ಏಪ್ರಿಲ್ ತಿಂಗಳಲ್ಲಿ ಗ್ರಾಹಕರಿಗೆ ಶುಭ ಸಮಾಚಾರ ಸಿಲಿಂಡರ್ ಬೆಲೆ ಇನಷ್ಟು ಇಳಿಕೆ ಕಂಡಿದೆ. ಭಾರತದಲ್ಲಿ ಅಡಿಗೆ ಅನಿಲದ ಸಿಲಿಂಡರ್ ದರ ಕಡಿಮೆಯಾಗಿ ಜನರಿಗೆ ಮಹತ್ವದ ಸುದ್ದಿ ನೀಡಿದೆ.
2024 ರ ಏಪ್ರಿಲ್ ತಿಂಗಳಿನಿಂದ ಹೊಸ ಹಣಕಾಸು ವರ್ಷ ಆರಂಭವಾಗಿದೆ. ಈ ರೀತಿಯ ಪರಿಸ್ಥಿತಿಯಲ್ಲಿ ಸರ್ಕಾರ LPG ಗ್ಯಾಸ್ ಗ್ರಾಹಕರಿಗೆ ಭರ್ಜರಿ ಸುದ್ದಿ ನೀಡಿದೆ. ದಿನ ಉಪಯೋಗಿ ಗೃಹ ಬಳಕೆಯ ವಸ್ತುಗಳಲ್ಲಿ ಗ್ಯಾಸ್ ಸಿಲಿಂಡರ್ ಕೂಡ ಒಂದು. ಅದರ, ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಮೋದಲೇ ಘೋಷಣೆ ಮಾಡಿದ್ದರು. ಆದರೆ, 2024 ರ ಮಾರ್ಚ್ 8 ನೇ ತಾರೀಖು ಮಹಿಳಾ ದಿನದಂದು ಮಹಿಳೆಯರಿಗೆ ದೊಡ್ಡ ಉಡುಗೊರೆಯನ್ನು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದರು.
ನಿತ್ಯ ಉಪಯೋಗಿ ಅಗಿ ಬಳಕೆ ಮಾಡುವ ಸಿಲಿಂಡರ್ ಬೆಲೆಯನ್ನು ₹100 ಇಳಿಕೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದರು. ಈ ರೀತಿಯಾಗಿ, ಅಡಿಗೆ ಅನಿಲದ ಸಿಲಿಂಡರ್’ಗಳ ಬೆಲೆಯಲ್ಲಿ ಇಳಿಕೆಯು ಮಹಿಳಾ ಶಕ್ತಿಯ ಜೀವನವನ್ನು ಸುಲಭಗೊಳಿಸುತ್ತದೆ ಮತ್ತು ಇದು ಕೋಟಿಗಟ್ಟಲೆ ಕುಟುಂಬಗಳಿಗೆ ಆರ್ಥಿಕ ಬೆಂಬಲವನ್ನು ನೀಡುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರು ಗೃಹಬಳಕೆ ಗ್ಯಾಸ್ ಸಿಲಿಂಡರ್ ಬೆಲೆಯನ್ನು ₹ 100 ಕಡಿತಗೊಳಿಸಿದ ನಂತರ ಇದೀಗ ಗ್ಯಾಸ್ ಸಿಲಿಂಡರ್ ₹ 803 ಕ್ಕೆ ಲಭ್ಯವಾಗಲಿದೆ. ಈ ಹಿಂದೆ 903 ರೂ.ಗೆ ಲಭ್ಯವಿತ್ತು.
ಉಜ್ವಲ ಅನಿಲ ಸಂಪರ್ಕ ಹೊಂದಿರುವವರು ₹ 500ಕ್ಕೆ ಸಿಲಿಂಡರ್ ಪಡೆಯುತ್ತಿದ್ದಾರೆ. ಕಳೆದ ವರ್ಷ ಅಕ್ಟೋಬರ್’ನಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಗೃಹೋಪಯೋಗಿ ಗ್ಯಾಸ್ ಸಿಲಿಂಡರ್’ಗಳ ಮೇಲಿನ ಸಬ್ಸಿಡಿಯನ್ನು ಪ್ರತಿ ಸಿಲಿಂಡರ್’ಗೆ ₹ 200 ರಿಂದ ₹ 300ಕ್ಕೆ ಹೆಚ್ಚಿಸುವುದಾಗಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಈಗ ಪ್ರಧಾನಿ ನರೇಂದ್ರ ಮೋದಿ ಅವರು ಗ್ಯಾಸ್ ಸಿಲಿಂಡರ್’ಗಳ ಮೇಲಿನ ₹ 100 ಕಡಿತಗೊಳಿಸಿದ ನಂತರ, ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಹತ್ತು ಕೋಟಿಗೂ ಹೆಚ್ಚು ಫಲಾನುಭವಿ ಬಡ ಕುಟುಂಬಗಳು ₹ 503 ರ ಗ್ಯಾಸ್ ಸಿಲಿಂಡರ್’ಗಳನ್ನು ಪ್ರಸ್ತುತ ₹ 300 ಸಬ್ಸಿಡಿಯೊಂದಿಗೆ ಪಡೆಯಲಿದ್ದಾರೆ. ಆದರೆ ಸಾಮಾನ್ಯ ಗ್ರಾಹಕರಿಗೆ ಒಂದು ಸಿಲಿಂಡರ್ ಬೆಲೆ ₹ 803 ಕ್ಕೆ ಇನ್ನು ಮುಂದೆ ಲಭಿಸುತ್ತದೆ.