ಕೃಷಿ ಇಲಾಖೆ 2024-25ರ ಅನುದಾನ ಯೋಜನೆಯಡಿಯಲ್ಲಿ ಮಿನಿ ಟ್ರ್ಯಾಕ್ಟರ್, ಟಿಲ್ಲರ್, ವೀಡರ್ ಮತ್ತು ಇತರ ಯಂತ್ರೋಪಕರಣಗಳ ಖರೀದಿಗೆ ರಿಯಾಯಿತಿ ದರದಲ್ಲಿ ಅನುದಾನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ.

ಕೃಷಿ ಯಾಂತ್ರೀಕರಣ ಮತ್ತು ಕೃಷಿ ಸಂಸ್ಕರಣಾ ಕಾರ್ಯಕ್ರಮದಡಿಯಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇ.50 ವರೆಗೆ ಸಹಾಯಧನವನ್ನು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ 90% ವರೆಗೆ ಸಹಾಯಧನವನ್ನು ಒದಗಿಸಲಾಗುವುದು. ಸೂಕ್ಷ್ಮ ನೀರಾವರಿ ಯೋಜನೆಯಡಿ ಎಲ್ಲಾ ವರ್ಗದ ರೈತರಿಗೆ ತುಂತುರು ನೀರಾವರಿ ಸೌಲಭ್ಯಗಳ ಮೇಲೆ 90% ಸಹಾಯಧನವನ್ನು ಒದಗಿಸಲಾಗುವುದು. ಈ ಯೋಜನೆಯ ಸೌಲಭ್ಯ ಪಡೆಯುವ ಆಸಕ್ತ ರೈತರು ತಮ್ಮ ಸಮೀಪದ ಆಯಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಪಡೆದು ಅರ್ಜಿ ಸಲ್ಲಿಸಿ ಸಬ್ಸಿಡಿ ದರದಲ್ಲಿ ಯಂತ್ರೋಪಕರಣಗಳನ್ನು ಖರೀದಿಸಲು ನೋಂದಣಿ ಮಾಡಿಕೊಳ್ಳಬಹುದು.

ಯಾವೆಲ್ಲ ಯಂತ್ರಗಳನ್ನು ಪಡೆಯಲು ಸಬ್ಸಿಡಿ ದೊರೆಯಲಿದೆ ಗೊತ್ತಾ?
ಪ್ಲೋರ್ ಮಿಲ್
ಮಿನಿ ರೈಸ್ ಮಿಲ್
ರಾಗಿ ಕ್ಲೀನಿಂಗ್ ಯಂತ್ರ
ಚಿಲ್ಲಿಪೌಡರಿಂಗ್ ಯಂತ್ರ
ಮಿನಿ ಟ್ರ್ಯಾಕ್ಟರ್
ಪವರ್ ಟಿಲ್ಲರ್
ಕಳೆ ಕೊಚ್ಚುವಂತ ಯಂತ್ರ
ಪವರ್ ವೀಡರ್
ರೋಟೋವೇಟರ್
ಪವರ್ ಸ್ಟ್ರೇಯರ್
ಡೀಸೆಲ್ ಪಂಪ್ ಸೆಂಟ್
ಮೊಟೋಕರ್ಟಗಳು
ಮೋಟಾರ್ ಚಾಲಿತ ಸಣ್ಣ ಎಣ್ಣೆಗಾಣದ ಯಂತ್ರ
ಈ ಮೇಲ್ಕಂಡ ಯಂತ್ರಗಳನ್ನು ಖರೀದಿಸಲು ರೈತರಿಗೆ ಸಬ್ಸಿಡಿ ದರದಲ್ಲಿ ಕೃಷಿ ಇಲಾಖೆಯಿಂದ ಸಹಾಯಧನ ದೊರೆಯಲಿದೆ.

ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ
ಆಧಾರ್ ಕಾರ್ಡ್
ಬ್ಯಾಂಕ್ ಪಾಸ್ ಬುಕ್
ರೇಷನ್ ಕಾರ್ಡ್
ಪೋಟೋ
ಜಮೀನಿನ ಪಹಣಿ
ರೂ.100 ಬಾಂಡ್ ಪೇಪರ್
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು ಎಂಬುದಾಗಿ ಕೃಷಿ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!