ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿಗಮದಲ್ಲಿ ಖಾಲಿ ಇರುವ 2800 ಚಾಲಕ ಮತ್ತು ನಿರ್ವಾಹಕ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸುವುದರ ಕುರಿತಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಈ ಅಧಿಸೂಚನೆಯಲ್ಲಿ ಏನೆಲ್ಲಾ ವಿಷಯಗಳು ಅಡಕವಾಗಿದೆ ಎನ್ನುವುದನ್ನು ನಾವಿಲ್ಲಿ ನೋಡೋಣ.
ಚಾಲಕ ಮತ್ತು ಚಾಲಕ-ಕಂ-ನಿರ್ವಾಹಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿಯಮಾವಳಿಗಳು 1982 ಮತ್ತು ತದನಂತರದ ತಿದ್ದುಪಡಿಗಳ ಅನುಸಾರ ಅರ್ಜಿಗಳನ್ನು ಕರೆಯಲಾಗಿದೆ. ಹುಬ್ಬಳ್ಳಿ ಘಟಕದ ಕಡೆಯಿಂದ ಈ ಅರ್ಜಿ ಆಹ್ವಾನ ಮಾಡಲಾಗಿದ್ದು ಕೋವಿಡ್ ಲಾಕಡೌನ್ ಗೂ ಮೊದಲು ಈ ಅಧಿಸೂಚನೆಯನ್ನು ಹೊರಡಿಸಲಾಗಿ ಕೊನೆಗೆ ರದ್ದು ಮಾಡಲಾಗಿತ್ತು. ಅದರ ನಂತರ ಈಗ ಮತ್ತೆ ಅರ್ಜಿ ಆಹ್ವಾನ ಮಾಡಲಾಗಿದೆ. ಅಗತ್ಯ ಇದ್ದಲ್ಲಿ ಇನ್ನೂ ಹೆಚ್ಚಿನ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಕೋರೋನ ಕಾರಣದಿಂದಾಗಿ ಮಹಾರಾಷ್ಟ್ರ ಹಾಗೂ ಚಿಕ್ಕೋಡಿ ಈ ಪ್ರದೇಶಗಳಲ್ಲಿ ಬಸ್ ಸಂಚಾರಗಳ ವೇಳಾಪಟ್ಟಿಯಲ್ಲಿ ಕಡಿತಗೊಳಿಸಲಾಗಿದೆ.
2021 ರಲ್ಲಿ ಮತ್ತೆ ಈ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಎಸೆಸೆಲ್ಸಿ ಹಾಗೂ ಪಿಯುಸಿ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 2800 ಚಾಲಕ ಹಾಗೂ ನಿರ್ವಾಹಕರ ನೇಮಕಾತಿ ಅತೀ ಶ್ರೀಘ್ರದಲ್ಲಿ ನಡೆಯಲಿದೆ. ಅಗತ್ಯ ಹೆಚ್ಚುವರಿ ನೇಮಕಾತಿ ಬೇಕಿದ್ದರೂ ಮಾಡಿಕೊಳ್ಳಲಾಗುವುದು ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ ಎಸ್ ಪಾಟೀಲ್ ಅವರು ಹುಬ್ಬಳ್ಳಿಯಲ್ಲಿ ತಿಳಿಸಿದ್ದಾರೆ. ಈಗಾಗಲೇ 4,300 ಬಸ್ಸುಗಳು ಕಾರ್ಯ ನಿರ್ವಹಿಸುತ್ತಾ ಇದ್ದು , ಹಳೆಯ ಗುಜರಿ ಬಸ್ಸುಗಳನ್ನು ಟಾಯ್ಲೆಟ್ ಗಳಾಗಿ ಪರಿವರ್ತನೆ ಮಾಡಲಾಗಿದೆ. ಇವುಗಳಲ್ಲಿ ಎರಡು ಭಾರತೀಯ ಹಾಗೂ ಎರಡು ಪಾಶ್ಚಿಮಾತ್ಯ ಶೈಲಿಯ ಟಾಯ್ಲೆಟ್ ಗಳನ್ನು ಪರಿವರ್ತನೆ ಮಾಡಿ ಅಗತ್ಯ ಇರುವ ಶಾಲೆಗಳಿಗೆ ನೀಡುವುದಾಗಿ ತಿಳಿಸಿದ್ದಾರೆ. ಇನ್ನು ರಾತ್ರಿ ವೇಳೆಯಲ್ಲಿ ಸಂಚರಿಸುವ ಬಸ್ ಗಳು ಕಡಿಮೆ ಇರುವುದರಿಂದ ಅವುಗಳ ಬಗ್ಗೆ ಕೂಡಾ ಕ್ರಮ ತೆಗೆದುಕೊಂಡು ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಹಾಗಾಗಿ ಆಸಕ್ತ ಅಭ್ಯರ್ಥಿಗಳು ಯಾವಾಗ ಅರ್ಜಿ ಆಹ್ವಾನ ಮಾಡಲಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.