ಲೇಬರ್ ಕಾರ್ಡ್ (labour card) ಮತ್ತು ಇ-ಶ್ರಮ ಕಾರ್ಡ್ (E – shram card) ಈ ಎರಡು ಕಾರ್ಡ್ ನಡುವೆ ಇರುವ ವ್ಯತ್ಯಾಸ ಏನು, ಈ ಎರಡು ಕಾರ್ಡ್ ಒಂದೇನಾ? ಅಥವಾ ಬೇರೆ ಬೇರೇನಾ? ಲೇಬರ್ ಕಾರ್ಡ್ ಇದ್ದವರು ಇ-ಶ್ರಮ ಕಾರ್ಡ್ ಬಳಕೆ ಮಾಡಬಹುದಾ? ಹಾಗು ಇ-ಶ್ರಮ ಕಾರ್ಡ್ ಇದ್ದವರು ಲೇಬರ್ ಕಾರ್ಡ್ ಬಳಕೆ ಮಾಡಬಹುದಾ? ತಿಳಿಯೋಣ ಬನ್ನಿ;

ಲೇಬರ್ ಕಾರ್ಡ್ (labour card) ಎಂದರೆ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಲೇಬರ್ ಕಾರ್ಡ್ ಕೊಡುವರು. ಇದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕೊಡುವ ಕಾರ್ಡ್. ಕಟ್ಟಡ ಕೂಲಿ ಕಾರ್ಮಿಕರು, ಪೇಂಟರ್ಸ್,  ಕಾಂಕ್ರೀಟ್ ಕೆಲಸ ಮಾಡುವವರು ಈ ಕಾರ್ಡ್ ಪಡೆಯಬಹುದು.
ಲೇಬರ್ ಕಾರ್ಡಿಗೆ ಬೇಕಾಗಿರುವ ಕನಿಷ್ಠ ದಾಖಲೆಗಳು ಆಧಾರ್ ಕಾರ್ಡ್ (Aadhar card).
ಉದ್ಯೋಗ ಪತ್ರ.
ವಯಸ್ಸಿನ ದೃಢೀಕರಣ ಪತ್ರ.

ಲೇಬರ್ ಕಾರ್ಡನ್ನು ದಿನಾಂಕಕ್ಕೆ ತಕ್ಕಂತೆ ರಿನಿವಲ್ ಮಾಡಿಸುವುದು ಕಡ್ಡಾಯ ಮತ್ತು ತುಂಬಾ ಮುಖ್ಯ. ಏಕೆಂದ,ರೆ ರಿನಿವಲ್ ಮಾಡಿಸದೆ ಇದ್ದ ಪಕ್ಷದಲ್ಲಿ ಅದರ, ಸೌಲಭ್ಯಗಳು ಸರ್ಕಾರದಿಂದ ಬಾರದೆ ಇರಬಹುದು. ರಿನಿವಲ್ ಮಾಡಿಸಲು ಸಹ ಶುಲ್ಕ ಇರುತ್ತದೆ. 18 ವರ್ಷದಿಂದ 60 ವರ್ಷದವರೆಗೂ ಅಸಂಘಟಿತ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಜನರು ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದು. ಲೇಬರ್ ಕಾರ್ಡ್ ಪಡೆಯಲು ನಿಗದಿತ ಶುಲ್ಕ ಸಹ ಇರುತ್ತದೆ.

ಲೇಬರ್ ಕಾರ್ಡ್ ಹೊಂದಿರುವ ಜನರಿಗೆ 60 ವರ್ಷ ಪೂರ್ಣವಾದ ನಂತರ ತಿಂಗಳಿಗೆ ₹ 1,000 ಪಿಂಚಣಿ ನೀಡಲಾಗುತ್ತದೆ. ಆದರೆ, ಈ ಸೌಲಭ್ಯ ಪಡೆಯಲು ಪ್ರತಿ ವರ್ಷ ಲೇಬರ್ ಕಾರ್ಡ್ ರಿನಿವಲ್ ಕಡ್ಡಾಯ.
ಕಾರ್ಮಿಕರಿಗೆ ಮೊದಲ ಎರಡು ಮಕ್ಕಳಿಗೆ ₹ 50,000 ಸಹಾಯಧನ ನೀಡಲಾಗುತ್ತದೆ.
ಅನಾರೋಗ್ಯದಿಂದ ಬಳಲುತ್ತಿದ್ದರೆ ರಿಯಾಯಿತಿ ದರದಲ್ಲಿ ಅಥವಾ ಪುಕ್ಕಟೆಯಾಗಿ ಆರೋಗ್ಯ ಸೇವೆ ಪಡೆಯಬಹುದು.
ಅಪಘಾತದಲ್ಲಿ ಮರಣ ಹೊಂದಿದರೆ ಕುಟುಂಬ ಅವಲಂಬಿತವಾಗಿರುವ ಜನರಿಗೆ 5 ಲಕ್ಷ ನೀಡಲಾಗುತ್ತದೆ.
ಕಾರ್ಮಿಕರ ಎರಡು ಮಕ್ಕಳಿಗೆ ಮದುವೆಗೆ ತಲ ₹ 50,000 ದಂತೆ 1 ಲಕ್ಷದ ವರೆಗೂ ಸಹಾಯಧನ ನೀಡಲಾಗುತ್ತದೆ.
ಮಕ್ಕಳ ಶಿಕ್ಷಣಕ್ಕೆ ಸಹಾಯಧನವನ್ನು ನಿಯಮಿತವಾಗಿ ಕೊಡಲಾಗುತ್ತದೆ.

ಇ-ಶ್ರಮ ಕಾರ್ಡ್ (E – shram card ) ಎಂದರೆ ಕೃಷಿ ಕಾರ್ಮಿಕರು ಆಸಂಘಟಿತ ಎಲ್ಲಾ ರೀತಿಯ ಕಾರ್ಮಿಕರಿಗೆ ಇ – ಶ್ರಮ ಕಾರ್ಡ್ ಕೊಡಲಾಗುತ್ತದೆ. ಇದನ್ನು ಕೇಂದ್ರ ಸರ್ಕಾರದ ಕಡೆಯಿಂದ ಕೊಡಲಾಗುತ್ತದೆ.
ಇ – ಶ್ರಮ ಕಾರ್ಡ್ ಮಾಡಿಸಲು ಆಧಾರ್ ಕಾರ್ಡ್ ( Aadhar card ) ಇದ್ದರೆ ಸಾಕು.
ಇ – ಶ್ರಮ ಕಾರ್ಡ್ ಒಂದು ಬಾರಿ ಪಡೆದ ನಂತರ ಅದಕ್ಕೆ ರಿನಿವಲ್ ಅಗತ್ಯ ಇಲ್ಲ.
18 ರಿಂದ 60 ವರ್ಷದ ಒಳಗಿನ ಯಾವುದೇ ವ್ಯಕ್ತಿ ಅರ್ಜಿಯನ್ನು ಸಲ್ಲಿಕೆ ಮಾಡಿ ಈ  ಇ – ಶ್ರಮ ಕಾರ್ಡ್ ಪಡೆಯಬಹುದು. ಸರ್ಕಾರದ ಅನುದಾನಿತ EPFO, ESIC ಮತ್ತು NPS ಕಾರ್ಮಿಕರಿಗೆ ಒಳಪಡುವ ಜನರು ಕಾರ್ಡ್ ಪಡೆಯಲು ಅರ್ಹರಲ್ಲ.

ಇ – ಶ್ರಮ ಕಾರ್ಡ್ ಇರುವವರಿಗೆ 2 ಲಕ್ಷದವರೆಗೂ ಅಪಘಾತ ವಿಮೆ ಸೌಲಭ್ಯ ಸಿಗುತ್ತದೆ.
ಇ – ಶ್ರಮ ಕಾರ್ಡ್ ಇರುವವರು, ಶ್ರಮ ಯೋಗಿ ಮಾನ್ ಧನ್ ಯೋಜನೆ, ರಾಷ್ಟ್ರೀಯ ಪಿಂಚಣಿ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಪ್ರಧಾನಮಂತ್ರಿ ಜೀವನ ಜ್ಯೋತಿ ಯೋಜನೆ ಹಾಗೂ ಅಟಲ್ ಪಿಂಚಣಿ ಯೋಜನೆ ಪ್ರಯೋಜನ ಪಡೆಯಬಹುದು.
ಈ ಎರಡು ಕಾರ್ಡ್’ಗಳಲ್ಲಿ ಕಾರ್ಮಿಕ ಕಾರ್ಡ್ ಎನ್ನುವುದು ಅತ್ಯಂತ ಮುಖ್ಯ. ಎರಡು ಕಾರ್ಡ್’ಗಳಿಗೆ ಅದರದ್ದೇ ಆದ ವಿಶೇಷತೆ ಇದೆ. ಅದರಿಂದ, ಕಾರ್ಮಿಕರು ಈ ಕಾರ್ಡ್ಗಳನ್ನು ಪಡೆದು ಅದರ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳುವುದು ಉತ್ತಮ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!