Libra Horoscope October 2023: ದ್ವಾದಶ ರಾಶಿಗಳಲ್ಲಿ ಪ್ರಮುಖ ರಾಶಿಯಾದ ತುಲಾ ರಾಶಿಯು ತನ್ನದೆ ಆದ ಸ್ಥಾನವನ್ನು ಹೊಂದಿದೆ. ಒಂದೊಂದು ರಾಶಿಯಲ್ಲಿ ಜನಿಸಿದವರು ಆಯಾ ರಾಶಿಗೆ ತಕ್ಕಂತೆ ಗುಣ ಸ್ವಭಾವಗಳನ್ನ ಹೊಂದಿರುತ್ತಾರೆ. ತುಲಾ ರಾಶಿಯವರ ಅಕ್ಟೋಬರ್ ತಿಂಗಳಿನ ಮಾಸ ಭವಿಷ್ಯ ಗ್ರಹಗಳ ಚಲನೆ ಅದರ ಪರಿಣಾಮಗಳು ಹಾಗೂ ಉದ್ಯೋಗ ಶಿಕ್ಷಣ ಮದುವೆ ಕೌಟುಂಬಿಕ ವಿಚಾರ ಅಷ್ಟೆ ಅಲ್ಲದೆ ಪರಿಹಾರ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ಮಾಸ ಭವಿಷ್ಯ ನೋಡುವಾಗ ಗ್ರಹಗಳ ಸಂಚಾರದ ಬಗ್ಗೆ ತಿಳಿಯಬೇಕು. ಅಕ್ಟೋಬರ್ ತಿಂಗಳಿನ 1 ನೆ ತಾರೀಖಿನಂದು ಬುಧ ಗ್ರಹ ಕನ್ಯಾ ರಾಶಿಯನ್ನು ಪ್ರವೇಶ ಮಾಡುತ್ತಾನೆ, ಶುಕ್ರ ಗ್ರಹ ಸಿಂಹ ರಾಶಿಗೆ ಪ್ರವೇಶ ಮಾಡುತ್ತಾನೆ, ಈ ತಿಂಗಳ 3 ನೇ ತಾರೀಖಿನಂದು ಕುಜ ಗ್ರಹ ತುಲಾ ರಾಶಿಯನ್ನು ಪ್ರವೇಶ ಮಾಡಲಿದ್ದಾರೆ ಅಕ್ಟೋಬರ್ 18 ನೆ ತಾರೀಖಿನಂದು ರವಿ ಗ್ರಹ ಹಾಗೂ ಬುಧ ಗ್ರಹ ತುಲಾ ರಾಶಿಯನ್ನು ಪ್ರವೇಶ ಮಾಡುತ್ತಾರೆ, ಮುಖ್ಯವಾಗಿ ಈ ತಿಂಗಳಿನ 30ನೆ ತಾರೀಖಿನಂದು ರಾಹು ಗ್ರಹ ಮೀನ ರಾಶಿಗೆ ಕೇತು ಗ್ರಹ ಕನ್ಯಾ ರಾಶಿಗೆ ಪ್ರವೇಶ ಮಾಡುತ್ತಾರೆ. ಮೊದಲಿಗೆ ಅಕ್ಟೋಬರ್ ತಿಂಗಳಿನ ತುಲಾ ರಾಶಿಯವರ ಸಾಮಾನ್ಯ ಫಲಗಳ ಬಗ್ಗೆ ನೋಡುವುದಾದರೆ ತುಲಾ ರಾಶಿಯವರು ಅಕ್ಟೋಬರ್ ತಿಂಗಳಿನಲ್ಲಿ ಆರೋಗ್ಯದ ವಿಷಯದಲ್ಲಿ ಬಹಳ ಜಾಗರೂಕತೆಯಿಂದ ಇರಬೇಕು. ವಾತ ಮತ್ತು ಪಿತ್ತಕ್ಕೆ ಸಂಬಂಧಿಸಿದ ರೋಗಗಳು ಕಂಡುಬರುವ ಸಾಧ್ಯತೆ ಇದೆ.
ಅಕ್ಟೋಬರ್ ತಿಂಗಳಲ್ಲಿ ತುಲಾ ರಾಶಿಯವರ ಮನಸ್ಸು ಗೊಂದಲಮಯವಾಗಿರುತ್ತದೆ ಯಾವುದೆ ವಿಷಯದ ಬಗ್ಗೆ ದೃಢ ನಿರ್ಧಾರ ಮಾಡಲು ಆಗದೆ ಐದೈದು ನಿಮಿಷಕ್ಕೆ ಒಂದೊಂದು ನಿರ್ಧಾರ ಮಾಡುವ ಮನಸ್ಥಿತಿ ಕಂಡುಬರುತ್ತದೆ ಆದ್ದರಿಂದ ತುಲಾ ರಾಶಿಯವರು ಆದಷ್ಟು ಧ್ಯಾನ ಮಾಡಬೇಕು, ದೇವರ ಧ್ಯಾನ ಮಾಡುವುದು ದೇವಸ್ಥಾನಗಳಿಗೆ ಭೇಟಿ ನೀಡುವುದು ಇವುಗಳನ್ನು ಮಾಡುವುದರಿಂದ ಮನಸ್ಸನ್ನು ಶಾಂತಮಯವಾಗಿ ಇಟ್ಟುಕೊಳ್ಳಬಹುದು. ತುಲಾ ರಾಶಿಯ ಅವಿವಾಹಿತರಿಗೆ ಅಕ್ಟೋಬರ್ ತಿಂಗಳಿನಲ್ಲಿ ವಿವಾಹ ಯೋಗ ಬರುವ ಸಾಧ್ಯತೆ ಇದೆ.
Libra Horoscope October 2023
ಅಕ್ಟೋಬರ್ ತಿಂಗಳಲ್ಲಿ ಹಣಕಾಸಿನ ಆಗಮನಕ್ಕೆ ಯಾವುದೆ ಸಮಸ್ಯೆ ಇಲ್ಲ. ತುಲಾ ರಾಶಿಯವರ ಬಂಧುಗಳಿಂದ ಅಕ್ಟೋಬರ್ ತಿಂಗಳಿನಲ್ಲಿ ತೊಂದರೆಗಳು ಆಗಬಹುದು ಕೆಲವು ದುಷ್ಟ ಜನರಿಂದ ಸಮಸ್ಯೆಗಳನ್ನು ಎದುರಿಸ ಬೇಕಾಗಬಹುದು ಆದ್ದರಿಂದ ಇದರ ಬಗ್ಗೆ ಸ್ವಲ್ಪ ಜಾಗರೂಕರಾಗಿರಬೇಕು. ರಾಹು ಗ್ರಹ ಮತ್ತು ಕೇತು ಗ್ರಹದ ಬದಲಾವಣೆಯಿಂದ ಕಳೆದ ಒಂದುವರೆ ವರ್ಷದಲ್ಲಿ ತುಲಾ ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿ ತೊಂದರೆ ಆಗಿದೆ ಉದ್ಯೋಗದ ವಿಷಯದಲ್ಲಿ, ಸಾಂಸಾರಿಕ ವಿಷಯದಲ್ಲಿ ಹಾಗೂ ಆರೋಗ್ಯದ ವಿಷಯದಲ್ಲಿ ತೊಂದರೆಗಳಾಗಿದೆ.
ಗ್ರಹಗಳ ಬದಲಾವಣೆಯಿಂದ ಮುಂದಿನ ಒಂದುವರೆ ವರ್ಷಗಳಲ್ಲಿ ಆರೋಗ್ಯದ ವಿಷಯದಲ್ಲಿ ಸುಧಾರಣೆಯಾಗುತ್ತದೆ ಹಣಕಾಸಿನ ವಿಷಯದಲ್ಲಿ ಮೊದಲಿನಷ್ಟು ವ್ಯಯ ಆಗುವುದಿಲ್ಲ ಬುಧನ ಸ್ಥಾನ ಬದಲಾವಣೆಯಿಂದ ತುಲಾ ರಾಶಿಯವರು ಆರೋಗ್ಯದ ವಿಷಯದಲ್ಲಿ ಜಾಗರೂಕತೆಯಿಂದ ಇರಬೇಕು ಬುಧ ಗ್ರಹ ಎರಡು ಬಾರಿ ಸ್ಥಾನ ಬದಲಾವಣೆ ಮಾಡುವುದರಿಂದ ತುಲಾ ರಾಶಿಯವರಿಗೆ 18ನೇ ತಾರೀಖಿನ ನಂತರ ಬಂಧುಗಳಲ್ಲಿ ಕಲಹ ಉಂಟಾಗುವ ಸಾಧ್ಯತೆಗಳಿದೆ. ಹಣಕಾಸಿನ ವಿಷಯದಲ್ಲಿ ಮೋಸ ವಂಚನೆ ಆಗುವ ಸಾಧ್ಯತೆಗಳಿದೆ. ಶುಕ್ರ ಗ್ರಹದ ಬದಲಾವಣೆಯಿಂದ ಹಣಕಾಸಿನ ಆಗಮನ ಉತ್ತಮವಾಗಿರುತ್ತದೆ.
ರವಿ ಗ್ರಹದ ಸ್ಥಾನ ಬದಲಾವಣೆಯಿಂದ ತುಲಾ ರಾಶಿಯವರಿಗೆ ಅಕ್ಟೋಬರ್ ತಿಂಗಳಿನಲ್ಲಿ ಆಯಾಸ ಕಂಡುಬರುವ ಸಾಧ್ಯತೆ ಇದೆ. ಆರೋಗ್ಯ ವಿಷಯದಲ್ಲಿ ನೋಡುವುದಾದರೆ ಅಕ್ಟೋಬರ್ ತಿಂಗಳಿನಲ್ಲಿ ತುಲಾ ರಾಶಿಯವರು ಜಾಗರೂಕತೆಯಿಂದ ಇರಬೇಕು. ಅಕ್ಟೋಬರ್ 18 ನೇ ತಾರೀಖಿನ ನಂತರ ಕುಟುಂಬದವರೊಂದಿಗೆ ಸಣ್ಣಪುಟ್ಟ ಕಲಹಗಳು ಕಂಡುಬರುತ್ತದೆ ಅದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ವಿದ್ಯಾರ್ಥಿಗಳು ಅಕ್ಟೋಬರ್ ತಿಂಗಳಿನಲ್ಲಿ ಮನಸ್ಸು ಚಂಚಲವಾಗಿರುವುದರಿಂದ ಸ್ವಲ್ಪ ಏಕಾಗ್ರತೆಯಿಂದ ಓದಬೇಕು ಹೀಗೆ ಮಾಡಿದರೆ ಯಶಸ್ಸು ಸಿಗುತ್ತದೆ ಉದ್ಯೋಗದ ವಿಷಯದಲ್ಲಿ ತುಲಾ ರಾಶಿಯವರಿಗೆ ಅಕ್ಟೋಬರ್ ತಿಂಗಳು ಮಧ್ಯಮವಾಗಿದೆ. ಚಿತ್ತ ನಕ್ಷತ್ರ ಮೂರು ಮತ್ತು ನಾಲ್ಕನೆ ಪಾದದಲ್ಲಿ ಜನಿಸಿದವರು ಗಣಪತಿಯ ಆರಾಧನೆಯನ್ನು ಮಾಡಬೇಕು ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
ಸ್ವಾತಿ ನಕ್ಷತ್ರದಲ್ಲಿ ಜನಿಸಿದವರು ಸುಬ್ರಹ್ಮಣ್ಯ ದೇವರ ಆರಾಧನೆಯನ್ನು ಮಾಡಬೇಕು ವಿಶಾಖ ನಕ್ಷತ್ರದ ಒಂದು ಎರಡು ಮತ್ತು ಮೂರನೆ ಪಾದದಲ್ಲಿ ಜನಿಸಿದವರು ಭಗವಂತ ಶಿವನ ಆರಾಧನೆಯನ್ನು ಮಾಡಬೇಕು ಇದರಿಂದ ಕಷ್ಟಗಳು ದೂರವಾಗಿ ಸುಖದ ಜೀವನವನ್ನು ನಡೆಸಬಹುದಾಗಿದೆ. ಈ ಮಾಹಿತಿ ಉಪಯುಕ್ತ ಮಾಹಿತಿಯಾಗಿದ್ದು ನಿಮ್ಮ ಪರಿಚಯದವರು ಹಾಗೂ ಸಂಬಂಧಿಕರಲ್ಲಿ ತುಲಾ ರಾಶಿಯವರಿದ್ದರೆ ಅವರಿಗೆ ಖಂಡಿತ ತಿಳಿಸಿ ದೇವರ ನಾಮ ಸ್ಮರಣೆ ಮಾಡುವುದರ ಮೂಲಕ ಸಂಕಷ್ಟಗಳನ್ನು ದೂರ ಮಾಡಿಕೊಳ್ಳೋಣ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.