ನಮ್ಮ ದೇಶದಲ್ಲಿ ಜನರ ನಂಬಿಕೆ ಗಳಿಸಿರುವ ಸಂಸ್ಥೆ LIC ಸಂಸ್ಥೆ ಆಗಿದೆ. ಇಲ್ಲಿ ದೇಶದ ಸಾಮಾನ್ಯ ಜನರಿಗೆ ಸಾಕಷ್ಟು ಜನರಿಗೆ ಸಾಕಷ್ಟು ಪಾಲಿಸಿಗಳನ್ನು ಪರಿಚಯಿಸಲಾಗುತ್ತಿದೆ. ಈ ಸಂಸ್ಥೆಯಲ್ಲಿ ಪಾಲಿಸಿ ಖರೀದಿ ಮಾಡಿದರೆ ಹಣಕ್ಕೂ ಸುರಕ್ಷತೆ ಇರುತ್ತದೆ. ಕೆಲಸ ಮಾಡುತ್ತಿರುವವರು ತಮಗೆ ಸೂಕ್ತ ಅಗುವಂಥ ಅಥವಾ ಮಕ್ಕಳಿಗೆ ಸೂಕ್ತ ಆಗುವ ಹಾಗೆ ಹಲವು ಪಾಲಿಸಿಗಳು ಇದ್ದು ಜನರು ಅವುಗಳನ್ನು ಕಟ್ಟಿ, ಪಾಲಿಸಿ ಮೆಚ್ಯುರ್ ಆದ ನಂತರ ದೊಡ್ಡ ರಿಟರ್ನ್ಸ್ ಪಡೆಯುತ್ತಾರೆ ಹಾಗೆಯೇ ತಮ್ಮ ಮುಂದಿನ ಜೀವನಕ್ಕೆ ಅಥವಾ ಮಕ್ಕಳ ಭವಿಷ್ಯಕ್ಕೆ ಬಳಸಿಕೊಳ್ಳುತ್ತಾರೆ.

ಜನರ ವಿಶ್ವಾಸ ಮತ್ತು ನಂಬಿಕೆ ಗಳಿಸಿರುವ LIC ಸಂಸ್ಥೆ ಶುರುವಾಗಿ 67 ವರ್ಷಗಳು ಪೂರೈಸುತ್ತದೆ. ಈ ವೇಳೆ ಸಂಸ್ಥೆಯಲ್ಲಿ ಈಗ ಸುಮಾರು 27.74 ಗ್ರಾಹಕರು ಇದ್ದಾರೆ. ಈ ವೇಳೆ LIC ಅಧ್ಯಕ್ಷರು ತಮ್ಮ ಗ್ರಾಹಕರ ಬಗ್ಗೆ ಸಂತೋಷ ವ್ಯಕ್ತಪಡಿಸಿ ಮಾತನಾಡಿದ್ದು, 67ನೇ ವರ್ಷದ ವಾರ್ಷಿಕೋತ್ಸವದ ವೇಳೆ ಗ್ರಾಹಕರಿಗೆ ಒಂದು ಗುಡ್ ನ್ಯೂಸ್ ನೀಡಿದ್ದಾರೆ. ಅಧ್ಯಕ್ಷರು ಮಾತನಾಡಿ, “ನಮ್ಮ ಸಂಸ್ಥೆಯು ಜನರ ನಂಬಿಕೆ ಗಳಿಸಿದೆ. ಶೇರ್ ಪಡೆದಿರುವವರು, ಪಾಲಿಸಿ ಪಡೆದಿರುವವರು, ಕೆಲಸ ಮಾಡುತ್ತಿರುವವರು ಸಾಕಷ್ಟು ವರ್ಷಗಳಿಂದ ನಮ್ಮ ಜೊತೆಗೆ ಇದ್ದಾರೆ.

LIC ಯ ಈ ಪ್ರಯಾಣ ಸಾಮಾನ್ಯವಾಗಿ ಇರಲಿಲ್ಲ, ಬಹಳ ವರ್ಷಗಳ ಶ್ರಮವಿದು. ಈ ಸಮಯದಲ್ಲಿ ನಮಗೆ ಸಹಕರಿಸಿದ ಎಲ್ಲರಿಗೂ ವಂದನೆಗಳು ಎಂದು LIC ಸಂಸ್ಥೆಯ ಅಧ್ಯಕ್ಷ ಸಿದ್ಧಾರ್ಥ್ ಮೊಹಾಂತಿ ಅವರು ಹೇಳಿದ್ದಾರೆ. LIC ಪಾಲಿಸಿಗಳನ್ನು ಬಹಳಷ್ಟು ಜನರು ಖರೀದಿ ಮಾಡುತ್ತಾರೆ ಅವರುಗಳು ಎದುರಿಸುವ ಸಮಸ್ಯೆ ಒಂದೇ ಸಮಸ್ಯೆ ಆಗಿರುತ್ತದೆ. ಅದೇನು ಎಂದರೆ, ಪಾಲಿಸಿ ಖರೀದಿ ಮಾಡುವಾಗ ಅವರಿಗೆ ಅನುಕೂಲ ಆಗುವ ಹಾಗೆಯೇ ಪ್ರೀಮಿಯಂ ಕಟ್ಟುವ ಅವಧಿಯನ್ನು ತಿಂಗಳಿಗೆ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ ಆಯ್ಕೆ ಮಾಡಿಕೊಂಡಿರುತ್ತಾರೆ.

ಆದರೆ ಕೆಲವೊಮ್ಮೆ ಕಾರಣಾಂತರಗಳಿಂದ ಪ್ರೀಮಿಯಂ ಹಣವನ್ನು ಕಟ್ಟಲು ಆಗಿರುವುದಿಲ್ಲ. ಆಗ ಗ್ರಾಹಕರಿಗೆ 30 ದಿನಗಳ ಗ್ರೇಸ್ ಸಮಯ ಕೊಡಲಾಗುತ್ತದೆ. ಆ ವೇಳೆ ಕೂಡ ಪ್ರೀಮಿಯಂ ಕಟ್ಟದೇ ಇದ್ದು 2 ಅಥವಾ 3 ಪ್ರೀಮಿಯಂ ಕಟ್ಟದೆ ಹೋದರೆ ಪಾಲಿಸಿಯನ್ನು ಲ್ಯಾಪ್ಸ್ ಮಾಡಿಬಿಡುತ್ತಾರೆ. ಇದರಿಂದ ಪಾಲಿಸಿ ಖರೀದಿ ಮಾಡಿದ ಗ್ರಾಹಕರಿಗೆ ತೊಂದರೆ ಆಗುತ್ತಿತ್ತು. ಆದರೆ ಈಗ LIC ಈ ಎಲ್ಲಾ ಗ್ರಾಹಕರಿಗೆ ಒಂದು ಗುಡ್ ನ್ಯೂಸ್ ನೀಡಿದೆ..

ಇನ್ನುಮುಂದೆ ಈ ರೀತಿ ಆದರೆ ಫೈನ್ ಕಟ್ಟಿ ಜೊತೆಗೆ ಪ್ರೀಮಿಯಂ ಹಣವನ್ನು ಕಟ್ಟಿ ಮತ್ತೆ ತಮ್ಮ ಪಾಲಿಸಿಯನ್ನು ಶುರು ಮಾಡಬಹುದು. ಈ ಅವಕಾಶವನ್ನು ಸೆಪ್ಟೆಂಬರ್ ತಿಂಗಳಿನಿಂದ ಗ್ರಾಹಕರಿಗೆ ನೀಡಲಾಗುತ್ತಿದೆ. ನೀವು LIC ಆಫೀಸ್ ಗೆ ಭೇಟಿ ನೀಡಿ ಅಥವಾ LIC ಏಜೆನ್ಟ್ ಅನ್ನು ಭೇಟಿ ಮಾಡಿ ಇದನ್ನು ಸರಿಮಾಡಿಕೊಳ್ಳಬಹುದು. ಒಂದು ವೇಳೆ ನೀವು ಖರೀದಿ ಮಾಡಿರುವ ಪಾಲಿಸಿ 3 ಲಕ್ಷದ ಪಾಲಿಸಿ ಆಗಿದ್ದರೆ ಅದಕ್ಕೆ ನೀವು 30% ಫೈನ್ ಕಟ್ಟಬೇಕಾಗುತ್ತದೆ. LIC ವೆಬ್ಸೈಟ್ ನಲ್ಲಿ ಕೂಡ ಈ ವಿಷಯದ ಬಗ್ಗೆ ಪೂರ್ತಿ ಮಾಹಿತಿ ಪಡೆಯಬಹುದು.

ಇದನ್ನೂ ಓದಿ: ಗೃಹಲಕ್ಷ್ಮಿಯರೆ, ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿ ಇನ್ನೂ ಬಂದಿಲ್ವಾ? ಇಲ್ಲಿ ಗಮನಿಸಿ

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!