ರೈತರು ದೇಶದ ಬೆನ್ನೆಲುಬು, ಅವರ ಕೈ ಕೆಸರಾದರೆ ನಮ್ಮ ಬಾಯಿಗೆ ಮೊಸರು ಸಿಗುವುದು. ಆದರೆ ದೇಶಕ್ಕೆ ಅನ್ನ ನೀಡುವ ಎಷ್ಟೋ ರೈತರು ಅವರ ಕೃಷಿ ಚಟುವಟಿಕೆಗೆ ಅಗತ್ಯ ಇರುವ ವಸ್ತುಗಳನ್ನು ಖರೀದಿ ಮಾಡುವ ಮತ್ತು ಬೆಳೆಗೆ ಅಗತ್ಯ ಇರುವ ಹೊಸ ತಂತ್ರಜ್ಞಾನ ಅಡವಳಿಕೆ ಮಾಡಲು ಪರದಾಡುತ್ತಿರುವರು.
ಇದನ್ನು ಗಮನಿಸಿದ ಕೇಂದ್ರ ಸರ್ಕಾರ ರೈತರಿಗೆ ಹೊಸ ಯೋಜನೆಯನ್ನು ಜಾರಿ ಮಾಡಿದೆ. ಇದರಿಂದ, ಅನ್ನದಾತರಿಗೆ ಸಿಗಲಿದೆ 90% ವರೆಗೂ ಸಬ್ಸಿಡಿ. ಕೃಷಿ ಚಟುವಟಿಕೆಗೆ ಅಗತ್ಯ ಇರುವ ವಸ್ತುಗಳ ಖರೀದಿ ಮತ್ತು ಹೊಲಗಳಲ್ಲಿ ಇಲ್ಲವೇ ಗದ್ದೆಗಳಲ್ಲಿ ಅಗತ್ಯ ಇರುವ ಕೆಲವು ತಂತ್ರಜ್ಞಾನಗಳ ಅಳವಡಿಕೆಗೆ ರೈತರು ಸಾಮಾನ್ಯವಾಗಿ ಬ್ಯಾಂಕ್’ಗಳಿಂದ ಸಾಲ ಸೌಲಭ್ಯ ಪಡೆದುಕೊಳ್ಳುತ್ತಾರೆ.
ಆದರೆ, ಮಳೆ ಇಲ್ಲದೆ ಇಲ್ಲವೇ ಯಾವುದೋ ಸಮಸ್ಯೆಯಿಂದ ಬೆಳೆ ಸರಿಯಾಗಿ ಬಾರದೆ ಇದ್ದರೆ ಅವರು ಮಾಡಿದ ಸಾಲವನ್ನು ಮರಳಿ ಕೊಡುವುದೇ ದೊಡ್ಡ ಸವಾಲಾಗಿ ಪರಿಣಮಿಸುತ್ತದೆ.
ದೇಶದಲ್ಲಿ ವಾಸ ಮಾಡುವ ಎಷ್ಟೋ ರೈತರು ಅವರ ಜಮೀನಿನಲ್ಲಿ ಬೆಳೆಯುವ ಫಸಲು ಸರಿಯಾಗಿ ಕೈಗೆ ಬಾರದೆ ಇದ್ದರೆ, ಮಾಡಿಕೊಂಡ ಸಾಲ ತೀರಿಸಲು ಕೂಡ ಕಷ್ಟ ಪಡಬೇಕಾಗುತ್ತದೆ. ಆದರೆ, ಕೇಂದ್ರ ಸರ್ಕಾರದ ಹಲವು ಪ್ರಮುಖ ಯೋಜನೆಗಳು ರೈತರಿಗೆ ಅವರ ಕೃಷಿಯನ್ನು ಮುಂದುವರಿಸಲು ಉತ್ತೇಜನವನ್ನು ನೀಡುವುದರೊಂದಿಗೆ ರೈತರಿಗೆ ಹಣಕಾಸಿನ ನೆರವನ್ನು ಸಹ ಕಲ್ಪಿಸಿ ಕೊಡುತ್ತದೆ.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ :-
ರೈತರ ಕೃಷಿ ಚಟುವಟಿಕೆಗೋಸ್ಕರ ಸರ್ಕಾರದಿಂದ ಈ ಯೋಜನೆ ಜಾರಿ ಮಾಡಲಾಗಿದೆ. ತೋಟದಲ್ಲಿ ಕೃಷಿ ಹೊಂಡ ನಿರ್ಮಾಣ, ಸ್ಪಿಂಕ್ಲರ್ಗಳ ( sprinkler ) ಅಳವಡಿಕೆ, ಪಂಪ್ಸೆಟ್ ವ್ಯವಸ್ಥೆ, ನೀರಾವರಿ ವ್ಯವಸ್ಥೆ ಮೊದಲಾದವುಗಳಿಗೆ ಸಂಬಂಧಪಟ್ಟ ಹಾಗೆ ರೈತರು ಸಾಲ ತೆಗೆದುಕೊಂಡರೆ ಕೃಷಿ ಸಿಂಚಾಯಿ ಯೋಜನೆಯ ಕೆಳಗೆ ಸಾಲ ಪಡೆಯಬಹುದು.
ಸಬ್ಸಿಡಿ ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು :
- ಸಬ್ಸಿಡಿ ಪಡೆಯಲು ಕನಿಷ್ಠ ಪಕ್ಷ ಎರಡು ಎಕ್ಕರೆ ಜಮೀನು ಹೊಂದಿರಬೇಕು.
- 2023-24 ನೇ ಸಾಲಿನಲ್ಲಿ ಸರ್ಕಾರದ ಬೇರೆ ಯಾವುದೇ ಯೋಜನೆಯ ಪ್ರಯೋಜನವನ್ನು ರೈತರು ತೆಗೆದುಕೊಂಡಿರಬಾರದು.
- ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಈ ಯೋಜನೆಗೆ ಅರ್ಹರು.
- ಕೃಷಿ ಹೊಂಡದ ನಿರ್ಮಾಣ ಮತ್ತು ಸೂಕ್ಷ್ಮ ನೀರಾವರಿ ಘಟಕ ಸ್ಥಾಪನೆಗೆ ಬ್ಯಾಂಕುಗಳಲ್ಲಿ ಸಾಲ ಪಡೆದುಕೊಂಡ ರೈತರು ಈ ಸಬ್ಸಿಡಿ ಪಡೆಯಬಹುದು.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಕೆಳಗೆ ಈಗಾಗಲೇ, ಎಷ್ಟೋ ರೈತರು ಪ್ರಯೋಜನ ಪಡೆದುಕೊಂಡಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ರೈತರಿಗೆ ಶೇಕಡ 90% ನಷ್ಟು ಹಾಗೂ ಸಾಮಾನ್ಯ ರೈತರಿಗೆ ಶೇಕಡ 75% ನಷ್ಟು ಸಬ್ಸಿಡಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಅರ್ಜಿ ಸಲ್ಲಿಸುವುದು ಹೇಗೆ ಎಂದರೆ ಫಲಾನುಭವಿ ರೈತರು ಅವರ ಹತ್ತಿರದ ತೋಟಗಾರಿಕಾ ಇಲಾಖೆಯ ನಿರ್ದೇಶಕರು ಇಲ್ಲವೇ ಅಧಿಕಾರಿಗಳನ್ನು ಭೇಟಿ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.