LPG cylinder price: ಪ್ರಸ್ತುತ ಪ್ರತಿಯೊಬ್ಬ ಗ್ಯಾಸ್ ಬಳಕೆದಾರರು ಸಹ LPG ದರವನ್ನು ಇಳಿಕೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರವನ್ನ ದೂರುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಇಂಧನ ಅಷ್ಟೇ ಅಲ್ಲದೆ ಗ್ರಹ ಬಳಕೆಯ ಎಲ್ಲಾ ವಸ್ತುಗಳ ದರವು ಹೆಚ್ಚಾಗಿದ್ದು ಸಾಮಾನ್ಯರಿಗೆ ಇದು ಹೊರೆಯನಿಸಿದೆ. ಇದರ ಜೊತೆಗೆ ಗ್ಯಾಸ್ ಸಿಲಿಂಡರ್ ಬೆಲೆ ಕೂಡ ವಿಪರೀತವಾಗಿ ಏರಿಕೆಯಾಗಿದ್ದು ಇದು ಬಡವರಿಗೆ ಬಹಳ ಕಷ್ಟ ಎನಿಸುತ್ತಿತ್ತು. ಕೇವಲ ನಮ್ಮ ರಾಜ್ಯದಲ್ಲಿ ಅಷ್ಟೇ ಅಲ್ಲದೆ ಎಲ್ಲಾ ರಾಜ್ಯಗಳಲ್ಲಿಯೂ ಸಹ ಅಡುಗೆ ಸಿಲಿಂಡರಿನ ಬೆಲೆ ರೂ.1000 ಗಡಿ ದಾಟಿದೆ.

ಮೊದಲು ಸಬ್ಸಿಡಿಯ ಮೂಲಕ ದರವನ್ನ ಇಳಿಸಲಾಗಿತ್ತಾದರೂ ಕ್ರಮೇಣ ಇದರ ವೆಚ್ಚವನ್ನ ಜಾಸ್ತಿ ಮಾಡುತ್ತಾ ಹೋಗಲಾಯಿತು ಇದು ಸಾಮಾನ್ಯರ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರಿತು ಇದೀಗ ಕೇಂದ್ರ ಸರ್ಕಾರದಿಂದ ಅಂತಿಮವಾಗಿ ಒಂದು ಸಿಹಿ ಸುದ್ದಿ ದೊರಕಿದ್ದು ಅದೇನೆಂದರೆ ಗ್ಯಾಸ್ ಸಿಲಿಂಡರಿನ ಮೇಲೆ ಬೆಲೆ ಇಳಿಸುವುದಾಗಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ ಠಾಕೂರ್ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.

ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಅಡುಗೆ ಸಿಲಿಂಡರ್ ನ ಪ್ರತಿಯೊಂದು ಮನೆಗೂ ತಲುಪುವಂತೆ ಮಾಡಿದ್ದು ಇದರ ಮೇಲೆ ಗ್ರಾಹಕರ ಖಾತೆಗೆ ಸಬ್ಸಿಡಿ ಹಣವನ್ನು ವರ್ಗಾವಣೆ ಮಾಡುತ್ತಿದ್ದರು ಆದರೆ ಈ ಸಬ್ಸಿಡಿ ಯೋಜನೆಯ ಇದ್ದಕ್ಕಿದ್ದಂತೆಯೇ ಸ್ಥಗಿತಗೊಂಡಿತ್ತು ಇದರ ನಂತರ ಉಜ್ವಲ ಯೋಜನೆಯ ಅಡಿಯಲ್ಲಿ ಉಚಿತ ಸಿಲೆಂಡರ್ ಹಾಗೂ ಗ್ಯಾಸ್ ಸ್ಟವ್ ದೇಶದ 75 ಲಕ್ಷಕ್ಕೂ ಹೆಚ್ಚಿನ ಕುಟುಂಬಗಳಿಗೆ ನೀಡಲಾಯಿತು. ಈ ಯೋಜನೆಯ ಉದ್ದೇಶವು ಗ್ರಹಣಿಯರಿಗೆ ಅಡುಗೆ ಮಾಡಲು ಅನುಕೂಲಕರ ವಾತಾವರಣ ನಿರ್ಮಿಸುವುದಾಗಿತ್ತು.

ಆದರೆ ಈ ಯೋಜನೆ ಅಡಿ ಪ್ರಯೋಜನ ಪಡೆದ ಫಲಾನುಭವಿಗಳು ಕೂಡ ಅಡುಗೆ ಅನಿಲದ ಬೆಲೆಯನ್ನ ತೆರಲಾಗದೆ ಕಷ್ಟಪಡುತ್ತಿದ್ದಾರೆ ಈ ನಿಟ್ಟಿನಲ್ಲಿ ಸರ್ಕಾರವು ಜನಸಾಮಾನ್ಯರ ಹೊರಗಿನ ಇಳಿಸಲು ನಿರ್ಧರಿಸಿದ್ದು ಮುಂದಿನ ತಿಂಗಳಿನಿಂದ 14.2 ಕೆಜಿ ಸಿಲಿಂಡರ್ ನ ಬೆಲೆ 200 ರೂಪಾಯಿ ಹಾಗೂ ಉಜ್ವಲ ಯೋಜನೆಯ ಸಿಲಿಂಡರ್ ನ ಬೆಲೆಯನ್ನು 400 ರೂಪಾಯಿ ಕಡಿತಗೊಳಿಸುವುದಾಗಿ ನಿರ್ಧರಿಸಿದೆ.

ಈ ಯೋಜನೆಯ ಅಡಿಯಲ್ಲಿ ಬಳಕೆದಾರರ ಖಾತೆಗೆ ಸಬ್ಸಿಡಿಯ ರೂಪದಲ್ಲಿ ಹಣವನ್ನು ಜಮಾ ಮಾಡುವ ಬದಲಾಗಿ ಇಂಡಿಯನ್ ಆಯಿಲ್ ಅಥವಾ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಕಂಪನಿಗಳಿಗೆ ಸಬ್ಸಿಡಿಯ ರೂಪದಲ್ಲಿ ಹಣ ನೀಡಲು ಸರ್ಕಾರ ನಿರ್ಧಾರ ಮಾಡಿದೆ ಈ ಕುರಿತು ಕೇಂದ್ರದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಇನ್ನೊಂದು ಬಾರಿ ಚರ್ಚೆ ಮಾಡಿ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ದೊರಕಿದೆ ಏನೇ ಆಗಲಿ ಸಾಮಾನ್ಯ ಜನರಿಗೆ ಅಡುಗೆ ಇಂಧನದ ಬೆಲೆ ಕೈಗೆಟುಕುವಂತಾದರೆ ಅದು ತುಂಬಾ ಖುಷಿಯ ಸಮಾಚಾರ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!