Krishi Vikas Yojana: ರೈತರಿಗೆ ಕೇಂದ್ರ ಸರ್ಕಾರದಿಂದ ಇದೀಗ ಹೊಸ ಯೋಜನೆ ಒಂದು ಜಾರಿಯಾಗಲಿದ್ದು ಈ ಯೋಜನೆ ಎಲ್ಲ ರೈತರಿಗೆ ಸಿಹಿ ಸುದ್ದಿಯನ್ನು ನೀಡಿದೆ ಈ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬ ರೈತರಿಗೂ ವರ್ಷಕ್ಕೆ ಐವತ್ತು ಸಾವಿರದಷ್ಟು ಹಣ ಸಿಗಲಿದ್ದು ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಈ ಹೊಸ ಯೋಜನೆಯ ಹೆಸರು ಪರಂಪರಾಗತ್ ಕೃಷಿ ವಿಕಾಸ್ ಯೋಜನೆ ಇದರ ಅಡಿಯಲ್ಲಿ ಸಾವಯುವ ಕೃಷಿಗೆ ಸರ್ಕಾರ ಉತ್ತೇಜನ ನೀಡಲಿದ್ದು ಇದು ರೈತರಿಗೆ ತುಂಬಾ ಪ್ರಯೋಜನಕಾರಿಯಾಗಿದೆ ಇದರಿಂದ ಸಾವಯವ ಕೃಷಿ ಮಾಡುವ ರೈತರಿಗೆ ಉತ್ತೇಜನ ಸಿಗುತ್ತದೆ ಈ ಯೋಜನೆಯಿಂದ ರೈತರಿಗೆ ಪ್ರತಿ ವರ್ಷ 50,000ದಂತೆ ಉಚಿತವಾಗಿ ಧನ ಸಹಾಯವನ್ನು ನೀಡಲಾಗುತ್ತದೆ. ಇದರ ಮುಖಾಂತರ ರೈತರು ಯಾವುದೇ ಬೆಳೆಗಳನ್ನು ಬೆಳೆದರು ಅದರ ಬೇಡಿಕೆಯು ಭಾರತ ಮತ್ತು ಇತರೆ ದೇಶಗಳಲ್ಲಿ ಕಂಡು ಬರುತ್ತದೆ.
ಈ ಯೋಜನೆಯ ಪ್ರಯೋಜನಗಳು ಏನೆಂದರೆ- ಸಾಂಪ್ರದಾಯಿಕ ಕೃಷಿ ಅಭಿವೃದ್ಧಿ ಯೋಜನೆಯಿಂದ ರೈತರು ಸಾವಯವ ಕೃಷಿ ಮಾಡಲು ಸಾಧ್ಯವಾಗುತ್ತದೆ ಹಾಗೆಯೇ ಈ ಸಾವಯವ ಕೃಷಿಗೆ ಅಧಿಕ ಹಣದ ಅವಶ್ಯಕತೆ ಇದ್ದು ಈ ಯೋಜನೆಯು ಆರ್ಥಿಕ ನೆರವನ್ನು ನೀಡುತ್ತದೆ.
ಈ ಯೋಜನೆಯಲ್ಲಿ ಪ್ರತಿ ಹೆಕ್ಟರಿಗೆ 50,000 ದಷ್ಟು ರೈತರಿಗೆ ನೀಡಲಾಗುವುದು ಮತ್ತು ಅದರ ಲಾಭವನ್ನು ಮೂರು ವರ್ಷಗಳವರೆಗೆ ರೈತರು ಪಡೆಯಬಹುದು ಇದರ ಜೊತೆಗೆ ನಿಮ್ಮ ಜಮೀನಿನಲ್ಲಿ ಕ್ಲಸ್ಟರ್ ರಚನೆ ಹಾಗೂ ಸಾಮರ್ಥ್ಯ ವೃದ್ಧಿಗಾಗಿ ಪ್ರತಿ ಹೆಕ್ಟರ್ ಗೆ 3000 ರೂಗಳಷ್ಟು ನೀಡಲಾಗುತ್ತದೆ ಅಷ್ಟೇ ಅಲ್ಲದೆ ರೈತರಿಗೆ ಕೀಟನಾಶಕ ಸಾವಯವ ಗೊಬ್ಬರಗಳಿಗೆ ಮೀಸಲಾಗಿ 31000 ರೂಪಾಯಿಗಳಷ್ಟು ನೀಡಲಾಗುವುದು.
ನೀಡಲಾಗುವುದು ಈ ಹಣವು ರೈತರ ಬ್ಯಾಂಕು ಖಾತೆಗೆ ನೇರವಾಗಿ ವರ್ಗಾವಣೆಯಾಗುತ್ತದೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳನ್ನು ಈ ಕೆಳಗೆ ನೋಡೋಣ.
ಮೊದಲನೆಯದಾಗಿ ಕೃಷಿಕರು ಭಾರತ ಮೂಲದವರು ಆಗಿರಬೇಕು ಜೊತೆಗೆ ಕನಿಷ್ಠ ವಯಸ್ಸು 18 ಆಗಿರಲೇಬೇಕು ವಿಶೇಷವಾಗಿ ಕೇಬಲ್ ಕ್ರಷಿಕರಿಗೆ ಇದರ ಲಾಭ ಸಿಗಲಿದೆ
ಅರ್ಜಿ ಪ್ರಕ್ರಿಯೆಗೆ ಅವಶ್ಯಕವಾದ ದಾಖಲೆಗಳು ಯಾವವು ಎಂದರೆ-
ಆಧಾರ್ ಕಾರ್ಡ್
ಪಾನ್ ಕಾರ್ಡ್
ಮೂಲ ವಿಳಾಸದ ಪುರಾವೆ
ಪಡಿತರ ಚೀಟಿ
ಜನನ ಪ್ರಮಾಣ ಪತ್ರ
ಪಾಸ್ಪೋರ್ಟ್ ಅಳತೆಯ ಭಾವಚಿತ್ರ
ಮೊಬೈಲ್ ನಂಬರ್
ಅರ್ಜಿ ಪ್ರಕ್ರಿಯೆ ಅಧಿಕೃತ ಜಾಲತಾಣ: https://pgsindia-ncof.gov.in/
ಇದನ್ನೂ ಓದಿ..ಸರ್ಕಾರದಿಂದ ದ್ವಿಚಕ್ರ ವಾಹನಗಳ ಉಚಿತ ವಿತರಣೆ ಆಸಕ್ತರು ಅರ್ಜಿಹಾಕಿ