ನಟ ದುನಿಯಾ ವಿಜಯ್ (Duniya Vijay) ಅವರು ಮೊದಲ ಪತ್ನಿ ನಾಗರತ್ನ ಅವರಿಗೆ ವಿಚ್ಛೇದನ ಕೊಟ್ಟು ನಟಿ ಕೀರ್ತಿ ಪಟ್ಟಾಡಿ ಅವರೊಡನೆ ಮದುವೆಯಾದರು. ಈ ಜೋಡಿ ಸಂತೋಷದ ದಾಂಪತ್ಯ ಜೀವನ ನಡೆಸುತ್ತಿದ್ದರು. ಹಲವು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಕೀರ್ತಿ ಹಾಗೂ ವಿಜಯ್ ಅವರು ಜೊತೆಯಾಗಿ ಕಾಣಿಸಿಕೊಂಡಿಲ್ಲ. ಕೀರ್ತಿ ಅವರು ಕೂಡ ವಿಜಯ್ ಅವರೊಡನೆ ಇರುವ ಫೋಟೋ ಅಪ್ಲೋಡ್ ಮಾಡಿರಲಿಲ್ಲ.

ಇದರಿಂದಾಗಿ ಅಭಿಮಾನಿಗಳಲ್ಲಿ ಆತಂಕ ಶುರುವಾಗಿತ್ತು, ಇವರಿಬ್ಬರು ಬೇರೆ ಆಗಿದ್ದಾರಾ ಎಂದು ಪ್ರಶ್ನೆಯೂ ಶುರುವಾಗಿತ್ತು. ಹಾಗಾಗಿ ನೇರವಾಗಿ ಕೀರ್ತಿ ಅವರನ್ನೇ ಈ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಮೇಡಂ ನೀವು ದುನಿಯಾ ವಿಜಯ್ ಅವರ ಜೊತೆಗೆ ಇದ್ದೀರಾ? ನೀವಿಬ್ಬರೂ ಜೊತೆಗಿರುವ ಫೋಟೋ ನೋಡಿ ತುಂಬಾ ದಿನ ಆಯ್ತು ಎಂದು ಕಮೆಂಟ್ ಬರೆದಿದ್ದಾರೆ. ಅದಕ್ಕೆ ಉತ್ತರ ಕೊಟ್ಟಿರುವ ಕೀರ್ತಿ ಅವರು, Always and Forever ಎಂದು ರಿಪ್ಲೈ ಮಾಡಿದ್ದಾರೆ. ತಾವಿಬ್ಬರು ಯಾವಾಗಲೂ ಜೊತೆಯಾಗಿ ಇರುವುದಾಗಿ ತಿಳಿಸಿದ್ದಾರೆ ಕೀರ್ತಿ.

ಇನ್ನೊಬ್ಬರು ಮೇಡಂ ಬಮ್ಮ ಬಾಸ್ ಜೊತೆಗೆ ಇರೋ ಫೋಟೋ ಹಾಕಿ, ನಿಮ್ಮಿಬ್ಬರನ್ನ ಜೊತೆಯಾಗಿ ನೋಡಿ ತುಂಬಾ ದಿನ ಆಗಿದೆ ಎಂದು ಹೇಳಿದ್ದು, ಅದಕ್ಕೆ ಕೀರ್ತಿ ಅವರು ಉತ್ತರ ಕೊಟ್ಟಿದ್ದು, ಬೇಗ ಶೇರ್ ಮಾಡುತ್ತೇನೆ, ಸಧ್ಯಕ್ಕೆ ಸಂಗೀತದ ಬಗ್ಗೆ ಗಮನ ಹರಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಉತ್ತರ ಕೇಳಿ ಅಭಿಮಾನಿಗಳಿಗೆ ಸಮಾಧಾನ ಆಗಿದೆ. ದುನಿಯಾ ವಿಜಯ್ ಅವರ ದಾಂಪತ್ಯ ಜೀವನ ಚೆನ್ನಾಗಿದೆ ಎನ್ನುವುದು ತಿಳಿದುಬಂದಿದೆ.

ಕೀರ್ತಿ ಅವರು ನಟಿಯಾಗಿ ಕೆರಿಯರ್ ಶುರು ಮಾಡಿದರು, ನನ್ನುಸಿರೆ, ಜಾಲಿ ಡೇಸ್ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡುತ್ತಿದ್ದು, ಅದರ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಹಾಗಾಗಿ ದುನಿಯಾ ವಿಜಯ್ ಅವರೊಡನೆ ಇರುವ ಫೋಟೋಸ್ ಶೇರ್ ಮಾಡಲು ಆಗಿಲ್ಲ ಎಂದು ಹೇಳಲಾಗುತ್ತಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!