land records department karnataka: ರಾಜ್ಯದ ಕಂದಾಯ ಇಲಾಖೆ ರೈತರಿಗೆ ಅನುಕೂಲ ಅಗುವಂಥ ಅನೇಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡುತ್ತಿದೆ. ಅದರಂತೆ ಈ ಬಾರಿ ಹೊಸ ವರ್ಷದ ವೇಳೆಯಲ್ಲಿ ಕೂಡ ಕಂದಾಯ ಇಲಾಖೆ ತೆಗೆದುಕೊಂಡಿರುವ ಒಂದು ನಿರ್ಧಾರ ರೈತರಿಗೆ ಒಂದು ರೀತಿ ರೈತರಿಗೆ ಶಾ*ಕ್ ಕೊಟ್ಟಿದೆ. ಭೂಮಾಪನ ಇಲಾಖೆ, ಭೂ ದಾಖಲೆ ಇಲಾಖೆ ಈ ಕೆಲವು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಎಲ್ಲಾ ರೈತರು ತಿಳಿಯಬೇಕಾದ ವಿಚಾರ ಆಗಿದೆ.
11E, ಅಲಿನೇಷನ್ ಪೂರ್ವ ನಕ್ಷೆ ಮತ್ತು ತತ್ಕಾಲ್ ಪೋಡಿ, ಹದ್ದುಬಸ್ತು ಹಾಗೂ ಸ್ವಾಬಲಂಬಿ ಯೋಜನೆಗಳನ್ವಯ ಇರುವ ಶುಲ್ಕಗಳನ್ನು ಸರ್ಕಾರ ಈಗ ಜಾಸ್ತಿ ಮಾಡಿದೆ. ಮೋಜಣಿ ವ್ಯವಸ್ಥೆಯ ಅನುಸಾರ, ಜನರು ತಮ್ಮ ಜಮೀನಿನ ಅಳತೆ ಕೋರಿ ಸಲ್ಲಿಸುವ ಶುಲ್ಕವನ್ನು ಜಾಸ್ತಿ ಮಾಡಲಾಗಿದೆ. ಸಿಟಿಗಳಲ್ಲಿ 2 ಎಕರೆ ವರೆಗು ₹2500 ರೂಪಾಯಿ ಶುಲ್ಕ ಪಾವತಿ ಮಾಡಬೇಕು, 2 ಎಕರೆಗಿಂತ ಜಾಸ್ತಿ ಭೂಮಿ ಇದ್ದರೆ ಒಂದು ಎಕರೆಗೆ ₹1000 ಹಾಗೆ ಶುಲ್ಕ ಹೆಚ್ಚಳ ಮಾಡಲಾಗಿದೆ..
ಇನ್ನು ಹಳ್ಳಿಗಳಲ್ಲಿ 2 ಎಕರೆವರೆಗು ₹1500 ರೂಪಾಯಿ, 2 ಎಕರೆಗಿಂತ ಜಾಸ್ತಿ ಇರುವವರಿಗೆ, ಪ್ರತಿ ಎಕರೆಗೆ 400 ರೂಪಾಯಿ ದರವನ್ನು ನಿಗದಿ ಮಾಡಲಾಗಿದೆ. ಹದ್ದುಬಸ್ತಿಗಾಗಿ ಅರ್ಜಿ ಸಲ್ಲಿಸುವವರಿಗೆ, ಸಿಟಿಗಳಲ್ಲಿ 2 ಎಕರೆ ವರೆಗು ₹2000, ಅದಕ್ಕಿಂತ ಜಾಸ್ತಿ ಭೂಮಿ ಇದ್ದರೆ, ಪ್ರತಿ ಎಕರೆಗೆ ₹400 ರೂಪಾಯಿ ನಿಗದಿ ಪಡಿಸಲಾಗಿದೆ. ಹಳ್ಳಿಗಳಲ್ಲಿ ಹದ್ದುಬಸ್ತಿಗೆ ಅರ್ಜಿ ಸಲ್ಲಿಸುವವರು, 2 ಎಕರೆ ವರೆಗು #500 ರೂಪಾಯಿ, ಅದಕ್ಕಿಂತ ಜಾಸ್ತಿ ಭೂಮಿ ಇರುವವರಿಗೆ ಒಂದು ಎಕರೆಗೆ ₹300 ರೂಪಾಯಿ ಶುಲ್ಕವನ್ನು ನಿಗದಿ ಪಡಿಸಲಾಗಿದೆ.
ಸಿಟಿ ಮತ್ತು ಹಳ್ಳಿ ಎರಡು ಕಡೆ ಇರುವ ಬಾಜುದಾರನಿಗೆ ನೋಟಿಸ್ ಶುಲ್ಕವು 25 ರೂಪಾಯಿಯನ್ನು ನಿಗದಿ ಪಡಿಸಲಾಗಿದೆ. ಹಾಗೂ ಸ್ವಾವಲಂಬಿ ಯೋಜನೆಯಲ್ಲಿ, ತಮ್ಮ ಇಚ್ಛೆಯಿಂದ ಸ್ಕೆಚ್ ತಯಾರಿಸಲು ಅರ್ಜಿ ಸಲ್ಲಿಸುವವರಿಗೆ ₹1000 ರೂಪಾಯಿ ಶುಲ್ಕ ನಿಗದಿ ಆಗಿದೆ. ರಾಜ್ಯದ ರಾಜಪಾಲರ ಆದೇಶ ಪಡೆದು ಈ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. 2024ರ ಜನವರಿ 1 ರಿಂದಲೇ ಈ ಹೊಸ ಶುಲ್ಕದ ನೀತಿ ಜಾರಿಗೆ ಬಂದಿದೆ..
ಈ ದಿನಾಂಕಕ್ಕಿಂತ ಮೊದಲೇ ಯಾವುದಕ್ಕಾದರು ಅರ್ಜಿ ಸಲ್ಲಿಸಿದ್ದರೆ, ಅಂಥವರಿಗೆ ಈ ಹೊಸ ಶುಲ್ಕ ಅನ್ವಯ ಆಗುವುದಿಲ್ಲ ಎಂದು ಕೂಡ ಅಧಿಕೃತವಾಗಿ ತಿಳಿಸಲಾಗಿದೆ. ಹೆಚ್ಚಿನ ರೈತರು ಈ ವಿಚಾರಗಳಿಗೆ ಅರ್ಜಿ ಸಲ್ಲಿಸುತ್ತಿರುವ ಕಾರಣ ಅವರಿಗೆ ಬೇಗ ಸೇವೆಗಳನ್ನು ಒದಗಿಸಬೇಕು ಎಂದು ಈ ನಿರ್ಧಾರ ತೆಗೆದುಕೊಳ್ಳುಲಾಗಿದೆ.