ಜಮೀನಿಗೆ ಹೋಗಲು ದಾರಿಯ ಅಗತ್ಯ ಇರುತ್ತದೆ ಅದಕ್ಕೆ, ಏನೇನು ಮಾಡಬೇಕು ಎನ್ನುವುದನ್ನು ತಿಳಿಯೋಣ. ದಾರಿ ಸೃಷ್ಟಿ ಮಾಡಲು ಏನೇನು ಅಗತ್ಯ ಇರುತ್ತದೆ, ದೂರುಗಳನ್ನು ಯಾರ ಬಳಿ ಕೊಡಬೇಕು. ಯಾವ ದಾಖಲೆಗಳ ಅಗತ್ಯ ಇರುತ್ತದೆ ಎನ್ನುವ ಎಲ್ಲ ಮಾಹಿತಿಯನ್ನು ತಿಳಿಯೋಣ ಬನ್ನಿ.

ಕರ್ನಾಟಕ ರಾಜ್ಯ ಭೂ ಕಂದಾಯ ಅಧಿನಿಯಮ ಕಾಯ್ದೆಯ ಪ್ರಕಾರ ಯಾವುದೇ ಜಮೀನಿಗೆ ಹೋಗಿ ಬರಲು ನೈಸರ್ಗಿಕವಾದ ದಾರಿ ಇದ್ದೇ ಇರುತ್ತದೆ. ದಾರಿ ಇಲ್ಲದ ಜಮೀನು ಇರುವುದು ಅತಿ ವಿರಳ. ಇವಾಗಿನ ಕಾಲಮಾನದಲ್ಲಿ ಬದಲಾವಣೆಗೆ ತಕ್ಕಂತೆ ದಾರಿಗಳು ಇಲ್ಲದಾಗಿದೆ. ಎಲ್ಲರೂ ತಮ್ಮ ಜಮೀನಿನಲ್ಲಿ ಒಂದು ಅಡಿ ಜಾಗ ಬಿಡಲು ಸಿದ್ದರಾಗಿ ಇರುವುದಿಲ್ಲ

ಜಮೀನಿಗೆ ಅಧಿಕೃತ ದಾರಿ ಇಲ್ಲದ ರೈತರು ಪಕ್ಕದ ಜಮೀನಿನ ಜನರ ಜೊತೆ ಕಾಲು ದಾರಿ ಮತ್ತು ಬಂಡಿ ದಾರಿ ಬಗ್ಗೆ ಮಾತನಾಡಿ ಸಮಸ್ಯೆಯನ್ನು ಪರಿಹಾರ ಮಾಡಲು ಪ್ರಯತ್ನ ಮಾಡಬೇಕು. ರೈತರಿಗೆ ಇಸ್’ಮೆಂಟ್ ಕಾಯ್ದೆ (Easement act) ಪ್ರಕಾರ ನ್ಯಾಯ ಬದ್ಧವಾಗಿ ದಾರಿ ಪಡೆಯುವ ಅವಕಾಶ ಇದೆ.

ಯಾವ ದಾಖಲೆಗಳು ಬೇಕು ಎಂದು ನೋಡೋಣ
ಜಮೀನಿನ ಒಂದು ಪೂರ್ಣ ಸರ್ವೆ ನಕ್ಷೆ ಇದನ್ನು, ಸರ್ವೇ ಇಲಾಖೆಯಿಂದ ಪಡೆಯಬಹುದು. ಜಮೀನಿನ ನಾಲ್ಕು ದಿಕ್ಕಿನಲ್ಲಿ ಇರುವ ಅಕ್ಕ ಪಕ್ಕದ ಜಮೀನಿನ ಸರ್ವೆಯನ್ನು ಸಹ ಪಡೆದುಕೊಳ್ಳಬೇಕು.

ಸರ್ವೇನಲ್ಲಿ ಕಾಲಕ್ಕೆ ಆಗಿರುವ ಟಿಪ್ಪಣಿಗಳು.
ಪಹಣಿ ಮತ್ತು ಆಧಾರ್ ಕಾರ್ಡ್ ( Aadhar card ) ಅಗತ್ಯವಿರುತ್ತದೆ.
ಎದುರುದಾರರ ಪಹಣಿ ಮತ್ತು ವಿಳಾಸ ಬೇಕಾಗುತ್ತದೆ.
ತಾಲೂಕು ಸರ್ವೆ ಕಚೇರಿಯಿಂದ ದಾರಿ ಇಲ್ಲದ ಪ್ರಮಾಣ ಪತ್ರವನ್ನು ಪಡೆಯುವುದು ಕಡ್ಡಾಯ. ಜಮೀನಿಗೆ ಹೋಗಿ ಬರಲು ದಾರಿ ಇಲ್ಲ ಎನ್ನುವ ಅರ್ಜಿಯನ್ನು ಸರಳವಾಗಿ ಬರೆಯಬೇಕು.

ದಾಖಲೆಗಳನ್ನು ಯಾರಿಗೆ ಸಲ್ಲಿಸಬೇಕು ಅದರ ವಿಧಾನವನ್ನು ಎನ್ನುವುದನ್ನು ತಿಳಿಯೋಣ ಬನ್ನಿ:- ಮೇಲೆ ತಿಳಿಸಿರುವ ಎಲ್ಲಾ ದಾಖಲೆಗಳನ್ನು DDLR ಕಚೇರಿಗೆ ದೂರಿನ ರೂಪದಲ್ಲಿ ಸಲ್ಲಿಕೆ ಮಾಡಬೇಕು.

ಪ್ರಕ್ರಿಯೆ :- ದೂರು ದಾಖಲಿಸಿದ ನಂತರ ಹೊಸದಾಗಿ ಪುನಃ ಸರ್ವೇ ಮಾಡಲು ಅಧಿಕಾರಿಗಳು ಹೇಳಬಹುದು. ರೆವೆನ್ಯೂ ಇನ್ಸ್ಪೆಕ್ಟರ್ ಮತ್ತು ವಿಲೇಜ್ ಅಕೌಂಟೆಂಟ್ ಮೂಲಕ ವರದಿ ಕೇಳಬಹುದು. ವರದಿ ಆಧಾರದ ಮೇಲೆ ಎದುರುದಾರರಿಗೆ ನೋಟಿಸ್ ನೀಡಲಾಗುತ್ತದೆ. ಎಲ್ಲರ ಹೇಳಿಕೆಗಳನ್ನು ಪರಿಗಣನೆ ಮಾಡಿ ನಂತರ ದಾರಿ ಸೃಷ್ಟಿ ಮಾಡಲು ಆದೇಶ ನೀಡಬಹುದು. ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಮಾನ್ಯ DDLR ಅಧಿಕಾರಿಗಳು ಸ್ವತಃ ಜಮೀನಿನ ಪರಿಶೀಲನೆಗೆ ಬರಬಹುದು. ಬಂಡಿ ದಾರಿ ಅಥವಾ ಕಾಲು ದಾರಿ ಪಡೆಯಲು ಈ ಮೇಲೆ ತಿಳಿಸಿರುವ ನಿಯಮಗಳನ್ನು ಅನುಸರಿಸಿದರೆ ಜಮೀನಿಗೆ ದಾರಿ ಮಾಡಿಕೊಳ್ಳಬಹುದು.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!