ನಾವೀಗ 2024ರ ಪ್ರಾರಂಭದಲ್ಲಿ ಇದ್ದೇವೆ. ಕಳೆದ ವರ್ಷದಲ್ಲಿ ಕಷ್ಟ ನೋವು ಮರೆಯಾಗಿ ಹೊಸ ವರ್ಷದಲ್ಲಿ ಹೊಸ ಜೀವನ ಶುರುವಾಗುತ್ತಿದೆ. ಹೊಸ ವರ್ಷ ದ್ವಾದಶ ರಾಶಿಗಳ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ ಹಾಗಾದರೆ ಸಿಂಹ ರಾಶಿಯವರ ವರ್ಷ ಭವಿಷ್ಯ ಉದ್ಯೋಗ, ವಿದ್ಯಾಭ್ಯಾಸ, ಆರೋಗ್ಯ ಮೊದಲಾದ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ಬದಲಾವಣೆ ಜಗದ ನಿಯಮ ಎಂಬ ಮಾತಿದೆ, ದಿನ ಉರುಳಿತ್ತಿದ್ದಂತೆ ಎಲ್ಲರ ಜೀವನದಲ್ಲಿ ಸಾಕಷ್ಟು ಬದಲಾವಣೆ ಉಂಟಾಗಲಿದೆ. ಉದ್ಯೋಗ, ವ್ಯಾಪಾರ, ವಿದ್ಯಾಭ್ಯಾಸ ಹಾಗೂ ವಯಕ್ತಿಕ ಜೀವನ ಉತ್ತಮವಾಗಲಿ ಎಂದು ಆಸೆ ಪಡುತ್ತಾರೆ. 2024 ರಲ್ಲಿ ಗ್ರಹಗತಿಗಳ ಸ್ಥಾನ ಪಲ್ಲಟದೊಂದಿಗೆ ದ್ವಾದಶ ರಾಶಿಗಳ ಜೀವನದಲ್ಲಿ ಮಹತ್ತರ ಬದಲಾವಣೆಗಳಾಗುತ್ತವೆ. 2024ರ ವರ್ಷ ಭವಿಷ್ಯವನ್ನು, ಜ್ಯೋತಿಷ್ಯ ಶಾಸ್ತ್ರವನ್ನು ಸಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್ ಸತೀಶ್ ಪ್ರಸ್ತುತ ಪಡಿಸಿದ್ದಾರೆ. ಸಿಂಹ ರಾಶಿಯವರು ಸಾಮಾನ್ಯವಾಗಿ ಮುಂಗೋಪಿಗಳಾಗಿರುತ್ತಾರೆ ಆದರೆ ಕಾಲಕ್ಕೆ ಅನುಸಾರವಾದ ನಿಲುವನ್ನು ತಾಳಬೇಕು. ಸಾಧ್ಯವಾದಷ್ಟು ನಯಗಾರಿಕೆಯ ವಿಧಾನವನ್ನು ಅನುಸರಿಸಬೇಕು.
ಇವರು ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಎಂದಿಗೂ ಬದಲಾಯಿಸುವುದಿಲ್ಲ, ಇವರು ಅಧಿಕಾರದಲ್ಲಿ ಉಳಿಯಲು ಇಷ್ಟಪಡುತ್ತಾರೆ. ಉತ್ತಮ ಜ್ಞಾನವಿದ್ದರೂ ಯಾವುದೆ ವಿಷಯದಲ್ಲಿ ಉಳಿಸಿಕೊಳ್ಳುವ ರೀತಿಯ ಬಗ್ಗೆ ಮಾಹಿತಿ ಇರುವುದಿಲ್ಲ. ಸಿಂಹ ರಾಶಿಯವರ ಯೋಜನೆಗಳಿಗೆ ಸಹಾಯ, ಸಹಕಾರ ನೀಡುವವರು ಕಡಿಮೆ ಇರುತ್ತಾರೆ. ಇವರ ಕುಟುಂಬದಲ್ಲಿ ಶಾಂತಿ, ನೆಮ್ಮದಿಯ ಕೊರತೆ ಕಂಡುಬರುತ್ತದೆ. ಕುಟುಂಬದಲ್ಲಿ ಹಿರಿಯರ ಮಾತಿನಂತೆ ನಡೆದರೆ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು.
ವರ್ಷದ ಮೊದಲ ನಾಲ್ಕು ತಿಂಗಳು ಸಮಾಜದಲ್ಲಿ ಉತ್ತಮ ಸ್ಥಾನ ಸಿಗುತ್ತದೆ. ನಂತರದ ದಿನಗಳಲ್ಲಿ ಹೆಚ್ಚಿನ ಪ್ರಯತ್ನ ಬೇಕಾಗುತ್ತದೆ. ಏಪ್ರಿಲ್ ತಿಂಗಳವರೆಗೆ ಮೇಲಾಧಿಕಾರಿಗಳ ಬೆಂಬಲ ದೊರೆಯುತ್ತದೆ ನಂತರ ಸಹದ್ಯೋಗಿಗಳ ಬೆಂಬಲ ಇರುತ್ತದೆ ಒಟ್ಟಾರೆ ವರ್ಷಪೂರ್ತಿ ಕಾರ್ಯ ಕ್ಷೇತ್ರದಲ್ಲಿ ಅಧಿಪತಿಗಳಂತೆ ಮೆರೆಯುತ್ತಾರೆ. ಇವರು ಸಿಡುಕುತನ ಹಾಗೂ ಹಠದಿಂದ ಮಾತ್ರ ತೊಂದರೆ ಎದುರಿಸಬೇಕಾಗುತ್ತದೆ.
ಸಿಂಹ ರಾಶಿಯವರ ವ್ಯಾಪಾರ ವ್ಯವಹಾರದಲ್ಲಿ ಲಾಭ ಉಂಟಾಗುತ್ತದೆ. ವಿರೋಧಿಗಳು ಸಹ ಸ್ನೇಹ ಬಯಸಿ ಬರುತ್ತಾರೆ. ಪಾಲುಗಾರಿಕೆಯ ವ್ಯವಹಾರದಲ್ಲಿ ಉತ್ತಮ ಹೊಂದಾಣಿಕೆ ಇರುವುದಿಲ್ಲ. ಈ ರಾಶಿಯವರಿಗೆ ಇರುವ ಕ್ಷಮಾ ಗುಣದಿಂದ ಒಳ್ಳೆಯದಾಗುತ್ತದೆ, ತಾವು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದರಾಗಲು ಪ್ರಯತ್ನಿಸುತ್ತಾರೆ. ಇವರು ಮಾಡುವ ಕೆಲಸಗಳಿಗೆ ಹಿರಿಯರಿಂದ ಸಹಾಯ ಸಹಕಾರ ದೊರೆಯುತ್ತದೆ, ಈ ರಾಶಿಯವರು ದುಡುಕದೆ ಕಾದು ನೋಡುವುದು ಒಳ್ಳೆಯದು.
ಈ ರಾಶಿಯವರು ಕಾನೂನಿಗೆ ಗೌರವ ನೀಡಿ ವ್ಯಾಪಾರ ವ್ಯವಹಾರವನ್ನು ಮುಂದುವರೆಸಬೇಕು. ಪಾಲುದಾರಿಕೆಯ ವ್ಯವಹಾರವಿದ್ದರೆ ಅನಾವಶ್ಯಕ ವಾದ ವಿವಾದಗಳು ಬರುತ್ತದೆ ಅದಕ್ಕೆ ಕಿವಿಗೊಡದೆ ಎಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸಬೇಕು. ವಿದ್ಯಾರ್ಥಿಗಳು ಆತುರ ತೋರದೆ ಸಹಪಾಠಿಗಳ ಜೊತೆ ಕಲಿಕೆಯನ್ನು ಮುಂದುವರೆಸಬೇಕು. ಏಪ್ರಿಲ್ ತಿಂಗಳ ನಂತರ ಇವರಿಗೆ ಮನೋರಂಜನೆಯ ಕಡೆಗೆ ಒಲವು ಹೆಚ್ಚುತ್ತದೆ ಆದ್ದರಿಂದ ಪೋಷಕರ ಜವಾಬ್ದಾರಿ ಹೆಚ್ಚುತ್ತದೆ. ಸಿಂಹ ರಾಶಿಯವರು ಹೆಚ್ಚು ಪರಿಶ್ರಮ ಪಟ್ಟರೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ವಿದೇಶಕ್ಕೆ ಹೋಗುವ ಸಾದ್ಯತೆ ಇರುತ್ತದೆ.
ಸಿಂಹ ರಾಶಿಯವರ ವೈವಾಹಿಕ ಜೀವನದಲ್ಲಿ ಮನಸ್ತಾಪವಿದ್ದರೆ ಕುಟುಂಬದ ಹಿರಿಯರ ಮಧ್ಯಸ್ಥಿಕೆಯಿಂದ ನಿವಾರಣೆಯಾಗುತ್ತದೆ. ಅವಿವಾಹಿತರಿಗೆ ಮದುವೆ ನಿಶ್ಚಯವಾಗಿದೆ ಮುಂದೂಡುವ ಸಾಧ್ಯತೆ ಇದೆ, ಸಂಬಂಧಿಕರ ನಡುವೆ ವಿವಾಹ ನಿಶ್ಚಯವಾಗಿದೆ ಯಾವುದೆ ಅಡ್ಡಿ ಆತಂಕ ಇರುವುದಿಲ್ಲ. ದಂಪತಿಗಳ ನಡುವೆ ಉತ್ತಮ ಬಾಂಧವ್ಯ ಬೆಳೆಯುತ್ತದೆ. ಸಂಗಾತಿಯ ಸಹಾಯದಿಂದ ಕೆಲವು ಕೆಲಸ ಕಾರ್ಯ ವಿಸ್ತಾರವಾಗುತ್ತದೆ. ಈ ವರ್ಷದಲ್ಲಿ ಹೆಚ್ಚಿನ ಸಮಯ ಪ್ರಯಾಣ ಮಾಡುತ್ತಾರೆ. ಉದ್ಯೋಗದ ನೆಪದಿಂದ ವಿದೇಶಕ್ಕೆ ಹೋಗಬಹುದು.
ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು ಅದರಲ್ಲೂ ನೀರಿನ ಬಗ್ಗೆ ಎಚ್ಚರಿಕೆ ವಹಿಸಬೇಕು. ಈ ವರ್ಷ ಸಿಂಹ ರಾಶಿಯವರು ಕುಟುಂಬದವರೊಂದಿಗೆ ಹೆಚ್ಚು ಹೊಂದಿಕೊಳ್ಳಲು ಪ್ರಯತ್ನ ಮಾಡಬೇಕು ಇದರಿಂದ ಕುಟುಂಬದಲ್ಲಿ ನೆಮ್ಮದಿ ಇರುತ್ತದೆ ಇದರಿಂದ ಹೊಸ ಜೀವನಕ್ಕೆ ದಾರಿಯಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.
ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442