ಡಾ. ಶಿವಾನಂದ ಶಿವಯೋಗಿ ಗುರೂಜಿಗಳು ಭವಿಷ್ಯ ಹೇಳುತ್ತಿರುವುದು ಇದೇ ಮೊದಲೇನು ಅಲ್ಲ. ಈ ಮೊದಲೇ ಅವರು ಹೇಳಿರುವ ಭವಿಷ್ಯಗಳು ನಿಜ ಆಗಿದ್ದಾವೆ. ಹಾಸನದ ಕೋಡಿಮಠದ ಕೊಡಿಶ್ರೀ ಎಂದೇ ಖ್ಯಾತಿ ಪಡೆಯುವ ಇವರು ಸದಾ ಒಂದಿಲ್ಲೊಂದು ಭವಿಷ್ಯ ಹೇಳುವುದರ ಮುಖಾಂತರ ತುಂಬಾ ಪ್ರಸಿದ್ಧಿ ಹೊಂದಿದ್ದಾರೆ. ಹೌದು ರಾಜ್ಯದಲ್ಲಿ ಮತ್ತು ದೇಶದಲ್ಲಿ ಆಗುವ ಮಳೆ-ಬೆಳೆ, ರಾಜಕೀಯ ವಿಷಯಗಳಾಗಿ ಹೇಳಿಕೆ ಮೂಲಕ ಸದ್ದು ಮಾಡಿದ ಗುರೂಜಿ ಇವರು. ಇವರು ರಾಜ್ಯದಲ್ಲಿ ಆಗುವ ಬದಲಾವಣೆಗಳನ್ನು ಹಾಗೆ ಸಿಎಂ, ಪಿಎಂ ಕುರಿತಾಗಿ ಹೆಚ್ಚು ಆದೇಶಗಳನ್ನು ಭವಿಷ್ಯದ ಮೂಲಕ ಹೇಳುತ್ತಲೆ ಬಂದಿದ್ದಾರೆ.
ಇವರು ರಾಜ್ಯ ರಾಜಕೀಯ ವಲಯದಲ್ಲಿ ಆಗುವ ಮುಂದಿನ ರಾಜಕಾರಣಿಗಳ ನಡುವಿನ ಬಿಕ್ಕಟ್ಟನ್ನು ಕೂಡ ಮತ್ತು ಸದಾ ಮುಂದಿನ ದಿನಗಳಲ್ಲಿ ನಡೆಯುವ ಕೆಲ ಸಂದರ್ಭವನ್ನು ಮುಂಚಿತವಾಗಿಯೇ ಭವಿಷ್ಯ ನುಡಿಯುತ್ತ ಬಂದಿರೋದು ವಿಶೇಷ. ಅದರಲ್ಲಿ, ಕೆಲವು ನಿಜ ಆಗಿವೆ ಸಹ. ಹೌದು ಈ ವರ್ಷವೂ ಸಹ ದೊಡ್ಡ ಬಿರುಗಾಳಿ ಬೀಸಲಿದೆಯಂತೆ. 2024ರಲ್ಲಿ ಎಲ್ಲರೂ ಅಂದುಕೊಂಡ ರೀತಿ ಹೆಚ್ಚು ಒಳ್ಳೆ ದಿನಗಳು ಬರುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಈ ವರ್ಷ ಕೆಟ್ಟ ದಿನಗಳು ಬರಲಿವೆ ಎಂದಿದ್ದಾರೆ ಶ್ರೀಗಳು.
ಗದಗಿನಲ್ಲಿ ಮಾತನಾಡಿದ ಕೊಡಿಶ್ರೀಗಳು ಒಬ್ಬ ಸಂತರ ಕೊ*ಲೆ ಆಗುತ್ತದೆ, ಇಬ್ಬರು ಪ್ರಧಾನಿಗಳ ಸಾವಾಗುತ್ತದೆ ಎಂಬ ಭಯಾನಕ ಭವಿಷ್ಯ ನುಡಿದಿದ್ದಾರೆ ಎಂದು ಕೇಳಿ ಬಂದಿದೆ. ಈ ವರ್ಷವೂ ಕೂಡ ಅಕಾಲಕ್ಕೆ ಮಳೆಯಾಗಿ ಲಕ್ಷಾಂತರ ಜನರು ಹೆಚ್ಚು ತೊಂದರೆಗೆ ಒಳಗಾಗುತ್ತಾರೆ ರೋಗಗಳು ಆಗಮಿಸಲಿದ್ದು ನೂರಾರು ಜನರು ಸಾವನ್ನಪ್ಪಲಿದ್ದಾರೆ ಎನ್ನುವ ಭವಿಷ್ಯವನ್ನು ಹೇಳಿದ್ದಾರೆ.
ಹಾಗೆ, ಭೂಕಂಪ ಮತ್ತು ಪ್ರಕೃತಿ ವಿಕೋಪಕ್ಕೆ ಹಲವರು ತುತ್ತಾಗಲಿದ್ದಾರೆ, ಬಾಂ*ಬ್ ಕೂಡ ಕೆಲವು ಕಡೆ ಸಿಡಿಯಲಿದೆ, ಒಟ್ಟಾರೆಯಾಗಿ ಈ ವರ್ಷ ಕೂಡ ಭಯಾನಕ ದಿನಗಳ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದು. ಇದಕ್ಕೆಲ್ಲಾ ಪರಿಹಾರ ದೈವ ನಂಬಬೇಕು, ದೈವದ ಮೊರೆ ಹೋಗೋದು ಬಿಟ್ಟರೆ ಬೇರೆ ಯಾವ ದಾರಿಯೂ ಇಲ್ಲ ಎಂದು ಹೇಳಿ ಮತ್ತು ಸದಾ ದೇವರ ನೆನೆಯಿರಿ ಎಂದು ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ ಕೊಡಿಶ್ರೀಗಳು..
2024 ನೇ ವರ್ಷ ಮತೀಯ ಸಮಸ್ಯೆಯಿಂದ ಜನರು ಹೆಚ್ಚು ದುಃಖ ಅನುಭವಿಸುತ್ತಾರೆ. ನಮ್ಮ ದೇಶದಲ್ಲಿ ಅಸ್ಥಿರತೆ ಹಾಗೂ ಯುದ್ಧದ ಭೀತಿ ಕಾಣಲಿದೆ, ಹಾಗೆ ಬಾಂ*ಬ್ ಸ್ಫೋಟಗೊಳ್ಳುವ ಸಾಧ್ಯತೆ ಇದ್ದು ಇದರೊಟ್ಟಿಗೆ ಮತ್ತೊಮ್ಮೆ ಜಗತ್ತಿನ ಕೆಲವು ಕಡೆ ರೋಗ ಹರಡುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದರು ಎನ್ನಲಾಗಿದೆ.
ಅಂತೂ 2024 ರಲ್ಲಿ ಕೆಲವು ಅಹಿತಕರ ಘಟನೆಗಳು ಸಂಭವಿಸಲಿದೆ ಎಂದು ಶ್ರೀಗಳು ಭವಿಷ್ಯವನ್ನು ಹೇಳಿದ್ದಾರೆ. ದೇವರ ಮೇಲೆ ನಂಬಿಕೆಯನ್ನು ಇಟ್ಟರೆ ಎಲ್ಲ ರೀತಿಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಕೂಡ ಹೇಳಿದ್ದಾರೆ.