ಉದ್ಯೋಗ ಅವಕಾಶಗಳು ಎಲ್ಲಾ ರೀತಿಯ ಇಲಾಖೆಯಲ್ಲಿ ಇರುತ್ತದೆ ವಿದ್ಯಾ ಅರ್ಹತೆಗೆ ತಕ್ಕ ಉದ್ಯೋಗ ಸಿಗುತ್ತದೆ. ಭೂ ಸರ್ವೇ ಇಲಾಖೆ ಅವರು ಖಾಲಿ ಇರುವ ಹುದ್ದೆಗಳಿಗೆ ಅಪ್ಲಿಕೇಶನ್ ಬಿಡುಗಡೆ ಮಾಡಿದ್ದಾರೆ. ಅಪ್ಲಿಕೇಶನ್ ಸಲ್ಲಿಕೆ ಮಾಡಲು ಬೇಕಾದ ವಿದ್ಯಾ ಅರ್ಹತೆಗಳು ಯಾವವು ಎಂದು ನೋಡೋಣ ಬನ್ನಿ

ವಿದ್ಯಾ ಅರ್ಹತೆ :-ಅಪ್ಲಿಕೇಶನ್ ಸಲ್ಲಿಕೆ ಮಾಡಬೇಕು ಎಂದರೆ ಭಾರತ ಸರ್ಕಾರದಿಂದ ಮಾನ್ಯತೆ ಪಡೆದಿರುವ ಕಾಲೇಜುಗಳ ಮುಖಾಂತರ ITI ಡಿಪ್ಲೋಮಾ (Diploma) ಕೋರ್ಸ್ ಎಂಜಿನಿಯರಿಂಗ್ (Engineering) ಕೋರ್ಸ್ ಮುಗಿಸಿರುವ ಅಭ್ಯರ್ಥಿಗಳಿಗೆ ಅಪ್ಲಿಕೇಶನ್ ಸಲ್ಲಿಕೆ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ.

ಕರ್ನಾಟಕ ರಾಜ್ಯ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳು ಗ್ರಾಮ ಲೆಕ್ಕಾಧಿಕಾರಿ, ಸರ್ವೇಯರ್ ಹಾಗೂ ಎ ಡಿ ಎಲ್‌ ಆರ್ ಹುದ್ದೆ. ಈ ಹುದ್ದೆಗಳ ಭರ್ತಿ ಮಾಡುವುದಕ್ಕೆ ಸಂಬಂಧ ಪಟ್ಟಂತೆ ಬಜೆಟ್‌ ನಿರ್ಧಾರ ಮಾಡುವ ಸಮಯದಲ್ಲಿ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ 1,500 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳು, 500 ಸರ್ವೇಯರ್ ಹುದ್ದೆಗಳು, 60 ಎ ಡಿ ಎಲ್ ‌ಆರ್‌ ಹುದ್ದೆಗಳ ಭರ್ತಿಗೆ ಪ್ರಸ್ತಾವನೆಯನ್ನು ಈಗ ಸಲ್ಲಿಕೆ ಮಾಡಲಾಗಿದೆ. ಇತ್ತೀಚೆಗೆ ಅಧಿಕಾರಗಳ ಸಭೆಯನ್ನು ನಡೆಸಿದ ಸಚಿವರು, ಹುದ್ದೆಗಳ ಭರ್ತಿ ಮಾಡುವುದಕ್ಕೆ ಮುಖ್ಯಮಂತ್ರಿಗಳು ಕೂಡ ಆಸಕ್ತರಾಗಿ ಇದ್ದಾರೆ ಎಂದು ತಿಳಿಸಿದ್ದಾರೆ.
ಬಜೆಟ್‌ ಸಮಯದಲ್ಲಿ ಎಷ್ಟು ಹುದ್ದೆಗಳ ಭರ್ತಿ ಮಾಡುವುದಕ್ಕೆ ಅನುಮತಿ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಇರುವ ಅಷ್ಟೂ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಕೂಡ ನಡೆಯುತ್ತದೆ ಎಂದು ಕಂದಾಯ ಸಚಿವರು ಹೇಳಿದ್ದಾರೆ.
   
ಸರ್ವೇಯರ್ ಹುದ್ದೆ ಎಲ್ಲಾ ಸೇರಿ ಒಟ್ಟು 300ಕ್ಕೂ ಹೆಚ್ಚಿನ ಹುದ್ದೆಗಳು ಖಾಲಿ ಇದ್ದು ಅರ್ಜಿ ಸಲ್ಲಿಸುವುದಕ್ಕೆ ಅಧಿಸೂಚನೆಯನ್ನು ಕೂಡ ಬಿಡುಗಡೆ ಮಾಡಲಾಗಿದೆ. ಸರ್ವೇಯರ್‌ಗಳು ಭೂಮಿಯ ಚಿತ್ರವನ್ನು ಬರೆಯುವ ಕೆಲಸವನ್ನು ಕೂಡ ನಿರ್ವಹಣೆ ಮಾಡುವರು. ಭೂಮಿಯ ಗಡಿಗಳನ್ನು ನಿರ್ಧಾರ ಮಾಡುವುದು, ಭೂಮಿಯ ಮೇಲಿನ ಕಟ್ಟಡಗಳು ಮತ್ತು ಇತರ ರಚನೆಗಳನ್ನು ನಕ್ಷೆ ಬರೆಯುವುದು, ಭೂಮಿಯ ಮೇಲಿನ ಯೋಜನೆಗಳನ್ನು ರೂಪಿಸುವುದು ಮುಂತಾದ ಕಾರ್ಯಗಳನ್ನು ಸಹ ಇವರು ಮಾಡುವರು ಎಂದು ಹೇಳಲಾಗಿದೆ.

ಹುದ್ದೆಗೆ ಬೇಕಾದ ದಾಖಲಾತಿಗಳು :-ಅಪ್ಲಿಕೇಶನ್ ಸಲ್ಲಿಕೆ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಭಾರತೀಯ ಸರ್ಕಾರದಿಂದ ಮಾನ್ಯತೆ ಪಡೆದಿರುವ ಯಾವುದೇ ಶಿಕ್ಷಣ ಸಂಸ್ಥೆಯಿಂದ ಭೂಮಿ ಸರ್ವೆಕ್ಷಣೆ ಮತ್ತು ನಕ್ಷೆ ತಯಾರಿಕೆ ಡಿಪ್ಲೋಮಾ (Diploma in Land Surveying and Map Making), BE /B- tech ಸಿವಿಲ್ ಎಂಜಿನಿಯರಿಂಗ್’‌ನಲ್ಲಿ ಅಥವಾ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಿಂದ ITI ಪ್ರಮಾಣ ಪತ್ರವನ್ನು ಪಡೆದಿರಬೇಕು ಎಂದು ಹೇಳಲಾಗಿದೆ.

ಮಾಡುವ ಕೆಲಸದಲ್ಲಿ ಪರಿಪೂರ್ಣತೆ, ಕಾರ್ಯ ನಿಷ್ಠೆ, ಪ್ರಾಮಾಣಿಕತೆ ಮತ್ತು ವಿಷಯಗಳನ್ನು ತೆಗೆದುಕೊಳ್ಳುವ ಪ್ರಬುದ್ಧತೆ ಎಲ್ಲಾ ಇದ್ದರೆ ಸಾಕು ಯಾವ ಕೆಲಸ ಕೂಡ ಕಠಿಣ ಎನ್ನಿಸುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!