ಎಲ್ಲರಿಗೂ ಜನ್ಮಕುಂಡಲಿಯನ್ನು ಬರೆಸಿರುತ್ತಾರೆ. ಒಬ್ಬರದು ಒಂದೊಂದು ರಾಶಿ ನಕ್ಷತ್ರ ಇರುತ್ತದೆ. ಅವರವರ ರಾಶಿ ನಕ್ಷತ್ರಗಳ ಪ್ರಕಾರ ಅವರ ನಡವಳಿಕೆ, ಇಷ್ಟಗಳನ್ನು ಹೇಳುತ್ತಾರೆ. ಹನ್ನೆರಡು ರಾಶಿಗಳಲ್ಲಿ ಒಂದಾದ ವೃಶ್ಚಿಕ ರಾಶಿಯ ವ್ಯಕ್ತಿಗಳ ಜೀವನದಲ್ಲಿ ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಷಯಗಳ ವಿವರ ಇಲ್ಲಿದೆ. ಹಾಗೆಯೇ ವೃಶಿಕ ರಾಶಿಯವರು ಪಾಲಿಸಬೇಕಾದ ಕೆಲವು ವಿಷಯಗಳು ಅಡಕವಾಗಿದೆ. ಮೊದಲನೆಯದಾಗಿ ವೃಶ್ಚಿಕ ರಾಶಿಯನ್ನು ಹೆಣ್ಣು ರಾಶಿ ಎಂದು ಕರೆಯುತ್ತಾರೆ. ಕುಜ, ಮಂಗಳ, ಭೌಮ ಇವುಗಳು ವೃಶ್ಚಿಕ ರಾಶಿಯ ರಾಶ್ಯಾಧಿಪತಿಗಳು. ಗ್ರಹಗಳಲ್ಲಿ ವೃಶ್ಚಿಕ ರಾಶಿಯಲ್ಲಿ ಕೇತುಗೆ ಉಚ್ಚ ಸ್ಥಾನವಿದೆ ಹಾಗೂ ನೀಚ ಸ್ಥಾನದಲ್ಲಿ ಚಂದ್ರ ಇದ್ದಾನೆ. ವೃಶ್ಚಿಕ ರಾಶಿಯಲ್ಲಿ ಉಚ್ಚ ಸ್ಥಾನಕ್ಕೆ ಸಮನಾದ ಗ್ರಹ ಸೂರ್ಯ. ಸಮನಾಗಲು ಕಾರಣ ಏನೆಂದರೆ ಕುಜ ಹಾಗೂ ಸೂರ್ಯ ಇಬ್ಬರದು ಅಗ್ನಿತತ್ವ. ವೃಶ್ಚಿಕ ರಾಶಿಯ ಮಿತ್ರ ಗ್ರಹಗಳು ಎಂದರೆ ಗುರು. ಕುಜ ಹಾಗೂ ಗುರು ಮಿತ್ರ ಗ್ರಹಗಳಾದರೆ ಗುರುಮಂಗಳ ಯೋಗ ಬರುತ್ತದೆ. ಹಾಗೆಯೇ ಶತ್ರು ಗ್ರಹ ಎಂದರೆ ಶನಿ ಹಾಗೂ ಬುಧ.
ಶನಿ, ಬುಧ ಎರಡು ವೃಶ್ಚಿಕ ರಾಶಿಯಲ್ಲಿ ಬಂದರೆ ಆ ರಾಶಿಯವರಿಗೆ ತುಂಬಾ ಕೆಟ್ಟದ್ದು ಆಗುವ ಸಂಭವ ಇರುತ್ತದೆ. ಇನ್ನೂ ವೃಶ್ಚಿಕ ರಾಶಿಯವರಿಗೆ ಉತ್ತರ ದಿಕ್ಕು ಇಷ್ಟವಾದ ದಿಕ್ಕು. ವೃಶ್ಚಿಕ ರಾಶಿಯವರ ಸ್ವಭಾವ ಸ್ಥಿರವಾಗಿರುತ್ತದೆ. ವೃಶ್ಚಿಕ ರಾಶಿಯಲ್ಲಿ ಕುಜನಿಗೆ ಪ್ರಿಯವಾದ ಶರೀರದ ಭಾಗ ಎಂದರೆ ಮೂತ್ರಕೋಶ. ಹೆಣ್ಣು ಮಕ್ಕಳಲ್ಲಿ ಗರ್ಭಕೋಶ. ಇವರಿಗೆ ಹೊಂದುವ ರಾಶಿ ಕಲ್ಲು ಹವಳವಾಗಿರುತ್ತದೆ. ಇನ್ನೂ ಯಾವ ದೇವರನ್ನು ಆರಾಧಿಸಬೇಕು ಎಂಬ ಪ್ರಶ್ನೆಗೆ ಉತ್ತರ ಸುಬ್ರಹ್ಮಣ್ಯ ಸ್ವಾಮಿ ಹಾಗೂ ದುರ್ಗಾದೇವಿ ಈ ಇಬ್ಬರು ದೇವತೆಗಳ ಆರಾಧನೆಯಿಂದ ಬಯಸಿದ್ದನ್ನು ಪಡೆಯಬಹುದಾಗಿದೆ. ವೃಶ್ಚಿಕ ರಾಶಿಯವರು ಹಳ್ಳಿ ಹಾಗೂ ನೀರು ಹೆಚ್ಚಾಗಿರುವಂತಹ ಪ್ರದೇಶವನ್ನು ಅತಿ ಹೆಚ್ಚು ಇಷ್ಟಪಡುತ್ತಾರೆ. ವೃಶ್ಚಿಕ ರಾಶಿ ಕುಜ ಗ್ರಹದ ಬಣ್ಣ ಕೆಂಪು. ವೃಶ್ಚಿಕ ರಾಶಿಯು ವಿಶಾಖ ನಕ್ಷತ್ರದ ನಾಲ್ಕನೆ ಪಾದ, ಅನುರಾಧ ನಕ್ಷತ್ರದ ನಾಲ್ಕು ಪಾದಗಳು ಹಾಗೂ ಜೇಷ್ಠ ನಕ್ಷತ್ರದ ನಾಲ್ಕು ಪಾದಗಳು ಇವಿಷ್ಟು ಇದರ ಅಡಿಯಲ್ಲಿ ಬರುತ್ತದೆ. ವೃಶ್ಚಿಕ ರಾಶಿಯ ಗ್ರಹ ಸಂಖ್ಯೆ ಒಂಬತ್ತು. ಇದು ವೃಶ್ಚಿಕ ರಾಶಿಯ ಅದೃಷ್ಟ ಸಂಖ್ಯೆ ಎಂದು ಕರೆಯುತ್ತಾರೆ. ವೃಶ್ಚಿಕ ರಾಶಿಯವರು ಶೀತ ಹಾಗೂ ಉಷ್ಣ ವಾತಾವರಣವನ್ನು ಇಷ್ಟ ಪಡುತ್ತಾರೆ.
ವೃಶ್ಚಿಕ ರಾಶಿಯವರು ಎದುರಿಸಬಹುದಾದ ಆರೋಗ್ಯ ಸಮಸ್ಯೆಗಳು ಯಾವವು ಎಂದರೆ ಮಂಡಿ ಸಮಸ್ಯೆ, ಹೆಣ್ಣು ಮಕ್ಕಳಿಗೆ ಹೆಚ್ಚಾಗಿ ಥೈರಾಯ್ಡ್ ಸಮಸ್ಯೆ, ಗಂಡು ಮಕ್ಕಳಿಗೆ ಮಧುಮೇಹ ಹಾಗೂ ಮೂತ್ರ ಕೋಶದ ತೊಂದರೆಗಳು, ವಾಂತಿಗಳು ಕಾಡಬಹುದು. ಇನ್ನೂ ವೃಶ್ಚಿಕ ರಾಶಿಯವರ ಗುಣಗಳ ವಿಷಯಕ್ಕೆ ಬಂದರೆ ಇವರು ಬುದ್ದಿವಂತರು, ಇರುವವರಿಂದ ಕಿತ್ತು ಇಲ್ಲದವರಿಗೆ ನೀಡುವಂತಹ ಸ್ವಾರ್ಥ ಇರುವವರಾಗಿರುತ್ತಾರೆ. ಇನ್ನೂ ವೃಶ್ಚಿಕ ರಾಶಿಯವರು ಉದ್ಯೋಗದ ವಿಷಯದಲ್ಲಿ ಯಾವ ಉದ್ಯೋಗವನ್ನು ಆರಿಸಿಕೊಳ್ಳಬಹುದು. ಯಾವ ಕೆಲಸ ಕೊಟ್ಟರು ಚೆನ್ನಾಗಿ ನಿಭಾಯಿಸುವ ಶಕ್ತಿ ಹೊಂದಿರುತ್ತಿರಿ. ವೃಶ್ಚಿಕ ರಾಶಿಯವರು ತುಂಬ ಇಷ್ಟ ಪಡುವ ರುಚಿ ಉಪ್ಪು, ಹುಳಿ, ಕಾರ.. ವೃಶ್ಚಿಕ ರಾಶಿಗೆ ಹೊಂದಿರುವ ತತ್ವ ಜಲತತ್ವ. ಇವಿಷ್ಟು ವೃಶ್ಚಿಕ ರಾಶಿಯವರ ಸ್ವಭಾವ ಹಾಗೂ ಹೊಂದುವ ಇಪ್ಪತ್ತೆರಡು ವಿಷಯಗಳಾಗಿವೆ.