Krushi land Record In Mobile ರೈತರು ತಮ್ಮ ಜಮೀನಿಗೆ ಹೋಗಲು ಕಾಲುದಾರಿ ಅಥವಾ ಬಂಡಿದಾರಿ ಹೊಂದುವುದು ಅಗತ್ಯವಾಗಿದೆ. ಕೃಷಿ ಜಮೀನಿಗೆ ಬೇಕಾಗಿರುವ ಅಗತ್ಯ ಉಪಕರಣಗಳನ್ನು ಸಾಗಿಸಲು ವಾಹನ ಜಮೀನಿಗೆ ತಲುಪಲು ದಾರಿ ಬೇಕಾಗುತ್ತದೆ. ಸರ್ಕಾರ ಪ್ರತಿ ಜಮೀನಿಗೆ ಕಾಲುದಾರಿಯನ್ನು ಕೊಟ್ಟಿದೆ ಅದನ್ನು ಆನ್ಲೈನ್ ಮೂಲಕ ಹೇಗೆ ನೋಡುವುದು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ಕಾಲುದಾರಿ ಪಡೆದುಕೊಳ್ಳುವುದಕ್ಕಾಗಿ ರೈತರು ಹಾಗೂ ಖಾಸಗಿ ಜಮೀನಿನ ಮಾಲೀಕರ ನಡುವೆ ಸಾಕಷ್ಟು ವ್ಯಾಜ್ಯಗಳು ನಡೆಯುತ್ತವೆ. ತಾವು ಯಾವುದೆ ಕಾರಣಕ್ಕೂ ಕಾಲುದಾರಿ ಬಿಟ್ಟು ಕೊಡುವುದಿಲ್ಲ ಎಂದು ಖಾಸಗಿ ಜಮೀನಿನ ಮಾಲೀಕರು ಹೇಳಿದರೆ ಕೃಷಿಕರು ತಮ್ಮ ಜಮೀನಿಗೆ ಹೋಗಲು ದಾರಿ ಇಲ್ಲದೆ ಪರದಾಡಬೇಕಾಗುತ್ತದೆ. ಸರ್ಕಾರದಿಂದ ಕೃಷಿ ಜಮೀನಿಗೆ ಕಾಲುದಾರಿ ನೀಡಲಾಗಿರುತ್ತದೆ ಹೀಗಾಗಿ ಕೃಷಿ ಜಮೀನಿನ ಸುತ್ತ ಎಲ್ಲಿ ಕಾಲುದಾರಿ ನೀಡಲಾಗಿದೆ ಎಂದು ಅಧಿಕೃತವಾಗಿ ತಿಳಿದುಕೊಳ್ಳಬೇಕಷ್ಟೆ.
ಆನ್ಲೈನ್ ಮೂಲಕ ಕೃಷಿ ಜಮೀನಿಗೆ ಇರುವ ದಾರಿಯ ಬಗ್ಗೆ ತಿಳಿದುಕೊಳ್ಳಬಹುದು https://www.landrecords.karnataka.gov.in/service3/ ಎಂಬ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿದಾಗ ಪೇಜ್ ಓಪನ್ ಮಾಡಿದಾಗ ಮೇಲ್ಭಾಗದಲ್ಲಿ ಮೊದಲು ಜಿಲ್ಲೆ ಹೋಬಳಿ ನಕ್ಷೆ ಪ್ರಕಾರ ದಾಖಲೆಗಳನ್ನು ಎಂಟ್ರಿ ಮಾಡಬೇಕು. ಹೋಬಳಿ ಅಡಿಯಲ್ಲಿ ಎಲ್ಲಾ ಊರುಗಳ ಹೆಸರನ್ನು ತೋರಿಸಲಾಗಿರುತ್ತದೆ ಒಂದು ಊರನ್ನು ಆಯ್ಕೆ ಮಾಡಿದಾಗ ಒಂದು ಫೈಲ್ ಡೌನ್ಲೋಡ್ ಆಗುತ್ತದೆ.
ನಂತರ ಡೌನ್ಲೋಡ್ ಆಗಿರುವ ಫೈಲ್ ಅನ್ನು ಓಪನ್ ಮಾಡಿದಾಗ ಹಳದಿ ಬಣ್ಣದ ಗೆರೆ ಕಾಣಿಸಿದರೆ ಅದು ಜಮೀನಿಗಾಗಿ ಸರ್ಕಾರ ಬಿಟ್ಟಿರುವ ಕಾಲುದಾರಿಯಾಗಿದೆ. ಈ ನಕ್ಷೆಯ ಮೂಲಕ ಸುಲಭವಾಗಿ ಜಮೀನಿಗೆ ಬಿಟ್ಟಿರುವ ಕಾಲುದಾರಿ ಅಥವಾ ಬಂಡಿದಾರಿಯನ್ನು ತಿಳಿದುಕೊಳ್ಳಬಹುದು. ಯಾವುದೆ ರೈತ ತನ್ನ ಜಮೀನಿಗೆ ಹೋಗಲು ಕಾಲುದಾರಿ ಇಲ್ಲದೆ ಇರುವ ಸಂದರ್ಭದಲ್ಲಿ ತಕ್ಷಣವೆ ರೈತನು ತಹಶೀಲ್ದಾರರು ಅಥವಾ ಪೊಲೀಸರಿಗೆ ತಿಳಿಸಿ ಅವರ ಸಹಾಯದಿಂದ ಯಾವುದೆ ವ್ಯಾಜ್ಯ ಇಲ್ಲದೆ ತಮ್ಮ ಜಮೀನಿಗೆ ಖಾಸಗಿ ಜಮೀನಿನ ಮೂಲಕ ಹೋಗಲು ಕಾಲುದಾರಿಯನ್ನು ನಿರ್ಮಿಸಿಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲಾ ರೈತರಿಗೂ ತಿಳಿಸಿ