ಕೆಎಸ್ಆರ್ಟಿಸಿ ಯಲ್ಲಿ 2020 ನೇ ಸಾಲಿನ ತಾಂತ್ರಿಕ ಸಹಾಯಕ, ಚಾಲಕ ಹಾಗೂ ಚಾಲಕ ಮತ್ತು ನಿರ್ವಾಹಕ ಈ ಮೂರು ಹುದ್ದೆಗಳಿಗೆ ಸಂಬಂಧಿಸಿದಂತೆ ನೇಮಕಾತಿಗಾಗಿ ಅರ್ಜಿಯನ್ನು ಕರೆಯಲಾಗಿದೆ. ಈ ಮೂರು ಹುದ್ದೆಗಳಿಗೆ ಸಂಬಂಧಿಸಿದ ಕೆಲವು ವಿಚಾರಗಳ ಕುರಿತಾಗಿ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ತಾಂತ್ರಿಕ ಸಹಾಯಕ, ಚಾಲಕ ಹಾಗೂ ಚಾಲಕ ಮತ್ತು ನಿರ್ವಾಹಕ ಈ ಮೂರು ಹುದ್ದೆಗಳ ಕುರಿತಾಗಿ ಕೆಎಸ್ಆರ್ಟಿಸಿ ಕೇಂದ್ರ ಕಚೇರಿಯಿಂದ ಪ್ರಕಟಣೆಯನ್ನು ಹೊರಡಿಸಲಾಗಿದೆ. ಸಹಾಯಕ ತಾಂತ್ರಿಕ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಈಗಾಗಲೇ ನಿಯೋಜನೆ ಮಾಡಿಕೊಳ್ಳಲಾಗಿದೆ ಎನ್ನುವ ಸುಳ್ಳು ಸುದ್ದಿಗಳನ್ನು ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಹರಡಿಸಲಾಗಿದ್ದು ಈಗ ಸದ್ಯ ಕೋವಿಡ್ 19 ಇರುವ ಕಾರಣಕ್ಕಾಗಿ ನೇಮಕಾತಿ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ. ಇನ್ನು ೧/೨೦೧೬ ಸಹಾಯಕ ಸಂಚಾರ ನಿರೀಕ್ಷಕ ಹುದ್ದೆಗಳಿಗೆ ಅಭ್ಯರ್ಥಿಗಳು ಆಯ್ಕೆಯಾಗಿದ್ದು ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ವಿವಿಧ ವಿಭಾಗಗಳಲ್ಲಿ ತರಬೇತಿ ನೀಡಲು ನಿಯೋಜನೆ ಮಾಡಲಾಗಿದೆ. ಪ್ರಸ್ತುತ ಕೆಎಸ್ಆರ್ಟಿಸಿ ಯಲ್ಲಿ ಯಾವುದೇ ನೇಮಕಾತಿ ಪ್ರಕ್ರಿಯೆಗಳು ಸಹ ನಡೆಯುತ್ತಿರುವುದಿಲ್ಲ.
ಈ ರೀತಿಯ ಸುಳ್ಳು ಸುದ್ದಿಗಳನ್ನು ಸುಳ್ಳು ಆದೇಶಗಳ ಕುರಿತಾಗಿ ಸಾರ್ವಜನಿಕರು ಎಚ್ಚರ ವಹಿಸಲು ಹಾಗೂ ಸುಳ್ಳು ವದಂತಿಗಳಿಗೆ ಗಮನ ನೀಡದೇ ಇರುವುದಕ್ಕೆ ಕೆಎಸ್ಆರ್ಟಿಸಿ ಕಡೆಯಿಂದ ಕೋರಿಕೊಳ್ಳಲಾಗಿದೆ. ಒಂದು ವೇಳೆ ಯಾರಾದರೂ ಕೆಎಸ್ಆರ್ಟಿಸಿ ಯಲ್ಲಿ ಕೆಲಸ ಕೊಡಿಸುವುದಾಗಿ ಆಸೆ ಹುಟ್ಟಿಸಿ ಆಮಿಷಗಳನ್ನು ಒಡ್ಡಿದರೆ ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಿ ಕೆಎಸ್ಆರ್ಟಿಸಿ ಕಡೆಯಿಂದ ಯಾವುದೇ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಇಲ್ಲವೋ ಎನ್ನುವುದರ ಬಗ್ಗೆಯೂ ವಿವರವಾಗಿ ಮಾಹಿತಿಯನ್ನು ತಿಳಿದುಕೊಳ್ಳಿ. 7760990051, 7760990095 ಎರಡು ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಸಂಪರ್ಕಿಸಬಹುದು.
ಇನ್ನು ಕೆಎಸ್ಆರ್ಟಿಸಿ ಗೆ ಸಂಬಂಧಿಸಿದಂತೆ ಯಾವುದೇ ನೇಮಕಾತಿ ಅಥವಾ ಇತರ ಮಾಹಿತಿಗಳನ್ನು ಕೆಎಸ್ಆರ್ಟಿಸಿ ನಿಗಮದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿರುತ್ತದೆ ಈ ವೆಬ್ಸೈಟ್ ಗೆ ಭೇಟಿ ನೀಡಿ ಪರಿಶೀಲಿಸಬಹುದು. ಕೆಎಸ್ಆರ್ಟಿಸಿ ನಿಗಮದ ವೆಬ್ಸೈಟ್ :- www.ksrtcjobs.com ಈ ವೆಬ್ಸೈಟ್ ನಲ್ಲಿ ಪರೀಕ್ಷಿಸಬಹುದು.