Leelavathi story About Bramanda Guruji: ಹಿರಿಯ ನಟಿ ಲೀಲಾವತಿ ಅವರು ಕಳೆದ ವಾರ ಇಹಲೋಕ ತ್ಯಜಿಸಿದರು. ಕೆಲ ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಡಿಸೆಂಬರ್ 8ರಂದು ಕೊನೆಯುಸಿರೆಳೆದರು. 86ನೇ ವಯಸ್ಸಿನಲ್ಲಿ ವಿಧಿವಶರಾದರು ಹಿರಿಯ ನಟಿ ಲೀಲಾವತಿ. ಇವರ ಸಿನಿಮಾ ಸಾಧನೆ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ.. ಸುದೀರ್ಘ ಸಿನಿಪಯಣದಲ್ಲಿ ಎಲ್ಲಾ ಭಾಷೆಗಳಲ್ಲಿ 600 ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕಷ್ಟಪಟ್ಟು ಬೆಳೆದ ಲೀಲಾವತಿ ಅವರು, ತಮ್ಮಂತೆಯೇ ಕಷ್ಟದಲ್ಲಿದ್ದ ಜನರನ್ನು ನೋಡಿ ಮರುಗಿದವರು, ಸಮಾಜಕ್ಕಾಗಿ ಪ್ರಾಣಿಗಳಿಗಾಗಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಪಶು ಆಸ್ಪತ್ರೆ ಕಟ್ಟಿಸಿದ್ದಾರೆ. ಎಷ್ಟೋ ಜನರ ಬದುಕಿಗೆ ಬೆಳಕಾಗಿದ್ದಾರೆ. ಮಹಾನ್ ಜೀವಿ ಲೀಲಾವತಿ ಅವರ ಬಗ್ಗೆ ಸಂದರ್ಶನ ಒಂದರಲ್ಲಿ ಬ್ರಹ್ಮಾಂಡ ಗುರೂಜಿ ಅವರು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ.

ಲೀಲಾವತಿ ಅವರ ಹೊಸ ಮನೆಗೆ ಒಂದು ಸಾರಿ ಬ್ರಹ್ಮಾಂಡ ಗುರುಜಿ ಹೋದಾಗ, ಅವರ ಪ್ರಶಸ್ತಿಗಳನ್ನ ತೋರಿಸಿದ್ದರಂತೆ, ಹಾಗೆಯೇ ಅವರ ಬೆಡ್ ರೂಮ್ ನಲ್ಲಿ ರಾಜ್ ಕುಮಾರ್ ಅವರಿಗೆ ಊಟ ಮಾಡಿಸುತ್ತಿರುವ ಫೋಟೋ ಕೂಡ ಇದೆಯಂತೆ. ಅದೊಂದು ಸುಂದರ ಫೋಟೋ ಆಗಿದ್ದು, ಅದನ್ನ ನೋಡಿದ್ರೆ ರಾಜ್ ಕುಮಾರ್ ಅವರ ಮೇಲೆ ಎಷ್ಟು ಪ್ರೀತಿ ಇದೆ ಅನ್ನೋದು ಗೊತ್ತಾಗುವ ಹಾಗಿದ್ಯಂತೆ ಆ ಫೋಟೋ.

ರಾಜ್ ಕುಮಾರ್ ಅವರನ್ನ ಲೀಲಾವತಿ ಅವರು ಎಷ್ಟು ಲವ್ ಮಾಡ್ತಿದ್ರು ಅನ್ನೋದು ಗೊತ್ತಾಗುತ್ತೆ ಅಂದಿದ್ದಾರೆ ಬ್ರಹ್ಮಾಂಡ ಗುರೂಜಿ. ಇನ್ನು ಲೀಲಾವತಿ ಅವರ ವ್ಯಕ್ತಿತ್ವದ ಬಗ್ಗೆ ಮಾತನಾಡಿ, ಅವರು ಪ್ರೀತಿ ಮಮತೆ ವಾತ್ಸಲ್ಯ ಎಲ್ಲದರಲ್ಲೂ ಮುಂದು. ಅದೇ ಥರ ಮಗನನ್ನು ಜೊತೆಯಲ್ಲೇ ಇರಿಸಿಕೊಂಡು ಬಿಟ್ರು, ಅದ್ರಿಂದ ವಿನಯ್ ಗೆ ಇವತ್ತು ಧೈರ್ಯ ಕಮ್ಮಿ, ಮಗ ಹೆಂಡತಿ ಇದ್ರು ಇಲ್ಲಿ ಎಲ್ಲವನ್ನ ಬಿಟ್ಟು ಹೋಗೋಕೆ ಆಗಲ್ಲ ಎಂದು ಹೇಳಿದ್ದಾರೆ..

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!