ಭಾರತ ದೇಶದಲ್ಲಿ ಚಿಕ್ಕ ಊರಿರಲಿ ದೊಡ್ಡ ಊರಿರಲಿ ಒಂದು ಆಂಜನೇಯ ಗುಡಿ ಇದ್ದೆ ಇರುತ್ತದೆ. ಉತ್ತರ ಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಮಾತ್ರ ಹೆಚ್ಚು ಆಂಜನೇಯ ಸ್ವಾಮಿಯ ದೇವಸ್ಥಾನವನ್ನು ನೋಡಬಹುದು. ಅಂತಹ ಒಂದು ಪವಾಡ ಆಂಜನೇಯ ಸ್ವಾಮಿಯ ದೇವಸ್ಥಾನದ ಬಗ್ಗೆ ಈ ಲೇಖನದಲ್ಲಿ ನೋಡೋಣ
ವಿಶೇಷ ಹಾಗೂ ಪವಾಡ ಆಂಜನೇಯ ಸ್ವಾಮಿ ದೇವಾಲಯ ನಮ್ಮ ಕರ್ನಾಟಕದ ಬೆಂಗಳೂರಿನಲ್ಲಿದೆ. ಕೆಲವೆ ಘಂಟೆಗಳಲ್ಲಿ ಕಷ್ಟಗಳು ಪರಿಹಾರವಾಗಿರುವ ಉದಾಹರಣೆಗಳು ಅದೆಷ್ಟು ಸಿಗುತ್ತದೆ. ದೇವಸ್ಥಾನಕ್ಕೆ ಬಂದು ತೆಂಗಿನಕಾಯಿಯನ್ನು ಕಟ್ಟಿದರೆ ಎಂಥಹ ಕಷ್ಟವಾದರೂ ಪರಿಹಾರವಾಗುತ್ತದೆ. ಕರ್ನಾಟಕದ ಬೆಂಗಳೂರಿನ ಪ್ರಸಿದ್ಧ ಗಿರಿನಗರದ ಮೂರನೆ ಅಡ್ಡರಸ್ತೆಯಲ್ಲಿ ಸಾಗಿದರೆ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಾಲಯ ಇದೆ. ಆಂಜನೇಯ ದೇವಸ್ಥಾನದಲ್ಲಿ ಹರಕೆಯನ್ನು ಹೊತ್ತರೆ ಕೇವಲ 48 ದಿನಗಳಲ್ಲಿ ಅಥವಾ ಕೆಲವು ಘಂಟೆಗಳಲ್ಲಿ ಇಚ್ಛೆಗಳು ಈಡೇರುತ್ತವೆ. ಕರ್ನಾಟಕದ ಶಕ್ತಿಶಾಲಿ ಆಂಜನೇಯ ದೇವಸ್ಥಾನಗಳ ಪಟ್ಟಿಯಲ್ಲಿ ಬೆಂಗಳೂರಿನ ಕಾರ್ಯಸಿದ್ಧಿ ಆಂಜನೇಯ ದೇವಾಲಯ ಮೊದಲ ಸ್ಥಾನದಲ್ಲಿದೆ. ಭಾರತದ ದೊಡ್ಡ ದೊಡ್ಡ ವಿಜ್ಞಾನಿಗಳು ಸಹ ಈ ದೇವಸ್ಥಾನಕ್ಕೆ ಬಂದು ಹರಕೆ ಹೊತ್ತು ಹೋಗಿದ್ದಾರೆ.
ದೇವಸ್ಥಾನದ ವಾತಾವರಣ ಶಾಂತವಾಗಿರುತ್ತದೆ ಒಮ್ಮೆ ಅಲ್ಲಿ ಹೋದರೆ ಬಿಟ್ಟು ಬರಲು ಮನಸ್ಸಾಗುವುದಿಲ್ಲ. ದೇವಸ್ಥಾನದಲ್ಲಿ ಸಾವಿರ ಸಂಖ್ಯೆಯಲ್ಲಿ ಸಿಪ್ಪೆ ಸುಲಿಯದ ತೆಂಗಿನ ಕಾಯಿಗಳು ಕಟ್ಟಿಕೊಂಡಿರುವುದು ಕಂಡು ಬರುತ್ತದೆ. ಈ ದೇವಸ್ಥಾನದಲ್ಲಿರುವ ಆಂಜನೇಯ ಸ್ವಾಮಿಯು ನಮಸ್ಕಾರ ಮಾಡುವ ರೀತಿಯಲ್ಲಿ ಕಂಡು ಬರುತ್ತಾರೆ. ದೇವಸ್ಥಾನದ ಕೌಂಟರ್ ನಲ್ಲಿ ಸಿಪ್ಪೆ ಸುಲಿಯದ ತೆಂಗಿನಕಾಯಿಯನ್ನು ತೆಗೆದುಕೊಂಡು ಅದರ ಮೇಲೆ ದಿನಾಂಕವನ್ನು ಬರೆದು ಭಕ್ತರಿಗೆ ಕೊಡುತ್ತಾರೆ ತೆಂಗಿನಕಾಯಿಯನ್ನು ಮನಸ್ಸಿನಲ್ಲಿ ಬೇಡಿಕೊಂಡು ಕಟ್ಟಬೇಕು.
ಭಕ್ತರು ಕಟ್ಟಿದ ತೆಂಗಿನಕಾಯಿಯನ್ನು 16 ದಿನಗಳ ಕಾಲ ಬಿಡಲಾಗುತ್ತದೆ ಹಾಗೂ ಈ 16 ದಿನಗಳಲ್ಲಿ ಭಕ್ತರು 4 ಬಾರಿ ಬಂದು ಕಾರ್ಯಸಿದ್ಧಿ ಆಂಜನೇಯ ಸ್ವಾಮಿಯ ಮಂತ್ರವನ್ನು ಪಠಿಸುತ್ತಾ 41 ಬಾರಿ ಪ್ರದಕ್ಷಿಣೆ ಹಾಕಬೇಕು ಮನೆಯಲ್ಲಿಯೂ ಸಹ ಈ ಮಂತ್ರವನ್ನು ನೂರಾ ಎಂಟು ಬಾರಿ ಹೇಳಬೇಕು. 16 ದಿನಗಳ ನಂತರ ಬೇಕಾಗಿದ್ದಲ್ಲಿ ತೆಂಗಿನಕಾಯಿಯನ್ನು ಮನೆಗೆ ತೆಗೆದುಕೊಂಡು ಹೋಗಿ ಸಿಹಿ ತಿಂಡಿಯನ್ನು ಮಾಡಿ ಸೇವಿಸಬೇಕು ಹೀಗೆ ಮಾಡುವುದರಿಂದ ಬೇಡಿಕೊಂಡ ಪ್ರಾರ್ಥನೆ ಈಡೇರುತ್ತದೆ. ತೆಂಗಿನಕಾಯಿ ಬೇಡವಾಗಿದ್ದರೆ ದೇವಸ್ಥಾನದ ಪೂಜೆಗೆ ಕೊಡಬಹುದು.
ಆಂಜನೇಯ ಸ್ವಾಮಿಯ ಮಂತ್ರವನ್ನು ರಚಿಸಿರುವುದು ನಮ್ಮ ದೇಶದ ಸೀತಾದೇವಿ ಇದು ಪುರಾವೆಯಲ್ಲಿ ಉಲ್ಲೇಖವಾಗಿದೆ. ಶನಿವಾರ ಹಾಗೂ ಭಾನುವಾರದಂದು ಕಾರ್ಯಸಿದ್ಧಿ ಆಂಜನೇಯ ದೇವಾಲಯಕ್ಕೆ ದೇಶ ವಿದೇಶದಿಂದ ಭಕ್ತರು ಬರುತ್ತಾರೆ. ಈ ದೇವಸ್ಥಾನದಲ್ಲಿ ದತ್ತಾತ್ರೇಯ ಸ್ವಾಮಿ, ಅನಘಾದೇವಿ, ಶಿವಲಿಂಗ ಹಾಗೂ ನವಗ್ರಹ ಮುನಿಗಳು ಸಹ ನೆಲೆಸಿದ್ದಾರೆ. ದೇವಸ್ಥಾನ ಬೆಳಗ್ಗೆ 6:30 ಯಿಂದ ಮಧ್ಯಾಹ್ನ 1:30 ವರೆಗೆ ಸಂಜೆ 5:00ಯಿಂದ 9 ಗಂಟೆವರೆಗೆ ತೆರೆದಿರುತ್ತದೆ ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಹನುಮಾನ್ ಜಯಂತಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ
ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಆಂಜನೇಯ ದೇವಸ್ಥಾನಕ್ಕೆ ಬರುತ್ತಾರೆ. ಮೆಜೆಸ್ಟಿಕ್ ಇಂದ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನಕ್ಕೆ ಏಳು ಕಿಲೋಮೀಟರ್ ಅಂತರವಿದೆ ಮೆಜೆಸ್ಟಿಕ್ ನಿಂದ ಹೋಗುವ ಬಿಎಂಟಿಸಿ ಬಸ್ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನದ ಹತ್ತಿರವಿರುವ ಸೀತಾ ಸರ್ಕಲ್ ನಲ್ಲಿ ನಿಲ್ಲುತ್ತದೆ ಅಲ್ಲಿಂದ ಒಂದು ಕಿಲೋಮೀಟರ್ ನಡೆದುಕೊಂಡು ಹೋದರೆ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ಸಿಗುತ್ತದೆ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.