ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕ ಯುವತಿಯರಿಗೆ, ಬೆಂಗಳೂರು ನಗರದ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತ್ ನಲ್ಲಿ ಖಾಲಿ ಇರುವ ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ವ್ಯವಸ್ಥಾಪಕರ ಹುದ್ದೆಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ, ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗ ಪಡೆದುಕೊಳ್ಳಲಿ. ಪ್ರತಿದಿನ ಜಾಬ್ ನ್ಯೂಸ್ ಸೇರಿದಂತೆ ಉಪಯುಕ್ತ ಮಾಹಿತಿಯನ್ನು ತಿಳಿಯಲು ಮರೆಯದೆ ನಮ್ಮ ವಾಟ್ಸಾಪ್ ಹಾಗೂ ಟೆಲಿಗ್ರಾಮ್ ಚಾನೆಲ್ ಸೇರಿ.
ಹುದ್ದೆಗಳ ವಿವರ ಹೀಗಿದೆ:
ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರ
ಉದ್ಯೋಗ ಸ್ಥಳ: ಬೆಂಗಳೂರು
ವಿದ್ಯಾರ್ಹತೆ: PUC ಹಾಗೂ ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ನಲ್ಲಿ ಪ್ರಮಾಣ ಪತ್ರ ಪಡೆದಿರತಕ್ಕದ್ದು ಹಾಗೂ ಕನಿಷ್ಠ 03 ತಿಂಗಳು ಕಂಪ್ಯೂಟರ್ ಕೋರ್ಸನಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ: ಕನಿಷ್ಠ 18 ರಿಂದ 35 ವರ್ಷ ಮೀಸಲಾತಿ ಇರುವವರಿಗೆ ವಯೋಮಿತಿಯಲ್ಲಿ ಸಡಲಿಕೆ ಇರುತ್ತದೆ.
ವೇತನ: ಈ ಹುದ್ದೆಗೆ 15196/-
ಅರ್ಜಿಶುಲ್ಕ: ಈ ಹುದ್ದೆಗೆ ಅರ್ಜಿಶುಲ್ಕ ಇರೋದಿಲ್ಲ
ಆಯ್ಕೆ ವಿಧಾನ: ಈ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲು ಶೈಕ್ಷಣಿಕ ಅರ್ಹತೆಯಲ್ಲಿನ ಮೆರಿಟ್ ಮತ್ತು ರೋಸ್ಟರ್ ಮೀಸಲಾತಿ ಆಧಾರದ ಮೇಲೆ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುವುದು.
ಅರ್ಜಿಸಲ್ಲಿಸುವ ವಿಧಾನ: ಈ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಆಯಾ ಗ್ರಾಮಪಂಚಾಯ್ತಿಗೆ ಅರ್ಜಿಸಲ್ಲಿಸಬೇಕಾಗುತ್ತದೆ.
ಹುದ್ದೆಗಳ ಸಂಖ್ಯೆ ಹೀಗಿದೆ:
ಕಿತ್ತಗನೂರು 1
ಮೀನುಕುಂಟೆ 1
ಅರಕೆರೆ 1
ಅಡಕಮಾರನಹಳ್ಳಿ 1
ತಾವರೆಕೆರೆ 1
ಸೂಲಿಕೆರೆ 1
ಅರ್ಜಿಸಲ್ಲಿಸುವ ಪ್ರಮುಖ ದಿನಾಂಕ:
ಪ್ರಾರಂಭ ದಿನಾಂಕ -25 ಜುಲೈ 2024
ಕೊನೆಯ ದಿನಾಂಕ – 13 ಆಗಸ್ಟ್ 2024
ಈ ಹುದ್ದೆಯ ಅಧಿಸೂಚನೆ PDF