ಒಂದು ಮನೆ ಎಂದಮೇಲೆ ಅಲ್ಲಿ ಮನೆಯ ಜನರ ನಡುವೆ ಆಸ್ತಿ ವಿಚಾರಕ್ಕೆ ಜಗಳಗಳು ಬಂದೆ ಬರುತ್ತದೆ. ಹಾಗಾಗಿ ಆಸ್ತಿ ವಿಭಜನೆ ಹೇಗೆ ಮಾಡಬೇಕು ಎನ್ನುವುದನ್ನು ತಿಳಿದುಕೊಂಡು ಬಿಟ್ಟರೆ, ನಿಮ್ಮ ಮನೆಯವರ ನಡುವೆ ಜಗಳ ಬರುವುದಿಲ್ಲ. ಎಲ್ಲರೂ ಕೂಡ ಕಾನೂನಿನ ರೀತಿಯಲ್ಲಿ ಆಸ್ತಿ ವಿಭಜಿಸಿಕೊಳ್ಳಬಹುದು. ಒಂದು ವೇಳೆ ಜಮೀನು ಹೊಂದಿರುವ ಮಾಲೀಕನೆ ವಿಧಿವಶವಾಗಿ ಬಿಟ್ಟರೆ, ಆ ಆಸ್ತಿಯನ್ನು ವಿಭಜನೆ ಮಾಡಿಕೊಳ್ಳುವುದು ಹೇಗೆ ಎಂದು ತಿಳಿಸಿಕೊಡುತ್ತೇವೆ ನೋಡಿ..
ಒಬ್ಬ ಮಾಲೀಕ ತೀರಿಹೋದರೆ, ಅವರು ಖಾತೆಯನ್ನು ಚೇಂಜ್ ಮಾಡಲು ಇಷ್ಟಪಡುವುದಿಲ್ಲ. ಅದಕ್ಕೆ ಕಾರಣ, ಮನೆಯಲ್ಲಿ ವಿವಾದ ಶುರು ಆಗಬಹುದು ಎನ್ನುವುದಾಗಿದೆ. ಮೃತ ವ್ಯಕ್ತಿಗೆ ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಪತ್ನಿಯರು ಇದ್ದರೆ ಆಗ ಸಮಸ್ಯೆಗಳು ಶುರುವಾಗುತ್ತದೆ. ಹಾಗಾಗಿ ಇವುಗಳ ಬಗ್ಗೆ ನೀವು ತಿಳಿದುಕೊಂಡಿರಬೇಕು. ಕಾನೂನು ನಿಯಮ ಹೇಗಿದೆ ಎಂದರೆ, ಒಬ್ಬ ವ್ಯಕ್ತಿ ಮರಣ ಹೊಂದಿದರೆ, ಆ ರೀತಿ ಆದ 6 ತಿಂಗಳ ಒಳಗೆ ಖಾತೆ ಬದಲಾವಣೆ ಮಾಡಿಬಿಡಬೇಕು ಎಂದು ಹೇಳುತ್ತದೆ.
ನಿಮ್ಮ ಜಮೀನಿನಲ್ಲಿ ಯಾವುದಾದರು ಸಮಸ್ಯೆ ಇದ್ದರು ಇಲ್ಲದೇ ಇದ್ದರು ಸಹ, ಪಾತಿ ಖಾತೆ ಮಾಡಬೇಕು, ಮನೆಯ ಒಡೆಯ ಮರಣ ಹೊಂದಿದ ಬಳಿಕ ಆಸ್ತಿಯನ್ನು ಹೇಗೆ ಪಾಲು ಮಾಡಬೇಕು ಎಂದರೆ, ಯಜಮಾನನ ಮರಣದ ನಂತರ ಪೌತಿ ಖಾತೆ ಮಾಡಿಸಲು ಅರ್ಜಿ ಸಲ್ಲಿಸಬೇಕು. ಖಾತೆಯನ್ನು ಯಾರ ಹೆಸರಿಗೆ ಮಾಡಿಸಬೇಕೋ, ಅವರ ಹೆಸರಿಗೆ ಅರ್ಜಿ ಸಲ್ಲಿಸಬೇಕು. ಪೌತಿ ಖಾತೆ ಮಾಡಿಸಿದರೆ ಇಡೀ ಆಸ್ತಿ, ಅವರಿಗೆ ಆಗುವುದಿಲ್ಲ.
ಆ ಜಾಗಕ್ಕೆ ಸಂಬಂಧಪಟ್ಟ ಕಂದಾಯ ಹಾಗೂ ಇನ್ನಿತರ ಸೌಲಭ್ಯಗಳನ್ನು ಪಡೆಯಲು ಖಾತೆ ಮಾಡಿಸಿಕೊಳ್ಳಬಹುದು. 11E ನಕ್ಷೆಗೆ ಅಪ್ಲಿಕೇಶನ್ ಹಾಕಬೇಕು, ಅದಕ್ಕಾಗಿ ಮನೆಯ ಎಲ್ಲರ ಆಧಾರ್ ಕಾರ್ಡ್ ಇರಬೇಕು. ಪಹಣಿ ಮಾಡಿಸಿಕೊಳ್ಳಲು, ಇ ನಕ್ಷೆ ಮಾಡಿಸಿಕೊಳ್ಳಲು, ನಾಡ ಆಫೀಸ್ ಗೆ ಹೋಗಿ ಅರ್ಜಿ ಹಾಕಬೇಕಾಗುತ್ತದೆ. ಆಗ ನಿಮಗೆ ಜಮೀನಿನ ಪೂರ್ತಿ ನಕ್ಷೆ ಸಿಗುತ್ತದೆ. ನಕ್ಷೆ ಪಡೆಯುವುದಕ್ಕೆ, ಪಾಲುದಾರರು ಆಧಾರ್ ಕಾರ್ಡ್ ಹಾಗೂ ವಂಶಾವಳಿ ಪ್ರಮಾಣ ಪತ್ರವನ್ನು ಸಬ್ ರಿಜಿಸ್ಟರ್ ಆಫೀಸ್ ಗೆ ರಿಜಿಸ್ಟರ್ ಮಾಡಿಸಬೇಕು. ಮ್ಯುಟೇಶನ್ ಆದ ನಂತರ ಗ್ರಾಮ ಲೆಕ್ಕಾಧಿಕಾರಿಗಳು ಪಹಣಿ ಪತ್ರ ಮಾಡಿಕೊಡುತ್ತಾರೆ. ಈ ರೀತಿಯಾಗಿ ಎಲ್ಲಾ ಕೆಲಸ ಮಾಡುವುದು ಮುಖ್ಯ.