ಕರ್ನಾಟಕ ವಿದ್ಯುತ್ ಇಲಾಖೆಗೆ ನೇಮಕಾತಿ ಆರಂಭವಾಗಿದೆ. ಸಹಾಯಕ ಎಂಜಿನಿಯರ್ (ಎಇ) ಮತ್ತು ಜೂನಿಯರ್ ಎಂಜಿನಿಯರ್ಗಳನ್ನು ಈಗಾಗಲೇ ನೇಮಿಸಿ ಆದೇಶ ಹೊರಡಿಸಲಾಗಿದೆ. ಸರಿಸುಮಾರು 2,000 ಲೈನ್ಸ್ಮೆನ್ಗಳನ್ನು ನೇಮಿಸಿಕೊಳ್ಳಲು ಪ್ರಸ್ತುತ ಸಿದ್ಧತೆಗಳು ನಡೆಯುತ್ತಿವೆ, ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಈ ತಿಂಗಳ ಅಂತ್ಯದಲ್ಲಿ 2000 ಲೈನ್ಮೆನ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂಬುದಾಗಿ ಹೇಳಿದ್ದಾರೆ.
ಕ್ಷೇತ್ರದ ಜಿಲ್ಲಾ ಪ್ರತಿನಿಧಿಗಳೊಂದಿಗೆ ರಾಯಚೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಇಂಧನ ಸಚಿವರು: ‘‘ರಾಜ್ಯಾದ್ಯಂತ ಒಂದೇ ದಿನ ಲೈನ್ ಮ್ಯಾನ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಪ್ರಮುಖ ಅಂಶಗಳನ್ನು ಎತ್ತಿ ಹಿಡಿಯಲಾಗುವುದು. ಪಾರದರ್ಶಕತೆಗೆ ಒತ್ತು ನೀಡಲಾಗುತ್ತದೆ ಎಂದು ಹೇಳಿದರು
ವೈಟಿಪಿಎಸ್ ಹುದ್ದೆಗಳ ಭರ್ತಿಯಲ್ಲಿ ಸ್ಥಳೀಯ ನಿವಾಸಿಗಳಿಗೆ ಆದ್ಯತೆ ನೀಡಬೇಕು ಮತ್ತು 371ಜೆ ಪ್ರಕಾರ ಮೀಸಲಾತಿ ನೀಡಬೇಕು. ಆದರೆ, ನುರಿತ ಕೆಲಸಗಾರರ ಕೊರತೆಯಿಂದ ಸ್ಥಳೀಯರ ನೇಮಕ ಆಗುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗಾಗಿ ಎಷ್ಟು ಮಂದಿ ಬೇಕು ಎಂದು ನಿರ್ಧರಿಸಿ ಕೆಪಿಸಿಎಲ್ ಮೂಲಕ ಅಗತ್ಯಕ್ಕೆ ತಕ್ಕಂತೆ ತರಬೇತಿ ನೀಡಲು ಕ್ರಮಕೈಗೊಳ್ಳಲಾಗುವುದು ಎಂದರು.
ಈ ಹುದ್ದೆಗಳ ಪ್ರಕ್ರಿಯೆ ಹೇಗಿರಲಿದೆ
ವಿದ್ಯಾರ್ಹತೆ: SSLC ಪಾಸ್ ಆಗಿರಬೇಕು
ವಯೋಮಿತಿ: 18 ರಿಂದ 40 ವರ್ಷ ವಯೋಮಿತಿಯಲ್ಲಿ ಸಡಲಿಕೆ ಇರುತ್ತೆ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ ಕನ್ನಡ ಭಾಷೆಯನ್ನು ಓದಲು, ಬರೆಯಲು, ಮಾತನಾಡಲು ಗೊತ್ತಿರಬೇಕು. ಕಣ್ಣಿನ ದೃಷ್ಟಿ ಚೆನ್ನಾಗಿರಬೇಕು.
ಈ ಹುದ್ದೆಗಳ ಆಯ್ಕೆ ವಿಧಾನ
ಕರೆಂಟ್ ಕಂಬ ಹತ್ತುವುದು, ಹಾಗೂ ರನ್ನಿಂಗ್ ರೇಸ್, ದೈಹಿಕ ಪರೀಕ್ಷೆ, ಮೂಲ ದಾಖಲೆಗಳ ಪರಿಶೀಲನೆ, ವೈದ್ಯಕೀಯ ಪರೀಕ್ಷೆಗಳು ಇರುತ್ತವೆ. ಇನ್ನೂ 15 ದಿನಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ನೀಡಲಾಗುತ್ತೆ ಆಸಕ್ತರು ಅರ್ಜಿಸಲ್ಲಿಸಿ