Krushi Old Documents In Mobile: ಪ್ರತಿ ಕೃಷಿ ಭೂಮಿಯ ದಾಖಲೆಗಳು ರೈತರಿಗೆ ಬಹಳ ಮುಖ್ಯವಾಗುತ್ತದೆ. ಲೋನ್ ಪಡೆಯಲು, ಸಾಲ ಪಡೆಯಲು, ಭೂಮಿಯ ಕುರಿತು ಇನ್ಯಾವುದೇ ರೀತಿಯ ಸಾಕಷ್ಟು ವಿಚಾರಗಳಿಗೆ ಜಮೀನಿನ ದಾಖಲೆಗಳು ಅಗತ್ಯವಿರುತ್ತದೆ. ಆದರೆ ಸಮಯ ಸಂದರ್ಭದ ಅನುಸಾರ ರೈತರ ಬಳಿ ಕೆಲವು ಸಾರಿ ದಾಖಲೆಗಳು ಲಭ್ಯ ಇರುವುದಿಲ್ಲ. ದಾಖಲೆಗಳು ಕಳೆದು ಹೋಗಿರಬಹುದು ಅಥವಾ ಸಾಕಷ್ಟು ವರ್ಷಗಳ ಹಳೆಯ ದಾಖಲೆಗಳು ಬಳಕೆ ಮಾಡುವ ಸ್ಥಿತಿಯಲ್ಲಿ ಇಲ್ಲದೇ ಇರಬಹುದು. ಹೀಗೆ ಹಲವು ಕಾರಣಗಳು ಇರುತ್ತದೆ.
ಒಂದು ವೇಳೆ ರೈತನಿಗೆ ತಮ್ಮ ಜಮೀನಿನ ದಾಖಲೆಗಳು ಬೇಕು ಎಂದರೆ, ತಾಲ್ಲೂಕು ಕಚೇರಿಗಳಿಗೆ ಹೋಗಿ ಅರ್ಜಿ ಕೊಡಬೇಕಾಗುತ್ತದೆ. ಇದೆಲ್ಲಾ ಒಂದು ದಿನದಲ್ಲಿ ಮುಗಿಯುವ ಕೆಲಸಗಳು ಕೂಡ ಅಲ್ಲ. ಹಲವು ದಿನ ಅಲೆದಾಡಬೇಕಾಗುತ್ತದೆ. ಹಾಗಾಗಿ ರೈತರ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡಿರುವ ಸರ್ಕಾರ ಈ ಸಮಸ್ಯೆಗೆ ಒಂದು ಪರಿಹಾರ ತಂದಿದೆ. ಅದೇನೆಂದರೆ ಇನ್ನುಮುಂದೆ ರೈತರು ತಮ್ಮ ಮೊಬೈಲ್ ನಲ್ಲಿಯೇ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಬಹುದು. ಅವುಗಳನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು. ಅದು ಹೇಗೆ ಎಂದು ತಿಳಿಸುತ್ತೇವೆ ನೋಡಿ.
landrecords.karnataka.gov.in ಇದು ನಮ್ಮ ರಾಜ್ಯದ ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ ಆಗಿದೆ. ಈ ವೆಬ್ಸೈಟ್ ನ ಹೋಮ್ ಪೇಜ್ ಗೆ ಬಂದು, View RTC and MR ಆಯ್ಕೆಯನ್ನು ಸೆಲೆಕ್ಟ್ ಮಾಡಿ, ನಂತರ view current year RTC, old year RTC and MR, Mutation Status ಎಂದು ಅಯ್ಕೆಗಳು ಸಿಗುತ್ತದೆ. ಅದನ್ನು ಸೆಲೆಕ್ಟ್ ಮಾಡಿ. ಈಗ ಹೊಸ ಪೇಜ್ ಓಪನ್ ಆಗುವುದನ್ನು ನೋಡುತ್ತಿರಿ, ಅಲ್ಲಿ RTC, Mutation Status, Khata Extract ಹಾಗೂ Survey documents ಎಂದು ಆಯ್ಕೆ ಸಿಗುತ್ತದೆ. ಅದರಲ್ಲಿ Survey documents ಆಪ್ಶನ್ ಸೆಲೆಕ್ಟ್ ಮಾಡಿ.
Krushi Old Documents In Mobile
ಈಗ Karnataka land records Image retrieval system ಎನ್ನುವ ಹೊಸ ಪೇಜ್ ಓಪನ್ ಆಗುತ್ತದೆ. ಇಲ್ಲಿ ನಿಮ್ಮ ಫೋನ್ ನಂಬರ್ ಹಾಕಿ, ಕ್ಯಾಪ್ಚ ಕೋಡ್ ಹಾಕಿ OTP ಜೆನೆರೇಟ್ ಮಾಡಿ. ಈಗ ನಿಮ್ಮ ಫೋನ್ ನಂಬರ್ ಗೆ OTP ಬರುತ್ತದೆ, ಅದನ್ನು ಹಾಕುವ ಮೂಲಕ ಲಾಗಿನ್ ಮಾಡಿ. ಈಗ Select Survey number ಎನ್ನುವ ಆಯ್ಕೆಯನ್ನು ನೋಡುತ್ತೀರಿ, ಅದರಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಇವುಗಳನ್ನು ಸೆಲೆಕ್ಟ್ ಮಾಡಿ. ಈಗ ಸರ್ವೇ ನಂಬರ್ ಹಾಕಿ ಸರ್ಚ್ ಆಪ್ಶನ್ ಕ್ಲಿಕ್ ಮಾಡಿ.
ಈಗ ಮತ್ತೊಂದು ಹೊಸ ಪೇಜ್ ಓಪನ್ ಆಗಿ, ಅದರಲ್ಲಿ ಹಿಸ್ಸಾ ಸರ್ವೆ ಟಿಪ್ಪಣಿ ಪುಸ್ತಕ, ಮೂಲಸರ್ವೇ ಪ್ರತಿ ಪುಸ್ತಕ, ಮೂಲ ಸರ್ವೆ ಟಿಪ್ಪಣಿ ಪುಸ್ತಕ, ಎರಡನೇ ರಿಕ್ಲಾಸಿಫಿಕೇಶನ್ ಪ್ರತಿ ಪುಸ್ತಕ, ರೀ ಸರ್ವೆ ಟಿಪ್ಪಣಿ ಪುಸ್ತಕ ಹಿಸ್ಸ ಸರ್ವೆ ಪಕ್ಕ ಪುಸ್ತಕ, ಎರಡನೇ ರಿಕ್ಲಾಸಿಫಿಕೇಶನ್ ಟಿಪ್ಪಣಿ ಪುಸ್ತಕ, ಖಾಯಂ ದರ ತಃಖ್ತೆ ಎಂದು ಸಾಕಷ್ಟು ದಾಖಲೆಗಳ ಆಯ್ಕೆ ಕಾಣುತ್ತದೆ. ಇದರಲ್ಲಿ ನಿಮಗೆ ಯಾವ ದಾಖಲೆ ಬೇಕು ಎನ್ನುವುದನ್ನು ಆಯ್ಕೆ ಮಾಡಿ, View Document ಮೇಲೆ ಕ್ಲಿಕ್ ಮಾಡಿ. ಈಗ ನಿಮಗೆ ನಿಮ್ಮ ಜಮೀನಿನ ಸ್ಕ್ಯಾನ್ಡ್ ಕಪ್ಜ್ ಕಾಣುತ್ತದೆ, ಇದನ್ನು ನೀವು ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು.