2024ರ ಫೆಬ್ರವರಿ ತಿಂಗಳಿನಲ್ಲಿ ಸಿಂಹ ರಾಶಿಯವರ ತಿಂಗಳ ಭವಿಷ್ಯ ಹೇಗಿದೆ ನೋಡೋಣ. ಗ್ರಹಗಳ ಸ್ಥಾನದ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. 1ನೇ ತಾರೀಖು ಬುಧ ಗ್ರಹ ಮಕರ ರಾಶಿಗೆ ಪ್ರವೇಶ ಮಾಡ್ತಾನೆ. ಸಿಂಹ ರಾಶಿಯಲ್ಲಿ 5ನೇ ಮನೆಯಲ್ಲಿ ಇದ್ದ ಬುಧ ಗ್ರಹ 6ನೇ ಮನೆಗೆ ಪ್ರವೇಶ ಮಾಡ್ತಾನೆ. ಕುಜ ಗ್ರಹ 5ನೇ ತಾರೀಖು ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ 6ನೇ ಮನೆಗೆ ಕುಜ ಬರ್ತಾನೆ.
11ನೇ ತಾರೀಖು ಶುಕ್ರ ಗ್ರಹ ಮಕರ ರಾಶಿ ಪ್ರವೇಶ ಮಾಡುತ್ತಾನೆ ಅದು ಶುಕ್ರನಿಗೆ ಮಿತ್ರನ ಮನೆ. 13ನೆ ತಾರೀಖು ಸೂರ್ಯ ಗ್ರಹ ಕುಂಭ ರಾಶಿಗೆ ಪ್ರವೇಶ ಮಾಡುತ್ತಾನೆ. ಸೂರ್ಯ ಗ್ರಹ ಸಿಂಹ ರಾಶಿಯ ಅಧಿಪತಿ ಅವರು ಸಪ್ತಮಕ್ಕೆ ಬರುತ್ತಾರೆ. 19ನೇ ತಾರೀಖು ಬುಧ ಗ್ರಹ ಕುಂಭ ರಾಶಿಗೆ ಪ್ರವೇಶ ಮಾಡುತ್ತಾನೆ. ಫೆಬ್ರವರಿ ತಿಂಗಳಿನಲ್ಲಿ ಬರುವ ಹುಣ್ಣಿಮೆ ವ್ಯಾಸ ಹುಣ್ಣಿಮೆ. 15ನೇ ತಾರೀಖು ಕುಮಾರ ಷಷ್ಠಿ ಆಚರಣೆ ಮಾಡುವರು. 16ನೇ ತಾರೀಖು ರಥ ಸಪ್ತಮಿ ಅಥವಾ ಸೂರ್ಯ ಜಯಂತಿ ಆಚರಣೆ ಮಾಡುವರು.
ಸಿಂಹ ರಾಶಿಗೆ ಗುರು ಗ್ರಹದ ಬಲ ಇದೆ ಇನ್ನು ಮೂರು ತಿಂಗಳಿನಲ್ಲಿ ಯಾವ ರೀತಿಯ ಸಾಧನೆ ಮಾಡಿದರು ಅನುಕೂಲ ಸಿಗುತ್ತದೆ. ಗುರು ಸಿಂಹ ರಾಶಿಗೆ ಪಂಚಮ ಅಧಿಪತಿ ಮತ್ತು ಅಷ್ಟಮ ಅಧಿಪತಿ. ವಿಖ್ಯಾತಿ ಸಿಗುತ್ತದೆ, ಸತತ ಪ್ರಯತ್ನಕ್ಕೆ ಫಲ ದೊರಕುತ್ತದೆ, ರಾಜಕೀಯ ವ್ಯಕ್ತಿಗಳಿಗೆ ಒಳ್ಳೆ ಫಲ, ವ್ಯಾಸಂಗದಲ್ಲಿ ಹೆಚ್ಚಿನ ಪ್ರಗತಿ. ಹೂಡಿಕೆ ಮಾಡುವುದು ಕೂಡ ಉತ್ತಮ ಆಯ್ಕೆ ಹಾಗೂ ಭೂಮಿ ವಿಚಾರದ ತೊಂದರೆ ದೂರವಾಗಿ ಯಶಸ್ಸು ಸಿಗುತ್ತದೆ.
ವಿಖ್ಯಾತಿ ಸಿಗುತ್ತದೆ ಎಂದರೆ ಹೆಸರು ಪ್ರಸಿದ್ದವಾಗುತ್ತದೆ. ಪ್ರಿಂಟಿಂಗ್ ಪ್ರೆಸ್, ಸ್ಟ್ಯಾಂಪ್ ಡ್ಯೂಟಿ ಪೇಪರ್ ತಯಾರಿಕೆ ಎಲ್ಲದರಲ್ಲಿ ಒಳ್ಳೆ ಲಾಭ ಸಿಗುತ್ತದೆ. ಮೊದಲು ಮನೆಯವರಿಗೆ ಉಪಕಾರ ಮಾಡಬೇಕು ನಂತರ ಪರರಿಗೆ ಪರೋಪಕಾರಿ ಆಗಿದ್ದರೆ ಒಳ್ಳೆಯದು ಧಾನ ಧರ್ಮ ಮಾಡುವುದರಲ್ಲಿ ಎತ್ತಿದ ಕೈ ಅವರು ಸಂತೃಪ್ತಿ ಹೊಂದಿದ ಮೇಲೆ ಬೇರೆಯವರಿಗೆ ಧಾನ ಮಾಡುವರು. ಗುರುಗಳಿಂದ ಆಶೀರ್ವಾದ ಸಿಗುತ್ತದೆ ಮತ್ತು ಒಳ್ಳೆ ಚ್ಯರಿತ್ರೆ ಇರುವ ವ್ಯಕ್ತಿಗಳಾಗಿ ಹೊರ ಹೊಮ್ಮುವರು.
ಸಮಾಜಕ್ಕೆ ಒಳ್ಳೆ ಕೆಲಸ ಮಾಡಿ ಒಳ್ಳೆ ಹೆಸರು ಗಳಿಕೆ ಮಾಡುವರು. ವಿದೇಶದಲ್ಲಿ ಕೂಡ ಹೆಸರು ಪ್ರಖ್ಯಾತಿ ಪಡೆಯುವ ಸಾಧ್ಯತೆ ಇದೆ. ಸಂತಾನ ಭಾಗ್ಯ ಪ್ರಾಪ್ತಿಯಾಗುವುದು. ಭಾಗ್ಯಗಳು ಹೆಚ್ಚು ಅಭಿವೃದ್ದಿ ಆಗುತ್ತದೆ. ಜಿಪುಣತನ ದೂರವಾಗಿ ದಾರಾಳವಾಗುವರು. ದುಷ್ಟತನ ಕೂಡ ನಿಮ್ಮಿಂದ ತೊಲಗಿ ಒಳ್ಳೆ ಕೆಲಸಗಳನ್ನು ಮಾಡುವ ಅವಕಾಶ ಇರುತ್ತದೆ. ತಪ್ಪಸಿನ ಫಲ ದೊರಕುತ್ತದೆ. ಇದೆಲ್ಲಾ ಪಂಚಮದಲ್ಲಿ ಇರುವ ಗುರು ಗ್ರಹದ ದೆಸೆಯಿಂದ ಆಗುತ್ತದೆ.
ಉದ್ಯೋಗದಲ್ಲಿ ಸ್ಥಾನ ಬದಲಾವಣೆ ಆಗುತ್ತದೆ ಮೇಲಿನ ಸ್ಥಾನಕ್ಕೆ ಬಡ್ತಿ ಪಡೆಯುವ ಸಾಧ್ಯತೆ ಇದೆ. ಈ ರಾಶಿಯವರ ಮಾತಿಗೆ ಗೌರವ ಹೆಚ್ಚಾಗುತ್ತದೆ. ಹಣ್ಣು ತರಕಾರಿ ವ್ಯಾಪಾರ ಮಾಡುವವರಿಗೆ, ಐ. ಟಿ. ಉದ್ಯೋಗಿಗಳು, ರೈತರು, ಹೋಟೆಲ್ ಉದ್ಯಮ ಎಲ್ಲದರಲ್ಲಿ ಉತ್ತಮ ಫಲ ಸಿಗುತ್ತದೆ. ಹೊರಗಿನ ಪ್ರಪಂಚದ ಜೊತೆಗಿನ ಸಂಬಂಧ ಉತ್ತಮವಾಗುತ್ತದೆ. ಪರಿವಾರದ ಜೀವನ ಹೆಚ್ಚು ಸುಖಕರವಾಗಿ ಇರುತ್ತದೆ. ಕಂಟಕ ಶನಿ ಇರುವುದರಿಂದ ನೇರ ದೃಷ್ಟಿ ಬೀರುತ್ತದೆ ಆದರೆ ಜನ್ಮ ಜಾತಕದಲ್ಲಿ ಯಾವ ತೊಂದರೆ ಕಾಣದೆ ಹೋದರೆ ಯಾವ ತೊಂದರೆ ಇಲ್ಲ.
ಫೆಬ್ರವರಿ ತಿಂಗಳು ಹೆಚ್ಚು ಸುಖಕರವಾಗಿ ಇರುತ್ತದೆ. ಉದ್ಯೋಗದಲ್ಲಿ ಪ್ರಗತಿ, ಹೊಸ ಕಾರ್ಯಕ್ಕೆ ಕೈ ಹಾಕಿದರೆ ಅದಕ್ಕೆ ತಕ್ಕಂತೆ ಫಲ ದೊರಕುತ್ತದೆ. ಹೊಸ ಉದ್ಯೋಗ ಪ್ರಾಪ್ತಿಯಾಗುತ್ತದೆ. ಶಿಕ್ಷಣದಲ್ಲಿ ವೃದ್ಧಿ, ವ್ಯಾಪಾರದಲ್ಲಿ ಪ್ರಗತಿ, ಆರೋಗ್ಯ ಕೂಡ ಫೆಬ್ರವರಿ ತಿಂಗಳಿನಲ್ಲಿ ಸುಧಾರಿಸುತ್ತದೆ. ಅದರ ಉಪಯೋಗ ಪಡೆಯಲು ಪ್ರಯತ್ನ ಪಡಬೇಕು. ಫೆಬ್ರವರಿ 11 ರಿಂದ 19 ಈ ದಿನಗಳಲ್ಲಿ ರಾಜ ಯೋಗದ ಭಾಗ್ಯವಿದೆ.
ಐಷಾರಾಮಿ ಸರಕುಗಳ ಖರೀದಿ ಮಾಡುವ ಯೋಗವಿದೆ. ಸಂಪತ್ತು ದ್ವಿಗುಣ ಆಗುತ್ತದೆ. ಇತರೆ ಯಾವುದೇ ಸಮಸ್ಯೆ ಎದುರಾದರು ಅದಕ್ಕೆ ಸುಲಭ ಪರಿಹಾರ ಏನೆಂದರೆ. ವಿನಾಯಕನಿಗೆ ನಮಸ್ಕಾರ ಮಾಡುವುದು. ಗಣೇಶನ ಸ್ತೋತ್ರ ಜಪ ಮಾಡಬೇಕು ಇಲ್ಲ ಆಲಿಸಬೇಕು, ವಾರದಲ್ಲಿ ಒಂದು ದಿನ ಗಣೇಶನ ದೇವಸ್ತಾನಕ್ಕೆ ಹೋಗಿ ಗರಿಕೆ ಅರ್ಚನೆ ಮಾಡಿಸುವುದು.
ಫೆಬ್ರವರಿ ತಿಂಗಳಿನಲ್ಲಿ ಬರುವ ಸಂಕಷ್ಟಹರ ಚತುರ್ಥಿ ದಿನ ಉಪವಾಸ ವ್ರತ ಮಾಡಿ, ಗಣೇಶನಿಗೆ ಅಭಿಷೇಕ ಮಾಡಿಸಬೇಕು ಅದರಿಂದ ಉತ್ತಮ ಫಲ ಸಿಗುತ್ತದೆ. ಇವು ಕೇವಲ ರಾಶಿಯ ಗೋಚರಫಲಾಗಳು ಇದಕ್ಕೂ ಮತ್ತು ಜನ್ಮ ಜಾತಕಕ್ಕೆ ಯಾವುದೇ ಸಂಬಂಧ ಇರುವುದಿಲ್ಲ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.