ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ಕುಂಭ ರಾಶಿಯವರ ಜುಲೈ ತಿಂಗಳಿನ ಮಾಸ ಭವಿಷ್ಯವನ್ನು ತಿಳಿಯೋಣ.

6 ನೇ ತಾರೀಖು ಶುಕ್ರ ಗ್ರಹ ಕಟಕ ರಾಶಿಯ ಪ್ರವೇಶ ಮಾಡುತ್ತದೆ. ಕುಜ ಗ್ರಹ 12 ನೇ ತಾರೀಖಿನ ತನಕ ಮೇಷ ರಾಶಿಯಲ್ಲಿ ಇದ್ದು, ನಂತರ 12 ನೇ ತಾರೀಖು ವೃಷಭ ರಾಶಿಗೆ ಪ್ರವೇಶ ಮಾಡುತ್ತಿದ್ದಾರೆ, ಗುರು ಗ್ರಹದ ಜೊತೆ ಸೇರಿ ಗುರು ಮಂಗಳ ಯೋಗ ಎನ್ನುವುದನ್ನು ಸೃಷ್ಟಿ ಮಾಡುತ್ತಿದ್ದಾರೆ. ಸೂರ್ಯ ಗ್ರಹ 16 ನೇ ತಾರೀಖು ಸಿಂಹ ರಾಶಿಯಿಂದ ಕಟಕ ರಾಶಿಗೆ ಪ್ರವೇಶ ಮಾಡುತ್ತಿದ್ದಾರೆ, 19 ನೇ ತಾರೀಖು ಬುಧ ಗ್ರಹ ಸಿಂಹ ರಾಶಿಗೆ ಪ್ರವೇಶ ಮಾಡುತ್ತಿದ್ದಾರೆ. 31 ನೇ ತಾರೀಖು ಶುಕ್ರ ಗ್ರಹ ಸಿಂಹ ರಾಶಿಯ ಪ್ರವೇಶ ಮಾಡುತ್ತದೆ.

ಆಷಾಢ ಮಾಸದಲ್ಲಿ ನಾಲ್ಕು ಶುಕ್ರವಾರಗಳು ಅಮ್ಮನವರಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಿ ವ್ರತ ಆಚರಣೆ ಮಾಡಿ ಆರಾಧನೆ ಮಾಡಬೇಕು ಅದರಿಂದ ಹೆಚ್ಚಿನ ಶುಭಫಲಗಳು ಸಿಗುತ್ತದೆ. ಕುಂಭ ರಾಶಿಯ ಜನರಿಗೆ ಶನಿಗ್ರಹ ವಕ್ರವಾಗಿ ಇರುವುದು ಒಳ್ಳೆಯ ಫಲಗಳನ್ನು ತಂದುಕೊಡುತ್ತದೆ. ಸದ್ಯಕ್ಕೆ ಕುಂಭ ರಾಶಿಗೆ ಜನ್ಮ ಶನಿ ನಡೆಯುತ್ತಿರುವ ಕಾರಣ ಅದು, ಮಕರ ರಾಶಿಯ ಕಡೆಗೆ ದೃಷ್ಟಿ ನೆಟ್ಟಿರುತ್ತದೆ. ಆದ್ದರಿಂದ, ಕುಂಭ ರಾಶಿಗೆ ಒಳ್ಳೆಯ ಫಲಗಳನ್ನೇ ಕೊಡುತ್ತದೆ.

ಶನಿ ದೇವರು ಹಿರಿಯರು ಮಾಡಿರುವ ಪುಣ್ಯ ಮತ್ತು ಪಾಪದ ಫಲಗಳನ್ನು ಕೊಡುವರು. ಶನಿ ಗ್ರಹ ಕುಂಭ ರಾಶಿಯ ಅಧಿಪತಿ ಸಹ ಹೌದು. ಪ್ರತಿಯೊಂದು ವಿಚಾರವಾಗಿ ಕುಂಭ ರಾಶಿಯವರು ಧೈರ್ಯ ತೆಗೆದುಕೊಳ್ಳಬೇಕು. ಜಂಟಿ ವ್ಯವಹಾರ ಮಾಡುವುದರಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯ. ಹೆಚ್ಚಿನ ದುಡ್ಡಿನ ನಷ್ಟ ಆಗುವ ಸಾಧ್ಯತೆ ಜೊತೆಗೆ ಮೋಸ ಹೋಗುವ ಸಾಧ್ಯತೆ ಸಹ ಇರುತ್ತದೆ. ದುಡ್ಡಿನ ವ್ಯವಹಾರ ಮಾಡುವವರು ಹೆಚ್ಚಿನ ಎಚ್ಚರಿಕೆ ವಹಿಸುವುದು ಉತ್ತಮ.

ಕುಂಭ ರಾಶಿಯ ಜನರು ಈ ತಿಂಗಳಿನಲ್ಲಿ ದುಡ್ಡಿನ ವಿಚಾರವಾಗಿ ಅಪವಾದಗಳನ್ನು ಎದುರಿಸುವ ಸಾಧ್ಯತೆ ಇದೆ. ಅದರಿಂದ, ಜಾಗೃತಿ ವಹಿಸಬೇಕು. ಸುಖ ಸ್ಥಾನದಲ್ಲಿ ಗುರು ಗ್ರಹ ಇರುವ ಕಾರಣ ಹೆಚ್ಚಿನ ಸುಖ ಸಿಗುತ್ತದೆ. ದನ ಸ್ಥಾನಾಧಿಪತಿ, ಲಾಭ ಸ್ಥಾನಾಧಿಪತಿ ಮತ್ತು ಕುಟುಂಬ ಸ್ಥಾನಾಧಿಪತಿ ಆಗಿರುವ ಗುರು ಗ್ರಹ ಎಲ್ಲಾ ಸೌಕರ್ಯಗಳನ್ನು ನೀಡುವರು. ಆದರೆ, ಈ ರಾಶಿಯವರಿಗೆ ಗುರು ಬಲ ಇರುವುದಿಲ್ಲ ಆದರೆ, ಯಾವುದೇ ಕೆಟ್ಟ ಫಲಗಳು ಆ ಗ್ರಹದಿಂದ ಸಿಗುವುದಿಲ್ಲ. ಕುಜ ಗ್ರಹ ಗುರು ಮಂಗಳ ಯೋಗವನ್ನು ಕೊಡುವರು. ಭೂಮಿಗೆ ಸಂಬಂಧಪಟ್ಟ ವ್ಯವಹಾರ ವ್ಯಾಪಾರ ಮಾಡುವ ಜನರಿಗೆ ಈ ಗುರುಮಂಗಳ ಯೋಗ ಒಳ್ಳೆಯ ಫಲಗಳನ್ನು ಕೊಡುತ್ತದೆ. ಭೂಮಿಯಲ್ಲಿ ಮನೆಯನ್ನು ನಿರ್ಮಾಣ ಮಾಡಿ ವ್ಯಾಪಾರ ಮಾಡುವ ಜನರಿಗೆ, ಕೂಲಿ ಕಾರ್ಮಿಕರಿಗೆ, ಮೇಸ್ತ್ರಿಗಳಿಗೆ ಉತ್ತಮ ಫಲಗಳು ದೊರಕುತ್ತದೆ.

ಸೂರ್ಯ ಗ್ರಹದಿಂದ ಮಧ್ಯಮ ಫಲ ಲಭಿಸುತ್ತದೆ. ಬುಧ ಗ್ರಹ ರೋಗ ಸ್ಥಾನದಲ್ಲಿ 19 ನೇ ತಾರೀಖಿನ ತನಕ ಇರುವ ಕಾರಣ ಅಷ್ಟೇನೂ ಒಳ್ಳೆಯ ಫಲ ಲಭಿಸುವುದಿಲ್ಲ, ಸಾಲ ಆಗುತ್ತದೆ ಅಥವಾ ಶತ್ರುತ್ವ ಅಭಿವೃದ್ಧಿಯಾಗುತ್ತದೆ. ಆದರೆ 19 ನೇ ತಾರೀಖಿನ ನಂತರ ಈ ಎಲ್ಲಾ ಕೆಟ್ಟ ಫಲಗಳು ದೂರ ಆಗುತ್ತದೆ. ತುಂಬಾ ಆತ್ಮೀಯರಿಂದ ದುಃಖ ಉಂಟಾಗುವ ಸಾಧ್ಯತೆ ಇದೆ. ಧೈರ್ಯದಿಂದ ಇದ್ದರೆ ಗೆಲುವು ಖಂಡಿತ ಸಿಗುತ್ತದೆ ಯಾವುದೇ ಕಾರಣಕ್ಕೂ ಕುಗ್ಗಬಾರದು. ಸುಖ ಸ್ಥಾನಾಧಿಪತಿ ಹಾಗೂ ಭಾಗ್ಯ ಸ್ಥಾನಾಧಿಪತಿ ಆಗಿರುವ ಶುಕ್ರ ಗ್ರಹ 6 ನೇ ತಾರೀಖು ಮಿತ್ರನ ಮನೆಗೆ ಬರುವರು ಆದ್ದರಿಂದ, ಸಕಾರಾತ್ಮಕ ಫಲಗಳು ದೊರಕುತ್ತದೆ.

ದೊಡ್ಡಮಟ್ಟದ ಹೂಡಿಕೆ ಮಾಡುವುದು, ಮದುವೆ ವಿಚಾರವಾಗಿ ಮಾತುಕತೆ ಮಾಡುವುದು, ನೂತನ ಮನೆ ನಿರ್ಮಾಣ ಮಾಡುವ ವಿಚಾರ, ವಾಹನ ಖರೀದಿ ಮಾಡುವುದು ಯಾವುದು ಈ ತಿಂಗಳಲ್ಲಿ ಮಾಡಬಾರದು ಕುಂಭ ರಾಶಿಯ ಜನರು. ಶುಕ್ರ ಗ್ರಹ ಕುಟುಂಬದಲ್ಲಿ ಸಂತೋಷವನ್ನು ಕೊಡುವನು. ಸತಿ ಪತಿಗಳ ನಡುವೆ ಇರುವ ವ್ಯಾಜ್ಯಗಳನ್ನು ನಿವಾರಣೆ ಮಾಡುವನು. ಕುಟುಂಬ ಸೌಖ್ಯವನ್ನು ವೃದ್ಧಿ ಮಾಡುವನು. ಕೋಟು ವ್ಯಾಜ್ಯಗಳು ಇದ್ದರೆ ಅದರಿಂದ, ಗೆಲುವು ಸಾಧಿಸುವ ಸಾಧ್ಯತೆ ಸಹ ಇರುತ್ತದೆ. ರಾಜಕೀಯ ವ್ಯಕ್ತಿಗಳಿಗೆ, ಪೊಲೀಸ್ ಕೆಲಸ ಮಾಡುವ ಕುಂಭ ರಾಶಿಯ ಜನರಿಗೆ ಒತ್ತಡ ಹೆಚ್ಚಾಗಿ ಇದ್ದರೂ ಒಳ್ಳೆಯ ಫಲಗಳು ದೊರಕುತ್ತದೆ. ವ್ಯಾಪಾರ ವ್ಯವಹಾರ ಮಾಡುವ ಜನರಿಗೆ ಸಾಧಾರಣ ಫಲ ಲಭಿಸುತ್ತದೆ. ಸ್ಕೂಲ್, ಕಾಲೇಜ್, ಟೀಚರ್, ಹಾಸ್ಪಿಟಲ್, ಮೆಡಿಕಲ್ ಈ ರೀತಿಯ ಜನರಿಗೆ ಒಳ್ಳೆಯ ಫಲ ಲಭಿಸುತ್ತದೆ.

ಈ ರಾಶಿಯ ಜನರು ದೀರ್ಘ ಪ್ರಯಾಣ ಮಾಡಲು ಯೋಚನೆ ಮಾಡುವರು. ಆರೋಗ್ಯ ಅಭಿವೃದ್ಧಿಯಾಗುತ್ತದೆ, ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ಉಂಟಾಗುತ್ತದೆ. ಬೆಳಿಗ್ಗೆಯಿಂದ ಸಂಜೆಯ ತನಕ ಹೆಚ್ಚಿನ ಒತ್ತಡ ಇದ್ದರೂ ಹೆಚ್ಚಿನ ಶಕ್ತಿ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳಿಗೆ ಈ ಮಾಸ ಹೆಚ್ಚು ಉತ್ತೇಜನಕಾರಿಯಾಗಿ ಇರುತ್ತದೆ. ಗೌಪ್ಯ ವಿಚಾರಗಳನ್ನು ಬೇರೆಯವರ ಜೊತೆ ಚರ್ಚೆ ಮಾಡದೇ ಇರುವುದು ಉತ್ತಮ. ಅದನ್ನು, ಬೇರೆಯವರು ಬಹಿರಂಗ ಮಾಡುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಕುಂಭ ರಾಶಿಯ ಜನರಿಗೆ ಈ ತಿಂಗಳಿನಲ್ಲಿ ಆತುರದ ನಿರ್ಧಾರ ಹೆಚ್ಚಿನ ಸಮಸ್ಯೆಗಳನ್ನು ತಂದುಕೊಡುತ್ತದೆ. ಸಂಸಾರದ ವಿಚಾರಗಳನ್ನು ಹೊರಗೆ ತರಬಾರದು ಹಾಗೂ ಮೂರನೇ ವ್ಯಕ್ತಿಯ ಜೊತೆ ಅದನ್ನು ಚರ್ಚೆ ಮಾಡಬಾರದು. ಇದರಿಂದ, ಸಂಸಾರದಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಸಮಸ್ಯೆಗಳನ್ನು ಸಮಾಧಾನಕರವಾದ ರೀತಿಯಲ್ಲಿ ಪರಿಹಾರ ಮಾಡಿಕೊಳ್ಳುವುದು ಒಳ್ಳೆಯದು.

ಪ್ರೇಮ ವಿವಾಹ, ನೂತನ ವ್ಯಾಪಾರ ವ್ಯವಹಾರಗಳಿಗೆ ಈ ಮಾಸ ಸೂಕ್ತವಾದ ಕಾಲ ಅಲ್ಲ. ಸರ್ಕಾರಿ ಕೆಲಸದಲ್ಲಿ ಗೆಲುವು ಸಾಧಿಸಬಹುದು. ಆಧ್ಯಾತ್ಮಿಕ ಹಾಗೂ ಧಾರ್ಮಿಕ ವಿಚಾರವಾಗಿ ಹೆಚ್ಚಿನ ಒಲವು ತೋರುವರು ಕುಂಭ ರಾಶಿಯ ಜನರು. ನಿರ್ಧಾರಗಳನ್ನು ಕೈಗೊಳ್ಳುವಾಗ ಹಿರಿಯರು ಹಾಗೂ ಅನುಭವ ಇರುವ ಜನರ ಸಲಹೆ ಪಡೆಯುವುದು ಅತ್ಯಗತ್ಯ. ಆರೋಗ್ಯದಲ್ಲಿ ಸಣ್ಣ ಮಟ್ಟಿನ ಏರುಪೇರು ಆಗುವ ಸಾಧ್ಯತೆ ಇದೆ. ಆದರೆ ತಾತ್ಕಾಲಿಕ ಸುಖ, ನಿದ್ರೆ, ವಿಶ್ರಾಂತಿ ಎಲ್ಲಾ ಹೆಚ್ಚಾಗಿ ಸಿಗುತ್ತದೆ. ಖರ್ಚುಗಳು ಹೆಚ್ಚಾಗಿ ಆಗುವ ಸಾಧ್ಯತೆ ಇದೆ, ನೂತನ ಕೆಲಸಗಳು ಬಂದರೂ ಈ ತಿಂಗಳಿನಲ್ಲಿ ಅದನ್ನು ತೆಗೆದುಕೊಳ್ಳದೆ ಇರುವುದು ಒಳ್ಳೆಯದು. ಮಿತ್ರರಿಂದ ಮೋಸ ಹೋಗುವ ಸಾಧ್ಯತೆ ಇರುತ್ತದೆ. ಕುಂಭ ರಾಶಿಯ ಸ್ತ್ರೀಯರಿಗೆ ಈ ತಿಂಗಳು ಹೆಚ್ಚಿನ ಉತ್ತಮ ಫಲಗಳು ದೊರಕುತ್ತದೆ.

ಪರಿಹಾರಗಳು :-
ಕುಜ ಗ್ರಹಕ್ಕೆ ಮಂತ್ರವನ್ನು ಹೇಳಬೇಕು.
ಧರಣಿ ಗರ್ಭ ಸಂಭೂತಂ ವಿದ್ಯುತ್ ಕಾಂತಿ ಸಮಪ್ರಭಂ
ಕುಮಾರಂ ಶಕ್ತಿ ಹಸ್ತಂಚ ಮಂಗಳಂ ಪ್ರಣಯಾಮ್ ಯಹಂ |

ಇಲ್ಲವೇ
ಧರಸುತಾಯ ವಿದ್ಮಹೇ||
ಋಣಹರಾಯ ಧೀಮಹಿ॥
ತನ್ನಃ ಕುಜಃ ಪ್ರಚೋದಯಾತ್|
ಈ ಎರಡು ಕುಜ ಗ್ರಹದ ಮಂತ್ರಗಳಲ್ಲಿ ಒಂದನ್ನು ಜಪ ಮಾಡಬೇಕು.

ಒಂದು ಬೊಗಸಯಷ್ಟು ತೊಗರಿ ಬೆಳೆಗಳನ್ನು ತೆಗೆದುಕೊಂಡು ಹಾಗೂ ಕೆಂಪು ಪುಷ್ಪಗಳನ್ನು ತೆಗೆದುಕೊಂಡು ಆಷಾಢ ಮಾಸದ ಮೊದಲ ಮಂಗಳವಾರ ದಕ್ಷಿಣ ಮುಖವಾಗಿ ನಿಂತಿರುವ ಅಂಗಾರಕ ವಿಗ್ರಹಕ್ಕೆ ರಕ್ತ ಪುಷ್ಪದಿಂದ ( ಕೆಂಪು ಬಣ್ಣದ ಹೂವು ) ಅರ್ಚನೆ ಮಾಡಿಸಿ. ತೊಗರಿ ಬೇಳೆಯನ್ನು ಹಾಗೂ ದಕ್ಷಿಣೆ ಇಟ್ಟು ಅದನ್ನು, ಅರ್ಚಕರಿಗೆ ನೀಡಬೇಕು. ಅದಕ್ಕೆ, ಪೂಜೆಯಾದ ನಂತರ ಅದನ್ನು ಬಡವರಿಗೆ ದಾನವಾಗಿ ಕೊಡಬೇಕು ಇದರಿಂದ ಒಳ್ಳೆಯ ಫಲ ದೊರಕುತ್ತದೆ. ಇದು, ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ, ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಾಹು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ. ಈ ಕೂಡಲೇ ನಮ್ಮ ನಂಬರಿಗೆ ಕರೆಮಾಡಿ 9606655513

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!