ಸಾಮಾನ್ಯವಾಗಿ ಇಂದಿನ ದಿನಗಳಲ್ಲಿ ಬಹುತೇಕ ಜನರು ನಿಂಬೆ ಹಣ್ಣಿನ ದೀಪಗಳನ್ನು ಅಮಾವಾಸ್ಯೆ ಹುಣ್ಣಿಮೆಯ ದಿನಗಳಲ್ಲಿ ತಮ್ಮ ತಮ್ಮ ಮನೆಗಳಲ್ಲಿ ಮತ್ತು ಬಹುತೇಕ ದೇವಾಲಯಗಳಲ್ಲಿ ಹಚ್ಚುವುದನ್ನು ನೋಡಿರುತ್ತೇವೆ, ಕೆಲವರು ಬೇರೆಯವರಿಗೆ ಹಲವಾರು ದೃಷ್ಟಿಗಳಿಂದ ಅದನ್ನು ಸಲಹೆ ಕೊಡುವವರಿದ್ದಾರೆ ನಿಂಬೆ ಹಣ್ಣಿಗೆ ಧಾರ್ಮಿಕ ದೃಷ್ಟಿಯಿಂದಲೂ ಮತ್ತು ಆರೋಗ್ಯದ ದೃಷ್ಟಿಯಿಂದಲೂ ಅದರದ್ದೇ ಆದ ಮಹತ್ವವಿದೆ ಆದ ಕಾರಣ ನಿಂಬೆ ಹಣ್ಣಿನ ದೀಪವನ್ನು ಅನೇಕ ಕಡೆಗಳಲ್ಲಿ ಹಚ್ಚಲಾಗುತ್ತದೆ. ಆರೋಗ್ಯದ ದೃಷಿಯಿಂದಲೂ ಅದನ್ನು ಬಳಸಲಾಗುತ್ತದೆ ಹಾಗಾದ್ರೆ ಈ ನಿಂಬೆ ಹಣ್ಣಿನ ದೀಪವನ್ನು ಹಚ್ಚುವುದರ ಮಹತ್ವದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ನಿಂಬೆ ಹಣ್ಣು ದೇವಿಯ ಸ್ವರೂಪವಾದ ದುರ್ಗಾದೇವಿಗೆ ಬಹಳ ಪ್ರಿಯವಾದ ಹಣ್ಣು ಆದ್ದರಿಂದ ದೇವಿಯ ಅನುಗ್ರಹ ಸಿಗಲೆಂದು ನಿಂಬೆ ಹಣ್ಣಿನ ದೀಪಗಳನ್ನು ಹಚ್ಚಲಾಗುತ್ತದೆ ಮತ್ತು ಸಂಸಾರದಲ್ಲಿ ಕಲಹಗಳು ಆರ್ಥಿಕ ಸಮಸ್ಯೆಗಳು ಮನೆಯಲ್ಲಿನ ವಾಸ್ತು ದೋಷ ಅಪ ಮೃತ್ಯು ಮುಖ್ಯವಾಗಿ ಕಾಳ ಸರ್ಪ ದೋಷ ವ್ಯವಹಾರದಲ್ಲಿ ತೊಂದರೆಗಳನ್ನು ಅನುಭವಿಸುತ್ತಿದ್ದಲ್ಲಿ, ಶತ್ರುಗಳ ಕಾಟ ಮದುವೆ ವಿಳಂಬಾವಾಗುತ್ತಿದ್ದಲಿ ಕೆಟ್ಟ ಕಣ್ಣಿನ ದೃಷ್ಟಿ ತಾಗಿದ್ದಲ್ಲಿ ಹೀಗೆ ಹಲವಾರು ತೊಂದರೆಗಳಿಂದ ಬೇಸತ್ತಿರುವವರು ನಿಂಬೆ ಹಣ್ಣಿನ ದೀಪವನ್ನು ಹಚ್ಚುವುದರಿಂದ ಮತ್ತು ದುರ್ಗಾ ದೇವಿಯ ಆರಾಧನೆ ಮಾಡುವುದರಿಂದ ಈ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದಾಗಿದೆ.
ಅಲ್ಲದೇ ದುರ್ಗಾ ದೇವಿಯ ಸ್ವರೂಪಗಳಾದ ಅಂಬಾ ಭವಾನಿ ಮಾರಿಯಮ್ಮ ಕಾಳಿಕಾಂಬಾ ಪಾರ್ವತೀ ದೇವಿ ಚೌಡೇಶ್ವರಿ ಈ ರೀತಿಯಾದ ಶಕ್ತಿ ದೇವಿಯರ ದೇವಸ್ತಾನಗಳಲ್ಲಿ ನಿಂಬೆ ಹಣ್ಣಿನ ದೀಪವನ್ನು ಹಚ್ಚುವುದರಿಂದ ನಿಮ್ಮ ಮನಸ್ಸಿನ ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸಿಕೊಳ್ಳಬಹುದು ಮತ್ತು ಶಕ್ತಿ ದೇವಿಯರ ಕೃಪೆಗೆ ಪಾತ್ರರಾಗಬಹುದು ಮತ್ತು ಯಾವುದೇ ಕಾರಣಕ್ಕೂ ನಿಂಬೆ ಹಣ್ಣಿನ ದೀಪಗಳನ್ನು ಶ್ರೀ ಮಹಾಲಕ್ಷ್ಮಿಯ ದೇವಸ್ತಾನಗಳಲ್ಲಿ ಮತ್ತು ಶ್ರೀ ಸರಸ್ವತಿ ದೇವಿಯ ಮುಂದೆ ಹಚ್ಚುವುದು ಸೂಕ್ತವಲ್ಲ ಯಾಕಂದ್ರೆ ಲಕ್ಷ್ಮಿ ದೇವಿ ಮತ್ತು ಸರಸ್ವತಿ ದೇವಿಯರು ಸೌಮ್ಯ ಸ್ವರೂಪದ ದೇವಿಯರಾದ್ದರಿಂದ ಶಕ್ತಿ ದೇವತೆಗಳ ಮುಂದೆ ಹಚ್ಚುವ ಈ ನಿಂಬೆ ಹಣ್ಣಿನ ದೀಪಗಳನ್ನು ಈ ದೇವಿಯರ ಮುಂದೆ ಹಚ್ಚುವುದು ಸೂಕ್ತವಲ್ಲ ಮತ್ತು ದೇವಿಯ ಅನುಗ್ರಹ ನಿಮಗೆ ಲಭಿಸುವುದಿಲ್ಲ
ನಿಂಬೆ ಹಣ್ಣಿನ ದೀಪಗಳನ್ನು ಮಂಗಳವಾರ ಮತ್ತು ಶುಕ್ರವಾರದ ದಿನಗಳಲ್ಲಿ ಹಚ್ಚುವುದು ಒಳಿತು ಮತ್ತು ಮಂಗಳವಾರದ ದಿನಗಳಂದು ಸಾಯಂಕಾಲದ ಸಮಯದಲ್ಲಿ ಮತ್ತು ಶುಕ್ರವಾರದ ದಿನಗಳಂದು ಬೆಳಗ್ಗಿನ ಸಮಯದಲ್ಲಿ ಹಚ್ಚುವುದರಿಂದ ನೀವು ಅತ್ಯಂತ ಒಳ್ಳೆಯ ಫಲಗಳನ್ನು ನಿರೀಕ್ಷಿಸಬಹುದಾಗಿದೆ ಅಲ್ಲದೇ ಮಂಗಳವಾರಕ್ಕಿಂತಲೂ ಶುಕ್ರವಾರದ ದಿನಗಳಲ್ಲಿ ಬೆಳಗ್ಗಿನ ಸಮಯದಲ್ಲಿ ದೇವಿಯ ಮುಂದೆ ನಿಂಬೆ ಹಣ್ಣಿನ ದೀಪವನ್ನು ಹಚ್ಚಿ ದೇವಿಗೆ ಅಷ್ಟೋತ್ತರ ಪೂಜೆ ಮಾಡಿಸುವುದು ದೇವಿಯ ಸಹಸ್ರನಾಮ ಪಾರಾಯಣ ಮಾಡುವುದು ಹಾಗೂ ದೇವಿಯ ಪೂಜೆಗೆ ಬಂದಂತಹ ಸುಮಂಗಲಿಯರಿಗೆ ಹರಿಶಿನ ಕುಂಕುಮ ಬಾಗಿನ ಕೊಟ್ಟು ಅವರಿಂದ ಆಶೀರ್ವಾದ ಪಡೆದುಕೊಳ್ಳುವುದು ಅತ್ಯಂತ ಶುಭ ಫಲಗಳನ್ನು ನೀಡುತ್ತದೆ ಅಲ್ಲದೇ ಒಂದೇ ಮನೆಯ ಇಬ್ಬರು ಮಹಿಳೆಯರು ಯಾವುದೇ ಕಾರಣಕ್ಕೂ ನಿಂಬೆ ಹಣ್ಣಿನ ದೀಪವನ್ನು ಹಚ್ಚಬಾರದು ಮತ್ತು ಮದುವೆಯ ದಿನಗಳಲ್ಲಿ ಹುಟ್ಟುಹಬ್ಬದ ದಿನಗಳಲ್ಲಿ ಮಹಿಳೆಯರು ಮುಟ್ಟಾದ ದಿನಗಳಲ್ಲಿ ನಿಂಬೆ ಹಣ್ಣಿನ ದೀಪಗಳನ್ನು ಹಚ್ಚುವುದು ಶುಭವಲ್ಲ