Kodi Mutt Swamiji: ಕೋಡಿ ಮಠದ ಶ್ರೀಗಳು ತಾವು ನೀಡುವ ಹೇಳಿಕೆ, ನುಡಿಯುವ ಭವಿಷ್ಯ ಇದೆಲ್ಲದರಿಂದ ಸುದ್ದಿಯಾಗುತ್ತಾರೆ. ಇವರು ನುಡಿಯುವ ಭವಿಷ್ಯ ಬಗಳಷ್ಟು ಸಾರಿ ನಿಜವಾಗಿದೆ. ಇತ್ತೀಚೆಗೆ ಇವರು ಬೆಂಗಳೂರು ಮತ್ತು ಹಾಸನ ಈ ಎರಡು ಜಿಲ್ಲೆಗಳಲ್ಲಿ ನುಡಿದಿದ್ದ ಭವಿಷ್ಯದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಶ್ರೀಗಳು ಪ್ರಕೃತಿ ವಿಕೋಪ, ಬಾಂಬ್ ಸ್ಫೋಟ, ಯುದ್ಧ ಇದೆಲ್ಲದರ ಬಗ್ಗೆ ಹೇಳಿದ ಮಾತುಗಳು ಪ್ರತ್ಸುತ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ನಡೆಯುತ್ತಿರುವ ಯುದ್ಧವನ್ನು ಸೂಚಿಸುವ ಹಾಗೆ ತೋರುತ್ತಿದೆ.

ಶ್ರೀಗಳು ನುಡಿದಿರುವ ಭವಿಷ್ಯ ಮತ್ತು ಈ ಘಟನೆ ಎರಡು ಕೂಡ ನಾವು ಹೆಚ್ಚು ಚಿಂತಿಸುವ ಹಾಗೆ ಮಾಡುತ್ತಿದೆ ಎಂದರೆ ತಪ್ಪಲ್ಲ. ಶ್ರೀಗಳು ನುಡಿದ ಭವಿಷ್ಯದ ಬಗ್ಗೆ ಈಗ ಪ್ರಶ್ನೆಗಳು ಕೂಡ ಶುರುವಾಗಿದೆ. ಎರಡು ತಿಂಗಳುಗಳ ಹಿಂದೆ ಶ್ರೀಗಳು ಭವಿಷ್ಯ ನುಡಿದಿದ್ದರು, ವಿಶ್ವದಲ್ಲಿ ದುರಂತ ಘಟನೆಗಳು ನಡೆಯುತ್ತದೆ, ಸಾವು ನೋವು ಜಾಸ್ತಿಯಾಗುತ್ತದೆ ಎಂದು ಹೇಳಿದ್ದರು. ಈಗ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ದೇಶಗಳ ನಡುವೆ ಸಂಘರ್ಷ ನಡೆಯುತ್ತಿರುವ ವಿಚಾರ ನಮಗೆ ಗೊತ್ತೇ ಇದೆ.

ಈ ಘಟನೆ ಶುರು ಆಗಿರುವಾಗ ಶ್ರೀಗಳು ನುಡಿದ ಭವಿಷ್ಯ ಮತ್ತು ಈ ಘಟನೆಗೆ ಸಂಬಂಧ ಇರಬಹುದಾ ಎನ್ನುವ ಯೋಚನೆ ಈಗ ಜನರಲ್ಲಿ ಶುರುವಾಗಿದೆ. ದೇವರ ಪೂಜೆ ಮಾಡಿದರೆ, ದೇವರ ಅನುಗ್ರಹ ಇದ್ದರೆ ವಿಶ್ವದಲ್ಲಿ ನಡೆಯುವ ಭೂಕಂಪ, ಪ್ರಕೃತಿ ವಿಕೋಪ, ಯುದ್ಧ ಮತ್ತು ಸಾವು ನೋವುಗಳನ್ನು ತಡೆಯಲು ಸಾಧ್ಯ ಎಂದು ಶ್ರೀಗಳು ಹೇಳಿದ್ದರು. ಶ್ರೀಗಳ ಈ ನಾಟು ಈಗ ನಡೆಯುತ್ತಿರುವ ಘಟನೆಯನ್ನೇ ಸೂಚಿಸುತ್ತಿರುವ ಹಾಗೆ ಭಾಸವಾಗುತ್ತಿದೆ.

ಆಧ್ಯಾತ್ಮದ ಮೇಲಿನ ನಂಬಿಕೆಯಿಂದ ಇಂಥ ಘಟನೆಗಳನ್ನು ತಪ್ಪಿಸುವ ವಿಚಾರದ ಬಗ್ಗೆ ಕೂಡ ತಿಳಿಸುತ್ತಿದೆ. ಈಗ ವಿಶ್ವದಲ್ಲಿ ಆಗುತ್ತಿರುವ ಘಟನೆಗಳು ಮನುಷ್ಯ ಎಷ್ಟು ದುರ್ಬಲ ಜೀವಿ ಎನ್ನುವುದನ್ನು ಕೂಡ ತೋರಿಸುತ್ತಿದೆ. ಮನುಷ್ಯರು ಇನ್ನಾದರೂ ಎಲ್ಲಾ ವಿಚಾರಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತು ಎನ್ನುವುದನ್ನು ಸೂಚಿಸುತ್ತಿದೆ. ದೇವರ ಮೇಲಿನ ಭಕ್ತಿ, ಆಧ್ಯಾತ್ಮದಿಂದ ಇದಕ್ಕೆಲ್ಲ ಸಮಾಧಾನ ಮತ್ತು ಮಾರ್ಗದರ್ಶನ ಹುಡುಕಬೇಕು ಎನ್ನುವುದನ್ನು ಅರ್ಥ ಮಾಡಿಸುತ್ತಿದೆ.

ಶ್ರೀಗಳ ಭವಿಷ್ಯವಾಣಿ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ಜಗಳ, ಯುದ್ಧ ಘರ್ಷಣೆಗಳ ವಿಚಾರದಲ್ಲಿ ದೊಡ್ಡದೊಂದು ಪ್ರಶ್ನೆ ಮೂಡುವ ಹಾಗೆ ಮಾಡಿದೆ. ಮುಂದಿನ ಬದುಕು ಅಥವಾ ಭವಿಷ್ಯ ಎನ್ನುವುದು ನಿಶ್ಚಿತವಾಗಿಲ್ಲ, ಹಾಗಿರುವಾಗ ಸಮಾಧಾನ, ಸಾಂತ್ವನ ಘರ್ಷಣೆ ಇದೆಲ್ಲವನ್ನು ಕಡಿಮೆ ಮಾಡಲು ನಂಬಿಕೆ ಇರಬೇಕು. ದೇವರಲ್ಲಿ ನಂಬಿಕೆ ಮತ್ತು ಭರವಸೆ ಇರಬೇಕು. ಆಧ್ಯಾತ್ಮದಲ್ಲಿ ನಮಗೆ ಭರವಸೆ ಮೂಡಿಸುವ ಬೆಳಕು ಇರಬೇಕು ಎನ್ನುವುದನ್ನು ಸೂಚಿಸುತ್ತದೆ.

ಇದನ್ನೂ ಓದಿ Hoskote News: ಸಕತ್ ಫೇಮಸ್ ಆಗಿರುವ ಹೊಸಕೋಟೆ ಧಮ್ ಬಿರಿಯಾನಿ ಹೋಟೆಲ್ ಮೇಲೆ IT ರೈಡ್,ಅಧಿಕಾರಿಗಳಿಗೆ ಸಿಕ್ಕಿದ್ದು ಎಷ್ಟು ಕೋಟಿ ಗೊತ್ತಾ..

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!