ಆಗಲಿದೆ ಎಂದು ಅರ್ಥವಾಗಿತ್ತು. ಇದೀಗ ಭವಿಷ್ಯವಾಣಿ ಹೇಳಿದ ರೀತಿಯಲ್ಲೇ ಮಳೆಯು ಬಿದ್ದಿದೆ. ಶ್ರದ್ಧಾಭಕ್ತಿಯ ಸುಕ್ಷೇತ್ರ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕದಲ್ಲಿ ಹೇಳಿದ ರೀತಿ, ಈ ವರ್ಷ ಕೆರೆ ಕಟ್ಟೆ, ನದಿ ಮತ್ತು ಹಳ್ಳಕೊಳ್ಳ ಭೋರ್ಗರೆಯುತ್ತಿವೆ. ಹಾಗೇ ಬೆಳೆ ಸಹ ಭಾರಿ ಸಮೃದ್ಧ ಅಚ್ಚುಕಟ್ಟಾಗಿ ಬೆಳೆದು ನಿಂತಿದ್ದು, ಕೋಟಿ ಕೋಟಿ ಭಕ್ತರು ಸ್ವಾಮಿಗೆ ನಮಿಸಿದ್ದಾರೆ.

2023 ರಲ್ಲಿ ‘ಕಾರ್ಣಿಕ’ ಹೇಳಿದ್ದು ಏನು ಮೈಲಾರಲಿಂಗೇಶ್ವರ ಸ್ವಾಮಿ ‘ಕಾರ್ಣಿಕ’ ಭವಿಷ್ಯ ನೂರಕ್ಕೆ ನೂರರಷ್ಟು ಸತ್ಯ ಆಗುತ್ತದೆ ಎಂಬ ನಂಬಿಕೆ ಶತ ಶತಮಾನಗಳಿಂದ ಸಹ ಇದೆ. 2024 ರಲ್ಲಿ ಮಾತ್ರವಲ್ಲ, 2023 ರಲ್ಲಿ ಕೂಡ ಮೈಲಾರಲಿಂಗೇಶ್ವರ ಸ್ವಾಮಿ ‘ ಕಾರ್ಣಿಕ ‘ ಭವಿಷ್ಯ ಸತ್ಯವಾಗಿತ್ತು.

ಕರ್ನಾಟಕದ ವಿಧಾನಸಭೆ ಚುನಾವಣೆ ವೇಳೆಯಲ್ಲೇ, ಅಂಬಲಿ ಹಳಿಸಿತು, ಕಂಬಳಿ ಬೀಸಿತಲೇ ಪರಾಕ್ ಎಂದು ‘ಕಾರ್ಣಿಕ’ ಹೇಳಲಾಗಿತ್ತು. ಅದೇ ಭವಿಷ್ಯ ಸತ್ಯವಾಗಿ, ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾರೆಂಬ ನಂಬಿಕೆ ಇದೆ. ಇದೀಗ ಕರ್ನಾಟಕದಲ್ಲಿ ಮಳೆ ಆಗುವ ಬಗ್ಗೆಯೂ ‘ ಕಾರ್ಣಿಕ ‘ದಲ್ಲಿ ಭವಿಷ್ಯ ನುಡಿಯಲಾಗಿತ್ತು. ಹೀಗಿದ್ದಾಗ ಕರ್ನಾಟಕದಲ್ಲಿ ಈ ಬಾರಿ ಭರ್ಜರಿಯಾಗಿ ಮಳೆ ಬೀಳುತ್ತಿದೆ. ದೇವರು ನುಡಿದಂತೆ ಹಲವು ಭವಿಷ್ಯ ನಿಜ ಆದಾಗ ವಿಜ್ಞಾನ ಕೂಡ ಉತ್ತರ ಹುಡುಕದೆ ಉಳಿಯುವುದು.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!