ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ತುಲಾ ರಾಶಿಯವರ ಅಕ್ಟೋಬರ್ ತಿಂಗಳ ಮಾಸ ಭವಿಷ್ಯವನ್ನು ತಿಳಿಯೋಣ.

ತುಲಾ ರಾಶಿಯಲ್ಲಿ ಶುಕ್ರ ಗ್ರಹ ಸಂಚಾರ ಮಾಡುತ್ತಿರುವ ಕಾರಣ ಉತ್ತಮ ಫಲಗಳನ್ನು ಈ ರಾಶಿಯವರು ಪಡೆದುಕೊಳ್ಳುವರು. ಶುಕ್ರ ಗ್ರಹ ಧನ ಸ್ಥಾನಕ್ಕೆ ಸಂಚಾರ ಮಾಡುವ ಕಾರಣ ನಂತರದ ದಿನಗಳಲ್ಲಿ ಮಿಶ್ರ ಫಲ ದೊರಕುತ್ತದೆ. ರವಿ ಗ್ರಹ, ಬುಧ ಗ್ರಹ ಮತ್ತು ಕೇತು ಗ್ರಹ ಮೂರು ಗ್ರಹಗಳ ಸಂಯೋಗದಿಂದ ಎಷ್ಟೋ ವಿಚಾರಗಳಲ್ಲಿ ಬದಲಾವಣೆ ಆಗುತ್ತದೆ. ಮಂಗಳ ಗ್ರಹದ ಸಂಚಾರದಿಂದ ಹಣಕಾಸಿನ ವಿಚಾರದಲ್ಲಿ ಏರುಪೇರು ಉಂಟಾಗುತ್ತದೆ. ಗುರು ಗ್ರಹದ ಸಂಸಾರದಿಂದ ಕೆಲವು ಮಿಶ್ರಫಲ ಮತ್ತು ಆಕಸ್ಮಿಕ ಬದಲಾವಣೆ ಉಂಟಾಗುತ್ತದೆ.

ಸಮಾಜದಲ್ಲಿ ಹೆಚ್ಚಿನ ಪ್ರತಿಷ್ಠೆ ಗೌರವ ಮತ್ತು ಗೆಲುವು ಪಡೆಯಬೇಕು ಎಂದರೆ ಖರ್ಚು ವೆಚ್ಚ ಹೆಚ್ಚಾಗುತ್ತದೆ ಮತ್ತು ಕೆಲವು ತ್ಯಾಗಗಳನ್ನು ಸಹ ಮಾಡಬೇಕಾಗುತ್ತದೆ.  ಹಣಕಾಸಿನ ವಿಚಾರವಾಗಿ ಅಕ್ಟೋಬರ್ ತಿಂಗಳ ಆರಂಭದಲ್ಲಿ ಏರುಪೇರು ಎದುರಾಗುತ್ತದೆ.

ಹಾಕಿರುವ ಯೋಜನೆಗಳಲ್ಲಿ ಕೆಲವು ಬದಲಾವಣೆಗಳನ್ನು ತಂದು ಕೊಳ್ಳಬೇಕಾಗುತ್ತದೆ ಇನ್ನು, ಕೆಲವು ವಿಚಾರಗಳಲ್ಲಿ ತುಲಾ ರಾಶಿಯವರು ಅಕ್ಟೋಬರ್ ತಿಂಗಳ ಆರಂಭದಲ್ಲಿ ತೊಂದರೆಗಳನ್ನು ಅನುಭವಿಸ ಬೇಕಾಗುತ್ತದೆ.

ವ್ಯಾಪಾರ ವ್ಯವಹಾರದಲ್ಲಿ ಸ್ವಲ್ಪ ವಿಳಂಬವಾಗಿ ಹಣಕಾಸು ಬರುತ್ತದೆ. ಸ್ನೇಹಿತರು ಹಿತೈಷಿಗಳ ಮಾರ್ಗದರ್ಶನ ಮಾತುಗಳು ತುಲಾ ರಾಶಿಯ ಜನರಿಗೆ ಹೆಚ್ಚು ಉಪಯೋಗ ತಂದು ಕೊಡುತ್ತದೆ. ಅಕ್ಟೋಬರ್ ತಿಂಗಳ ಆರಂಭದಲ್ಲಿ ಯಾವುದೇ ಕೆಲಸ ಕಾರ್ಯಗಳಲ್ಲಿ ವಿಳಂಬ ಮತ್ತು ಏರಿಳಿತವನ್ನು ಕಾಣಬಹುದು ನಂತರದ ದಿನಗಳಲ್ಲಿ ಒಳ್ಳೆಯ ಪ್ರಗತಿಯನ್ನು ಸಾಧಿಸಲು ಸಾಧ್ಯವಿದೆ.

ತುಲಾ ರಾಶಿಯವರು ವಾಹನದ ವಿಚಾರದಲ್ಲಿ, ಭೂಮಿ ವಿಚಾರವಾಗಿ ತೃಪ್ತಿಕರವಾದ ನಿರ್ಧಾರಗಳನ್ನು ಮಾಡಬಹುದು. ವ್ಯಾಪಾರ ವ್ಯವಹಾರಗಳಲ್ಲಿ ಸಹ ಅನುಕೂಲಗಳನ್ನು ನೋಡುವ ಸಾಧ್ಯತೆ ಇದೆ. ಪತಿ ಪತ್ನಿಯರ ನಡುವೆ ಸಹಕಾರ ಹೆಚ್ಚಾಗುತ್ತದೆ ಮತ್ತು ಬಾಂಧವ್ಯ ಇನ್ನಷ್ಟು ಗಟ್ಟಿಯಾಗುತ್ತದೆ.

ನೂತನ ವ್ಯಾಪಾರ ಆರಂಭ ಮಾಡಲು ಅಕ್ಟೋಬರ್ ತಿಂಗಳು ತುಲಾ ರಾಶಿಯ ಜನರಿಗೆ ಉತ್ತಮ. ಉದ್ಯೋಗದಲ್ಲಿರುವ ತುಲಾ ರಾಶಿಯ ಜನರಿಗೆ ಕೆಲಸದಲ್ಲಿ ಅತಿಯಾದ ಒತ್ತಡ ಕಾಡಬಹುದು. ಹೊಸ ವೃತ್ತಿಯನ್ನು ಹುಡುಕಾಟ ಮಾಡುವ ಬದಲು ಇರುವ ವೃತ್ತಿಯಲ್ಲಿ ಮುಂದುವರೆಯುವುದು ತುಲಾ ರಾಶಿಯವರಿಗೆ ಉತ್ತಮ ಆಯ್ಕೆ.

ಆಧ್ಯಾತ್ಮದಲ್ಲಿ ತುಲಾ ರಾಶಿಯ ಜನರಿಗೆ ಈ ತಿಂಗಳಿನಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ದೇವತಾ ಕಾರ್ಯಗಳಿಗಾಗಿ ಹಣವನ್ನು ಖರ್ಚು ಮಾಡುವ ಸಾಧ್ಯತೆ ಈ ರಾಶಿಯವರಿಗೆ ಅಕ್ಟೋಬರ್ ತಿಂಗಳಿನಲ್ಲಿ ಇದೆ. ದಶಮ ಸ್ಥಾನಕ್ಕೆ ಹೋಗುವ ಮಂಗಳ ಗ್ರಹ ಹಣಕಾಸಿನ ವಿಚಾರವಾಗಿ ತುಲಾ ರಾಶಿಯವರಿಗೆ ಒಳ್ಳೆಯ ಪ್ರಗತಿಯನ್ನು ನೀಡುವನು.

ಸುಮಾರು ವ್ಯಾಜ್ಯಗಳನ್ನು ಪರಿಹಾರ ಮಾಡಿಕೊಳ್ಳುವ ಸಾಧ್ಯತೆ ತುಲಾ ರಾಶಿಯ ಜನರಿಗೆ ಅಕ್ಟೋಬರ್ ತಿಂಗಳಿನಲ್ಲಿ ಇದೆ. ಕೋರ್ಟ್ ವ್ಯವಹಾರಗಳಿಂದ ದೂರ ಇರುವುದು ಈ ರಾಶಿಯವರಿಗೆ ಒಳ್ಳೆಯದು. ಆರೋಗ್ಯದ ವಿಚಾರವಾಗಿ ಹೆಚ್ಚಿನ ಗಮನವನ್ನು ವಹಿಸಬೇಕಾಗುತ್ತದೆ. ರವಿ ರಾಶಿಯಿಂದ ಸಂಚಾರವಾದ ನಂತರ ದೃಷ್ಟಿ ದೋಷ, ಕೂದಲು ಉದುರುವುದು, ಬ್ಯಾಕ್ ಪೈನ್, ಬ್ಲಾಡರ್ಗೆ ಸಂಬಂಧಪಟ್ಟ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಪರಿಹಾರಗಳು :-ಬುಧ ಗ್ರಹಕ್ಕೆ ಪರಿಹಾರ ಪ್ರತಿ ಬುಧವಾರ ವಿಷ್ಣು ಸಹಸ್ರ ನಾಮ ಪಾರಾಯಣ ಮಾಡಬೇಕು. ಬುಧ ಗ್ರಹಕ್ಕೆ ತುಳಸಿ ಮಾಲೆಯಿಂದ ಅರ್ಚನೆ ಮಾಡಿಸಬೇಕು. ಕೇತು ಗ್ರಹಕ್ಕೆ ಪರಿಹಾರ ಪ್ರತಿ ಮಂಗಳವಾರ ಗಣಪತಿ ಆರಾಧನೆ ಮಾಡುವುದು ಮತ್ತು ಉರುಳಿ ಕಾಳನ್ನು ದಾನವಾಗಿ ಕೊಡುವುದು. ಈ ತಿಂಗಳಿನಲ್ಲಿ ಶುಕ್ರ ಗ್ರಹದ ರತ್ನವನ್ನು ಧರಿಸುವುದರಿಂದ ಉತ್ತಮ ಫಲಗಳು ಲಭಿಸುತ್ತದೆ. ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!