ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ತುಲಾ ರಾಶಿಯವರ ಮೇ ತಿಂಗಳ ಮಾಸ ಭವಿಷ್ಯವನ್ನು ತಿಳಿಯೋಣ.
1 ನೇ ತಾರೀಖು ಗುರು ಗ್ರಹ ಮೇಷ ರಾಶಿಯಿಂದ ವೃಷಭ ರಾಶಿಗೆ ಪ್ರವೇಶ ಮಾಡುತ್ತದೆ. 10 ನೇ ತಾರೀಖು ಮೇಷ ರಾಶಿಗೆ ಬುಧ ಗ್ರಹ ಪ್ರವೇಶ ಮಾಡುತ್ತದೆ. 14 ನೇ ತಾರೀಖು ರವಿ ಗ್ರಹ ವೃಷಭ ರಾಶಿಗೆ ಪ್ರವೇಶ ಮಾಡುತ್ತದೆ. 19 ನೇ ತಾರೀಖು ಶುಕ್ರ ಗ್ರಹ ವೃಷಭ ರಾಶಿಗೆ ಪ್ರವೇಶ ಮಾಡುತ್ತದೆ.ತುಲಾ ರಾಶಿಯವರಿಗೆ ಈ ತಿಂಗಳು ಅಷ್ಟು ಚೆನ್ನಾಗಿ ಇಲ್ಲ. ಪಂಚಮ ಶನಿ ಪೀಡೆ, ಅಷ್ಟಮ ಗುರು ತೊಂದರೆಗಳನ್ನು ಕೊಡುವರು. ಈ ಸಮಸ್ಯೆಗಳು ಗುರು ಗ್ರಹ ಮತ್ತು ಶನಿ ಗ್ರಹ ಸ್ಥಾನ ಬದಲಾವಣೆ ಮಾಡುವವರೆಗೂ ಇರುತ್ತದೆ. ಅದರಿಂದ, ಹೆಚ್ಚು ಎಚ್ಚರಿಕೆ ವಹಿಸಬೇಕು.
ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಅದನ್ನು, ಕಳ್ಳರು ಕದಿಯುವ ಸಂಭವ ಕೂಡ ಇದೆ. ಆಭರಣ, ದುಡ್ಡು ಕಳೆದುಕೊಳ್ಳುವ ಸೂಚನೆಯನ್ನು ಗ್ರಹಗಳು ನೀಡುತ್ತದೆ. ವಿಪರೀತ ಅನಾರೋಗ್ಯ ಕಾಡುವ ಸಾಧ್ಯತೆ ಇದೆ. ಹಿಂಬದಿಯ ತಲೆಯ ಭಾಗ, ಮೆದುಳು, ಕುತ್ತಿಗೆ ಇವುಗಳಿಗೆ ಪದೇ ಪದೇ ಪೆಟ್ಟು ಬೀಳುವುದು, ಅಪಘಾತ ಆಗುವುದು ಮತ್ತು ಆ ಭಾಗದಲ್ಲಿ ಹೆಚ್ಚಿನ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.
ಬೆಂಕಿಯಿಂದ, ವಿದ್ಯುತ್’ಯಿಂದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ತುಲಾ ರಾಶಿಯ ಜನರಿಗೆ. ವಿಧ್ಯಾರ್ಥಿಗಳು ವ್ಯಾಸಂಗದಲ್ಲಿ ಹೆಚ್ಚಿನ ಶ್ರಮಪಟ್ಟು ಓದಿದರೆ ಅದರಲ್ಲಿ, ಹೆಚ್ಚಿನ ಪ್ರಗತಿ ಸಾಧಿಸುವ ಸಾಧ್ಯತೆ ಇರುತ್ತದೆ.ಉದ್ಯೋಗದ ನಿರೀಕ್ಷೆಯಲ್ಲಿ ಇರುವ ತುಲಾ ರಾಶಿಯವರಿಗೆ ಕೆಲಸ ದೊರಕುವ ಸಾಧ್ಯತೆ ಇದೆ. ದೊರೆತ ಕೆಲಸದಲ್ಲಿ ನೆಮ್ಮದಿ ಸಿಗುತ್ತದೆ ಎನ್ನುವುದು ಮಾತ್ರ ಕನಸು.
ನೂತನ ವಸ್ತುಗಳು, ಪೀಠೋಪಕರಣಗಳನ್ನು ಮಾರಾಟ ಮಾಡುವ ತುಲಾ ರಾಶಿಯ ಜನರಿಗೆ ಈ ತಿಂಗಳು ಹೆಚ್ಚು ಲಾಭದಾಯಕವಾಗಿ ಇರುವುದಿಲ್ಲ. ಸಾಲದ ಹೊರೆ ಹೆಚ್ಚಾಗುತ್ತದೆ ಈ ತಿಂಗಳು ತುಲಾ ರಾಶಿಯವರಿಗೆ ಸಾಲ ಎನ್ನುವುದು ಸುಲಭವಾಗಿ ಸಿಗುತ್ತದೆ. ಸಾಲ ಎಂದಿಗೂ ಯಾರಿಗೂ ಒಳ್ಳೇದು ಮಾಡಲ್ಲ. ಗೃಹ ನಿರ್ಮಾಣ ಮಾಡಲು ಈ ತಿಂಗಳು ಸೂಕ್ತ ಸಮಯ ಅಲ್ಲ. ನೂತನವಾಗಿ ನಿರ್ಮಾಣ ಮಾಡಿರುವ ಕಟ್ಟಡ ಖರೀದಿ ಮಾಡಲು ಕೂಡ ಇದು, ಉತ್ತಮ ಕಾಲ ಅಲ್ಲ.
ಶತ್ರು ಕಾಟ ಹೆಚ್ಚಾಗುತ್ತದೆ, ಹೊಟ್ಟೆಕಿಚ್ಚು ಮತ್ತು ಅಸೂಯೆ ಪಡುವ ಜನರಿಂದ ದೂರ ಇರುವುದು ಒಳ್ಳೆಯದು. ದುಡ್ಡು ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು ಮತ್ತು ಎಚ್ಚರಿಕೆ ವಹಿಸಬೇಕು. ಒಳ್ಳೆಯ ಫಲ ಕೊಡುವ ದಿನಗಳು :- 4, 7, 9, 14, 21
ಇನ್ನು ಮನುಷ್ಯನ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಮಾಡಿಕ್ಕೊಳ್ಳುವ ದಾರಿ ಎಂದರೆ ; ಸುತ್ತ ಇರುವ ಪ್ರಾಣಿ ಪಕ್ಷಿಗಳು ನೀರು ಇಲ್ಲದೆ, ಆಹಾರ ಇಲ್ಲದೆ ಬಳಲುತ್ತವೆ ಅದರಿಂದ, ಅವುಗಳಿಗೆ ಸಣ್ಣ ಪ್ರಮಾಣದಲ್ಲಿ ನೀರು ಮತ್ತು ಆಹಾರದ ವ್ಯವಸ್ಥೆ ಮಾಡುವುದನ್ನು ದೇವರು ಕೂಡ ಮೆಚ್ಚುವನು ಎಷ್ಟೋ ತೊಂದರೆಗಳು ಪರಿಹಾರ ಆಗುತ್ತದೆ.ಪ್ರಕೃತಿ ನನಗೆ ವರದಾನ ಆಗಬೇಕು ಎಂದರೆ ಗಿಡಗಳನ್ನು ನೆಟ್ಟು ಪೋಷಣೆ ಮಾಡುವುದರಿಂದ ಮಳೆ ಕಾಲಕ್ಕೆ ಸರಿಯಾಗಿ ಬರುತ್ತದೆ.
ಪರಿಹಾರ :-ಬಿಲ್ವಾಷ್ಟಕಂ ಸ್ತೋತ್ರ ಜಪ ಮಾಡಬೇಕು. ಇದನ್ನು ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತು ಬೆಳಗ್ಗೆ 6.00 – 6.30 ಸಮಯದಲ್ಲಿ ಹೇಳಬೇಕು.ಇದು, ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ, ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.
ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್: ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು 9606655519 ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 9606655519