ಹಿಂದೂ ಪಂಚಾಂಗದ (Hindu Almanac) ಪ್ರಕಾರ ಹೊಸ ವರ್ಷ ಪ್ರಾರಂಭವಾಗುವುದು ಯುಗಾದಿಯಿಂದ. (Ugadi) ಮಾರ್ಚ್ 22ರಿಂದ ಶೋಭಕೃತ ಸಂವತ್ಸರ ಶುರುವಾಗಲಿದೆ. ಈ ಶೋಭಾಕೃತ ಸಂವತ್ಸರ ನಿಮ್ಮೆಲ್ಲರ ಬದುಕಿನಲ್ಲಿ ಸುಖ ಸಂತೋಷ, ನೆಮ್ಮದಿ ಹೊತ್ತು ತರಲಿ ದ್ವಾದಶ ರಾಶಿಗಳಲ್ಲಿ ಒಂದಾದ ತುಲಾ ರಾಶಿಯವರಿಗೆ (libra astrology) ಈ ಹೊಸ ವರ್ಷ ಹೇಗಿರಲಿದೆ ಎಂದು ಈ ಲೇಖನದಲ್ಲಿ ತಿಳಿಯೋಣ
ತುಲಾ ರಾಶಿ (Libra) ಹಿಂದೂ ಜ್ಯೋತಿಷ್ಯದ 12 ರಾಶಿ ವ್ಯವಸ್ಥೆಗಳಲ್ಲಿ ಏಳನೆಯದು ಚಿತ್ರ ನಕ್ಷತ್ರ 3, 4 ಪಾದಗಳು ಸ್ವಾತಿ ನಕ್ಷತ್ರ ವಿಶಾಖ ನಕ್ಷತ್ರ 1, 2, 3 ಪಾದಗಳನ್ನು ತುಲಾ ರಾಶಿಯಲ್ಲಿ ಬರುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ 2023-2024 ವರ್ಷವು ಶೋಭಾಕೃತ್ ನಾಮ ಸಂವತ್ಸರಂ ಆಗಿದೆ. ಇದು ಯುಗಾದಿ 22 ಮಾರ್ಚ್ 2023 ರಂದು ಪ್ರಾರಂಭವಾಗುತ್ತದೆ ಮತ್ತು 8 ಏಪ್ರಿಲ್ 2024 ರಂದು ಕೊನೆಗೊಳ್ಳುತ್ತದೆ 2023-2024ರಲ್ಲಿ ತುಲಾ ರಾಶಿಯವರಿಗೆ ಆಯಾ 14 ವ್ಯಾಯ 11. 2023-2024
ತುಲಾ ರಾಶಿಯವರಿಗೆ ರಾಜಪೂಜ್ಯ 7, ಅವಮಾನ 3 ಇರುತ್ತದೆ. ತುಲಾ ರಾಶಿಯವರ ಯುಗಾದಿ ಭವಿಷ್ಯ ನೋಡುವುದಾದರೆ ನವೆಂಬರ್ 29ರವರೆಗೆ ರಾಹು 7ನೇ ಮನೆಯಲ್ಲಿ ಹಾಗೂ ಗುರು 7ನೇ ಮನೆಯಲ್ಲಿ ಇರಲಿದೆ. ಶನಿ ನಿಮ್ಮ 5ನೇ ಮನೆಯಲ್ಲಿ ಕೇತು ನಿಮ್ಮ 2ನೇ ಮನೆಯಲ್ಲಿ ಇರಲಿದೆ. ತುಲಾ ರಾಶಿಯವರಿಗೆ ಪಂಚಮಿ ಶನಿ ಶುರುವಾಗಿದೆ. ಆದರೆ ಗುರುವಿನ ಸ್ಥಾನ ನಿಮ್ಮ ಸಮಸ್ಯೆ ಕಡಿಮೆ ಮಾಡಲಿದೆ.
ಪಂಚಮಿ ಶನಿಯಿಂದ ಲಾಭ ಬಂದರೂ ಬೇಗನೆ ಖರ್ಚಾಗುವುದು. ನಿಮಗೆ ಬರಬೇಕಾಗಿದ್ದ ಹಣ ಸರಿಯಾದ ಸಮಯದಲ್ಲಿ ಕೈ ಸೇರದಂತೆ ಶನಿ ತಡೆಯುತ್ತಾನೆ. ನಿಮ್ಮ ಆದಾಯದಲ್ಲಿ ವ್ಯತ್ಯಾಯವಾಗುವುದು. ರಾಹು-ಕೇತುವಿನಿಂದಾಗಿ ಕುಟುಂಬದಲ್ಲಿ ಮನಸ್ತಾಪ, ಆರೋಗ್ಯ ಸಮಸ್ಯೆ ಈಗಾಗಲೇ ಉಂಟಾಗಿರುತ್ತದೆ. ಅದರೆ ಗುರು 7ನೇ ಸ್ಥಾನದಲ್ಲಿ ಇರುವುದರಿಂದ ನಿಮಗೆ ಕಷ್ಟದಿಂದ ಹೊರಬರಲು ಗುರು ಸಹಾಯ ಮಾಡುತ್ತಾನೆ. ನಿಮಗೆ ಹಣ ನೀವು ಊಹಿಸಿದಂತ ಬಾರದೇ ಇದ್ದಾಗ ಗುರು ಬೇರೆ ರೂಪದಲ್ಲಿ ನಿಮಗೆ ಅನುಕೂಲಕರ ಮಾಡುತ್ತಾರೆ.
ಶನಿ ವಿದ್ಯಾರ್ಥಿಗಳು ಸೋಮಾರಿಗಳಾಗುವಂತೆ ಮಾಡಿದರೆ ಗುರು ವಿದ್ಯಾರ್ಥಿಗಳಿಗೆ ಓದುವಂತೆ ಮನಸ್ಸು ಮಾಡುತ್ತಾನೆ. ಶನಿ ನೀಡುವ ಕಷ್ಟವನ್ನು ಗುರು ಬಗೆಹರಿಸುತ್ತಾನೆ. ಆದ್ದರಿಂದ ಸಮಸ್ಯೆ ಬಂದರೂ ಗುರು ಬಲದಿಂದ ಬಗೆಹರಿಸಲು ಸಾಧ್ಯವಾಗುವುದು. ತುಂಬಾ ಕಷ್ಟದ ಸಂದರ್ಭಗಳಲ್ಲಿ ಸ್ನೇಹಿತರು ಸಹೋದರರು ಸಹಾಯ ಮಾಡಿ. ಪಂಚಮ ಶನಿ ಶುರುವಾಗಿರುವುದರಿಂದ ಹಣಕಾಸಿನ ಹೂಡಿಕೆ ಮಾಡದೇ ಇರುವುದು ಒಳ್ಳೆಯದು. ಈ ವರ್ಷ ನಿಮಗೆ ಮಿಶ್ರಫಲವಾಗಲಿದೆ.
ಇದನ್ನೂ ಓದಿ..Capricorn Horoscope: ಮಕರ ರಾಶಿ ವ್ಯಕ್ತಿಗಳ ಗುಣ ಸ್ವಭಾವ, ಇವರು ಪಕ್ಕ ಪ್ರಾಕ್ಟಿಕಲ್ ಆಗಿರ್ತಾರೆ ಯಾಕೆಂದರೆ..
ನವೆಂಬರ್‌ನಲ್ಲಿ 6ನೇ ಮನೆಗೆ ರಾಹು ಬರುತ್ತಾನೆ ಆವಾಗ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರವಾಗಲಿದೆ. ಈ ಶನಿವಾರ ಉದ್ದಿನಬೇಳೆ, ಕಪ್ಪು ಎಳ್ಳು ಪ್ರತಿ ಶನಿವಾರ ನೀಡಿ. ಪ್ರತಿದಿನ ಹನುಮಾನ್ ಚಾಲೀಸ ಮಂತ್ರ ಪಠಿಸಿ. ನಿರ್ಗತಿಕರಿಗೆ ಹೊಸ ಚಪ್ಪಲಿ ನೀಡಿ. ಪ್ರತಿ ತಿಂಗಳು ಸಂಕಷ್ಠಿ ಚತುರ್ಥಿ ಆಚರಿಸಿ.