ಸೋಮವಾರದ ದಿನ ಶಿವನಿಗೆ ಸಮರ್ಪಿತವಾಗಿದೆ. ಸೋಮವಾರ ಶಿವನನ್ನು ನಿಜವಾದ ಮನಸ್ಸಿನಿಂದ ಭಕ್ತಿಯಿಂದ ಪೂಜಿಸಿದರೆ, ಎಲ್ಲ ಕಷ್ಟಗಳೂ ವಿಮೋಚನೆಗೊಳ್ಳುತ್ತವೆ ಮತ್ತು ಎಲ್ಲಾ ಆಸೆಗಳನ್ನು ಶಿವ ಈಡೇರಿಸುತ್ತಾನೆ ಎಂದು ಹೇಳಲಾಗುತ್ತದೆ. ಶಿವನು ಯಾವಾಗಲೂ ತನ್ನ ಭಕ್ತರ ಮೇಲೆ ಕೃಪೆ ತೋರುತ್ತಾನೆ.
ಶಿವನನ್ನು ಮೆಚ್ಚಿಸಲು ಸೋಮವಾರ ಬೆಳಿಗ್ಗೆ ಎದ್ದು ಸ್ನಾನ ಮಾಡಿ ಶಿವನನ್ನು ಪೂಜಿಸಬೇಕು ಎಂದು ಹೇಳಲಾಗುತ್ತದೆ.

ಜನಿಸಿದವನು ಸಾಯಲೇಬೇಕು, ಅಂದರೆ ಯಾವುದು ಸೃಷ್ಟಿಸಲ್ಪಟ್ಟಿದೆಯೋ ಅದು ನಶಿಸಲೇಬೇಕು ಎಂದು ವೇದಗಳು ಹೇಳುತ್ತವೆ. ವೇದಗಳ ಪ್ರಕಾರ, ಈಶ್ವರ ಅಥವಾ ಪರಮಾತ್ಮನು ಅಜಾತ್ಮ, ಅದೃಶ್ಯ, ನಿರಾಕಾರ, ನಿರ್ಗುಣ ಮತ್ತು ನಿರಾಕಾರನಾಗಿರುತ್ತಾನೆ. ಅಜಾತ್ಮಾ ಎಂದರೆ ಜನ್ಮಿಸದಿರುವ ಹಾಗು ಮುಂದೆಯೂ ಜನಿಸದ ಎಂಬರ್ಥ. ಪ್ರಕಟ ಎಂದರೆ ಯಾವುದೇ ಗರ್ಭದಿಂದ ಜನಿಸದ, ಮತ್ತು ಸ್ವಯಂಭೂ ಪ್ರಕಟವಾದವನು, ಮತ್ತು ಅಪ್ರಕಟ ಎಂದರೆ ಸ್ವಯಂಭೂ ಪ್ರಕಟವಾಗದಿರುವನು.

ನಿರಾಕರ ಎಂದರೆ ಆಕಾರವಿಲ್ಲದವನು, ನಿರ್ಗುಣ ಎಂದರೆ ಯಾವುದೇ ರೀತಿಯ ಗುಣವಿಲ್ಲ, ನಿರ್ವಿಕಾರ ಎಂದರೆ ಯಾವುದೇ ರೀತಿಯ ವಿಕಾರ ಅಥವಾ ದೋಷವಿಲ್ಲ ಎಂದರ್ಥ. ಹಾಗಾದರೆ ಇಲ್ಲಿ ನಮಗೆ ಉದ್ಭವಿಸುವ ಪ್ರಶ್ನೆಯೆಂದರೆ ಶಿವ ಎಂದರೆ ಯಾರು? ಶಿವ ಯಾವುದೋ ರೂಪದಲ್ಲಿ ಜನಿಸರಬೇಕು ಅಥವ ಪ್ರಕಟವಾಗಿರಬೇಕು, ಹಾಗಿದ್ದಾಗ ಮಾತ್ರ ಶಿವನ ಮದುವೆಯಾಗಿರಬೇಕು.

ಶಿವ ಯಾವುದೋ ರೂಪದಲ್ಲಿ ಪ್ರಕಟವಾದಾಗ ಮಾತ್ರ ಅಸುರರಿಗೆ ವರದಾನ ಕೊಟ್ಟು ಹಾಗು ಹಲವಾರು ಅಸುರರನ್ನ ವಧಿಸಿರಬೇಕಲ್ಲವೇ? ನಾವು ಶಿವ ಎಂದಾಗ ಅದು ನಿರ್ವಿಕಾರ ಈಶ್ವರ ಎಂಬುದಾಗಿರುತ್ತದೆ. ನಾವು ಸದಾಶಿವ ಎಂದಾಗ ಅದು ಈಶ್ವರನು ಮಹಾನ್ ಆತ್ಮ ಎಂಬುದಾಗಿರುತ್ತದೆ ಹಾಗು ನಾವು ಶಂಕರ ಅಥವ ಮಹೇಶ ಎಂದು ಕರೆದರೆ ಅದು ಸತಿ ಅಥವ ಪಾರ್ವತಿಯ ಪತಿ ಮಹಾದೇವ ಎಂಬುದಾಗಿರುತ್ತದೆ.

ಮಹಾಶಿವ ಹುಟ್ಟಿದ್ದು ಹೇಗೆ ಮಹಾಶಿವನ ತಂದೆ-ತಾಯಿ ಯಾರು ಉಪರೂಕ್ತ ಮಹಾ ಪುರಾಣದಲ್ಲಿ ಶಿವನ ಜನನದ ಬಗ್ಗೆ ಕೊಟ್ಟಿರುವ ಮಾಹಿತಿ ಏನು ಎಲ್ಲವನ್ನೂ ಕೂಡ ಪರಿಪೂರ್ಣವಾಗಿ ತಿಳಿಯೋಣ. ನಮ್ಮ ಜಗತ್ತಿಗೆ ಮುಖ್ಯ ಕಾರಣವೆಂದರೆ ಅದು ತ್ರಿಮೂರ್ತಿಗಳು ತ್ರಿಮೂರ್ತಿಗಳ ಹುಟ್ಟಿನ ಬಗ್ಗೆ ಬೇರೆ ಬೇರೆ ಗ್ರಂಥ ಪುರಾಣಗಳು ಬೇರೆ-ಬೇರೆ ರೀತಿ ಹೇಳುತ್ತದೆ ವಿಷ್ಣುಪುರಾಣದ ಪ್ರಕಾರ ಸೃಷ್ಟಿಯ ಜನನವನ್ನು ವಿಷ್ಣು ಮಾಡಿದ್ದಾರೆ ಎಂದು ಹೇಳಲಾಗುತ್ತದೆ.

ಉಪರುಕ್ತ ಪುರಾಣದ ಪ್ರಕಾರ ಶಿವನ ಜನನ ಹೇಗಾಯಿತು ಇದರೊಂದಿಗೆ ಬ್ರಹ್ಮ ಮತ್ತು ವಿಷ್ಣುವಿನ ಜನನ ಹೇಗಾಯಿತು ಎಂದು ತಿಳಿಯೋಣ. ಮಹಾದೇವರನ್ನು ದೇವರ ದೇವ ಮಹಾದೇವ ಬೋಲೇನಾಥ ಶಂಕರ ಮಹೇಶ್ವರ ರುದ್ರ ನೀಲಕಂಠ ಹೀಗೆ ಅನೇಕ ಹೆಸರುಗಳಿಂದ ಕರೆಯುತ್ತಾರೆ. ತಂತ್ರಸಾರ ದಲ್ಲಿ ಶಿವನನ್ನು ಭೈರವ ಎಂದು ಕೂಡ ಕರೆಯುತ್ತಾರೆ. ಶಿವನು ಪ್ರತಿಯೊಬ್ಬ ಮನುಷ್ಯನ ಮನಸ್ಸನ್ನು ಮತ್ತು ಆತನ ಚೈತನ್ಯವನ್ನು ತಿಳಿಯುವ ಸಾಮರ್ಥ್ಯ ಇರುವವರು.

ಶಿವನ ಹೆಂಡತಿ ಪಾರ್ವತಿ ಮತ್ತು ಆತನ ಇಬ್ಬರು ಮಕ್ಕಳು ಕಾರ್ತಿಕೇಯ ಮತ್ತು ಗಣೇಶ ಶಿವನಿಗೆ ಒಬ್ಬ ಮಗಳು ಕೂಡ ಇದ್ದಾಳೆ. ಆಕೆಯ ಹೆಸರು ಅಶೋಕ ಸುಂದರಿ. ಶಿವನು ತನ್ನ ಹೆಚ್ಚಿನ ಸಮಯವನ್ನು ಧ್ಯಾನದ ಸ್ಥಿತಿಯಲ್ಲಿ ಕಳೆಯಲು ಇಚ್ಚಿಸುತ್ತಾರೆ. ಶಿವನು ಪಾರ್ವತಿಯನ್ನು ತನ್ನ ದೇಹದಿಂದ ಸೃಷ್ಟಿಸಿದರು ಮತ್ತು ಆಕೆಯನ್ನು ಹೆಂಡತಿಯಾಗಿ ಸ್ವೀಕರಿಸಿದರು ಏಕೆಂದರೆ ಶಿವನು ಪಾರ್ವತಿಯನ್ನು ತನ್ನ ದೇಹದ ಒಂದು ಅಂಗವಾಗಿ ಸೃಷ್ಟಿಸಿದರು.

ಶ್ರೀದೇವಿ ಮಹಾ ಪುರಾಣದಲ್ಲಿ ಶಿವನ ತಂದೆ ತಾಯಿಗಳ ಬಗ್ಗೆ ಒಂದು ಕಥೆಯಿದೆ. ಒಮ್ಮೆ ನಾರದ ಮುನಿಗಳು ತಮ್ಮ ತಂದೆಯಾದ ಬ್ರಹ್ಮನ ಬಳಿ ಒಂದು ಪ್ರಶ್ನೆಯನ್ನು ಕೇಳುತ್ತಾರೆ. ಈ ಸೃಷ್ಟಿಯನ್ನು ನೀವು ಮಹೇಶ್ವರ ಮತ್ತು ವಿಷ್ಣು ಮಾಡಿದಿರಾ ಎಂದು ಮತ್ತು ನಿಮ್ಮ ತಂದೆ-ತಾಯಿ ಯಾರು ಎಂದು ಕೇಳುತ್ತಾರೆ. ಆಗ ಬ್ರಹ್ಮ ತ್ರಿಮೂರ್ತಿಗಳ ಜನನದ ಬಗ್ಗೆ ತಿಳಿಸಲು ಪ್ರಾರಂಭಿಸುತ್ತಾರೆ. ದೇವಿ ದುರ್ಗ ಹಾಗೂ ಶಿವನ ಸ್ವರೂಪ ವಾಗಿರುವ ಕಾಲಕೇಯ ರಿಂದ ಬ್ರಹ್ಮ ವಿಷ್ಣು ಮಹೇಶ್ವರರ ಜನನವಾಯಿತು. ಪ್ರಕೃತಿ ಸ್ವರೂಪ ವಾಗಿರುವ ದುರ್ಗ ನಮ್ಮ ತಾಯಿ ಹಾಗೂ ಕಾಲ ಸದಾಶಿವ ನಮ್ಮೆಲ್ಲರ ತಂದೆ ಎಂದು ಹೇಳಲಾಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!