Krushi land Survey: ಪ್ರತಿಯೊಬ್ಬ ಜಮೀನು ಹೊಂದಿದ ಮಾಲೀಕನಿಗೂ ಸಹ ತನ್ನ ಜಮೀನಿಗೆ ಬೌಂಡರಿಯನ್ನ ನಿರ್ಮಿಸುವ ಕಾರ್ಯ ಬಂದೇ ಬರುತ್ತದೆ ತನ್ನ ಜಮೀನಿಗೆ ಅಕ್ಕಪಕ್ಕದ ಜಮೀನುಗಳಿಂದ ತೊಂದರೆ ಉಂಟಾಗಬಹುದು ಎಂಬ ಕಾರಣದಿಂದ ತನ್ನ ಜಮೀನನ್ನ ಭದ್ರಪಡಿಸುವ ಬೌಂಡರಿಯನ್ನು ನಿರ್ಮಿಸಿಕೊಳ್ಳುವುದು ಅವಶ್ಯಕ ಹೀಗೆ ಬೌಂಡರಿ ನಿರ್ಮಿಸಲು ಭೂಮಾಪನ ಅವಶ್ಯವಾಗಿರುವುದರಿಂದ ಸರ್ಕಾರಿ ಭೂಮಾಪಕರು ನಿಮ್ಮ ಜಮೀನಿಗೆ ಬಂದು ಹೇಗೆ ಹದ್ದುಬಸ್ತು ಮಾಡುತ್ತಾರೆ ಹೀಗೆ ಮಾಡುವಾಗ ಮತ್ತು ಆ ಸರ್ವೆಯರ್ ಅನುಸರಿಸುವ ಕ್ರಮಗಳು ಹೇಗಿರುತ್ತವೆ ಜೊತೆಗೆ ಈ ಪ್ರಕ್ರಿಯೆಯಲ್ಲಿ ರೈತರ ಪಾತ್ರ ಏನು ಎಂಬ ವಿಷಯಗಳ ಬಗ್ಗೆ ರೈತರು ತಿಳಿದಿರಬೇಕಾಗುತ್ತದೆ.
ತಮ್ಮ ಆಸ್ತಿಯನ್ನು ಮಾರಾಟ ಮಾಡಲು ಅಥವಾ ಆಸ್ತಿಯನ್ನು ಭಾಗ ಮಾಡಲು ಜಮೀನಿಗೆ ಬೌಂಡರಿ ಹಾಕಲು ಆಸ್ತಿಯನ್ನು ದಾನ ಮಾಡಬೇಕೆಂದಿದ್ದವರು ಜಮೀನಿನ ಅಳತೆ ಮಾಡಲೇ ಬೇಕಾಗುತ್ತದೆ ಹೀಗೆ ಅಳತೆಯ ಕಾರ್ಯ ಕಾನೂನಿನ ಪ್ರಕಾರ ಆಗಬೇಕಾದರೆ ಸರ್ಕಾರದ ಮೋಜಣಿ ಮಾಡಿಸಿ ಸರ್ವೆಯರ್ ಕಡೆಯಿಂದ ಅಳತೆ ಮಾಡಿಸುವುದು ಅವಶ್ಯಕವಾಗಿರುತ್ತದೆ ಇದಕ್ಕೇಂದೆ ಕರ್ನಾಟಕದಲ್ಲಿ ಪ್ರತ್ಯೇಕವಾಗಿ ಸರ್ವೆ ಇಲಾಖೆಯನ್ನ ನೇಮಕ ಮಾಡಲಾಗಿದೆ.
ಮೊದಲನೆಯದಾಗಿ ಒಬ್ಬ ರೈತ ತನ್ನ ಜಮೀನಿಗೆ ಹದ್ದುಬಸ್ತು ಮಾಡಬೇಕಾದರೆ ಆತ ನಾಡಕಚೇರಿಗೆ ಹೋಗಿ ಹದ್ದುಬಸ್ತಿಗೆ ಅರ್ಜಿ ಹಾಕಬೇಕು. ಇದಾದ ನಂತರ ಅರ್ಜಿ ಪರಿಶೀಲನೆಗೆ ಒಳಪಡುತ್ತದೆ ನಂತರದಲ್ಲಿ ಈ ಎಲ್ಲಾ ಅರ್ಜಿಗಳು ಆಟೋಮೆಟಿಕ್ ಆಗಿ ಸಿಸ್ಟಮ್ಗಳ ಮುಖಾಂತರ ಸರ್ಕಾರಿ ಭೂಮಾಪಕರಿಗೆ ವರ್ಗಾವಣೆಯಾಗುತ್ತದೆ ಹೀಗೆ ಭೂಮಾಪಕರಿಗೆ ಈ ಕೆಲಸ ಅಲಾಟ್ಮೆಂಟ್ ಆದ ತಕ್ಷಣ ಗೋಮಾಪನದ ಜವಾಬ್ದಾರಿ ಅವರದ್ದಾಗಿರುತ್ತದೆ
ಈ ಮೂಲಕ ಸರ್ವೆಯರ್ ಮೊದಲಿಗೆ ಜಮೀನಿನ ತಿಪ್ಪಣ್ಣ ನಕ್ಷೆ ಹಾಗೂ ಇನ್ನಿತರ ದಾಖಲೆಗಳನ್ನು ಪರಿಶೀಲನೆ ಮಾಡಿ ಜಮೀನಿನ ಮಾಲೀಕರಿಗೆ ತಿಳುವಳಿಕೆ ಚೀಟಿ ವಿತರಿಸುವ ಒಂದು ನೋಟಿಸ್ ತಯಾರು ಮಾಡುತ್ತಾರೆ ಆ ನೋಟಿಸಿನಲ್ಲಿ ಸರ್ವೇ ನಂಬರ್ ನ ಮಾಲಿಕರಿಗೆ ಅದು ಮತ್ತು ಅಳತೆ ಮಾಡುವ ಸಂದರ್ಭದಲ್ಲಿ ನಿಮ್ಮ ಜಮೀನಿನಲ್ಲಿ ಹಾಜರಿರಬೇಕು ಎಂಬ ವಿಷಯದ ಬಗ್ಗೆ ಈ ನೋಟಿಸಿನಲ್ಲಿ ಬರೆಯಲಾಗುತ್ತದೆ.
ನಂತರ ಸರ್ವೆಯರ್ ಆ ಒಂದು ಸರ್ವೆ ನಂಬರಿನ ಗಡಿಯನ್ನು ಗುರುತಿಸಿ, ಅಲ್ಲಿನ ಹೂತಿರುವ ಕಲ್ಲನ್ನ ಪತ್ತೆ ಹಚ್ಚುತ್ತಾರೆ ಈ ಮೂಲಕ ಜಮೀನಿನ ಅಳತೆಯನ್ನು ವ್ಯವಸ್ಥಿತವಾಗಿ ಮಾಡಿ ಜಮೀನಿನ ಗಡಿಯನ್ನು ಕಂಡು ಹಿಡಿದು ಯಾವುದಾದರೂ ವ್ಯತ್ಯಾಸ ಕಂಡು ಬಂದಲ್ಲಿ ಅದನ್ನು ಯಥಾವತ್ತಾಗಿ ಗುರುತಿಸುತ್ತಾರೆ ಇದರಿಂದ ಬೇರೆಯವರು ರೈತರ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದು ತೀಕ್ಷ್ಣವಾಗಿ ತಿಳಿದು ಬರುತ್ತದೆ ಇದಾದ ನಂತರ ಸ್ಥಳದಲ್ಲಿದ್ದ ಕೆಲವು ರೈತರ ಸಹಿಯನ್ನ ಸಾಕ್ಷಿಯಾಗಿ ಹಾಕಿಸಿಕೊಂಡು ಅಲ್ಲಿಂದ ಹೊರಟು ಹೋಗುತ್ತಾರೆ.
ಅಳತೆ ಕಾರ್ಯ ಮುಗಿದ ನಂತರ ಸರ್ವೆಯರ್ ನಿಗದಿತ ನಮೂನೆಯಲ್ಲಿ ನಕ್ಷೆ ಸಹಿತ ಎಲ್ಲಾ ವಿವರಗಳನ್ನು ದಾಖಲಿಸುತ್ತಾರೆ ಅವರ ಸಿಸ್ಟಮ್ ನಲ್ಲಿ ಈ ಮಾಹಿತಿಯನ್ನು ಅಪ್ಲೋಡ್ ಮಾಡುತ್ತಾರೆ ಇದಾದ ನಂತರ ರೈತರು ಹದ್ದುಬಸ್ತಿಗೆ ಹಾಕಿರುವ ಅರ್ಜಿಯ ಜೊತೆಗೆ ನಾಡ ಕಚೇರಿಗೆ ಹೋಗಿ ಹದ್ದುಬಸ್ತಿನ ಅಳತೆ ಮಾಡಿರುವ ನಕ್ಷೆಯನ್ನು ತೆಗೆದುಕೊಳ್ಳಬೇಕು ಈ ನಕ್ಷೆಯ ಮೂಲಕ ತಮ್ಮ ಜಮೀನಿಗೆ ರೈತರು ಬೌಂಡರಿಯನ್ನು ಹಾಕಿಕೊಳ್ಳಬಹುದು.
ರೈತನು ತನ್ನ ಜಮೀನಿನ ಅಳತೆ ಮಾಡುವ ಸಂದರ್ಭದಲ್ಲಿ ಅಕ್ಕ ಪಕ್ಕದ ಜಮೀನಿನ ಮಾಲೀಕರಿಗೆ ಅಲ್ಲಿ ಹಾಜರಿರಲು ಸೂಚಿಸಬೇಕು ಇಲ್ಲವಾದರೆ ಸರಿಯಾದ ರೀತಿಯಲ್ಲಿ ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನ ಅವರಿಂದ ಬಿಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಅಷ್ಟೇ ಅಲ್ಲದೆ ಒತ್ತುವರಿ ಭೂಮಿಯನ್ನು ಬಿಡದೆ ಇದ್ದಂತಹ ಸಂದರ್ಭದಲ್ಲಿ ಈ ಸರ್ವೆಯರ್ ಯಾವ ಸಹಾಯಕ್ಕುಬರುವುದಿಲ್ಲ ಈ ಸಮಸ್ಯೆಯನ್ನು ನೀವು ಕೋರ್ಟ್ ಮುಖಾಂತರವೇ ಬಗೆಹರಿಸಿಕೊಳ್ಳಬೇಕು.